ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ರಂಗನ ಮಹಿಮೆಯ ಏನೆಂದ್ಹೇಳಲಿ ಪ ಘನ್ನಸಿರಿವಿಧಿ ಧ್ಯಾನಕೆ ನಿಲುಕದ ಅಗಣಿತ ಮಹಿಮೆಯ ಅ ಎಲ್ಲವ ಬಲ್ಲನು ಎಲ್ಲವ ಮಾಡುವ ಎಲ್ಲರ ಒಡೆಯನು ಇಲ್ಲದ ಸ್ಥಳವಿಲ್ಲ ಬಲ್ಲವರಿಲ್ಲವೆ ಫುಲ್ಲನಾಭನ ನಲ್ಲನು ಲಕ್ಷ್ಮಿಗೆ ಗೊಲ್ಲನು ಆದನೆ 1 ಅಂಗನೆ ಲಕ್ಷ್ಮಿಯ ಸೊಗಸಿಗೆ ನಿಲುಕದ ಅಂಗನೆ ಇಲ್ಲದೆ ಮಗನನು ಪಡೆದವ ಹಿಂಗದ ತಾನೆ ಅಂಗನೆ ಯಾದವ ರಂಗನ ಗೋಕುಲ ಹೆಂಗಳ ಕೂಡಿದನೆ2 ತಂದೆಯ ಕೊಂದನು ಕಂದನ ಸಲಹಿದ ಕಂದನ ಕೊಂದನು ತಂದೆಯ ಸಲಹಿದ ಬಂಧುಗಳೆನ್ನದೆ ಕೊಂದನು ವಂಶವ ತಂದೆಯು ಇಲ್ಲದೆ ಕಂದನು ಆಗುವನೇ 3 ದಾನವ ನೀಡಿದ ದಾನಿಯ ತುಳಿದನು ಮಾನವ ತೆಗೆದಾ ಹೀನನ ಸಲಹಿದ ದೀನರ ಸಲಹುವ ದಾನವರಳಿವನು ಜ್ಞಾನಿಗಮ್ಯನು ಮಾನಸ ಹಂಸನ 4 ಹಸಿವೆಯ ಅರಿಯದ ಅಸಮದೇವನು ಸೊಸಿಯು ನೀಡಿದ ಶಾಖವ ತಿಂದನೆ ಪಶುಪತಿ ಋಷಿಯನು ವಶವಾಗಿ ಮಾಡಿದ ಮಾಸದಮಹಿಮನು 5 ನಾಲ್ಮೊಗನಯ್ಯನು ಸುಳ್ಳನು ಹೇಳುತ ಕಳ್ಳನು ಆದನು ಗೊಲ್ಲರ ಭಕ್ತರಿಗೆ ಮೆಲ್ಲನೆ ಕುರುಕುಲ ಎಲ್ಲವ ಸವರಿದ ಬಲ್ಲಿದ ಕೃಷ್ಣಗÉ ಇಲ್ಲವೆ ಸಮರಧಿಕ 6 ಜಗವನು ಮಾಡುವ ಜಗವನು ಪಾಲಿಪ ಜಗವನು ಅಳಿಸುವ ಮಗುವಾಗಿ ಬಂದನೆ ಜಗಜೀವ ಭಿನ್ನನು ಜಗದೊಳು ವ್ಯಾಪ್ತನು ನಗುತಲಿ ಬಾಯಲಿ ಜಗವನು ತೋರಿದನೆ7 ಯಾಗವ ನಡೆಸಿದ ಯಾಗವ ಕೆಡಿಸಿದ ಯೋಗವ ಚರಿಸುತ ಯೋಗವ ಬೋಧಿಪನೆ ಬಾಗುವ ಭಕ್ತರ ನೀಗುವ ಕಲುಷವ ಆಗಮವಂದಿತ ಸಾಗರಶಯನನೆ8 ಹತ್ತವತಾರವ ನೆತ್ತಿದ ಮಹಿಮನು ಉತ್ತಮ ಭಕುತರ ತೆತ್ತಿಗನಾದನೆ ಬತ್ತಲೆ ಶಿಶುವಾಗಿ ಬಿತ್ತಿದ ಮೋಹವ ಬೆಸ್ತರಕುವರಿಗೆ ಆತ್ಮಜನಾದವನೆ9 ಚಕ್ರವಪಿಡಿದವ ನಕ್ರನ ತರಿದವ ಶಕ್ರನಕಾಯ್ದವ ವಕ್ರೆಯ ಕೂಡಿದನೆ ರಕ್ಕಸಯವನನ ಠಕ್ಕಿಲಿ ಅಳಿಸುತ ಭಕ್ತನಪೊರೆದಾ ಯುಕ್ತಗಳೊಡೆಯನೆ 10 ನಾರೆಂದೊದರಿದ ಉರುತರ ಪಾಪಿಯ ಭರದಿಂಪೊರೆಯೊ ಕರುಣಾಸಾಗರನೆ ನರಹರಿದೇವನು ಪರಿಪರಿರೂಪನು ಪರಿಪರಿಲೀಲೆಗೆ ಮೇರೆಯೆ ಇಲ್ಲಾವೇ 11 ವಾರಿಯಲಾಡುವ ಭಾರವ ಹೊರುವಾ ಕೋರೆಯ ತೀಡುವ ಘೋರವ ತೋರುವನೇ ವೀರರತರಿಯುವ ಕ್ರೂರರಸವರುವ ಜಾರನು ಆಗುವ ವೈರಿಗಳ್ವಂಚಿಪ ಏರುವ ತೇಜಿಯನೆ 12 ಅದ್ಬುತ ರೂಪವ ಕದನದಿ ತೋರಿದ ಬದರಿಯನಿಲಯಗೆ ತುದಿಮೊದಲಿಲ್ಲಾವೆ ಉದರದಿ ಮಗುವನು ಮುದದಿಂಸಲಹಿದ ಮುದಮುನಿ ಪ್ರಿಯನು ಹೃದಯದಿ ವಾಸಿಪನೆ 13 ವಿಷವನು ಕುಡಿದಾ ವೃಷಭವಾಹನ ಅಸುರನ ಭಯದಿಂ ಘಾಸಿಲಿ ಓಡುತಿರೇ ಮೋಸದಿ ಯುವತಿಯ ವೇಷವ ಧರಿಸುತ ಪಶುಪತಿ ಸಲಹಿದನೇ 14 ಭರದಿಂ ರಥವೆತ್ತಿ ನರನಂ ಕಾಯ್ದನು ಧರಣಿಯ ಒತ್ತುತ ಕುರುಪನ ಕೆಡಹಿದನೇ ಮರೆಸುತ ರವಿಯನು ಪೊರೆದನು ಚೇಲನ ಸುರವರಪೋಷಕ ಸಿರಿಪತಿ ಚದುರನ 15 ಗಂಗೆಯಪಡೆದ ಮಂಗಳ ಮಹಿಮನು ಹಿಂಗದೆ ಗೋಪರ ಸಂಗಡ ಆಡಿದನೇ ತಿಂಗಳ ಬೆಳಕಲಿ ಶೃಂಗರ ಸೊಬಗನು ಹೆಂಗಳ ಕೂಡುತ ಸಂಗೀತ ಪಾಡಿದನೆ 16 ಕಾಳಿಯ ಫಣೆಯಲಿ ಕಾಳಿಂದೀಶನು ತಾಳಕೆ ಕುಣಿಯುತ ಕೊಳಲನ್ನೂದಿದನೆ ಘೂಳಿಗಳಳಿಯುತ ನೀಲಳತಂದವ ಊಳಿಗ ಮಾಡಿದನೇ 17 ನಾರಿಯು