ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕ ಕೇಳೆ ಪಾಪಮಾಡಿ ಲೆಕ್ಕವಿಲ್ಲದೆ ಯಮನ ಕೈಯ್ಯದುಃಖದಲ್ಲಿ ನರಕದೊಳಗೆ ಮುಳುಗುವವರ ಕಡೆ ಹಾಯ್ವುದೆಂತೋ ಪ ನೀರಗುಳ್ಳೆಯೆಂದು ತನುವ ನಿತ್ಯವಲ್ಲವೆಂದು ತಿಳಿಯರುಘೋರ ನೀಚತನವ ಮಾಡುವವರ ಕಡೆ ಹಾಯ್ವದೆಂತೋ1 ಹಿಂದೆ ಮುಂದೆ ನುಡಿಯುತಿಹರು ನಿಂದೆ ಮಾತನಾಡುತಿಹರುಸಂದೇಹಕ್ಕೆ ಒಳಗಾದವರು ಕಡೆ ಹಾಯ್ವದೆಂತೋ ಕೊಟ್ಟ ಸಾಲವನ್ನೇ ಕೊಡರು ಮತ್ತೆ ಆಣೆ ಎಂಬರಯ್ಯಹೆತ್ತ ಮಗನನು ದಾಟುವವರು ಕಡೆ ಹಾಯ್ವದೆಂತೋ 3 ತಂದೆ ತಾಯಿ ಹೊರಡಿಸುವರು ತಂದು ಒಳಗೊಳಗೇ ತಿನ್ನುವವರುಮಂದಿಗಳ ಬಯ್ಯುವವರು ಕಡೆ ಹಾಯ್ವದೆಂತೋ4 ವಿಧ ವಿಧದ ದೇವರನ್ನು ಮುದದಿ ಕಟ್ಟಿಕೊಂಡಿಹರುಚಿದಾನಂದ ಬಗಳೆಯ ಅರಿಯದವರು ಕಡೆ ಹಾಯ್ವದೆಂತೋ5
--------------
ಚಿದಾನಂದ ಅವಧೂತರು
ಇ. ಶ್ರೀ ಹರಿಯ ಸ್ತುತಿ ತಿರುಪತಿ ಶ್ರೀನಿವಾಸ ದೇವರು ಎಡ್ಡಂ ತಿಡ್ಡಂ ಮಾತುಗಳಾಡುವಿದಡ್ಡನು ಶಾಣ್ಯಾನೋಗುಡ್ಡದಿ ಸೇರುತ ಬಡ್ಡಿ ಸಹಿತ ಪರದುಡ್ಡು ಸೆಳೆವರೇನೋ ಪ ಕೊಟ್ಟಾದನ್ನುಣ್ಣುತ ದೇಹವ ಪುಷ್ಟಿಸಿ ಕಾದಿರುಶಕಟ್ಟಿದ ಹಣವನು ಕಷ್ಟದಿ ಕೊಡದಿರೆ ಕುಟ್ಟಿ ಸೆಳೆದು ತರುವಿ ಚಾಳಿ ಕೆಟ್ಟದು ಕಲಿತಿರುವಿ 1 ಶಿಷ್ಟರು ಗುಡಿಯೊಳು ಬಂದರೆ ಅವರನು ಅಟ್ಟಿಸಿ ಹೊರಡಿಸುವಿಮೊಟ್ಟೆಯಲಿ ಹಣ ಕಟ್ಟಿದವರು ಬರೆ ದೃಷ್ಟಿಸಿ ಮನ್ನಿಸುವಿಚಾಳಿ ಕೆಟ್ಟದು ಕಲಿತಿರುವಿ 2 ಕಾಳಗ ನಡೆಸಿರುವಿಶ್ರೀಲೋಲನೆ ಮುಖತೋರಿಸು ಎಂದರೆ ಆಲಯಕ್ಹೋಗೆನುವಿಚಾಳಿ ಕೆಟ್ಟದು ಕಲಿತಿರುವಿ 3 ಹುಚ್ಚುನ ತೆರದೆಲೆ ಮಾತುಗಳಾಡುವಿ ನಿಶ್ಚಯ ಒಂದಿಲ್ಲಾತುಚ್ಛಿಸಿ ಎಲ್ಲವ ನಿನ್ನಲಿ ಬಂದರೆ ಮತ್ಸರ ನಡೆಸಿರುವಿಚಾಳಿ ಕೆಟ್ಟದು ಕಲಿತಿರುವಿ 4 ಶುಭ ದಾಸನಾಗಿದ್ದಿಈ ಸಮಯದೀತನು ಪೋಷಿಸಲು ವಿಷಯಾಸೆಯನಾಗಿದ್ದಿಧನರಾಸಿಯೊಳಗೆ ಬುದ್ಧಿ ಇಂದಿರೇಶನೆ ಕಲಿಸಿದ್ದಿ 5
--------------
ಇಂದಿರೇಶರು
ಸಂಗಬೇಡವೈ ಆಶಾ ಪ ಸಂಗದಿಂದ ನಿನಗೆ ಅಂಗವೇ ಭಂಗವಾಹುದೈ ಅ.ಪ ಇದ್ದ ಕಡೆ ಇರಲೀಸದು | ಅ ಶುದ್ಧ ಮನುಜನಾದರೆಯು ಅ - ವಿದ್ಯದಿ ಮುಳುಗಿಸುವುದು 1 ನೋಡಿದುದು ಬಯಸುವುದು | ಬಲು ಮೋಡಿಯಿಂ ತಿರುಗಿಸುವುದು ಮಾಡಿಸಿ ಮಾಡಿಸಿ ದಣಿಸುವುದು 2 ಹಣವಿದ್ದರು ಕಳೆವುದು | ದುರ್ ಮನದಿ ಸಾಲ ಮಾಡಿಸುವುದು ಗುಣಿಯಲಿ ದುರ್ಗುಣವೇ ಕಾಣಿಸಿ ಹೆಣಕೆ ಸಮವೆಂದೆನಿಸುವುದು 3 ಬೋಧೆಯ ಕೇಳಲೀಯದು | ಮನೋ ವ್ಯಾಧಿಯಲ್ಲಿ ಕೃಶಿಸುವುದು ಹಾದಿ ಹೋಕರ ಕಂಡವರಂತೆ ಸಾಧನವ ಮಾಡಿಸುವುದು 4 ಅನ್ನಬಾರದನ್ನಿಸುವುದು ತಿನ್ನಬಾರದ್ದು ತಿನ್ನಿಸುವುದು ನನ್ನದೂ ನಾನೆಂಬ ಗರ್ವದಿ ಇನ್ನೂ ಮುನ್ನೆ ಕೆಡಿಸುವುದು 5 ಆಗೋ ಕಾರ್ಯ ಮಾಡಲೀಯದು ಹೋಗದೂರಿಗೇ ಹೊರಡಿಸುವುದು ಭೋಗಗಳೊಳಪೇಕ್ಷೆ ಪುಟ್ಟಿಸಿ ರೋಗದಿ ಬಳಲಿಸುವುದು 6 ಕೋಪಾದಿಗಳು ಹೆಚ್ಚುವುದು ಪಾಪಬುದ್ದಿ ಪುಟ್ಟುವುದು ಶರಣರಿಗಿದು ಸಲ್ಲದು 7
--------------
ಗುರುರಾಮವಿಠಲ
ಪತಿಭಕುತಿಯಿಲ್ಲದಿಹ ಸತಿಯ ಸಂಗವ್ರತಗೆಟ್ಟು ಸುಖ ಪಡೆಯಲಿಲ್ಲವೊ ರಂಗ ಪ.