ಒಟ್ಟು 6 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿನ ದಿನ ಸುದಿನವಿದು ನೋಡಿ ತಂದೆ ಸದ್ಗುರು ಕೀರ್ತಿಯ ಕೊಂಡಾಡಿ ಧ್ರುವ ಸಾರ್ಥಕವಾಯಿತು ಜನ್ಮಕ ಬಂದು ಕರ್ತು ಸದ್ಗುರು ಕರುಣವ ಪಡೆದಿಂದು ಮಾಯಾ ನೋಹದಸಂದು ಆರ್ಥಿ ಆಯಿತು ಮನದೊಳು ನಮಗಿಂದು 1 ಕೇಳಿದೆವು ಹರಿನಾಮದ ಘೋಷ ಹೊಳೆಯಿತು ಮನದೊಳು ಅತಿ ಉಲ್ಹಾಸ ಕಳೆದೆವು ಕತ್ತಲೆ ಜ್ಞಾನದ ದೋಷ ಬೆಳಗಾಯಿತು ಗುರುಜ್ಞಾನ ಪ್ರಕಾಶ 2 ಸೇವಿಸಿ ಸದ್ಗುರು ನಾಮಸುರಸ ಆಯಿತು ಮನ ಚಿದ್ಭನ ಸಮರಸ ಹೋಯಿತು ಭವಭಯದ ತಾ ಕ್ಲೇಶ ಮಹಿಪತಿಗಾಯಿತು ಅತಿ ಸಂತೋಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಸುದಿನ ಶುಭದಿವಸ ನೋಡಿ ಬಂದು ಕೂಡಿದ ಸದ್ಗುರು ದಯಮಾಡಿ ಧ್ರುವ ಮುನ್ನ ಮಾಡಿದ ಸುಪಣ್ಯ ಒದಗಿತು ಭಿನ್ನವಿಲ್ಲದೆ ಸುಚಿನ್ಹ ಹೊಳೆಯಿತು ಧನ್ಯಗೈಸುವ ಸುಫಲದೋರಿತು ಎನ್ನ ಜನುಮ ಸಾಫಲ್ಯವಾಯಿತು 1 ಸ್ವಾಮಿ ಕಂಡೆ ಕಣ್ಣಿನೊಳಂತರಂಗ ಬ್ರಹ್ಮಾನಂದ ಭಾಸುತದೆ ಸರ್ವಾಂಗ ಸಮಾರಂಭದೋರುತದೆ ಸುಸಂಗ ಒಮ್ಮಿಂದೊಮ್ಮೆ ಬಂದ ನೋಡಿ ಶ್ರೀರಂಗ 2 ಗುಹ್ಯ ಒಡೆದು ಹೇಳಲು ಸುವಿಚಾರ ದಯವಿಟ್ಟು ಬಂದ ನೋಡಿದರ ಇಹಪರಕೆ ಸದ್ಗುರು ಸಹಕಾರ ಮಹಿಪತಿಗೆ ಮಾಡಿದ ಮನೋಹರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾನೆ ತಾನಾದನಮ್ಮಾ ಎನ್ನೊಳು ಘನಬ್ರಹ್ಮ ಧ್ರುವ ಕಣ್ಣಿಲೆ ನೋಡಲಿಕ್ಕೆ ಕಣ್ಣಿನೊಳಾದನಮ್ಮ ಕಣ್ಣಿಗೆ ಕಣ್ಣಾಗಿ ಪೂರ್ಣ ಕಾಣಿಸಿದಾನಂದೋಬ್ರಹ್ಮ ಅಣುರೇಣುದೊಳು ವ್ಯಾಪಿಸಿ ಜನ ಮನ ದೊಳು ತುಂಬಿಹ ತನುಮನದೊಳು ತಾನೆತಾನಮ್ಮ 1 ಎತ್ತ ನೋಡಿದತ್ತ ಸುತ್ತ ಸೂಸುವನಮ್ಮ ನೆತ್ತಿ ಒಳಗೆ ಪೂರ್ಣ ಮೊತ್ತವಾದ ಪರಬ್ರಹ್ಮ ಅನುದಿನ ಸಂತತ ಸದ್ಗುರು ಪೂರ್ಣ ಅಂತರಾತ್ಮದೊಳಗಿಹನಮ್ಮ 2 ನಾನು ನಾನೆಂಬುದಿದು ಇಲ್ಲದಂತಾಯಿತು ನಮ್ಮ ತಾನೆ ತಾನಾದ ನಿಜ ಓಮಿತ್ಯೇಕಾಕ್ಷರ ಬ್ರಹ್ಮ ಚೆನ್ನಾಗಿ ಮಹಿಪತಿಗೆ ಸನ್ಮತಸುಖದೋರಿತುಉನ್ಮನವಾಗ್ಯೆನ್ನೊಳಗೆ ಘನಸುಖ ಹೊಳೆಯಿತು ಸಂಭ್ರಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧನ್ಯ ಧನ್ಯವಾಯಿತು ಎನ್ನ ಜನುಮ ತನ್ನಿಂದ ತಾನೊಲಿದ ಘನ ಮಹಿಮ ಎನ್ನೊಳಗೆ ದೋರಿತಾನಂದೊ ಬ್ರಹ್ಮ ಕಣ್ಣಾರೆ ಕಂಡೆನು ಸದ್ಗುರು ಧರ್ಮ 1 ಬ್ರಹ್ಮಸುಖ ಹೊಳೆಯಿತು ಸಾಧುಸಂಗ ಚುಮು ಚುಮು ಕೊಡುತಿದೆಕೊ ಸರ್ವಾಂಗ ಧಿಮಿ ಧಿಮಿಗುಡುತ ತಾಲ ಮೃದಂಗ ಸಮಾರಂಭವಾಯಿತು ಬಾಹ್ಯಂತರಂಗ 2 ಎದುರಿಟ್ಟು ಬಂತು ಪುಣ್ಯ ಪೂರ್ವಾರ್ಜಿತ ಒದಗಿ ಕೈಗೂಡಿತೆನಗೆ ತ್ವರಿತ ಸಾಧಿಸಿತು ಮಹಿಪತಿಯ ಮನೋರಥ ಸದ್ಗುರು ಕೃಪೆಯಾಯಿತು ತಾ ಸದೋದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧನ್ಯ ಸತ್ಸಂಗ ಎನ್ನೊಳು ಹೊಳೆಯಿತು ಘನಲಿಂಗ ಧ್ರುವ ನೋಡಿದವನ ನೋಟ ಮಾಡಿತೆನ್ನೊಳು ಜೀವ ಶಿವಕೂಟ ನೀಡಿದಾಭಯದೂಟ ಗೂಢಗುರುತವಾಯಿತು ನೀಟ 1 ಹೇಳಿದವನ ಮಾತು ಹೊಳೆಯುವ ಸುಪ್ಪಾಣಿಯ ಮುತ್ತು ತಿಳಿಯಿತೆನ್ನೊಳು ವಸ್ತು ಅಳಿಯಿತು ಜನ್ಮ ಮೃತ್ಯು 2 ಸತ್ಸಂಗವ ಕೂಡಿ ಪತಿತಪಾವನವಾದನು ನೋಡಿ ಕ್ಷಿತಿಯೊಳು ನಿಜಗೂಡಿ ಗತಿಪಡೆದನು ಮಹಿಪತಿ ನೋಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರೆ ಸಖಿ ಪೋಗಿ ರಾಸ ಕ್ರೀಡೆಯಾಡುವ ಪ ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ಅ.ಪ ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು ಮಾಡಿದ್ದಾಯಿತು ಮೂರು ನಿಮಿಷ ಅವನ ಮರೆಯಲಾಗದಾಯಿತು ಬೀರುತಿರುವ ಮೋಹಜಾಲ ಸಡಲದಾಯಿತು 1 ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು ಯಾವನಾದರೇನು ಇವನ ಕ್ಷಣವು ಕಾಣದೆ ಜೀವನ ಕಳೆಯುವುದೆ ದೊಡ್ಡ ಭಾರವಾಯಿತು 2 ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ ಬಹಳ ನಾಚುವ ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ಮಲಯ ಮಾರುತ ತಾ ತಲೆಯನಾಡುವ 3 ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ ಬಾಧಿಸುತಿಹ ಭವದ ತಾಪವಡಗಿದಂತಿದೆ ಮಾದರಿಫಲ ರಾಸಕ್ರೀಡೆ ತೋರುವಂತಿದೆ 4 ಸಕಲ ಲೋಕನಾಥನೀತನೆಂದು ತಿಳಿಯಿತು ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ಭಕುತಿ ಹರಿದು ಎನ್ನ ವiನ ಪ್ರಸನ್ನವಾಯಿತು 5
--------------
ವಿದ್ಯಾಪ್ರಸನ್ನತೀರ್ಥರು