ಗಣ್ಯವಾಗಿ ಬಣ್ಣಿಸುತ್ತ ಪುಣ್ಯವಂತರುಣ್ಣತಿರುವ ಪ
ಬೀಜವಿಲ್ಲದೆ ಬೆಳೆದ ಭೂಜವಿಲ್ಲದ ಬೀಜ
ಭೂಜಗಳಿಗೆ ತಾನೆ ಬೀಜಮಾಗಿ ಮೆರೆಯುತಿರುವ 1
ಹುಟ್ಟಿ ಬೆಳೆಯದಾ ಜನರು ಮುಟ್ಟಿ ತೊಳೆಯುದಾ
ಎಷ್ಟು ದಿವಸವಿಟ್ಟಿರಲು ಕೊಳೆತು ಕೆಟ್ಟು ಹೋಗದಾ 2
ಬೆಲೆಗೆ ಬಾರದಾ ತನ್ನ ನೆಲೆಯ ತೋರದ
ಒಲಿದವರಿಗೆ ಸುಲಭವಾಗಿ ಹಲವು ವಿಧದಿ ಹೊಳೆಯುತಿರುವ3
ಅರಿಯದವರಿಗೆ ರುಚಿಯನರಿತ ಜನರಿಗೆ ಅರಿತ ಮೇಲೆ
ನಿರುತವಿರುತ ಸರಸ ಮಧುರ ಭರಿತ ಬರಿತ 4
ಸಿರಿ ಮನೋಹರ ವ್ಯಾಘ್ರಗಿರಿಯ ಮಂದಿರ
ಶರಣ ಜನರ ಪೊರೆವ ನಮ್ಮ ವರದ ವಿಠಲನೆಂಬದಿವ್ಯ 5