ನೀನೆ ಗತಿ ಶ್ರೀಪತಿ ನೀನೆ ಗತಿ
ನಿರಾಕೃತ ದಾನವತತಿ ದೀನಾನುಕಂಪಿತ ಮತಿ ಪ.
ಏನೆಂಬೆನು ನಿನ್ನಯ ಕರುಣಾ ಪವಮಾನ ಮತಿಯ
ಜನಾದರಣಾ ದೀನಬಂಧು ದುರಿತೌಘ ನಿವಾರಣ
ಶುಭ ಸಂಚಯ ಕರಣ 1
ನಿರವಧಿ ಸುಖದಾಯಕ ನಿನಗನ್ಯರು ಸರಿಯಂಬರು
ನರಕದಿ ಹೊರಳುವರು ಚರಣಯುಗ್ಮಸರಸಿಜವಿಂತಿರಲು
ಬರಿದೆ ಭವದಿ ತಿಳಿಯದೆ ಬಳಲುವರು 2
ಸ್ಮರಣೆ ಮಾತ್ರದಿಂದೊಲಿವ ಮನವರಿತು ಪಾಡಿದರೆ ನಲಿವ
ಸಿರಿಸಮೇತ ಮಂದಿರದೊಳಗಿರುವ
ಉರಗ ಗಿರೀಂದ್ರನ ಶಿರದಲಿ ನಲಿವ 3