ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಪ್ರಾರ್ಥಿಸಲು ನೂರೊಂದು ಕೊಟ್ಟಿಯೊ ದೇವ ತಂದೆ ನಿನ್ನಯ ಕರುಣವೆಂದಿಗೂ ಇರಲಿ ಪ ಇಂದು ನೀನಿತ್ತ ನೂರೊಂದು ನಿನ್ನಯ ಪಾದ ದ್ವಂದ್ವಕರ್ಪಿಸುವೆ ನಿನ್ನಯ ಸೇವೆ ಎಂದೆನುತ ಅ.ಪ ನಿನ್ನ ಮೂರ್ತಿಯ ನೋಡಿ ನಿನ್ನ ಸ್ತುತಿಯನೆ ಮಾಡಿ ನಿನ್ನ ಕರದಲಿ ಪಿಡಿದು ಪುಣ್ಯಗಳಿಸಿದೆನೊ ನಿನ್ನ ಸುಂದರ ರೂಪ ಸತತ ಹೃದಯದಿ ಪೊತ್ತು ಧನ್ಯನಾಗಿರುವೆನಿನ್ನೇನು ಬೇಕಿಹುದೆನಗೆ 1 ನಿಟ್ಟುಸಿರು ಬಿಡಿಸಿದೆಯೊ ಹೊಟ್ಟೆಯನು ಸುಡಿಸಿದೆಯೊ ಕಟ್ಟಕಡೆಯಲಿ ಕರವನಿತ್ತು ಮೇಲೆತ್ತಿದೆಯೊ ಕಟ್ಟುಬಣ್ಣವಿದಲ್ಲ ಸುಟ್ಟರಿದು ಪೋಗದೊ ಘಟ್ಟಿಯಾಯಿತು ಎನ್ನ ಪ್ರೇಮ ನಿನ್ನೊಳಗೆ 2 ಕೆಸರಿನಲಿ ಕಂಬದಂತಿದ್ದ ಎನ್ನಯ ಸ್ಥಿತಿಯು ಕುಸಿಯಲಿಲ್ಲವೊ ದೇವ ಶಶಿಕುಲ ಪ್ರಸನ್ನ ಹೊಸದಾದ ಚೈತನ್ಯವೆನಗೆ ವಿಕಸಿತವಾಯ್ತು ಉಸಿರಿರುವ ತನಕ ನಾ ಮರೆವುದಿಲ್ಲವೊ ನಿನ್ನ 3
--------------
ವಿದ್ಯಾಪ್ರಸನ್ನತೀರ್ಥರು
ನಗುವಿನಿಂದಾರೋಗ್ಯ ಉಂಟೆಂಬರಯ್ಯ ನಗುವಿನಲಿ ಹಲವಾರು ಬಗೆಗಳುಂಟಯ್ಯ ಪ ನಗುವಿಂದ ಸನ್ಮಿತ್ರ ಹಗೆಯಪ್ಪುದುಂಟಯ್ಯ ನಗುತ ಬಾಳೆಂಬುದೇ ಸೊಗವೋ ರಂಗಯ್ಯ ಅ.ಪ ಗೊಳ್ಳೆಂಬ ನಗೆಯುಂಟು ಬಲ್ಲವನ ಸಭೆಯಲಿ ಕಳ್ಳನಗೆಯೊಂದುಂಟು ಪೊಳ್ಳುಕಡೆಗಳಲಿ ಸುಳ್ಳುನಗೆಯೊಂದುಂಟು ಜಳ್ಳು ಡಾಂಭಿಕರಲಿ ಮುಳ್ಳುಕಲ್ ನಗೆಯುಂಟು ಕಳ್ಳಕಾಕರಲಿ 1 ನಸುನಗೆಯು ಮನದ ಸಂತಸದ ಕುರುಹು [ಎಸೆ]ವ ರಸನೆ ನಗುವುದೇ ಹಾಸ್ಯವಯ್ಯಾ ರಸಪೂರ್ಣ ನಗುವುಂಟು ಬಿಸಜಾಕ್ಷನಲ್ಲಿ ಹೊಸದಾದ ನಗು ಮಾಂಗಿರಿನಲವಿನಲಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|ನಾಗಸಂಪಿಗೆ ಅರಳಲು ಪಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |ನಿದ್ದೆ ತಿಳಿದೇಳಯ್ಯ ಕೃಷ್ಣ 1ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |ಹೊಸದಾದ ಹಸುವಿನೀ ತುಪ್ಪವನ್ನು ||ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |ಹಸುಳೆ ನಿನಗಾರೋಗಣೆಗೆ ಮಾಡುವೆ 2ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |ಕಂದರೊಳಗತಿ ನೀನು ಹಟಿಯಾದೆಯ ||ಇಂದುನೀನತ್ತರೇ ಎತ್ತಿಕೊಳ್ಳುವರಿಲ್ಲ |ಕಂದ ಅಳಬೇಡವೊ ಪುರಂದರವಿಠಲ 3
--------------
ಪುರಂದರದಾಸರು