ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದ್ಹೇಳಲಿ ಸ್ವಾನುಭವದ ಸುಭೋಗ ಧ್ರುವ ಸುಖಗರುತದ ಶಿಖಾಮಧ್ಯ ಸಂತ್ರಾಧಾರಿ ಬೇಕಾದರೆ ನೋಡಿ ಷಕಚಕ್ರವೇರಿ ಏಕೋಮಯವಾಗ್ಯದ ವಸ್ತು ಒಂದೇ ಸರಿ ಲೋಕಪಾಲಕಸ್ವಾಮಿ ತಾ ಸಹಕಾರಿ 1 ಜುಮ್ಮು ಜುಮ್ಮುಗುಡುತದೆ ರೋಮಾಂಚಗಳು ಧಿಮಿ ಧಿಮಿಗುಡುತದೆ ನಾದಧ್ವನಿಗಳು ಕ್ರಮ ತಿಳಿದರೆ ಭಾಸುತದೆ ಸುಳಹುಗಳು ಸಂಭ್ರಮವಾದರು ಅನುಭವಿಗಳು 2 ಕಳೆ ಮಳೆಮಿಂಚು ತುಂಬೇದ ಬಲು ಬಹಳ ಹೊಳೆಯುತಲ್ಯದೆ ಸ್ವಸುಖದ ಕಲ್ಲೋಳ ಝಳಝಳಿಸುತ ಜ್ಯೋತಿರ್ಮಯ ಥಳಥಳ ತಿಳಕೊ ಮಹಿಪತಿ ಗುರುದಯದ ಸುಫಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣ ಹಬ್ಬವಾಯಿತು ಎನಗಿಂದು ಧನ್ಯಧನ್ಯಗೈಸಿದ ದೀನಬಂಧು ಧ್ರುವ ತುಂಬಿತುಳುಕುತಲ್ಯದ ಬ್ರಹ್ಮಾನಂದ ಹಂಬಲಿಟ್ಟು ನೋಡನುಭವದಿಂದ ಗುಂಭಗುರತವಾಗದೇ ನಿಜಾನಂದ ನಂಬಿ ನಡಿಯಲಿಕ್ಕಿದೆ ಬಲು ಚಂದ 1 ಕಣ್ಣು ಮುಟ್ಟಿನೋಡಲು ಖೂನಗೊಟ್ಟು ಪುಣ್ಯ ಹೊಳೆಯುತಲ್ಯದೆ ಎದುರಿಟ್ಟು ಎನ್ನ ಮ್ಯಾಲೆ ಸದ್ಗುರು ದಯವಿಟ್ಟು ಚಿನ್ನುಮಯದೋರಿದ ನಿಜಗುಟ್ಟು 2 ಹೇಳಲಿನ್ನೇನದನುಭವಸುಖಾ ಥಳಥಳಗುಡುತದೆ ಕೌತುಕಾ ಕೇಳಿಕೋ ಬೇಕಿದುವೆ ಗುರುಮುಖಾ ಹೇಳಿಕುಡುವ ಮಹಿಪತಿಗುರು ಥೋಕಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು