ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಗಲೊ ಇನ್ನಾವಾಗಲೊ ಈ ತನುವು ಪೋಗದಿರದು ಪ. ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನನಯನ ಅ.ಪ. ಎಂಬತ್ತು ನಾಲ್ಕು ಲಕ್ಷ ಯೋನಿಗಳಲಿ ಬಂದು ಅಂಬುಜಾಕ್ಷನೊಂದೆನಯ್ಯ ಅಂದಂದು ಮಾಡಿದ ಅಘದಿಕುಂಭೀಪಾಕ ಮೊದಲಾದ ಕುತ್ಸ್ಸಿತ ನರಕದಿ ಬಿದ್ದುಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯಕಥನ 1 ಓದನ ಮಾತ್ರಕ್ಕೆ ಸಭೆಯೊಳುವಾದಿಸುವೆ ವೇದಶಾಸ್ತ್ರ ಉಪನ್ಯಾಸಂಗಳನು ಮಾಡುವೆಕ್ರೋಧರಹಿತನಾಗಿ ಅವರು ಕೊಡಲು ಕೊಂಡಾಡುವೆಆದರಿಸದಿದ್ದರವರ ಬೈದು ಬರುವೆ ಖಿನ್ನನಾಗಿ2 ದೇಶದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ ಶ್ರೀನಿ-ವಾಸ ನಿನ್ನ ಪೂಜಿಸದೆ ಮೋಸಹೋದೆನಯ್ಯ ನಾನು3 ಸ್ನಾನಮೌನಂಗಳನು ಮಾಡುವೆ ಸಕಲ ಜನರ ಮುಂದೆಮಾನವರಿಲ್ಲದಾಗಲೆ ಮೌನವಿಲ್ಲ ಮಂತ್ರವಿಲ್ಲಜ್ಞಾನವ ಪೇಳುವೆ ಮೋಸಕಟ್ಟ[ಲೆ]ಯ ಮಾಡಿಕೊಂಡುಧ್ಯಾನಿಸದೆ ಹೊಟ್ಟೆಯನ್ನು ಹೊರೆವೆ ನಿನ್ನ ಮರೆವೆ4 ಕರ್ಣ ಕೇಳದು ಅನ್ಯವಾರ್ತೆ[ಗೆ] ಹೊತ್ತುಸಾಲದುಇನ್ನು ಹೇಸಿಕೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು 5 ಕಂಬುಕಂಧರ ನಿನ್ನ ನೆನೆಯದೆ 6 ವೃದ್ಧನಾದೆನು ಪಲ್ಗಳೆಲ್ಲ ಬಿದ್ದವು ಕಣ್ಣುಕಾಣಬಾರದುಎದ್ದು ನಿಲ್ಲಲಾರೆನಯ್ಯ ಉದ್ಧರಿಸೊ ಹಯವದನತಿದ್ದಿ ಮನವ ನಿನ್ನ ಪಾದಪದ್ಮವ ನೆನೆವಂತೆ ಮಾಡೊಪೊದ್ದಿದವರ ಪೊರೆವ ಕರುಣಾಸಿಂಧು ಎನಗೆ ನೀನೆ ಬಂಧು 7
--------------
ವಾದಿರಾಜ
ಎಂತು ಮರೆಯಬಹುದು ನಿಮ್ಮ ಹೇಳು ಗುರುರಾಯ | ಅಂತರಂಗದೀ ನೆನೆದು ಪಡೆಯಬೇಕು ಸುಖಾಶ್ರಯಾ ಪ ತಂದೆ ನೀನೇ ತಾಯಿ ನೀನೇ ಬಂಧು ಬಳಗ ನೀನೇ | ಹೊಂದಿ ಹರುಷಬಡುವಗತಿಯ ಗುರು ದೈವ ನೀನೇ 1 ತಂದು ಜಠರದಲ್ಲಿ ಜನುಮ ಉಣಿಸಿ ಉಡಿಸಿ ಬೆಳೆಸೀ | ಛಂದದಿಂದಲಿ ಹೊರೆವೆಯಿನ್ನು ಬೇಡಿದನು ಸಲಿಸಿ 2 ಮರೆಯಲಿಕ್ಕೆ ದೇಶಗ್ರಾಮ ವೃತ್ತಿಗೃಹಗಳಲ್ಲಾ | ಕಾಯ ಸುಖದ ದ್ರವ್ಯ ಧನವಲ್ಲಾ3 ಮರಹು ಮರಸಿ ಅರವ್ಹಿಲಿರಿಸಿ ಇರಹು ಘನವನರಸಿ | ಗುರು ಮಹಿಪತಿ ಸ್ವಾಮಿ ಕಾಯಿದೇ ಕಂದನುದ್ಧರಿಸಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತುದಿಯ ನಿಗಮವ ಕೇಳು ತಂದೆ ಶ್ರೀ ಹರಿಯೆಹುದುಗಿಹವು ಮಂತ್ರಗಳು ಹೊರೆವೆ ನೀ ದೊರೆಯೆ ಪಮೂರು ವೇದಗಳಿಂದ ಮಾಡಿ ಕ್ರತುಗಳ ಜನರುಸೇರಿ ಭೂಸ್ವರ್ಗಗಳ ಸವಿದು ಭೋಗ್ಯಗಳಾಭೂರಿ ಜನ್ಮಗಳೆತ್ತಿ ಬಳಲುತಿರೆ ಜಗವನ್ನುತೋರಲೋಸ್ಕರ ಮಂತ್ರತತಿಗಳಿಹವಾಗಿ 1ಮಂತ್ರಂಗಳಲಿ ಸ್ವಾಮಿಮೂರ್ತಿವತ್ತಾಗುತಿರೆ ಯಂತ್ರ ಪೀಡಿತ ಜನರನೆತ್ತಿ ಬದುಕಿಸಲುತಂತ್ರವಿದ ಮಾಡಿದೆ ನೀ ತಂದೆ ಲೋಕಕ್ಕೆ ಸ್ವಾತಂತ್ರನಾಗಿಹನೆಂದು ತಿಳುಹಿಕೊಡೆ ದೇವ 2ಈ ರೀತಿಯಲಿ ನೀನು ಯಜ್ಞಕಧಿಪತಿಯಾಗಿಸೇರಿ ಮಂತ್ರಂಗಳಲಿ ಸದ್ರೂಪನೆನಿಸಿಕೋರಿದರ್ಥವ ಕೊಟ್ಟು ಕಾಯುತ್ತ ಸಂಸಾರಪಾರ ತಿರುಪತಿಯನ್ನು ಪಡೆದ ವೆಂಕಟಪತಿಯೆ 3ಓಂ ಮಧುರಾಕೃತಯೇ ನಮಃ
--------------
ತಿಮ್ಮಪ್ಪದಾಸರು
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು