ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇರಬಾರದೊ ಬಡವ ಜಗತ್ತಿನೊಳಗೆ | ಪರದೇಶಿ ಮಾನವಗೆ ದಿಕ್ಕು ಮತ್ತಾವನು ಪ ಪೊಡವಿಪತಿ ದೃಷ್ಟಿಗಳು ಒಳ್ಳೆವಲ್ಲಾವೆಂದು | ಬಿಡದೆ ಜನ ಪೇಳುವುದು ಸಿದ್ಧವಯ್ಯಾ | ಬಡವ ನಾನಯ್ಯ ನಾನಾ ಕಷ್ಟಬಟ್ಟೆರಡು | ಒಡವೆ ಸಂಪಾದಿಸಲು ಅಪಹರಿಸಿದ ನೋಡು 1 ದಿನ ಪ್ರತಿ ದಿನದಲ್ಲಿ ಕರಳು ಕಟ್ಟಿಕೊಂಡು | ಹಣದಾಸಿಯಿಂದ ನಾ ಘಳಿಸಿದ್ದೆನೊ | ಮನೆವುಗೆ ಬಂದು ಮಾಡಿಕೊಂಡೊಯ್ದಿಯಾ ಧರ್ಮವೇ | ವನಜನಾಭನೆ ನಿನ್ನ ದೊರೆತನಕೆ ಶರಣೆಂಬೆ2 ದೊರೆಗಳಾ ಲಕ್ಷಣವಿದೆ ಎಂದೆಂದಿಗೆ ತಮಗೆ | ಸರಿಬಂದ ಕಾರ್ಯಮಾಡುವರಲ್ಲದೇ | ನೆರೆಯವರದೇ ತಪ್ಪೇ ವಿಜಯ ವಿಠ್ಠಲರೇಯ | ಮರಳೆ ಮಾತಾಡಿದರೆ ಅಪರಾಧ ಹೊರಿಸುವರು 3
--------------
ವಿಜಯದಾಸ
ಸೂಳೆವೆಂಗಳ ನಂಬಬೇಡಅವರ ಖೇಳಮೇಳವ ಬಿಡೋ ಮೂಢಬಲು ಜಾಲಗಾತಿಯರ ಬಲೆಗೆ ಸಿಕ್ಕದಿರುಯಮನಾಳೆ ಮುಡಿಸುವನೆ ಬಿಡುಬಿಡುಗಾಡ ಪ ಸುರತಸುಖವ ತೋರಿಸುವರುಮನೆಯೊಳಿರುವ ಧನವ ತರಿಸುವರುಪರಪುರುಷನಿದಿರು ಮಾಡುವರುಧನ ಬರಿದಾಗೆ ತಪ್ಪು ಹೊರಿಸುವರುಕಡೆಗೆ ತಿರಿದು ತಾರಂದು ಕೈಯಲಿ ತೂತುಗರಟವಕರೆದು ಕೊಡುವರು ಬೈವರು ದೂರುವರು1 ಗುರುಹಿರಿಯರ ತೊರೆಸುವರುಮನೆಯೊಳಿರುವ ಮಕ್ಕಳ ಮರಸುವರುಧನ ಬರುವತನಕ ನೋಡುವರುಬಾರದಿರೆ ಛಿ ಹೋಗೆಂದು ದೂಡುವರು ಗಂಧಪರಿಮಳ ತಿಲಕ ತಾಂಬೂಲ ಕ್ರಮುಕದೊಳುಮರುಳು ಮದ್ದಿಕ್ಕಿ ಕೈವಶವ ಮಾಡುವರು2 ಹೆಂಡತಿಯನು ತೊರಸುವರುಕಂಡ ಕಂಡ ಪುರುಷರ ಕೂಡುವರುಮಂಡೆಗೆ ಮದ್ದನೂಡುವರು ಕಡೆಗೆಭಂಡಾಟವ ಮಾಡುವರು...........(ಅಸಮಗ್ರ)
--------------
ಕೆಳದಿ ವೆಂಕಣ್ಣ ಕವಿ
ಹರಿದಾಸರಿಗಿನ್ನು ಸರಿಯುಂಟೆ -ನರ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಹರಿಯ ನಂಬಿದವರಿಗೆ ಕೇಡುಂಟೆ ಮನುಜಾ ? ಪ.ಮಾರಿಯ ಕೈಯಲಿ ನೀರ ಹೊರಿಸುವರು |ಘೋರ ಮಸಣಿಯಿಂದ ಕಸ ಬಳೆಸುವರು ||ಕ್ರೂರ ಮೃತ್ಯುವಿನ ಕೈ ಭತ್ತ ಕುಟ್ಟಿಸುವರು |ಜವನ ಕೈಯಲಿ ಜಂಗುಳಿ ಕಾಯಿಸುವರು 1ಬೊಮ್ಮ ಬೀರ ಬೇತಾಳ ಜಟ್ಟಿಗರೆಲ್ಲ |ಕರ್ಮದ ಕಡಲೊಳು ಮುಳುಗಿರಲು ||ಒಮ್ಮೆ ಹರಿದಾಸರಪಾದ ಸೋಕಲು ಬೇಗ |ಕರ್ಮದ ಕಡಲಿಂದ ಕಡೆಹಾಯಿಸುವರು 2ಜಕ್ಕಣಿ ಜಲದೇವರು ಮೊದಲಾದ |ಬಿಕ್ಕಾರಿ ದೈವವ ಪೂಜಿಸಲು ||ಲೋಕನಾಯಕಸಿರಿ ಪುರಂದರವಿಠಲನ |ಸಾಕಾರವಾದಂಥಪರಮಭಾಗವತರು3
--------------
ಪುರಂದರದಾಸರು