ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡುವೆನು ಇದನೊಂದ ಕರುಣಿಸೋ ಹರಿಯೇ ಬೇಡವೆಂಬುದನೆಲ್ಲ ಏಕೀವೆ ಹರಿಯೇ ಪ ಒಪ್ಪಿಡಿಯ ಅವಲಕ್ಕಿಗೊಲಿದವನು ನೀನಂತೆ ಒಪ್ಪದಿಂದೆಲೆಯ ತಿಂದು ತೇಗಿದೆಯಂತೆ ತಪ್ಪುನೂರೆಂಟುಗಳು ಮನ್ನಿಸಿದೆ ನೀನಲ್ತೇ ಸರ್ಪಶಯನನೆ ನಿನ್ನ ನಾಮಭಜನೆಯ ಮಾತ್ರ 1 ಘೋರ ಪಾಪಿಯು ಮಗನ ಕರೆದಾಗ ಕರುಣಿಸಿದೆ ನಾರಿ ಹೊರದೂಡಿದ ತರಳನನು ಕಾಯ್ದೆ ಭಾರಿ ಮಕರಿಯ ಸೀಳಿ ಕರಿಯನೊಂದನು ಕಾಯ್ದೆ ನೀರಜಾಸನಪಿತನೆ ನಿನ್ನ ಸ್ಮರಣೆಯ ಮಾತ್ರ 2 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲು ಇನ್ನಾವ ಭಾಗ್ಯಗಳ ಬೇಡಲಾರೆನೋ ದೇವ ಪನ್ನಗೇಂದ್ರ ವಿಭೂಷಣ ಪರಿಪಾಲಿಸೈ ಶ್ರೀಶಾ ನಿನ್ನ ಧ್ಯಾನವ ಮಾತ್ರ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶೂರ್ಪಾಲಯ ಕ್ಷೇತ್ರದ ನರಹರಿ ಸ್ತೋತ್ರ (ಕೃಷ್ಣಾತೀರ) ನರಹರೀ ಪಾಹಿ | ಮರನೂರ ನರಹರೀ ಪ ಪರಿ ಭವಣೆಯ | ಪರಿಹರಿಸುತ ಮುನ್ನವರ ವೈರಾಗ್ಯವನಿತ್ತು | ಕರುಣೀಸೊ ಸಂಪನ್ನ ಅ.ಪ. ಸತಿ | ಕೃಷ್ಣೆಗಕ್ಷಯ ವಸನಸೃಷ್ಟಿಗಿತ್ತವ ಹರಿ | ಕೃಷ್ಣನೆ ಸಲಹೆನ್ನ 1 ಬುದ್ಧ | ಆಘಹರ ಕಲ್ಕಿಯೆ 2 ಜನಿತ ಸುಖ ಜಲ ಕಣ್ಣ | ಬಿಂದುಯುಗಳವು ಬೀಳೆ ಪಾವನ್ನ | ವೃಕ್ಷಯುಗಳೋದಯವಾಯ್ತು ಮುನ್ನ | ಆಹಅಗಣಿತ ಮಹಿಮ | ಅಶ್ವತ್ಥ ಸನ್ನಿಹಿತನೆನಿಗಮ ವೇದ್ಯನೆ ಸರ್ವ | ಜಗದೀಶ ಸಲಹೆನ್ನ 3 ಶೂಲಿಯಿಂದೊಡಗೂಡಿ ರಾಮ | ಚಂದ್ರಪಾಲಿಸುತಿಹ ಸಾರ್ವಭೌಮ | ಸುಜನಾಳಿ ಪಾಪಾರಣ್ಯ ಧೂಮ | ಕೇತುಓಲೈಪ ಜನರಘ ಭಸ್ಮ | ಆಹಲೀಲೆಯಿಂದಲಿ ಗೈವ | ಆಲಯವಿದು ಶೂರಪಾಲೀಯ ಕ್ಷೇತ್ರದಿ | ಶ್ರೀಲೋಲ ನರಹರಿ 4 ನಡು ನದಿಯೋಳು ಕೋಟೇಶ | ಮತ್ತೆಪಡುವಲಯದೋಳು ಕಂಕೇಶ | ಇನ್ನುಬಡಗ ನರಹರಿ ಬಳಿ ಬೈಲೇಶ | ಆಹರೊಡಗೂಡಿ ನೆಲಸೀಹ | ಕಡು ಮುದ್ದು ರೂಪದಿದೃಢ ಭಕ್ತನೆನಿಸೀಹ | ಮೃಡನಿಂದ ಪೂಜಿತ 5 ಅಜಪಿತ ಪದಜಳು ಎನಿಪ | ಮತ್ತೆಅಜಾಂಡ ಕಟಹದಿಂ ಬರ್ಪ | ಇನ್ನುಅಜಸುತ ಶಿರದಲಿ ಧರಿಪ | ಸಗರಜರ ಪಾಪವನ್ನು ಹರಿಪ | ಆಹಮಝಬಾಪು ಗಂಗೆಯ | ನಿಜ ಪಾಪ ಕಳೆಯಲುಅಜಸುತ ನಾಜ್ಞೆಯಿಂ | ಬಿಜಯಿಸಿದಳು ಇಲ್ಲಿ 6 ಪರರಘಗಳ ಹೊತ್ತು ಗಂಗೆ | ಬಂದುಹರ ಪೇಳಿದಂಥ ದ್ವಿಜಂಗೆ | ಶೂರ್ಪವರ ವಾಯು ನ್ವಿತ್ತಳವಂಗೆ | ಪಾಪಹೊರದೂಡಿದಳು ಮಂಗಳಾಂಗೆ | ಆಹಗುರುಕನ್ಯಾಗತನಾಗೆ | ಸರಿದ್ವರ ಕೃಷ್ಣೇಲಿಬೆರೆಯುತ ಸುರ ನದಿ | ಹರಿಪಳು ಜನರಘ 7 ಮಧ್ವಾರ್ಯ ಸಂತತಿ ಜಾತ | ಗುರುವಿದ್ಯಾಧೀಶರು ಇಲ್ಲಿ ಖ್ಯಾತ | ದ್ವಾದಶಬ್ದ ಪರಿಯಂತನುಷ್ಠಾತ | ಪ್ರಾಣಮುದ್ದು ಪ್ರತಿಮೆ ಪ್ರತಿಷ್ಠೀತ | ಆಹಶುದ್ಧ ದ್ವಾದಶಿ ದಿನ | ಸದ್ವೈಷ್ಣ್ವ ಲಕ್ಷರ್ಗೆವಿಧ್ಯುಕ್ತ ಭೋಜನ | ಶ್ರದ್ಧೆಯಿಂದಲಿ ಗೈದರ್ 8 ಪರ ತತ್ವವೆನಿಸಿ | ಸ್ತುತಿಸ್ಕಂದೋಕ್ತ ಮಹಿಮೆಯ ಸ್ಮರಿಸಿ | ಆಹಇಂದುಪ ಗುರು ಗೋ | ವಿಂದ ವಿಠಲನಹೊಂದಿ ಭಜಿಪರ್ಗ | ಬಂಧನವೆಲ್ಲಿಹದೋ 9
--------------
ಗುರುಗೋವಿಂದವಿಠಲರು