ಒಟ್ಟು 4 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು - ಜಗ ಪ ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ ಅ ಗುರು ಹಿರಿಯರನು ಕಂಡು ಮುರುಕಿಸುವ ಮೋರೆಯಲಿಅರೆಮತಿಯ ಕೊಂಕು ಮಾತುಗಳನಾಡಿಚರಣಕೆರಗದ ಮನುಜರಿರಬಾರದೆಂದೆನುತಮರಮುರಿದು ಒರಗಿ ಸಾಯಲಿ ಎಂದು ನಡುಗಿದೆಯ1 ಉತ್ತಮರ ಹೊಟ್ಟೆಯಲಿ ಬಗಳೊ ಶ್ವಾನವು ಹುಟ್ಟಿಹೆತ್ತವರ ನಿರ್ಬಂಧಕೊಳಗು ಮಾಡಿಅತ್ತೆ ಮಾವರ ಕೀರ್ತಿಯ ಕೊಂಡಾಡುವಧಮರಹೊತ್ತು ಇರಲಾರೆನೆನುತ ಮತ್ತೆ ನಡುಗಿದೆಯ2 ಕಳ್ಳತನವನು ಕಲಿತು ಕಾಲೋಚಿತವ ಕೇಳ್ದುಸುಳ್ಳು ಮಾತುಗಳಾಡಿ ಒಡಲ ಪೊರೆದುಕೊಳ್ಳಿ ದೆವ್ವಗಳಂತೆ ಅಲೆದಾಡುತಿರುವಂಥಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯ 3 ಕಲಿಯುಗದಿ ಮುರಹರನ ಸ್ಮರಣೆಯನು ಮಾಡದೆಯೆಸಲೆ ಭಕ್ತಿಯಿಂ ವೇದಶಾಸ್ತ್ರವನೋದದೆಲಲನೆಯರ ಮೇಲೆ ಕಣ್ಣಿಡುವ ಹೊಲೆಯರನು ನಾ-ನೊಲಿದು ಹೊರಲಾರೆನೆಂದು ನಡುಗಿದೆಯ 4 ಧರೆಯೊಳಗೆ ಕರ್ಮಿಗಳು ಹೆಚ್ಚಿ ಕವಿತ್ವವ ಕಲಿತುನರಕುರಿಗಳೆಲ್ಲರು ನಡೆಗೆಟ್ಟರೆಂದುಗುರುವೆ ಕೇಳಯ್ಯ ಕನಕ ಪ್ರಿಯ ತಿರುಪತಿಯಗಿರಿಯಾದಿಕೇಶವನೆ ಒಲಿದು ನಿಲ್ಲಿಸಿದ 5
--------------
ಕನಕದಾಸ
ಕೊಡವನು ಹೊರಲಾರೆನೆ ಅಕ್ಕಕೊಡವನು ಹೊರಲಾರೆನೆಕೊಡವನು ಹೊರಲಾರೆ ಕಷ್ಟಪಡಲಾರೆಕೊಡವನು ಒಡೆದರೆ ಕಡೆಹಾಯುವೆನೆ ಪ ನಿತ್ಯ ಶುಚಿಯಾಗದ ಕೊಡನೆ1 ರೂಪು ದಿನದಲಿ ಮಾಸಿಹ ಕೊಡನೆಆಪತ್ತಿನಿಂದ ನರಳುವ ಕೊಡನೆಪಾಪದ ಪುಂಜದ ಪಡಿಶಂಟು ಕೊಡನೆಜೋಪಾನ ಮಾಡಲು ಜರಿವಾ ಕೊಡನೆ 2 ಎಲ್ಲಿಂದ ಬಂದಿತೋ ಎನಗೀ ಕೊಡವುಎಲ್ಲಿಯ ಪಾಪಿಯು ಮಾಡಿದ ಕೊಡವುಬಲ್ಲ ಚಿದಾನಂದನ ಮರೆಸುವ ಕೊಡವುಬಾಳನು ಕೊಡಿಸುವ ಸತಿಯೆಂಬ ಕೊಡವು 3
--------------
ಚಿದಾನಂದ ಅವಧೂತರು