ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾನಂದ ಉದಧಿವರ್ಧನನೆಂದು ಪ ಕಂದರ್ಪಕೋಟಿ ಲಾವಣ್ಯನಿಧಿ ಮನಪೊಂದು ಅ.ಪ ನಾನು ನನ್ನದು ಎಂಬ ಜ್ಞಾನ ಸಂತತಿಯಿಂದ ನಾನಾ ಯಾತನೆ ಭಾವ ಬಲೆಯ ಕಟ್ಟಿ ಹೀನಗೋಜಿಲಿ ಸಿಕ್ಕಿ ಬಲುನೊಂದೆ ಗೋವಿಂದ ನೀನು ನಿನ್ನದು ಎಂಬ ಅಮೃತಗಾನದಿ ನಿಲಿಸು 1 ದರ್ವಿಯಂದದಿ ನಾನು ನೀ ಸರ್ವ ಸ್ವಾತಂತ್ರ ನಿರ್ವಾಹ ನಿನ್ನಿಂದ ಸರ್ವ ಜಗಕೆ ದೂರ್ವ ಏರಿಸೆ ಸಕಲ ದುರಿತವಳಿಸಿ ಮುಕ್ತಿಸುಖ ತೋರ್ವಂಥ ಗುಣನಿಧಿ ಸರ್ವಾತ್ಮ ಹೊರೆ ಹೊರೆಯೊ 2 ನಿನ್ನ ದರುಶನ ಬಿಟ್ಟು ಅನ್ಯತ್ರ ನಿರ್ಭೀತಿ ಎನ್ನಲಿ ಎಂದೆಂದು ವೇದವೇದ್ಯ ನಿನ್ನ ದರುಶನ ಫಲಕೆ ನಿನ್ನ ಮಹಕರುಣ ಇನ್ನು ಕಾರಣದೇವ ಧನ್ಯರಲಿ ಇಡು ಎನ್ನ 3 ಮನೋವಿಕಾರಗಳೆಂಬ ದುಃಖಾರ್ಣದಿ ಬಿದ್ದು ಅನುಮಾನ ಮಾಡಿದೆನೊ ನಿನ್ನ ಅಮೃತ ತನುಧ್ಯಾನ ಮನಕಿಡಿಯದೇನುಗತಿ ಯದುವರ್ಯ ತೃಣಕೆ ಕೈವಲ್ಲೀವ ತ್ರ್ಯಧೀಶಮನಪೊಂದು 4 ಜ್ಞಾನಮನ ಬಿಡದಿರು ದೀನ ಬಾಂಧವ ಕೃಷ್ಣ ಇನ್ನು ಮಾಯವನು ತೆಗೆದೆನ್ನ ಬೆರೆಯೊ ಜ್ಞಾನನಿಧಿ ಜಯೇಶವಿಠಲನೆ ವಿಧಿವಂದ್ಯ ಪ್ರಾಣಾಧಾರಕ ಶುಕನ ಆನಂದನಿಧಿ ಪಾಹಿ 5
--------------
ಜಯೇಶವಿಠಲ
ನೋಡು ಗರ್ವ ಹಿಡಿಯ ಬ್ಯಾಡಾ ಪ ಜಗದೊಳಗ ಹಿತ ಮಾಡಿಕೊ | ಸಂತರೊಳು ಕೂಡಿ ನೀ ಪ್ರಾಣಿ ಅ.ಪ ಸುರಪದ ಮದ-ಗಜವೇರಿ ಸುರಸೈನ್ಯದಿಂಬರಲು | ಕರುಣದಿಂ ದೂರ್ವಾಸ ಸರ್ವ ಕುಡಲು | ಕೊರಳಿಗಿಕ್ಕದೆ ಬಿಡಲು ಧರೆಗೆರಗುವದ ಕಂಡು | ಮೊರೆದು ಕೋಪಿಸಲು ಸಿರಿಹರದ್ಹೋಯಿತು ಪ್ರಾಣಿ 1 ನೃಪತಿ ನಹುಷನನು ಯಜ್ಞ ಅಪರಿಮಿತ ಮಾಡಿ ನಿಜ | ಉಪಬೋಗಿಸದೆ ತಾ ಸುರಪ ಪದವಿಯಾ | ವಿಪುಲ ಋಷಿಯರ ಕೂಡ ಅಪಹಾಸ ಮಾಡಲಿಕೆ | ಶಪಿಸಲಾಕ್ಷಣ ಉರಗಾಧಿಪನಾದ ಪ್ರಾಣಿ 2 ವೈರಿ ಗರ್ವ ವಿದ್ಯಕ ಹಾನಿ | ಗರ್ವದಿಂ ಕೆಡಬಹುದುರ್ವಿಯೊಳಗ | ಸರ್ವಥಾ ಬ್ಯಾಡೆಂದು ಹೊರೆಯೊ ಗುರು ಮಹಿಪತಿ | ಅರ್ವವನು ಕೊಟ್ಟೆನಗ ಸರ್ವರೊಳು ಪ್ರಾಣಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತೊರವೆಪುರನಿವಾಸ ನರಸಿಂಹ ನೀಹೊರೆಯೊ ಭಕ್ತರ ಭಯಗಜಸಿಂಹಅರಿವರಾರಯ್ಯ ನಿನ್ನ ಮಹಿಮೆಯಸರಸಿಜಭವಭವಸುರವರಅಹಿಕಿನ್ನರವರಮುನಿವರ ನರವರವಂದ್ಯಪ.ಹಿರಣ್ಯಕನೆಂಬ ದೈತ್ಯ ಮಹೀತಳದಿವಿಧಿಹರವರದಲಿ ಬಲುಸೊಕ್ಕಿ ಅಂದುಪರಮಭಾಗವತಪ್ರಹ್ಲಾದನಿಗೆಪರಿಪರಿದುರಿತವ ಮರಳಿ ಮರಳಿ ಭಯಂಕರವನು ಚರಿಸಲು ನೆರೆಮೊರೆಯಿಡಲು 1ತರಳಗಂಜಿಸಿ ನಿನ್ನ ದೊರೆಯ ತೋರೊ ಎನಲುಸರವಭೂತ ಭರಿತಾನಂತನೀಗಅರಸಿದರೀ ಕಂಬದೊಳಿಹನೆನಲುಮೊರೆ ಮೊರೆದೇಳುತ ಸರಸರನೊದೆಯಲುಬೆರಬೆರ ದೋಷದಿ ವರನರಹರಿಯೆ 2ಚಿಟಿಲು ಚಿಟಿಲು ಭುಗಿಭುಗಿಲೆನುತ ಪ್ರಕಟಿಸಿ ದೈತ್ಯನುದರವನು ಸೀಳಿತ್ರುಟಿಯೊಳು ಕರುಳಮಾಲೆಯ ಧರಿಸಿಶಠನ ವಧಿಸಿ ನಿಜಭಟನ ಪೊರೆದ ಜಗಜಠರಪ್ರಸನ್ನವೆಂಕಟ ನರಸಿಂಹ3
--------------
ಪ್ರಸನ್ನವೆಂಕಟದಾಸರು
ಸುರ ಮುನಿಜನನುತಪಾದನಿನ್ನಶರಣು ಪೊಕ್ಕೆನೊ ಗೋವಿಂದ ನೀಚರಕೈಯಲಿ ಕೊಡದಿರೊ ಎನ್ನ ಮೇಲ್ಗಿರಿ ಶ್ರೀನಿವಾಸಪಾವನ್ನಪ.ದುಷ್ಟದೂಷಕ ಸಂಗದಿಂದೆ ನನ್ನನಿಷ್ಠೆ ಜಾರುತಲಿದೆ ತಂದೆ ಸಲೆಭ್ರಷ್ಟನಾಗುವುದೇನು ಚಂದೆ ಬಲುಕಷ್ಟಿಸಿ ಭವದಲಿ ನೊಂದೆ 1ಅಮಿತ ದುರ್ಗುಣ ದೋಷಹಾರಿಶುಭಅಮಲ ಮುಕ್ತಿದಾತ ಉದಾರಿ ಎನ್ನಭ್ರಮಣ ನೀಗಿಸು ಹೊರೆ ಸ್ವಾಮಿ ಹೃತ್ಕಮಲದಿ ಪ್ರಕಟಿಸು ಪ್ರೇಮಿ 2ಅರಿಯೆನರಿಯೆ ಅನ್ಯಮರೆಯೆ ನಿನ್ನಸ್ಮರಣೆಗೆಚ್ಚರವಿತ್ತು ಹೊರೆಯೊಸಿರಿಗುರು ಆನಂದಮುನಿ ದೊರೆಯೆನಿತ್ಯಪರಸನ್ನ ವೆಂಕಟ ಭಕ್ತರ ಸಿರಿಯೆ 3
--------------
ಪ್ರಸನ್ನವೆಂಕಟದಾಸರು