ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೆಂದಿಗು ಮಾಡದಿರು ಶ್ರೀ ಕೃಷ್ಣ ಸರ್ವೋತ್ತಮನೆಂಬುವರಾ ಸಂಗನುದಿನ ಬಿಡದಿರು ಪ ಕೂಡಿರು ಇನ್ನು ವೇದ ಬಾಹ್ಯರ ದುರ್ಭೋಧಿಗಳ ಸಂಗೆಂದಿಗು ಹೋಗದಿರು ಶ್ರೀಧರನಂಘ್ರಿಯ ಚಿತ್ತದಿ ಬಿಡದಿರೊ ಶರಣರ ಹೊಂದಿರು ಮಂಡಲಿಸೇರದಿರು 1 ದುರ್ಮನುಜರಾದ ಈ ದುಷ್ಟದುರಾತ್ಮರ ಮಾತನೆ ಕೇಳದಿರು ಅನಿಮಿಷ ಬಿಡದಾ ಸಂತರ ಪಾದವು ಅರ್ಚಿಸುತಲಿ ಇರು ದುರ್ಗುಣವುಳ್ಳ ಪರಮ ಪತಿತ ಜನರ ಪಥವನೆ ಬಿಟ್ಟಿರು 2 ಸಕಲ ವೇದ ಶಾಸ್ತ್ರ ಮಂತ್ರ ಮರ್ಮಗಳ ಸರ್ವದಾ ತಿಳಿದಿರು ಇನ್ನು ವಿಕಟ ಕುಭಕ್ತರ ಶಾಸ್ತ್ರಗಳೆಂಬುವನೆಂದಿಗು ನೋಡದಿರು ರುಕ್ಮಿಣಿವರ ಶ್ರೀ ಹೆನ್ನೆವಿಠ್ಠಲನ ಭಕುತಿಯ ಬಿಡದಿರು ಕೂ------ಕತರಾದ ಕುಚೇಷ್ಟರ ಕೂಡಿ ಭಂಗವ ಬಡದಿರು 3
--------------
ಹೆನ್ನೆರಂಗದಾಸರು
ಸುಮ್ಮನೆ ಹರಿಯ ದೂಷಿಸದಿರು ಯಮ- ಧರ್ಮನಾಳ್ಗಳು ನಿನ್ನ ಎಳದೊಯ್ವರೊ ಪ ಇಷ್ಟೂನು ವಿಷ್ಣು ಮಾಯವು ಎಂದು ಈ ಸೃಷ್ಟಿ ಕರ್ತನು ಶ್ರೀಹರಿ ಎಂದು ಸ್ಪಷ್ಟದಿ ಮನದಲ್ಲಿ ತಿಳಿಯದೆ ದುರುಳ ಮಾತನಾಡಬಹುದೆ 1 ಲೋಕನಾಯಕ ಲಕ್ಷ್ಮೀಲೋಲನಾ ಜಗದೇಕ ವಿನುತರಾಮ ದೇವರನಾ ಶ್ರೀ ಕರುಣಾಂಬುದಿ ಶಾಂತನಾ ಇನ್ನು ನೀ ಕಾಣದೆ ಈ ಪರಿನಿಂದೆಯೆನೆ 2 ಹರಿಶರಣರ ಕೊಂಡಾಡುತಿರು ಘೋರ ನರಕದೊಳಗೆ ಬಿದ್ದು ನರಳದಿರು ಪರಮಭಕ್ತರ ಬಾಯಿಲೆ ಬೊಗಳದಿರು ಅತಿ ಪಾಪಿಯಾಗಿರುವರ ಸೇರಿ ಹೋಗದಿರು 3 ಶೃತಿ ಶಾಸ್ತ್ರಗಳು ಸುಜ್ಜನ-------- ಇಂಥ ಕೃತಕ ಶಾಸ್ತ್ರಗಳ ನೋಡಿ ಕೂಗಬೇಡಾ ಸದ್ಗತಿ ಮಾರ್ಗಕೆ ಹೊರಗಾಗ ಬೇಡಾ 4 ಹರಬ್ರಹ್ಮ ಇಂದ್ರಾದಿಗಳೆಲ್ಲ ಶ್ರೀಹರಿಯ ಸೇವಕರೆಂಬುದು ಬಲ್ಲ 'ವರಹೆನ್ನ ವಿಠ್ಠಲನ ’ ನೀನೆ ಬಲ್ಲ ಅವರ ಚರಣಕ್ಕೆ ಎರಗುವದು ಅಲ್ಲಾ 5