ಗಂಡ ಬಂದರೆ ಎದ್ದುನಿಲ್ಲದೆ ಆ ಕ್ಷಣದಿಕಂಡಾಡಿ ಏಕವಚನಂಗಳನಾಗಅಂಡಲೆದು ಮಾರ್ಮಲೆಂದು ಕಾಡಿಬೇಡುವ - ಇಂಥಭಂಡುದೊತ್ತಿನ ಕೂಟ ಏಳುನಾಗರ ಕಾಟ 1ಒಂದು ತಂದರೆ ಮನೆಗೆ ಹತ್ತಾಗಿ ಭಾವಿಸದೆತಂದರೆ ಹತ್ತು ಮನೆಯೊಳಗೊಂದ ಮಾಡಿಇಂದಿಗೆ ಇಲ್ಲವೆಂದು ಮುಖವ ತಿರುಹುತಲಿ ಮದದಿಂದ ಹೋಹಳು ನಾರಿ ಬಹು ದೊಡ್ಡಮಾರಿ2ಮಕ್ಕಳಿಗೆ ಇಡಲಿಲ್ಲ ಮರಿಗಳಿಗೆ ತುಡಲಿಲ್ಲಇಕ್ಕುವಡೆ ಬೆಳ್ಳಿ - ಬಂಗಾರವಿಲ್ಲಚಿಕ್ಕವಳು ನಾ ನಿನ್ನ ಕೈಪಿಡಿದು ಕೆಟ್ಟೆನೆಂಬಮೂರ್ಖ ತೊತ್ತಿನ ಸಂಗ ಕುಲಕೆಲ್ಲಭಂಗ3ತಾಯನು ಹೊರಡಿಸು ತಂದೆಯನು ತೆರಳಿಸುದಾಯಾದಿಯನು ಮನೆಯಲಿರಿಸಬೇಡಬಾಯಿನ್ನುಮನೆ ಕಟ್ಟಿ ಬೇರಿರುವ ನಾವೆಂಬಮಾಯಾಕಾತಿಯ ಸಂಗ ಅಭಿಮಾನಭಂಗ4ಇಷ್ಟನೆಲ್ಲವ ಬಿಟ್ಟು ಕೆಟ್ಟೆನೈ ನಾನಿಂದುಕಷ್ಟ ಸೆರೆಯೆನುವೆನೆ ಈ ಪರಿಯಲಿಸ್ಪಷ್ಟಿಗಾಧಿಕನಾದ ದಿಟ್ಟ ಶ್ರೀಪುರಂದರವಿಠಲ ಪಶ್ಚಿಮದ ರಂಗಧಾಮ 5
--------------
ಪುರಂದರದಾಸರು
ಮಾರಿಯನು ತೋರುತಿಹೆನು ಅದನೀಗನಾರಿ ಎಂದೆಂಬರಯ್ಯಪಸೀರೆ ಕುಪ್ಪಸವನುಟ್ಟುಸಿಂಗರದಿ ತೋರ ಕಂಕಣವನಿಟ್ಟು ಅಯ್ಯಮೂರಳೆಯಕಟ್ಟಾಣಿಕಟ್ಟಿಯೇಮೋರೆ ಮುರಕಿಸುತಿಹುದು ಅಯ್ಯ1ಚಳ್ಳತುಂಬುಗಳಿಂದಚವುರಿ ಬೆಳ್ಳಿಯ ಬಳೆಗಳಿಂದ ಅಯ್ಯಮುಳ್ಳು ಗಜ್ಜೆಗಳ ಧರಿಸಿ ಮನೆಯೊಳಗೆಹಲ್ಲು ಕಡಿಯುತಲಿಹುದು ಅಯ್ಯ2ಓಲೆ ಮಾಡಿಸು ಎಂಬುದುವರಹಕೆ ಬಾಳುವೆ ನೋಡಿರಿ ಎಂಬುದಯ್ಯಹೇಳುವುದು ಕಿವಿಯೊಳಗೆ ಲೋಭಕಾಲು ಕೈ ತಿರುಹುವುದು ಅಯ್ಯ3ಕರೆಕರೆಯ ಮಾಡುತಿಹುದು ತಾಯಿಯಹೊರಡಿಸು ಮನೆಯಿಂದಲೆಂಬುದಯ್ಯಹರನ ಚಿಂತೆಗೆ ಹಾನಿಯು ಇದರಿಂದನರಕ ಬಹಳವ ತಿರುಗುವೆ ಅಯ್ಯ4ನಾರಿಯೆನಿಸಿಹುದೆ ಮೃತ್ಯುಇದನೀಗ ದೂರ ಮಾಡಿದನಾದರೆ ಅಯ್ಯಸೇರುವುದು ಸರ್ವಮುಕ್ತಿಚಿದಾನಂದನಿರೆ ತಾನೆಯಹುದು ಅಯ್ಯ5
--------------
ಚಿದಾನಂದ ಅವಧೂತರು