ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿಸುವ ಮಾತಲ್ಲಾ | ತಿಳಿಸದೆ ತಿಳಿಯುವ ಮಾತಲ್ಲಾ | ತಿಳಿಸದೆ ತಿಳಿಯದು | ತಿಳಿಯದು ನಿನಗದು | ತಿಳಿಸದೆ ತಿಳಿಯದು | ತಿಳಿಯದೆ ಹೊಳೆಯದು ಪ ಎಚ್ಚರ ನೀ ಮರೆತಿ ಮದ ಮತ್ಸರದಲೀ ಬೆರತೀ | ಅಚ್ಚ ಹೇಸಿಕೀ ದೇಹ ಮುಚ್ಚಿದ ಚರ್ಮಕ್ಕೆ | ನಿಶ್ಚಯವೆಂದರಿವೆ ಛೇಕರವೇ 1 ಭೇದವಳಿಯಲು ಬೇಕೊ ಮನದ ವಿವಾದ ಕಳೆಯಲು ಬೇಕೊ | ಸಾಧುಸಂತರ ಸಂಗ ಸೇವಿಸಿ ತತ್ತ್ವದ್ಹಾದಿ ಹಿಡಿಯ ಬೇಕೊ |ನೀನೆ ಹೀಗ್ಯಾಕೊ 2 ಬೋಧ ಮುಕ್ತಿ |ಆದಿಮೂರ್ತಿ ಭವತಾರಕ ದೇವ ಪಾದವಪೂಜಿಸಿ ನೀವ್ | ತಿಳಿದೆ ಭಜಿಸದಲೇ 3
--------------
ಭಾವತರಕರು
ಸುಮ್ಮನಹುದು ನೋಡಿ ಸ್ವಾತ್ಮ ಸುಖದನುಭವ ಹಮ್ಮಳಿದು ತನ್ನೊಳು ತಾ ತಿಳಿಯದನಕ ಧ್ರುವ ಏನು ಕೇಳಿದರೇನು ಏನು ಹೇಳಿದರೇನು ಖೂನದೋರದು ತಾನು ಸ್ವಾನುಭವದ ನಾನೆಂಬುದೆನಲಿಕ್ಕೆ ಏನು ಮಾಡಿದರೇನು ಜ್ಞಾನ ಗಮ್ಯವಸ್ತು ತಾನೊಲಿಯದನಕ 1 ಕನಸು ಮನಸಿನ ಕಲಿಯು ಕಲಿತು ಕೆಟ್ಟಿರಲಿಕ್ಕೆ ಅನುಮಾನಗಳಿಯದಪಭ್ರಂಶಗಳಿಗೆ ಅನುದಿನದಲಾಶ್ರಯಿಸಿ ಘನಗುರು ಶ್ರೀಪಾದವನು ನೆನೆನೆನೆದು ಸುಖವು ನೆಲೆಗೊಳ್ಳದನಕ 2 ಮಹಾ ಮಹಿಮೆಯುಳ್ಳ ಗುರುದಯ ಪಡಕೊಂಡು ಮನೋಜಯಸುದಲ್ಲದೆ ಘನಮಯ ಹೊಳೆಯದು ಮಹಿಪತಿಯ ಸ್ವಾಮಿ ಸದ್ಗುರು ಭಾನುಕೋಟಿ ತೇಜ ಬಾಹ್ಯಾಂತ್ರ ಪರಿಪೂರ್ಣ ತಾನಾಗದನಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು