ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಾ ಅದ್ವೈತಾ ಬಲ್ಲವರಿಗೆ ನಿತ್ಯಾನಂದ ಪ ಆನಂದಾ ಅತಿ ಸಾಧುಗಳಲಿ ಸಹ ಜಾನಂದಾ ಸುಖಸಮಾಧಿಯಲಿ ಬೋ ಧಾನಂದಾ ಭಕ್ತ ವೃಂದದಲಿ ಆನಂದ ಸುಖಮಯ ಸರ್ವಭರಿತ ಸಚ್ಚಿ ದಾನಂದಾಮೃತ ರಸಪಾನದೊಳಿರುವ- ಅದ್ವೈತ 1 ಒಳಹೊರಗೊಂದಾಗಿರುವಾ ಹೊಳ ಹೊಳದ ಹಂಬಲಿಸದೆ ಮೆರೆವಾ ಥಳ ಥಳಿಸುವ ತನಿರಸಸುರಿವಾ ಅದ್ವೈತ 2 ಪರಮ ಪುರುಷರ ಸ್ತೋಮದಲಿ ಪರಾ ತ್ಪರ ತತ್ವ ವರವಿಚಾರದಲಿ ಹರಿ ಹರರಿಗೊಂದಿಸುವ ಹಾದಿಯಲಿ ಚರಿಸುತ್ತ ಚತುರ್ಥಮಂಟಪದ ಮದ್ಯದಲಿ ಇರುವಂಥಾ ಸದ್ಗುರು ಪರಶಿವಭರಿತ ವಿಮಲಾನಂದಾ ಅದೈತ 3
--------------
ಭಟಕಳ ಅಪ್ಪಯ್ಯ
ನಿನ್ನೊಳಗೆ ನೀ ತಿಳಿದುನೋಡು ನಿರ್ಮಲನಾಗಿ ಪ ನಿನ್ನೊಳಗೆ ನೀ ತಿಳಿದುನೋಡು ಚೆನ್ನಾಗಿ ಗುರುಭಕ್ತಿಯ ಮಾಡು ಭಿನ್ನಪದಾರ್ಥಗಳನ್ನು ಬಯಸದೆ ಅನನ್ಯಭಾವದಿ ನಿಜವನ್ನು ನಿತ್ಯಾತ್ಮನ ನರದೇಹದಿಂದಧಿಕವಿಲ್ಲಾ ಸ್ಥಿರವಾಗಿ ನಿಂದಿರುವುದಲ್ಲಾ ಬರಿದೆ ಕೆಡಿಸುವುದು ಸಲ್ಲಾ ಗುರುತಿಗೆ ಬೆರೆಸಲು ಬಲ್ಲಾ ಗುರುನಾಥನಿಂದುಪದೇಶವಾ ಕೈಕೊಂಡು ಇ ತರ ಪರಿಕರಂಗಳ ಆಶಾಪಾಶವಾ ವರ್ಜಿಸಿ ನಿನ್ನ ದುರಿತ ದುಃಖ ವಿನಾಶವಾಮಾಡಲು ಭವ ಶರಧಿಯ ದಾಟುವಾ ಆಯಾಸವಾ ನಿಲ್ಲುವದಿನ್ನು ಕುರಿತುಮನದಲಿ ತಿಳಿದುನೋಡು ಕಾಂಡುವ ಆರು ಅರಿಗಳ ವಿಚ್ಛೇಧನ ಮಾಡು ಅವಿದ್ಯೆಯನ್ನು ಶರಗು ಹಿಡಿದು ಹೊರಗೆ ದೂಡು ಹಮ್ಮಿನಹಲ್ಲು ಮುರಿದು ನಿನ್ನೊಳಗೆ ಕೂಡು ಹರಿಚರಣದೊಳಾಡು ಗುರುಮಂತ್ರವನುಚ್ಚರಿಸಿ ಕರ್ಪೂರವನು ಜಗದೊಳಿರುವುದೆಲ್ಲ ನಶ್ವರಸಂತೆ ನೋಡೆ ಬರುವದೆಲ್ಲ ಬಯಲಿನ ಭ್ರಾಂತಿ ಅರಿತಮಹಾತ್ಮರ ಚರಣನರಸಿಜಕೆ ಎರಗಿ ತತ್ವಾನಂದ ಭರಿತನೆಂದೆನಿಸುವ ನಿನ್ನೊಳಗೆ1 ವಾದಿಸಿ ಶುದ್ಧತತ್ವದ ಹಾದಿಯ ಬಲ್ಲವರಾದ ಸಾದು ಸತ್ಪುರುಷರಪಾದ ಕೊಡಿ ಶ್ರೀ ಗುರುಪ್ರಸಾದ ಸಾಧಿಸಿ ಸವಿಯನು ಬೇಡಿಕೊ ಬ್ರಹ್ಮಾನಂದದ ಬೋಧೆಯಿಂದ ನೀ ಲೋಲಾಡಿಕೊ ನಿತ್ಯನಿರ್ಮಲವಾದ ವಸ್ತು ನೀ ದೃಢಮಾಡಿಕೊ ಅಂತರಾತ್ಮನ ಶೋಧಿಸಿ ಸಜ್ಜಾಗಿ ನೋಡಿಕೊ ಅಷ್ಟರಮೇಲೆ ಹಾ ಧನ್ಯಧನ್ಯನೆನಿಸಿ ಮೆರೆವ ವರ್ಣಾಶ್ರಮದ ಭೇದವಳಿದು ಮಾಯೆಯ ಜರಿವೆ ನಿತ್ಯಾನಂದವಿನೋದಕೆ ಮಹಾತ್ಮರನು ಕರಿವೆ ನೋಡಲು ದ್ವೈತವಾದ ಮಿಥ್ಯವೆಂಬುದನರಿವೆ ಮಧ್ಯಾಂತ ಶ್ರೀ ಗುರುದೇವಾ ಬಹುಆದರವಿಡಿದು ಶಿಷ್ಯರಕಾವಾ ಸಂಪಾದಿಸಿಕೊಡುವಾ ಮುಕ್ತಿಯಠಾವಾ ನಿತ್ಯಾರಾಧಕರಿಗೆ ಸದ್ಗತಿಗಳನೀವಾ ತ್ರಿಮೂರ್ತಿಗಳಾದರೆಂತೆಂಬುದ ನಿನ್ನೊಳಗೆ 2 ನಿತ್ಯನಿರ್ಮಲದೊಳಗಾಡಿ ಪ್ರತ್ಯುಗಾತುಮನ ನೋಡಿ ಇತ್ತಣದ ಹಂಬಲವ ಬಿಡಬೇಕು ತನುಮನಧನ ಜೊತ್ತಾಗಿ ಶ್ರೀ ಗುರುವಿಗೆ ಕೊಡಬೇಕು ಕರುಣದವಜ್ರ ಕೆತ್ತಿದ ಕವಚವನು ತೊಡಬೇಕು ಬಿಡಬೇಕು ಇಂತಾಗಿ ಬಿಡದೆ ಮತ್ತಿ ತಾತ್ವರ್ಥವ ತಿಳಿದು ಕಾಣುಕಾಣದರೊಳು ಪ್ರತ್ಯಕ್ಷ ಹೊಳದಾಡುವ ಚಿದ್ಭಾನು ಪ್ರಕಾಶವನ್ನು ಅತ್ಯಧಿಕತೆಯಿಂದಲೀವನು ಜ್ಞಾನಿಗಳೊಳು ವಿಸ್ತಾರ ವಸ್ತು ವಿಚಾರವನು ಮಾಡಿ ನೋಡಿದರೆ ಕತ್ತಲೆ ಬೆಳಕೆರಡಿಲ್ಲದು ಸ್ವಯದಲಿ ಎತ್ತನೋಡಿದರು ಪ್ರಜ್ವಲಿಸುವುದು ತಾಂ ಉತ್ತಮಾನಂದದಿ ಸಲಿಸುವುದು ಗುರು ಭಕ್ತರ ನಿಜದಲಿ ನಿಲಿಸುವದು ಸುತ್ತು ಮುತ್ತು ಸುಳಿದು ತಾನೆ ಬಯಸುವದು ನೆತ್ತಿಯೊಳಗೆ ಹೊಳೆಯುತ್ತಿಹ ಜ್ಯೋತಿಯು ಎತ್ತಿತೋರಿತು ವಿಮಲಾನಂದ ಬ್ರಹ್ಮನ ನಿನ್ನೊಳಗೆ 3
--------------
ಭಟಕಳ ಅಪ್ಪಯ್ಯ
ಬಾರೋ ಬಾರೋ ಗುರುರಾಯನೆ ಧ್ರುವ ಹೊಳೆಯನೀಸಿ ಇಳದಿ ಬಾರೊ ಇಳಿಯ ಪೊತ್ತು ಬಳಿದಿ ಬಾರೊ ಇಳಿಯಗೆಲಿದು ಸೀಳಿ ಕಂಭದೊಳು ಹೊಳದಿ ಬಾರೊ ನೀನು 1 ಅಳೆದು ಭೂಮಿ ಬಳದಿ ಬಾರೊ ಇಳಹಿ ತಳಿಯ ತಿಳದಿ ಬಾರೊ ಅಳಿದು ದೈತ್ಯಬಲವ ಮುರಿದು ಕೊಳಲನೂದಿ ಬಳಲಿ ಬಾರೊ 2 ಸುಳ್ಳ ವ್ರತನಳಿದಿ ಬಾರೊ ಸುಳುಹಿ ತೇಜ ಹೊಳಿದಿ ಬಾರೊ ಹೊರೆದು ಸಲಹುವ ಸ್ವಾಮಿ ಬಾರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು