ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ ಪ ಇದ್ದೀಯಾ ಶ್ರೀಹರಿ ನೀನು - ವೃದ್ಧಿಸಿದ್ಧಿಯ ನಡುವೆ ಪದುಮನಾಭನು - ಅಭಿ-ವೃದ್ಧಿಯಾಗಲು ತಡವೇನು - ಅಹಬುದ್ಧಿಯಾಗಿ ಭಜಿಸುವ ಬಾಳುವೆಗೆ - ಸ-ಮೃದ್ಧಿಯಾಗಿ ಸರ್ವ ಸಿದ್ಧಿಯ ಕೊಡಲಾಗಿ 1 ನಂಬಿದ್ದ ಸುಜನರು ಹರಿಯೆ - ಕೆಟ್ಟದೆಂಬ ಸುದ್ದಿಯ ನಾನರಿಯೆ - ಸತ್ಕು-ಟುಂಬ ಎಂಬುದು ಹೊಸಪರಿಯೆ - ಅಹಬೆಂಬಲವಾಗಿ ಸಜ್ಜನರ ಸಲಹುವ ಕೃ-ಪಾಂಬುಧಿ ಮೂಜಗಕೊಲಿಯಲೋಸುಗ ಬಂದು ಉಲಿಯೆ2 ಇಂದು - ಅಹಆಸೆ ಬಿಟ್ಟು ಪೂಜಿಸುವ ಭಕ್ತರದಾಸನೆಂದು ವೆಂಕಟೇಶ ನೀನೊಲಿದು ಬಂದಿದ್ದೀಯಾ3
--------------
ಕನಕದಾಸ
ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಪ ಮುಂದರಿತು ಶ್ರೀಹರಿಯ ಭಜಿಸುವುದು ಲೇಸುಅ ಎಲುವುಗಳು ತೊಲೆಜಂತೆ ನರಗಳವು ಬಿಗಿದಂತೆಬಲಿದ ಚರ್ಮವು ಮೇಲು ಹೊದಿಕೆಯಂತೆಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆಕೆಲಕಾಲಕೀ ಕೊಂಪೆ ಕಡೆಗಾಹುದಂತೆ 1 ಕಂಡಿಗಳು ಒಂಬತ್ತು ಕಳಬಂಟರೈವರುಅಂಡಲೆವುದೊತ್ತಿನಲಿ ಷಡುವರ್ಗವುಮಂಡಲಕೆ ಹೊಸಪರಿಯ ಮನ್ಮಥನ ಠಾಣ್ಯವಿದುಮಂಡೆ ಹೋಗುವುದನ್ನು ಅರಿಯದೀ ಕೊಂಪೆ2 ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲಕೆಂಪು ಬಣ್ಣಗಳಿಂದ ಚೆನ್ನಾಯಿತುಇಂಪಿನಲಿ ಕಾಗಿನೆಲೆಯಾದಿಕೇಶವನನ್ನುಸೊಂಪಿನಲಿ ನೆನೆನೆನೆದು ಸುಖಿಯಾಗು ಮನುಜಾ 3
--------------
ಕನಕದಾಸ
ಕಡೆಗೋಲ ತಾರೆನ್ನ ಚಿನ್ನವೆ ಮೊಸ ರೊಡೆದರೆ ಬೆಣ್ಣೆ ಬಾರದೊ ಮುದ್ದು ಕೃಷ್ಣಯ್ಯ ಪ. ಅಣ್ಣ ಬಲರಾಮನು ಚಿಣ್ಣರ ಸಹಿತಾಗಿ ಬೆಣ್ಣೆ ಹಣ್ಣನು ಮೆಲುವಿಯಂತೆ ಯನ್ನಣ್ಣನೆ ಸಣ್ಣವನಾಗಿ ಎನ್ನೊಡನಾಟವೆ ಕಣ್ಣಿಗೆ ಕಾಡಿಗೆ ಇಡುವೆ ಬಾ ರಂಗಯ್ಯ 1 ಹಸುರಂಗಿ ಕೊಡಿಸುವೆ ಹಸುಳೆ ಬಾ ಕಂದನೆ ಹೊಸಪರಿಯಾಭರಣಗಳನಿಡುವೆ ಹಸನಾದ ಹಸುವಿನ ತುಪ್ಪದ ದೋಸೆಯ ಹಸುಳೆ ನಿನಗಾರೋಗಣೆಗೆ ಹೊತ್ತಾಯಿತೊ 2 ಪಡೆದ ಜನನಿಯಲ್ಲೆ ಎನ್ನೊಡೆಯ ಶ್ರೀ ಶ್ರೀನಿವಾಸ ನಿನ್ನ ಕಡೆಹಾಯಿಸೊ ಕಡೆಗೋಲನಿತ್ತು ಎನ್ನ ಗೋಪಿ ಕಡುಮುದ್ದು ರಂಗನ ಬಿಡದೆತ್ತಿ ಮುದ್ದಿಸಿ ಸಡಗರದಿಂದಲಿ 3
--------------
ಸರಸ್ವತಿ ಬಾಯಿ
ಪಶುಗಳ ಒಡನಾಡಿ ಪಾಮರನು ನಾನಾದೆ ಪಶುಪತಿಯೆ ನೀ ಬೇಗ ಬಾರೈ ಪ ಎಸೆವ ಆ ಸಮಯನುಣ್ಣಲೋಸುವನೊ ನಾನಿನ್ನು ಶಿಶು ಹಾದು ನಿಜ ಸುಖವು ತೋರೈ ಅ.ಪ ಕಚ್ಚಿ ಕೈಬಾಯಿ ನಿಮ್ಮಿಚ್ಚೆಯಾಗಿರುತಿಹುದೂ ಸಚ್ಚಿದಾನಂದಾತ್ಮ ನೋಡೈ ಉಚ್ಚರಿಸುವಾದಿ ವ್ಯಾಸಚ್ಚರಿತ ನಾಮವನೂ ಅಚ್ಚಳಿಯದಿರದಂತೆ ನೋಡೈ 1 ತೃಷೆಯ ನೀಗಿಸಲಿಂತಾ ಹೊಸಪರಿಯ ಬಿನ್ನಹುವು ಹಸುವಿಗಾಧಾರವನು ತೋರೈ ಪುಸಿಯದಿರು ನೀನಿದಕೆ ಬಿಸನಾಡದಿರುಯೆನ್ನಾ ನೊಸಲ ತಿಲಕವೆ ವೋಡಿಬಾರೈ 2
--------------
ಚನ್ನಪಟ್ಟಣದ ಅಹೋಬಲದಾಸರು
ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ ಮಂಗಳಂ ಲೋಕಾಭಿರಘುರಾಮ ಸದ್ಗುಣ ಸ್ತೋಮ ಪ ದಶರಥನ ವರಪುತ್ರ ನೀನಾಗಿ ಕೌಶಿಕನ ಯಜ್ಞದಿ ಅಸಮಸಾಹಸ ದೈತ್ಯರನು ಗೆಲಿದಿ ವಸುಧೆಯೊಳು ಗೌತಮನ ಸತಿಯಳನು ಉದ್ಧರಿಸಿ ತಾಟಕಿ ಹೊಸಪರಿಯ ದೈತ್ಯರನು ಸಂಹರಿಸಿ ಎಸೆವ ಮಿಥಿಲಾ ಪುರದಿ ಜಾನಕಿ ಬಿಸಜನೇತ್ರೆಯ ಕೈಪಿಡಿದು ರನ್ನ ಹೊಸ ಪರಿಯ ರಥದೊಳಗೆ ಪೊರಟು ಸತಿಸಹಿತ ಅಯೋಧ್ಯೆಯಲಿ ಮೆರೆದಗೆ1 ದಶರಥನು ಪುತ್ರಗೆ ಪಟ್ಟವನು ಕಟ್ಟುವೆನು ಎನಲು ದಶದಿಕ್ಕಿಗೆ ಪತ್ರವನು ಕಳುಹಿಸಲು ಎಸೆವ ಮಂಗಳ ವಾದ್ಯ ಕೇಳುತಲೆ ಕೈಕೇಯಿ ಬರಲು ಅಸದಳದವರ ಬೇಡಿ ಕಾಡಿಸಲು ವಸುಧೆಗೀಶನ ವನಕೆ ಕಳುಹಲು ಕುಶಲವಿಲ್ಲದೆ ಮರುಗೆ ದಶರಥ ಮಿಸುಣಿಮಣಿ ಸಿಂಹಾಸನ ತ್ಯಜಿ- ಸುತಲಿ ಪಿತೃ ವಾಕ್ಯವ ನಡೆಸಿದಗೆ 2 ಮಡದಿ ಸೀತಾ ಲಕ್ಷ್ಮಣರ ಕೂಡಿ ಬಿಡದೆ ದೈತ್ಯರನೆಲ್ಲ ಕಡಿದಾಡಿ ಒಡತಿ ಸೀತೆಗೆ ಉಂಗುರವ ನೀಡಿ ಹನುಮಂತ ಬರಲು ಕಡುಜವದಿ ಸಾಗರದಿ ಸೇತುವೆಯ ಮಾಡಿ ತಡೆಯದಲೆ ರಾವಣನ ಮೂಲವ ಕಡಿದು ಕಮಲನಾಭ ವಿಠ್ಠಲನು ಮಡದಿಸಹಿತಾಯೋಧ್ಯೆ ಪುರದಲಿ ಸಡಗರದಿ ಸಾಮ್ರಾಜ್ಯವಾಳ್ದಗೆ3
--------------
ನಿಡಗುರುಕಿ ಜೀವೂಬಾಯಿ
ವಾಸವನಾಮಕ ದಾಸರ ನೆರೆನಂಬೂ | ಜ್ಞಾನ ಭಕುತಿ ತುಂಬೂಕಾಸುಗಳಿಸಿ ಕೋಟಿಶ್ವರ ನೆನಿಸಿದನಾ | ಸರ್ವವು ಚಲ್ಲಿದನಾ ಅ.ಪ. ಆಶೆಯೆಂದೆನಿಸುವ | ಪೈಶಾಚವ ಕಳೆಯೇ | ದ್ವಿಜಸೋಗಿನಲ್ಹರಿಯೇಕೂಸಿಗೆ ಬ್ರಹ್ಮಚಾರಿ | ಆಶ್ರಮಕೇ ಬೇಡೇ | ಮತ್ತೆ ಕೊಂಡಾಡೇಭೂಸುರ ಬಹುಪರಿ | ಕ್ಲೇಶನಟಿಸಿ ಪೇಳೇ | ಮತ್ತು ಅವನಕೇಳೇಲೇಸುಕಾಸು ಕೊಡ | ದಾಶ್ಮ ಹೃದಯ ವಿವರಾ | ತೆರಳಿದ ದ್ವಿಜವರ 1 ಅತ್ತಿತ್ತಲು ತಿರುಗುತ | ಮತ್ತೆ ಮನೆಗೆ ಬಂದಾ ತಾನಲ್ಲೆ ನಿಂದಹಿತ್ತಲ ಬಾಗಿಲೊಳ್ | ನಿಂತ ಸತಿಯನಾಸಾ ನೋಡಿದ ತಾ ಶ್ರೀಶಾಚಿತ್ತವ ಪ್ರೇರಿಸಿ | ಮತ್ತೆ ಬೇಡಿತಂದಾ | ಮೂಗುತಿ ಬಲು ಛಂದಾವಿತ್ತತಾರೆನುತವ | ನ್ಹತ್ತಿರಿತ್ತು ಪೋದಾ | ಮತ್ತೆ ಬರಧೋದಾ 2 ಸತಿ ಗರ | ಬಟ್ಟಲ ಕುದಿಪೋಗೇ | ಮೂಗುತಿ ಬಿತ್ತಾಗೇ 3 ಸುಂಡಿಪೋಗೆ ತನ | ದಿಂಡು ವ್ಯಸನಕಾಗೀ | ತನಪಾಪಕೆ ಮರುಗೀಕಂಡು ಈಸೋಜಿಗ | ಕೊಂಡಾಡಿದ ಸತಿಯ | ಆದನು ಹೊಸಪರಿಯ ಭಂಡತನದ ಭಂಡಿ | ಭಂಡಿ ದ್ರವ್ಯವೆಲ್ಲ | ದಾನ ಮಾಡ್ದನಲ್ಲಿ ಗಂಡುಗಲಿಯು ಆಗಿ | ಪುಂಡರಿಕಾಕ್ಷಪದಾ | ಬಂಡುಣಿ ತಾನಾದಾ 4 ಪಾದ ಸಿರಿ ಪಾದ ಭಜಿಸೇ | ಇಂದ್ರ ದಾಸನೆನಿಸೇ ಸಂಗ ರಹಿತರಿಗೆ | ಮಂಗಳ ಸಂದೇಶ | ಇತ್ತು ತಾನುಪದೇಶಾ ಅಂಗಜ ಪಿತ ಗುರು | ಗೋವಿಂದ ವಿಠ್ಠಲನಾ ಚರಿತೆಗಳ್ ಬಿತ್ತಿದನಾ 5
--------------
ಗುರುಗೋವಿಂದವಿಠಲರು