ಮೊರೆಯಿಡೆ ಸೀರೆಯನೀಡಿದ ವಾರಿಜಾಕ್ಷನು ಸೀರೆಯ ಚೋರನೆ ನೀರೊಳು ಮುಳುಗಿದ ಪೋರರಿಗೆಲ್ಲ ತೋರಿದ ಜಗವನು ಸೂರಿಗಳೊಡೆಯನೆ 18 ಗರುಡನ ಏರುವ ಧರಣಿಯ ರಮಣನು ಏರುತಹುಡುಗರ ತುರುಗಳ ಕಾಯ್ದನೆ ಮಾರನಪಡೆದ ಮುರಹರಕೃಷ್ಣನು ಗಿರಿಯನು ಎತ್ತುತ ಹರುಷವ ಬೀರಿದನೇ 19 ಶೃತಿಗಳು ಪೊಗಳುವ ವ್ಯಾಪ್ತನ ನಿತ್ಯನ ಪಾತಕ ಹೋಗುವುದೇ ಅಂತಕ ಗತಿ ಮತಿ ಪ್ರೇರಕ ದಾತನು ಎಂತೆನೆ ಪ್ರೀತಿಲಿ ಸಲಹುವನೆ 20 ಮಜ್ಜಿಗೆ ಕಡೆಯುವ ರಜ್ಜುವಿನಿಂದಲಿ ಮೂರ್ಜಗನಯ್ಯನು ಕಟ್ಟಿಸಿಕೊಂಡಾನೆ ಲಜ್ಜೆಯ ಬಿಡುತಲಿ ಗೆಜ್ಜೆಯ ಕಟ್ಟುತ ಘರ್ಜಿಸಿ ಪಾಡಲು ಹೆಜ್ಜೆಯ ತೋರುವನೆ 21 ದಾಸರ ಪೋಷಿಪ ಶೇಷಗಿರೀಶನ ವಿಶೇಷವೆ ಬಣ್ಣಿಸೆ ಶೇಷಗೆ ಆಗದೆ ದೋಷವು ಇಲ್ಲದ ವಾಸುದೇವನೆ ತೋಷವ ನೀಡುವ ಸಾಸಿರ ನಾಮಕನೆ22 ಜಯಮುನಿ ಅಂತರ ವಾಯುವಿನಲ್ಲಿಹ ಜಯಕೃಷ್ಣವಿಠಲನು ಜೀಯನೆ ಜಗಕೆಲ್ಲ ನಯಭಯದಿಂದಲಿ ಹಯಮುಖನೊಲಿಸಲು ಭಯವನು ಹರಿಸುತ ನ್ಯಾಯದಿ ಪಾಲಿಪನೇ 23
--------------
ಕೃಷ್ಣವಿಠಲದಾಸರು
ನಿನ್ನ ನಂಬಿದವರ್ಗೆ ನಿನ್ನಂದವೆ ಬಂದುದಿನ್ನೇನಿನ್ನೇನು ಪ್ರಸನ್ನ ರಾಘವ ದಶ'ಧವಾುತೆ'್ಮುರ'ನ್ನೇನಿನ್ನೇನು ಪಕೊರಳು ಗೊ್ಯುಕತೆುಂದ ಕಂಗೆಡುತಿದೆ ಲೋಕ'ನ್ನೇನಿನ್ನೇನುಪರರ ಬಾಧೆಗೆ ಕಲ್ಲುಹೊರುವಾಟ ಒದಗಿದುದಿನ್ನೇನಿನ್ನೇನುಧರೆಯ ಬಗೆದು ಬೆರತಿಂಬ ಕಾಲವು ಬಂದುದಿನ್ನೇನಿನ್ನೇನುಕರುಳ ಬಗೆದು ರಕ್ತಗುಡಿವ ಭಯವು ತೋರಿತಿನ್ನೇನಿನ್ನೇನು 1ದಾನಗೈಯಲು ಸ್ಥಾನ ಹಾನಿಯಾಗುವದಾುತಿನ್ನೇನಿನ್ನೇನುಜ್ಞಾನ ಕುಲದಿ ಪುಟ್ಟ ಕ್ಷಾತ್ರ ಜೀವನ ಬಂದುದಿನ್ನೇನಿನ್ನೇನುಮಾನಿನಿ ದುರುಳನಾಧೀನವಾಗುವದಾುತಿನ್ನೇನಿನ್ನೇನುಸೂನುವ ಪರರೆತ್ತಿಕೊಂಡೊಯ್ವ ತೆರಬಂದುದಿನ್ನೇನಿನ್ನೇನು 2ಉಟ್ಟ ಬಟ್ಟೆಯು ಪೋಪ ಸಮಯ ತಾನೊದಗಿದುದಿನ್ನೇನಿನ್ನೇನುದಿಟ್ಟ 'ಪ್ರರು ರಾವುತರಾಗುವಂತಾುತಿನ್ನೇನಿನ್ನೇನುದಿಟ್ಟಿಸಿ ನೋಡೆ ನೀನೆಮ್ಮನೆನ್ನುವರಾಗದಿನ್ನೇನಿನ್ನೇನುಹುಟ್ಟು ಹೊಂದುಗಳಡಗುವ ಕಾಲ ತಾ ಬಂದುದಿನ್ನೇನಿನ್ನೇನು 3ಕರುಣದಿಂದೀಕ್ಷಿಸಿ ಕಾಯ್ವವ ನೀನಿರಲಿನ್ನೇನಿನ್ನೇನುದುರಿತ ಕೋಟಿಗಳ ದ'ಪುದು ನಿನ್ನಯ ನಾಮ'ನ್ನೇನಿನ್ನೇನುಸ್ಮರಣೆ ಮಾತ್ರದಿ ಧನ್ಯರಹೆವಾವು ಭಯ ಪೋಪುದಿನ್ನೇನಿನ್ನೇನುವರ ವಾರಣಸೀವಾಸದಿಚ್ಛೆ ಪುಟ್ಟಿದುದೆಮಗಿನ್ನೇನಿನ್ನೇನು 4ಕರುಣದಿಂ ಚಿಕ್ಕನಾಗಪುರದಿ ನೀನೆಲಸಿದೆುನ್ನೇನಿನ್ನೇನುಗುರುವಾಸುದೇವಾರ್ಯ ರೂಪುದಾಳಿದೆಯಾಗಿುನ್ನೇನಿನ್ನೇನುಕರೆದು ಜ್ಞಾನಾಮೃತವೊರೆದು ರಕ್ಷಿಸಿದೆ ನೀನಿನ್ನೇನಿನ್ನೇನುಚರ[ಣ ಕಮಲಗಳ ನಂಬಿದೆವು ನಾನಿನ್ನೇನಿನ್ನೇನು] 5
--------------
ತಿಮ್ಮಪ್ಪದಾಸರು
ಸಾವಾತ ನಾನಲ್ಲಾ ಸಾವು ಮೊದಲೆನಗಿಲ್ಲಾ ಯೋಗಿ ತಾ ಬಲ್ಲಾ ಪ ಧರೆಯೆನಿಸಿ ದೊರೆಯಾಜÉ್ಞಯೊಳಾಳುತಿಹೆ ನಾನು ವರಮಂತ್ರಿಯಾಗಿ ವರ್ತಿಸುವವನೆ ನಾನು ಕರಣಿಕರ ತೆರದಿ ಲೆಕ್ಕವ ನೋಡುತಿಹೆ ನಾನು ಪರಿವಾರವಾಗಿ ಓಲೈಸುವವನೆ ನಾನು 1 ವಾಹನ ಹೊರುವಾತ ನಾನು ಹೊತ್ತಂತಿರುವೆ ನಾನು ಹರಿನಾಮ ಹರನಾನು ನರನಾನು ಸರ್ವವೀ ಪರಿಯೊಳಗೆ ಮೆರೆದು ವಿಸ್ತರಿಪೆ ನಾನು 2 ಅಣುರೇಣು ತೃಣಕಾಷ್ಠ ಭರಿತನಾಗಿಹೆ ನಾನು ಗಣನೆಯಿಲ್ಲದ ಗುಣವ ತೋರ್ಪೆ ನಾನು ಉಣಲಿಕ್ಕುವವ ನಾನು ಉಂಡು ತೃಪ್ತಿಪೆ ನಾನು ರಣನಾನು ರಣವ ಗೆಲುವಾತ ನಾನು 3 ಭೂಮಿಯಾಗಿಹೆ ನಾನು ಬೆಳೆವ ಬೆಳೆಯೇ ನಾನು ಸೋಮ ಸೂರ್ಯಾಗ್ನಿ ವಾಯುಗಳೆ ನಾನು ನಾಮರೂಪಾತೀತ ವಸ್ತುವಾಗಿಹೆ ನಾನು ಕಾಮಿನಿಯರಾಗಿ ಕಾಮಿಸುವವನೆ ನಾನು 4 ಒಲಿವಾತನೇ ನಾನು ಒಲಿದರಗಲೆ ನಾನು ಕೊಲಿಸಿಕೊಂಬುವೆ ನಾನು ಕೊಲುವಾತ ನಾನು ಸುಲಭದಿಂದಲಿ ಜ್ಞಾನ ಫಲವಿಕ್ಕುವವ ನಾನು ಚೆಲುವ ವಿಮಲಾನಂದ ಗುರುರಾಯ ನಾನು 5
--------------
ಭಟಕಳ ಅಪ್ಪಯ್ಯ
ಮೇರೆಯಿಲ್ಲದೆ ಮಾತನಾಡುತಲಿರಲೊಮ್ಮೆ ಕೃಷ್ಣಾ ಎನಬಾರದೆದಾರಿಯ ನಡೆಯುತ ಭಾರವ ಹೊರುವಾಗ ಕೃಷ್ಣಾ ಎನಬಾರದೆ ಪ.ತಿರುಗಾಡುತ ಮನೆಯೊಳಗಾದರು ಒಮ್ಮೆ - ಕೃಷ್ಣಾಪರಿಪರಿ ಕೆಲಸದೊಳಿದುವೊಂದು ಕೆಲಸವು - ಕೃಷ್ಣಾ 1ಮಲಗಿಯೆದ್ದು ಮೈಮುರಿದೇಳುತಲೊಮ್ಮೆ - ಕೃಷ್ಣಾಹಲವು ಯೋಚಿಸುತಲಿ ಮಂದಿರದಲಿ ಒಮ್ಮೆ - ಕೃಷ್ಣಾ 2ಚೆಂದುಳ್ಳ ಹಾಸಿಗೆ ಮೇಲೆ ಕುಳಿತು ಒಮ್ಮೆ ಕೃಷ್ಣಾಕಂದನ ಬಿಗಿದಪ್ಪಿ ಮುದ್ಧಾಡುತಲೊಮ್ಮೆ - ಕೃಷ್ಣಾ 3ಗಂಧವ ಪೂಸಿ ತಾಂಬೂಲ ಮೆಲ್ಲುತಲೊಮ್ಮೆ - ಕೃಷ್ಣಾಮಂದಗಮನೆಯೊಳು ಸರಸವಾಡುತಲೊಮ್ಮೆ - ಕೃಷ್ಣಾ 4ಕ್ಷೀರಸಾಗರ ಶಯನ ನೀನೇ ಗತಿಯೆಂದು ಕೃಷ್ಣಾದ್ವಾರಕಾ ಪುರವಾಸಪುರಂದರವಿಠಲ ಕೃಷ್ಣಾ5
--------------
ಪುರಂದರದಾಸರು