--------------
ಹೆನ್ನೆರಂಗದಾಸರು
ಹತ್ತಿಲಿಹÀ ವಸ್ತುನೋಡೊ ಮನವೆ ನಿತ್ಯ ನಿಜನಿರ್ಗುಣವ ಕೂಡೊ ಮನವೆ ಧ್ರುವ ಅತ್ತಲಿತ್ತಲಾಗದಿರು ಮನವೆ ಚಿತ್ತ ಚಂಚಲ ಮಾಡದಿರೆನ್ನ ಮನವೆ ಉತ್ತುಮ ಸುಪಥ ನೋಡು ಮನವೆ ನೆತ್ತಿಯೊಳಿಹ ಸುವಸ್ತು ಕೂಡೊ ಮನವೆ 1 ಹೋಕಹೋಗದಂತೆ ಎನ್ನ ಮನವೆ ಏಕರಸವಾಗಿ ಕೂಡೊ ಎನ್ನ ಮನವೆ ನಾಲ್ಕು ಶೂನ್ಯವ ಮೆಟ್ಟಿ ನೋಡು ಮನವೆ ಜೋಕೆಯಿಂದ ಜ್ಯೋತಿರ್ಮಯ ಕೂಡೊ ಮನವೆ 2 ಧನ್ಯವಿದು ರಾಜಯೋಗಮನವೆ ಭಿನ್ನವಿಲ್ಲದೆ ಬೆರೆದು ಕೂಡೊ ಮನವೆ ಚೆನ್ನಾಗಿ ಚಿನ್ಮಯ ನೋಡು ಮನವೆ ಅನ್ಯಪಥವಿನ್ಯಾತಕ ನೋಡು ಮನವೆ 3 ಗರ್ವಗುಣ ಹಿಡಿಯದಿರು ಮನವೆ ನಿರ್ವಿಕಲ್ಪನ ತಿಳಿದು ನೋಡು ಮನವೆ ಪೂರ್ವಪುಣ್ಯಹಾದಿ ಇದು ಮನವೆ ಸರ್ವರೊಳು ವಸ್ತುಮಯ ಒಂದೆ ಮನವೆ 4 ದೃಷ್ಟಿಸಿ ಆತ್ಮನ ನೋಡು ಮನವೆ ಪುಷ್ಟವಾಗಿ ಘನದೋರುವದು ಮನವೆ ಭ್ರಷ್ಟವಾಗಿ ಬಾಳಬ್ಯಾಡ ಮನವೆ ನಿಷ್ಠನಾಗಿ ನಿಜನೆಲೆಯಗೊಳ್ಳ ಮನವೆ 5 ಏರಿ ಆರುಚಕ್ರ ನೋಡು ಮನವೆ ಪರಮಾನಂದ ಸುಪಥ ಕೂಡೊ ಮನವೆ ಆರು ಅರಿಯದ ಹಾದಿ ಮನವೆ ತೋರಿಕೊಡುವ ಸದ್ಗುರು ಎನ್ನ ಮನವೆ 6 ಹರಿಭಕ್ತಿಯೊಳಗಿರು ಮನವೆ ಸಿರಿ ಸದ್ಗತಿ ಸುಖವ ಕೂಡೊ ಮನವೆ ಗುರುವಾಕ್ಯ ನಂಬಿ ನಡೆ ಮನವೆ ಪರಲೋಕಕ್ಕೆ ಸೋಪಾನವಿದು ಮನವೆ 7 ಪರದ್ರವ್ಯಗಲ್ಪದಿರು ಮನವೆ ಪರಸತಿಯ ನೋಡದಿರೆನ್ನ ಮನವೆ ಪರರ ನಿಂದ್ಯ ಮಾಡದಿರು ಮನವೆ ದಾರಿ ಹೋಗದಿರು ದುಷ್ಟರ ನೀ ಮನವೆ 8 ಸಜ್ಜನರ ಸಂಗ ಮಾಡೊ ಮನವೆ ಹೆಜ್ಜೆವಿಡಿದು ಪರಲೋಕ ಕೂಡೊ ಮನವೆ ಭೆಜ್ಜರಿಕೆ ಹಿಡಿಯೊ ಎನ್ನ ಮನವೆ ದುರ್ಜನರ ಸಂಗ ಮಾಡಬ್ಯಾಡೊ ಮನವೆ 9 ಕಂಗಳ ತೆರೆದು ನೋಡು ಮನವೆ ಮಂಗಳಾತ್ಮನ ಶ್ರೀಪಾದ ಕೂಡೊ ಮನವೆ ಹಿಂಗದಂತೆ ಕೂಡೊ ಬ್ಯಾಗೆ ಮನವೆ ಗಂಗೆಯೊಳು ಜಲಬೆರೆದಂತೆ ಮನವೆ 10 ಭೇದ ಬುದ್ಧಿಯ ಮಾಡಬ್ಯಾಡ ಮನವೆ ಸಾಧುಸಂತರ ಸುಬೋಧ ಕೇಳು ಮನವೆ ಭೇದಿಸಿ ತಿಳಿದುನೋಡು ಮನವೆ ಸದಮಲ ಬ್ರಹ್ಮ ಸೂಸುತಿದೆ ಮನವೆ 11 ಯುಕ್ತಿ ನಿನಗಿದು ನೋಡು ಮನವೆ ಭಕ್ತವತ್ಸಲ ಸ್ಮರಿಸು ಮನವೆ ಮುಕ್ತಿಯಿಂದಧಿಕಸುಖ ಮನವೆ ಭಕ್ತಿರಸದೊಳು ಮುಳಗ್ಯಾಡು ಮನವೆ 12 ಲೇಸು ಲೇಸು ಮಹಿಪತಿ ಸು ಮನವೆ ದಾಸನಾಗಿರುವ ವಾಸುದೇವನ ಮನವೆ ಭಾಸಿ ಪಾಲಿಪನ ಕೂಡೊ ಎನ್ನ ಮನವೆ ಭಾಸ್ಕರ ಮೂರ್ತಿಯ ನೋಡು ಮನವೆ 13
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳು ಶ್ರೀ ಕೃಷ್ಣ ಕಥೆಯ ಬಾಳು ವೈಷ್ಣವರಪಾಳಿಕೆ ಭಕುತಿಯಿಂದಾಳಾಗಿ ಎಲೆ ಮನುಜ ಪ.ಖೂಳರೊಳು ಮಾತಾಡದೇಳು ಹರಿಭಟರಡಿಗೆಬೀಳು ಭಗವಜ್ಜನರ ಮ್ಯಾಳದೆದುರಿನಲಿಹೇಳು ಕೀರ್ತನೆ ನಾಮದೋಳಿಗಳ ತನುಮನದಿಊಳಿಗಮಾಡುಬಿಡದಾಳು ಕರಣಗಳ1ಕೂಳು ಕಾಸಿನ ಸವಿಗೆ ಕೀಳು ಮಾನಿಸರ ಹೊಗಳಿಕೋಳು ಬಂಧನ ಹೋಗದಿರು ಮನದಾಳಿಗೊಳಗಾಗಿಏಳೆರಡು ಭುವನಗಳ ಆಳುವ ಪಿತನಗುಣದೇಳಿಗೆಗೆ ಹರುಷವಂ ತಾಳು ಅನ್ಯವ ಮರೆದು 2ಗಾಳಿಯಸೊಡರುದೇಹ ನಾಳೆಗೆನ್ನದೆ ಸುಧೆಯಮೇಳೈಸಿಕೊಂಡು ಭವವೇಳಿಲಿಸು ನೀಜಾಳು ಭಾಷ್ಯಗಳಗತಿಹಾಳೆಂದು ಗುರುಮಧ್ವಹೇಳಿದಂತಿರುತಲಿ ದಯಾಳು ಪ್ರಸನ್ವೆಂಕಟನ 3
--------------
ಪ್ರಸನ್ನವೆಂಕಟದಾಸರು