ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಗೆ ಪೋದಪೆ ಮಲ್ಲಿಮರ್ಧನ ಕೃಷ್ಣ ಗೊಲ್ಲಗೋಪಾಲನೀ ಬಲ್ಲೆನಾನಿದನು ಪ. ದೇವಕಿಯುದರದಿ ಜನಿಸಿ ಯಶೋದೆಯ ಕುವರನೆಂದೆನಿಸಿ ಮೆರೆದಂಥ ಸಾಹಸಿ 1 ಮಧುರೆಯೊಳುದಿಸಿ ನಂದವ್ರಜದಿ ಗೋವ್ಗಳ ಕಾಯ್ದು ಮದಿಸಿದಸುರರ ಸದೆವಡೆದ ಧೀರ 2 ಮಾತೆಯ ಮನಕಂದು ಪ್ರೀತಿಪಡಿಸಲೆಂದು ಮಾತುಲನನೆ ಕೊಂದು ತಾತಗೆ ನೆಲವಿತ್ತ 3 ರುಕ್ಮನ ಭಂಗಿಸಿ ರುಕ್ಮಿಣಿಯನುವರಿಸಿ ಚಕ್ರಧರ ಕೃಷ್ಣ 4 ತರುಣಿಯ ಮಾನಕಾಯ್ದು ನರಗೆ ಸಾರಥಿಯಾಗಿ ಧರೆಯಭಾರವೆಲ್ಲ ಪರಿದುಬಂದ ಮಲ್ಲ 5 ವರಶೇಷಗಿರಿದೊರೆ ನಿನಗೆ ನಾ ಹೊರೆಯೆ ಕರಿ ಧ್ರುವರನೆ ಪೊರೆದ ವರದನೆಂಬುದ ಮರೆಯೆ 6
--------------
ನಂಜನಗೂಡು ತಿರುಮಲಾಂಬಾ
ನಮೋ ನಮೋ ನಂದಕುಮಾರ ನಿನ- ಗೆದುರ್ಯಾರೊ ಯದುಕುಲ ವೀರ ಭಜಿ- ಸುವ ಭಕ್ತ ಜನರುದ್ಧಾರ ಮಾಡೊ ಪರಮ ದಯಾಳು ನೀ ಸರ್ವ ಸ್ವತಂತ್ರ ನಿನ್ನ ಧ್ವಜ ವಜ್ರಾಂಕುಶ ರೇಖಾ ವೆಂಕಟಾದ್ರೀಶ ನಮೋ ನಮೋ ಪ ಶ್ರೀಶ ಜಗದ್ಭರಿತ ನೀನು ಒಂದು- ಕಾಸಿಗ್ವಿಷಯಗಳಲ್ಲ ನಾನು ನಿನ್ನ ದ(ರ್ಶ)ನ ಹಾರೈಸುವೆನು ಪರಮ ನುಗ್ರ(ಹ)ದಿ ಪಾಲಿಸೋ ನೀನು ಹರೇ ದೋಷರಹಿತ ಎನ್ನ ದೋಷನಾಶನ ಮಾಡಿ ಶೇಷಶಯನ ಶ್ರೀನಿವಾಸ ನೀ ದಯಮಾಡೊ1 ಬಾಯಿ ಬೀಗವನ್ಹಾಕಿ ಚರಿಯೆ ಗಂ- ಡಾರತಿ(?) ಶಿರದ ಮೇಲ್ಹೊರೆಯೆ ನಿನ್ನ ನಾಮವ ಕೊಂಡಾಡಲರಿಯೆ ಪಾದ- ಚಾರ್ಯಾಗಿ ಬರುವುದೀಪರಿಯೆ ತಿಳಿದು ಮಾನ್ಯದೊಕ್ಕಲು ಎಂದು ಬಹುಮಾನದಿಂದಿಟ್ಟು ಮಾಧವ ಕರುಣದಿ 2 ಬಾಡಿಗಿದ್ದರಾಯನ್ಹಿಡಿಯ (?) ನಿನ್ನ ಅನುಮತಿಲ್ಲದೆ ದಾರಿ ನಡೆಯ ಬ್ಯಾಡ ಬಿಡು ಲೋಭಿತನವ ಎ- ನ್ನೊಡೆಯ ಬಿಡದೆ ಕಾಡುತ ಕಾಸು ಕವಡೆ ಕಡ್ಡಿ ಕಣಜಕ್ಕೆ ಈ ಪರಿ ಗಳಿಕೆ ದೇಶದ ಮೇಲೆ ಕಾಣೆನು 3 ಮುಡಿಪು ಬೇಡುವುದ್ಹೇಳೊ ಎಷ್ಟು ನಿನ್ನ ಬಡಿತ ತಡೆಯಲಾರೆ ಪೆಟ್ಟು ಮಡಿ ಮೈಲಿಗೆಂದರೆ ಅತಿಸಿಟ್ಟು ನಾ ಬಿಚ್ಚಾಡುವೆನೊ ಬೀಡ ಬಿಟ್ಟು ಪ ್ರ- ಸಾದ ತೀರ್ಥ ಬೇಕಾದರೆ ಕ್ರಯಕಟ್ಟಿ ಗಂ- ಟ್ಯಾರಿಗೆ ಮಾಡುವಿ ಹೇಳೆನಗೊಂದಿಷ್ಟು 4 ಸತಿಗೆ ಮಾಡುವೆ ಲಕ್ಷ್ಮೀಪತಿಯೆ ನಿನ ಸುತ ಸತ್ಯಲೋಕದಧಿಪತಿಯೆ ಅತಿ ಹಿತ ಭಕ್ತರಿಗೆ ಭಿಕ್ಷೆಗತಿಯೇ ನೀಡಲು ಧನವೊಲ್ಲದೆ ಬೇಡುವರೊ ಸದ್ಗತಿಯ ನಿನ- ಗತಿಯಾಸೆ ಘನತ್ಯಲ್ಲ ಗತಿಪ್ರದಾಯಕ ಕೇಳೊ ಪೃಥುವೀಶ ನಿನ್ನದಲ್ಲವೆ ಸಕಲೈಶ್ವರ್ಯ 5 ಕನಕಗಿರಿದೊರೆಯೆಂಬೊದೆಲ್ಲೊ ಬಂದ ಜನಕೆ ಅನ್ನವ ನೀಡಲೊಲ್ಲ್ಯೊ ಜಗ- ಜನಕ ನಿನ್ನನು ಕಾಣಲಿಲ್ಲೋ ನಾನಿ- ರ್ಧನಿಕನೆಂಬುವುದು ನೀ ಬಲ್ಲ್ಯೊ ಎನ- ಗನುಕೂಲ ಧೈರ್ಯವ ಕೊಟ್ಟು ನಿನ್ನ ದರುಶನ ಸನಕಾದಿಗಳೊಡೆಯ ನಿನ್ನ ಮನಕೆ ಬಂದರೆ ನೀಡೊ6 ಶಂಕರ ಸುರರಿಂದ್ವಂದಿತನೊ ನಾ ಕಿಂಕರ ನರರಿಂದ ನಿಂದಿತನೊ ನೀ ಮಂಕುಜನರ ಪಾಪ ಪರಿಹಾರಕನೊ ಹರೇ ಶಂಖ ಚಕ್ರಾಂಕಿತ ಭೀಮೇಶಕೃಷ್ಣನ ನಾಮ ಶಂಕೆಯಿಲ್ಲದೆ ಕೊಟ್ಟು ವೆಂಕಟ ದಯಮಾಡೊ 7
--------------
ಹರಪನಹಳ್ಳಿಭೀಮವ್ವ
ಹರಿವಾಸುದೇವನೆ ಬ್ಯಾಸರಿಲ್ಲದೆ ದಾಸನ ಮೊರೆ ಕೇಳು ಜಗದೀಶ ನನ್ನ ಸಮಾನ ಕರುಣಾಭೂಪರುಂಟೆ ಪೇಳು ಪ. ಕಾಲಕಾಲಕೆ ಪೇಳಲಂಜುವೆ ಶ್ರೀಲಲಾಮ ಹರಿಯೆ ಆದರೆ ಬೀಳಗೊಳಿಸುವ ದೇಹಬಾಧೆಯು ತಾಳಲಾಪ ಹೊರೆಯೆ ಎರಡೇಳು ಭಕ್ತಿಯ ಮ್ಯಾಳವರಿಯದೆ ಹಾಳು ಮೋಹ ತೆರೆಯೆ ಮುಳಿಗೇಳಲಾರೆನು ಮಾಧವನೆ ಕರುಣಾಳು ಕಾಯೊ ದೊರೆಯೆ 1 ಯಾರ ಧನವಿನ್ಯಾರ ಭೂಮಿಯು ಯಾರ ವಸ್ತುಗಳಿವು ಕುಂಬಾರ ಭಾಂಡಗಳಂತೆ ನಶ್ವರ ತೋರಲ್ಯಾಕೆ ಫಲವು ಲಘು ನೀರಗುಳ್ಳೆಯ ಪೋಲ್ವ ದೇಹಕೆ ಸೇರಿದ ಸನ್ನಹವು ಬಿಳಿ ಭಾರ ಪೊತ್ತ ಥರವು 2 ಅದರಿಂದ ವೆಂಕಟಮಂದಿರನೆ ನಿನ್ನಿಂದ ಮಾತ್ರ ತಿಳಿಸು ಮೂರ್ತಿ ತಾಪಗಳಿಂದ ಬ್ಯಾರೆಗೊಳಿಸು ದ್ವಿಜ ವೃಂದ ರಕ್ಷಕನೆಂಬ ಬಿರುದನು ಎಂದೆಂದಿಗು ಘಳಿಸು ಭವ ಬಂಧ ಮೋಚಕ ನಿನ್ನ ಸೇವಾನಂದವಾರ್ಧಿಗಿಳಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ವಾಮಿ ನರಸಿಂಹ ಶರಣುಶ್ರೀಮಹಾ ಅಹೋಬಲನಿಲಯ ದೇವ ಶರಣು ಪ.ಭವನಾಶಿನಿಯ ಕೂಲಭವನ ಭಟಪ್ರತಿಪಾಲಭವಸಹಸ್ರಾಂಬಕರ ಭಯವಿದೂರಭುವನಕದ್ಭುತಗಾತ್ರಭಜಕಜನತಾಪತ್ರಭವಕರ್ದಮ ಶೋಷ ಬುಧರ ಪರಿತೋಷ 1ಅಣುರೇಣು ತೃಣ ವ್ಯಾಪ್ತ ಅಖಿಳರೊಳು ನಿರ್ಲಿಪ್ತದನುಜಹಿರಣ್ಯಕಹರ್ತ ದೀನನಾಥಕನಕಜಠರನ ಜನಕ ಕರುಣಾಂಕ ಕ್ರೂರಮುಖಪುನೀತಶುಭಚಾರಿತ್ರ ಪ್ರಹ್ಲಾದಮಿತ್ರ2ಪದುಮದೇವಿಯ ರಮಣ ಪ್ರದ್ವಿಷಾನ್ವಯದ ಮನಮುದಶಾಂತ ಪರಿಪೂರ್ಣಮೂರ್ತಿ ಪುಣ್ಯಪ್ರದನಾಮ ನವರೂಪ ಪತಂಗಾನಂತಪ್ರದೀಪ ನಿನ್ನಪದವೆಗತಿಹೊರೆಯೆನ್ನ ಪ್ರಸನ್ವೆಂಕಟರನ್ನ3
--------------
ಪ್ರಸನ್ನವೆಂಕಟದಾಸರು
ಹರಿನೀ ಪಿಡಿದ ಕಲ್ಲವೆ ರತುನಹರಿನಿನ್ನಡಿಗಲ್ಲದವನೆ ಯವನಪ.ಹರಿನೀನೊಲಿದ ಕಪಿರಾಜ ವಿಧಿಯುಹರಿನೀನೊಲಿಯದಿರೆ ಕಪಿಗೆ ವಧೆಯುಹರಿನೀ ಗೆಲಿಸೆ ಪಾರ್ಥನಿಗೆ ಗೆಲುವುಹರಿನಿನ್ನ ಛಲದಿ ಕೌರವರಿಗಳಿವು1ಹರಿನೀ ಮೆಚ್ಚಿದರ್ಭಕರಾರ್ಯರುಹರಿನೀ ಮೆಚ್ಚದಾರ್ಯರೆ ಕಿರಿಯರುಹರಿನಿನ್ನುಚ್ಚರಿಪರು ಮಾನ್ಯರುಹರಿನಿನ್ನೆಚ್ಚರಿಲ್ಲದ ಜನರ್ಹುಚ್ಚರು2ಹರಿನೀ ಕನಕಗಿರಿಗಣುಕಲ್ಲೆನಿಪೆಹರಿನೀ ತೃಣವೆಟ್ಟ ಮಾಡುತಲಿಪ್ಪೆಹರಿನೀ ಘನಕೆ ಘನತರ ಮಹಿಮಹರಿನೀ ಪ್ರಸನ್ವೆಂಕಟಪ ಹೊರೆಯೆಮ್ಮ3
--------------
ಪ್ರಸನ್ನವೆಂಕಟದಾಸರು