ನಮಿಸುತ ಹೊರಳುವೆನು | ಕಾರ್ತಿಕೇಯ ನಮಿಸುತ ಹೊರಳುವೆನು ಪ
ನಮಿಸುತ ಹೊರಳುವೆ | ರಮೆಪತಿ ಸಖ ಗುಹನಮಿಸುತಅ
ಪರಿಪರಿ ತಾಪದ | ಸೆರೆಯೊಳ್ ಸಿಲುಕಿ ಬಲು ತರ ಕಷ್ಟಪಡುತಿಹೆನು ಕುಮಾರ ನಮಿಸುತ 1
ದುರಿತ ರಾಶಿಯಗೈದು ನರಳು ಬಲಿಹೆನು | ಕಾವುದು ನೀನು ನಮಿಸುತ 2
ಈಶನ ಪುತ್ರ ಸ | ರ್ವೇಶ ಸದ್ಗುಣ ಪಾವಂ | ಜೇಶನೆ ಸ್ತುತಿಸುವೆನು | ದಾಸನು ನಾನು ನಮಿಸುತ 3