ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊರೆಯಲು ಸರ್ವಸ್ವವನು ನುಂಗಿತು ಪ ಚಿನ್ನ ಚಿಗುರು ಕಂಚು ತಾಮ್ರವನು ನುಂಗಿತು ಮಣಿ ಮುರುಗಳ ನುಂಗಿತು ಬಣ್ಣ ಬಂಗಾರವ ನುಂಗಿತು ಹೊಟ್ಟೆಗೆ ಸಣ್ಣ ಹೆಣ್ಮಕ್ಕಳ ನೆರೆ ನುಂಗಿತು 1 ಮಡದಿ ಮಕ್ಕಳ ಮೇಲಣಾಸೆಯ ನುಂಗಿತು ಜಡದಿ ಜನರ ಸತ್ವಗಳ ನುಂಗಿತು ಬಡವ ಬಲ್ಲಿದರನು ಬಿಡದಪ್ಪಿ ನುಂಗಿತು ಪೊಡವಿ ಯೊಳಗಿರುವಾಸೆಯನು ನುಂಗಿತು 2 ಎಡಬಲದವ ರೊಡವೆಯ ಕದ್ದು ನುಂಗಿತು ಕಡಕಟ್ಟ ತಂದು ಕೊಡದೆ ನುಂಗಿತು ಕೊಡುವ ಬಿಡುವ ಧನಿಯರ ಕೈಯ ನುಂಗಿತು ಕಡಲೋಭಿ ವಿತ್ತವನೆಲ್ಲ ನುಂಗಿತು 3 ದುಡ್ಡಿಗೆ ಪಾವಕ್ಕಿಯ ತಂದು ರಾಗಿಯ ದೊಡ್ಡಂಬಲಿ ಕಾಸಿದರೆ ನುಂಗಿತು ಗುಡ್ಡದಂತವರೆಲ್ಲ ಮಣಿಗೆ ಮಂಡಿಸಿಕೊಂಡು ದೊಡ್ಡಪ್ಪಗಳಿಗೆಲ್ಲ ಸುರಿದುಂಡಿತು4 ಮುನ್ನ ಮಾಡಿದ ಹೊಲ ಮನೆಯನ್ನು ನುಂಗಿತು ಜನ್ನೆ ಆಕಳ ಮಹಿಷಿಯ ನುಂಗಿತು ಅನ್ನವೆ ನುಂಗಿತು ಜನರನ್ನು ಲಕ್ಷ್ಮಿಯನಾಳ್ದ ವನದಾಸರಿಂಗೊಲಿಯಿತು 5
--------------
ಕವಿ ಪರಮದೇವದಾಸರು
ಏನು ಇಲ್ಲದ ಎರಡು ದಿನದ ಸಂಸಾರಜ್ಞಾನದಲಿ ದಾನಧರ್ಮವ ಮಾಡಿರಯ್ಯ ಪ ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯನುಣಿಸಬೇಕುಹಸನಾದ ಭೂಮಿಯನು ಧಾರೆಯೆರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇ ಬೇಕು1 ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುತ್ಸಿತವು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮೆಪಡಬೇಡಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ 2 ದೊರೆತನವು ಬಂದಾಗ ಕೆಟ್ಟುದ ನುಡಿಯಬೇಡಸಿರಿ ಬಂದ ಕಾಲಕ್ಕೆ ಬಲು ಮೆರೆಯಬೇಡಸಿರಿವಂತ ಶ್ರೀ ಕಾಗಿನೆಲೆಯಾದಿಕೇಶವನಚರಣ ಕಮಲವ ಸೇರಿ ಸುಖಿಯಾಗು ಮನುಜ 3 * ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ಕರೆದುಣ್ಣಲಿಲ್ಲಾ ಹರಿನಾಮ ಕಾಮಧೇನುವನು ಪ ಹೊರೆಯಲು ಅನುವಾಗಿ ಬಂದಿರಲು | ಮನುಜ ಮೈ ಮರೆವರೆ ನೀನು 1 ಮನವೆಂಬ ಕರುಬಿಟ್ಟು ಘನ ಭಕ್ತಿ ಮುರವಿಟ್ಟು | ತನುವಿನ ಪಾತ್ರೆಲಿ ನೀನು 2 ಕರುಣದಾ ಕೆಚ್ಚಲು ತೊರೆದು ಭೊರ್ಗರೆಯಲು | ಅರಿವೆಂಬ ಕೈಯಿಂದ ನೀನು 3 ಗುರು ಮಹಿಪತಿಕಂದಗರುಹಿದ ನಿಜಾನಂದ ಸಿರಿಸುಖವ ಪಡೆಯಲು ನೀನು 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಇರದ ಎರಡು ದಿನದ ಸಂಸಾರಜ್ಞಾನದಲಿ ದಾನಧರ್ಮವ ಮಾಡಿರಯ್ಯ ಪ.ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯುಣಿಸಬೇಕುಹಸನಾದ ಭೂಮಿಯನು ಧಾರೆಯರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇಬೇಕು 1ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುಟಿಲ ನಡಿಸಲು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮಲಿರಬೇಡಬಾಳ್ವೆ ಸ್ಥಿರವೆಂದು ನೀನಂಬಿ ಕೆಡಬೇಡ 2ದೊರೆ ತನವು ಬಂದಾಗ ಕೆಟ್ಟ ನುಡಿಯಲು ಬೇಡಸಿರಿ ಬಂದ ಕಾಲಕ್ಕೆ ಮರೆಯಬೇಡಸಿರಿವಂತನಾದರೆ ಪುರಂದರವಿಠಲನಚರಣ ಕಮಲವ ಸೇರಿ ಸುಖಿಯಾಗು ಮನುಜ 3
--------------
ಪುರಂದರದಾಸರು