ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಮಹಾಲಕ್ಷ್ಮೀ ಬಂದು ನಿಲ್ಲೇ ಎನ್ನ ಮಂದಿರದಲ್ಲೇ ಕೊಲ್ಲಾಪುರ ನಿಲಯೇ ಪ. ಇಂದಿರಲಾರೆನು ಮುಂದರಿಯೇ ಇಂದಿನ ದಿನ ಅ.ಪ. ನವಮೋಹನಾಂಗಿಯೇ ನೀನು ನೀಲಾಂಬರವನುಟ್ಟು ಜರತಾರಂಚಿನ ಕುಪ್ಪಸ ಬಿಗಿದು ತೊಟ್ಟು ಪಾದಕೊಪ್ಪುವ ಪೈಜಣ ಋಳಿ ಕಾಲುಂಗರವಿಟ್ಟು ಲಲಾಟದ ಕುಂಕುಮ ಬಟ್ಟು 1 ಕರದಲಿ ಕಂಕಣ ಬೆರಳಲಿ ಉಂಗುರ ನಿಮ್ಮ ಮುಖದಿ ಸೂರ್ಯನ ಕಿರಣ ನಾನಾಲಂಕೃತ ಭರಣ ದೇವಿ ನಾ ಮಾಡುವೆ ಶರಣು 2 ನಿನ್ನ ಹೊರತಿನ್ನು ಜಗದೊಳಗೆ ಅನ್ಯರ ಕಾಣೆನೊ ನಿರುತ ನಂಬಿದೆ ನೀಲವೇಣಿ ಪಂಕಜಪಾಣಿ ಕಾಳೀಮರ್ಧನಕೃಷ್ಣನ ರಾಣಿ3
--------------
ಕಳಸದ ಸುಂದರಮ್ಮ
ಶ್ರೀ ಲಲಾಮನೆ ನಿನ್ನ ಚರಣಾಬ್ಜಗಳಿಗೆ ನಮೊ ನೀಲಮೇಘಶ್ಯಾಮ ನಿರುಪಮ ತ್ರಿಧಾಮ ಪ ಮೂಲಕಾರಣ ನಿನ್ನ ಹೊರತಿನ್ನು ಕಾಯುವರು ಮೂರ್ಲೋಕದೊಳಗಿಲ್ಲ ಮುರಹರ ಮುಕುಂದ ಅ.ಪ. ನಿತ್ಯ ಕಲ್ಯಾಣಗುಣ ಪೂರ್ಣ ಜಲಜನಾಭನೆ ದೇವಾ ಜಲಧಿಶಯನ ಜಲಜಜಾಂಡವ ಸೃಷ್ಟಿ ಸ್ಥಿತಿ ಪ್ರಳಯ ಕರ್ತ ನಿನ್ನ ಅಪ್ರಮೇಯ ಸ್ವರೂಪ 1 ಕುಂಭಿಣಿಯ ಪಮಾಣುಗಳನಧಿಕ ಯತ್ನದಲಿ ಅಂಬುಧಿಯ ಕಣಗಳನು ಎಣಿಸಬಹುದು ಅಂಬುಜಾಕ್ಷನೇ ನಿನ್ನ ಆನಂದ ಮೊದಲಾದ ಗಂಭೀರ ಗುಣಗಳನು ಎಣಿಸಲಾರಿಗೆ ಸಾಧ್ಯ2 ಪರಮಾತ್ಮ ಪರಂಜ್ಯೋತಿ ಪರಮ ಪಾವನರೂಪ ಪರಿಪೂರ್ಣ ಆನಂದ ಪುರುಷೋತ್ತಮ ಕರಿರಾಜವರದ ಶ್ರೀ ಕರಿಗಿರೀಶನೆ ನಿನ್ನಚರಣ ಸೇವಕನೆಂದು ಕರಪಿಡಿದು ಕಾಯೊ 3
--------------
ವರಾವಾಣಿರಾಮರಾಯದಾಸರು