ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಟಕಟಾ ಕಂಡೆವಲ್ಲಾ ಕುಟಿಲವರ್ತನ ಕೆಲಕೆಲವು ಈ ಕಲಿಯುಗದೀ ಪ ಮಳೆಯಿಲ್ಲ ಬಂದರಿಳೆ ಬೆಳೆಯದು ಬೆಳೆಯೆ ಧರಣಿ ಹುಲಿಸಿಲ್ಲ ಹುಲಿಸಾದರಿಲ್ಲಾ ಪ್ರಜೆಗೇ ಸಲುವಕೋರಲ್ಪವನು ಬಿಡರು ರಾಜರುಗಳ ಹಾ ವಳಿಯಲುಳುಹಿಲ್ಲ ಇನ್ನೆಂತು ಕೃಷಿಕರಿಗೇ 1 ಧನವಗಳಿಸಿಯೆ ಪಡುವುದನ್ಯಾಯವೇ ಮೊದಲು ಮನವರಿತು ಪಾತಕಂಗಳ ಮಾಡುತಿಹರೂ ಇನಿತು ಗಳಿಸಿದ ಕೃತ್ಯದರ್ಥಕ್ಕೆ ಚೋರರು ಜನಪರೊಡೆಯರು ಬಯಲಮಮತೆಗಳ ಬಿಡರೂ 2 ಕಕ್ಕುಲತೆ ಪರನಿಂದೆ ರಾ ಕ್ಷಸಕೃತ್ಯ ಹಿಂಸೆ ಮತ್ಸರ ಅನಾಚಾರಾ ಕುಹಕ ಕುಟಿಲ ಕುಮದ ಸ್ವಾಮಿದ್ರೋಹ ವಸುಮತಿಯ ಸುರರ ವಧೆ ಘನವಾಯಿತಲ್ಲಾ 3 ತೊಡುವೊಡವೆಗಳ ಬೇಡಲೊಡನೆರಡು ಕಂಗಳಲಿ ಕಿಡಿಸೂಸಿ ಬಾಯಿ ನೊರೆಸುತ್ತಿ ಘರ್ಜಿಸುತಾ ಜಡಿವ ಕೋಪದಿ ಮಧುಪರಂತೆ ಜರೆವೀ ಬಾಯಿ ಬಡುಕರೇ ಮೇದಿನಿಗೆ ಹೊರೆಯಾದರಲ್ಲಾ 4 ರಸನಬಿಡುವರು ಕಸವಪಿಡಿವರೊರೆಯನು ಪಿಡಿದು ಬಿಸುಡುವರಲಗ ಪರುಸವನು ಬಿಟ್ಟು ಕಲ್ಲಾ ಒಸೆದು ಬಿಡುವರು ಶ್ರೀ ವೈಕುಂಠಕೇಶವನಿರಲು ನುಸಿ ದೈವಗಳ ಭಜಿಸಿ ಹಸಗೆಡುತಲಿಹರೂ 5
--------------
ಬೇಲೂರು ವೈಕುಂಠದಾಸರು
ಬಾರಯ್ಯ ಬಾ ಬಾ ಬುಧಜನಗೇಯಾ | ಹೇ ಗುರರಾಯಾಸಾರಿ ಬರುವ ಭಕುತರೊಡೆಯ | ಕಾಯಯ್ಯ ಜೀಯಾ ಪ ವಾರಿಜನಾಭನ ವಾರಿಧಿಮಥನನವೈರದಿ ಭಜಿಸಿದ ಪುರಟ ಕಶ್ಯಪನ |ವರ ಉದರೋದ್ಭವ ಹರಿ ಪ್ರಿಯ ಭಕುತನೆಶರಣರ ಪೊರೆಯಲು ತ್ವರ್ಯದಿ ಬಾರೋ ಅ.ಪ. ದಿತಿಸುತ ದೊರೆಯೇ | ಬಾಹ್ಲೀಕ ದೊರೆಯೇ |ಚತುರ ಚಂದ್ರಿಕೆ ಗುರು ಮಂತ್ರಾಲಯ ಗುರುವೇ | ದೊರೆಬಲು ಮೊರೆಯೇ |ವ್ಯಥೆಯಾಕೆನ್ನುತ | ಹಸ್ತವ ಚಾಚುತಹುತ ವಹ ನೊಳು ಬಲಾ | ಜತನಾಗಿರಿಸಿಹ ರತುನವ ಹಾರವ | ಪ್ರೀತಿಲಿ ಕೊಡುತಅತಿಶಯ ತೋರಿದ | ಯತಿ ರಾಘವೇಂದ್ರ 1 ಸುಧೀಂದ್ರರ ಕರಜ ಮಂತ್ರಾಲಯ ನಿಲಯ | ಬಲು ಮಂತ್ರಗಳೊಡೆಯಾ |ಬಧಿರ ಮೂಕರ ಅಂಧರ ಹೊರೆಯಾ | ಪರಿಹರಿಸುವ ದೊರೆಯಾ |ಮಧ್ವಾಂತರ್ಗತ ಮಧು ಕೈಟ ಭಾರಿಯಸಿದ್ಧಾಂತದ ಸವಿ ಹೃದ್ಗತ ಮಾಡಿದ |ವಿದ್ವನ್ಮಣಿಗಳ ಸದ್ವøಂದದ ಖಣಿಸದ್ವಿದ್ಯದ ಸವಿ ಮೋದದಿ ಉಣಿಸಲು 2 ಮನ್ರೋವಿನ ಮನ ತಿಳಿಯುತಲಿನ್ನೂ | ಮುನಿವರ ತಾನೂ |ಸಾನುರಾಗದಿ ತನುವ ತೋರಿದನೂ | ಘನ ಕರುಣಿಯು ತಾನೂ |ಜ್ಞಾನಿಗಮ್ಯ ಗುರುಗೋವಿಂದ ವಿಠಲನಧ್ಯಾನಿಸೆ ಪೊಗುತಲಿ ವೃಂದಾವನವ |ಆನತ ಜನ ಮನದಿಷ್ಟವ ಸಲಿಸುತಮೌನಿವರೇಣ್ಯನೆ ತುಂಗೆಯ ತೀರಗ 3
--------------
ಗುರುಗೋವಿಂದವಿಠಲರು
ಬಾರಯ್ಯ ಭಕ್ತವತ್ಸಲ ಶ್ರೀ ಗುರು ಮುದ್ದುಕೃಷ್ಣ ಮದನಗೋಪಾಲ ಧ್ರುವ ಯಾದವಕುಲತಿಲಕ ಶ್ರೀದೇವದೇವ ಸಾಧುಜನರ ಪಾಲಕ ಉದ್ಧವ ಪ್ರಾಣಪೋಷಕ ಆದಿಕೇಶವ ಸದಮಲ ಸುಖದಾಯಕ 1 ಇಂದೀವರದಳನಯನ ನಂದಕುಮಾರ ಸುಂದರ ಶುಭವದನ ಮಾಧವ ಮಧುಸೂದನ ಮಂದರಧರ ವೃಂದ ಗೋಕುಲೋದ್ಧರಣ 2 ಮುರಹರ ಸಂಕರುಷಣ ಉರಗಶಯನ ತೋರಯ್ಯ ನಿಮ್ಮ ಚರಣ ಬಾರಯ್ಯ ನಾರಾಯಣ ಗರುಡವಾಹನ ಹೊರೆಯಾ ಮಹಿಪತಿ ಪ್ರಾಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು