ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

*ಆರಿಗಾದರು ಪೂರ್ವದ ಕಟ್ಟಳಿಯು ತಪ್ಪುದು ವಿಧಿಬರಹವು ಪ. ಪೊಡವಿಭಾರವ ಪೊತ್ತು ಮೃಡಗೆ ಭೂಷಣನಾಗಿ ಹೆಡೆಯಲ್ಲಿ ಮಾಣಿಕವಯಿಟ್ಟುಕೊಂಡು ಬಿಡದೆ ಶ್ರೀಹರಿಗೆ ಹಾಸಿಗೆ ಆದ ಫಣಿಪಂಗೆ ಅಡವಿಯೊಳಗಣ ಹುತ್ತ ಮನಿಯಾಯಿತೈಯ್ಯಾ 1 ಸುರಪತಿಯಗೆದ್ದು ಸುಧೆಯನೆ ತಂದು ಮತ್ತೆ ಮಾತೆಯ ಸೆರೆಯ ಪರಿಹರಿಸಿ ಬಹುಶಕ್ತನೆನಿಸಿಕೊಂಡ ಹದಿನಾಲ್ಕು ಲೋಕನಾಳುವವನ ಹೊತ್ತು ಇರುವವಗಾಯಿತು ಮನೆಯು ಮರದ ಮೇಲೆ 2 ರಾಮಚಂದ್ರನ ಸೇವೆಮಾಡಿ ಮೆಚ್ಚಿಸಿಕೊಂಡು ರಾವಣನ ಗರ್ವಮುರಿದು ಬಂದೂ ರೋಮರೋಮಕೆ ಕೋಟಿಲಿಂಗಧರಿಸಿದ ಹನುಮಂತಗೆ ಗ್ರಾಮಗಳ ಕಾಯ್ವದಾಯಿತೈಯ್ಯಾ 3 ಮೂರ್ಲೋಕಕಾಧೀಶ ಮುಕ್ಕಣ್ಣ ಶಿವನೆಂದು ಸಾರುತಿದೆ ವೇದ ಸಟೆಯಲ್ಲವಿದು ಪಾರ್ವತಿಗೆ ಪತಿಯಾದ ಕೈಲಾಸವಾಸನಿಗೆ ಊರಹೊರಗಣ ಕಾಡ ಕಾಯ್ವದಾಯಿತೈಯ್ಯಾ 4 ಮೀರಲಳವಲ್ಲಾ ಮುನ್ನಿನಾ ಕರ್ಮವನು ಕಾರಣಕರ್ತನಿಗಲ್ಲದೆ ಮಾರಪಿತ ಹೆಳವನಾಕಟ್ಟೆರಂಗೈಯ್ಯನ ಸೇರದ ಕಾಲವ್ಯರ್ಥವ್ಯಾದಿತೈಯ್ಯಾ 5
--------------
ಹೆಳವನಕಟ್ಟೆ ಗಿರಿಯಮ್ಮ
ನಿರವದ್ಯ ಪ ಸದ್ಗುಣಪೂರ್ಣ ನೀನೇನೊ ಮೂಢ ಅ.ಪ ಬ್ರಹ್ಮಜಿಜ್ಞಾಸದ ಕ್ರಮವ | ನಿರ- ಸಮ್ಯಕ್ ಶೋಧಿಸದೇ ಅಹಂ ಬ್ರಹ್ಮಾಸ್ಮಿ ಎಂಬುವ ಆಮ್ನಾಯ ವಾಕ್ಯಕೆ ಅರ್ಥವ ತಿಳಿಯದೆ 1 ಕಾಕುಮಾಡುತಲರ್ಥ ಪೇಳ್ವುದಧರ್ಮ ಏಕವಾವುದು ಇನ್ನು ಏಕವಾವುದು ಎಂದು ನೀಕಳವಳಿಸುತ ನಿಜತತ್ವವರಿಯದೆ 2 ಆತ್ಮನಾತ್ಮಗಳೆಂದರೇನೊ | ಪರ- ಮಾತ್ಮ ಜೀವಾತ್ಮರೊ ಜೀವದೇಹಗಳೊ ಸ್ವಾತ್ಮಾನುಸಂಧಾನದಿಂದಲಿ ನೋಡ- ಧ್ಯಾತ್ಮ ವಿದ್ಯಾಭ್ಯಾಸ ಮಾಡದೆ ಬಾಯೊಳು 3 ರವಿ ಗಣಪತಿ ಶಿವ ಶಕ್ತಿ | ಭೈ- ರವ ವಿಷ್ಣು ಎಂಬುವ ಷಣ್ಮತಯುಕ್ತಿ ಎವೆ ಮಾತ್ರ ಸ್ವಾತಂತ್ರ್ಯವಿಲ್ಲ ಕೇಳ್ ಸರ್ವಶ- ಬ್ದವುಯಾವನಲ್ಲಿ ಸಮನ್ವಯವರಿಯದೆ 4 ಜೀವ ಜೀವರಿಗೆಲ್ಲ ಭೇದ | ವಿದುಸ್ವ ಭಾವವಾಗಿರುವುದು ಯಾತಕೀವಾದ ಜೀವರೂಪದಿ ಸರ್ವಜೀವರೊಳಗಿದ್ದು ದೇವಸಕಲ ಕರ್ಮಗಳ ಮಾಡಿಸುವನು 5 ಕರ್ಮವೆಂಬುದು ಅವನಿಗೆ ಲೋಪವಿಲ್ಲ ನಿರ್ಮಲ ಸಚ್ಚಿದಾನಂದ ಬ್ರಹ್ಮ ಎಂದು ನೀನೆ ಪೇಳುವೆಯಲ್ಲ ನಿನಗೆ ನಿಜವಿಲ್ಲ 6 ಸೂರ್ಯ | ಚಂದ್ರ ಕಿನ್ನರ ಸಿದ್ಧ ಸಾಧ್ಯ ನರತಿರ್ಯಕ್ ಪಶುಪಕ್ಷಿ ಕೀಟಾದಿ ನಾಮಗಳು ಪರಮಾತ್ಮನಲಿ ಸಮನ್ವಯವರಿಯದೆ 7 ಮಾಯಾ ಪ್ರಪಂಚವಿದೆನ್ನುತ | ನಿ- ಮಾಯೆಯಧಿಷ್ಠಾನದೊಳನಂತ ಜೀವನಿ- ಕಾಯವು ಗುಣಗಳಿರುವ ಮರ್ಮವರಿಯದೆ 8 ಸಾರ ಭೇದವಬದ್ಧ ಅಭೇದ ನಿಶ್ಚಯವೆಂದು ವಾದಿಸುವುದಕೇನಾಧಾರ ನಿನಗುಂಟೊ 9 ಜೀವಬ್ರಹ್ಮೈಕ್ಯವೆ ಮುಕ್ತಿ | ವೇ- ದಾವಳಿಗಳ ಪರಮಾರ್ಥದ ಉಕ್ತಿ ಜೀವನಿಂದೇನಾಗುವುದೆಂಬುದರಿಯದೆ 10 ದ್ವಾಸುಪರ್ಣವೆಂಬುವುದಕೆ | ವಿಷ- ಯಾಸಕ್ತ ಜೀವ ಆತ್ಮನು ಸಾಕ್ಷಿಯದಕೆ ನೀಸರ್ವೋತ್ತಮನಾದರೆ ಇನ್ನು ಮಹದಾದಿ ಈ ಸೃಷ್ಟಿ ಸ್ಥಿತಿಲಯವೇತಕೆ ತಿಳಿ ಜೋಕೆ 11 ಅಂಧ ಪರಂಪರವಾದ | ಬಿಟ್ಟು ಚಂದಾಗಿ ಪರಿಶೋಧಿಸು ಭÉೀದಾಭÉೀದ ತಂದೆತಾಯಿಗು ಮಗನಿಗೂ ಎಷ್ಟು ಭÉೀದ ಆ- ಪರಿ ತಿಳಿದರೆ ನಿರ್ವಾದ 12 ಪೂರ್ವೋತ್ತರ ವಿರೋಧವಿಲ್ಲ | ದಂತೆ ಸರ್ವಶೃತಿಗಳರ್ಥ ತಿಳಿದು ನುಡಿಸೊಲ್ಲ ಗರ್ವವೇತಕೆ ನಿನಗಿದರೊಳೇನಿಲ್ಲ ನೀ ಸರ್ವಜ್ಞನೊ ಕಿಂಚಜ್ಞನೊ ನೋಡು ದೃಢಮಾಡು 13 ಯೋಗ ಒದಗಿದಾಗ ಒಂದೆ ಎಂಬುವರೆ ಈಗೇನು ಆಗೇನು ಇಲ್ಲೇನು ಉಂಟೆ ನಾ- ವಾಗಲು ಜೀವರಿಗೆ ಹರಿಕರ್ತನಾಗಿರೆ 14 ಕಾಲಕರ್ಮ ಸ್ವಭಾವ ಜೀವ | ಹರಿಯ ಆಲಸ್ಯ ಬಿಟ್ಟು ಅವನಿಗೆ ದಾಸನಾಗದೆ 15 ಆಲೋಚಿಸಿದರರ್ಥ ನಿಜವಾಗಿ ತಿಳಿಯದೆ 16 ಜ್ಞಾನವೆ ನಾನು ಕರ್ಮವೆ ಮಿಥ್ಯವೆಂದು ನೀನಾಡುವುದಕೇನು ನೆಲೆ ಮೂಲ ಯಾವುದು ಸ್ವಾನುಭವವೋ ಶಾಸ್ತ್ರವೊ ಮನಕೆ ತೋರಿದ್ದೊ 17 ಹೋಮ ಜಪವು ಸ್ನಾನ ದಾನ | ನಿತ್ಯ ಭೃತ್ಯ ನ್ಯಾಯವರಿಯದವನು ಶುದ್ಧ ತತ್ವಾರ್ಥಿ ಎನಿಸುವನೆ 18 ಕರ್ತನು ನೀನೆಂದು ಭೃತ್ಯನು ನಾನೆಂದು ತೀರ್ಥಪಾದನ ದಿನದಿನದಿ ಸಂಸ್ತುತಿಸದೆ 19 ಪಾದ ವನಜಕೊಪ್ಪಿಸಿ ಸಂಸಾರದ ಕರಕರೆಯ ಮನದಿ ಲೆಕ್ಕಿಸದೆ ಚಿಂತನಗೈದು ಸರ್ವತ್ರ ಘನಮಹಿಮನ ದಿವ್ಯಗುಣರಾಶಿ ಪೊಗಳದೆ 20 ಹೊರಗಣ್ಣ ಮುಚ್ಚಿ ಮೋದದಲಿ | ಒಳ- ಗಿರುವಾಧಾರಾದಿ ಚಕ್ರಗಳ ಸ್ಥಾನದಲಿ ಸರಸಿಜಭವ ಶಂಕರಾದಿ ಸುರರ ನೋಡಿ ತರತಮವಾಗಿ ಮುಂದಿನ ಪರಿಯ ತಿಳಿಯದೆ 21 ಮಂಗಳ ಮೂರ್ತಿಯ ನೋಡಿ ಕೊಂಡಾಡಿ ಅ- ನಂಗಗೆ ಸಿಲುಕದೆ ಅರ್ಥಿಯ ಪೊಂದದೆ 22 ಎಪ್ಪತ್ತೆರಡು ಸಹಸ್ರನಾಡಿ | ಗಳೊ- ಳೊಪ್ಪುವ ಭಗವದ್ರೂಪಗಳನು ನೋಡಿ ಅಪ್ಪ ನೀನೆಂದು ಭಕ್ತಿಯಲಿ ಕೊಂಡಾಡಿ ಪುನ- ರಾವರ್ತಿರಹಿತ ಶಾಶ್ವತ ಸುಖಿಯಾಗನೆ 23 ವಿಪರೀತ ಮತಿಪುಟ್ಟದಂತೆ | ಧ್ಯಾನ- ಗುಪಿತವಾಗಿರುತ ಜನರಿಗೆ ಹುಚ್ಚನಂತೆ ಅಪವರ್ಗಾಪೇಕ್ಷಯಿಂ ನಿಷ್ಕಾಮಿಯಾಗದೆ24 ಆಪಾದಮಸ್ತಕ ದೇಹ | ದಿಸು ರಾಪದಜನಕ ಶ್ರೀಗುರುರಾಮವಿಠಲ ವ್ಯಾಪಾರವೆಲ್ಲ ಮಾಡಿಸುವನೆಂದರಿತರೆ ಸಾಫಲ್ಯನಾಗಿ ಜೀವನು ಧನ್ಯನಾಗುವ 25
--------------
ಗುರುರಾಮವಿಠಲ
ಆರಿಗಾದರು ಪೂರ್ವಕಲ್ಪನೆ ತಪ್ಪದು ಪಬೇರೆ ಬಯಸಿದರೆ ಬರಲರಿಯದಯ್ಯ ಅರಾಮಚಂದ್ರನ ಸೇವೆ ಮಾಡಿ ಮೆಚ್ಚಿಸಿ ಮಹಾತಾಮಸನ ಗರ್ವವನು ಮುರಿದು ಬಂದರೋಮಕೋಟಿ ಲಿಂಗನೆನಿಸಿದ ಹುನುಮನಿಗೆ ಹೊರಗೆಗ್ರಾಮಗಳ ಕಾಯ್ದುಕೊಂಡಿಹುದೆ ಮನೆಯಾಯ್ತು1ಸುರಪತಿಯ ಗೆದ್ದು ಸುಧೆಯನು ತಂದು ಮಾತೆಯಸೆರೆಯ ಪರಿಹರಿಸಿ ಬಹು ಭಕ್ತನೆನಿಸಿಹರಿಗೆ ವಾಹನನಾಗಿ ಹದಿನಾಲ್ಕು ಲೋಕವನುಚರಿಸಿದ ಗರುಡನಿಗೆ ಮನೆ ಮರದ ಮೇಲಾಯ್ತು2ಪೊಡವಿ ಭಾರವ ಪೊತ್ತು ಮೃಡಗೆ ಭೂಷಣನಾಗಿಹೆಡೆಯೊಳಗೆ ಮಾಣಿಕ್ಯವಿಟ್ಟುಕೊಂಡುಬಿಡದೆ ಶ್ರೀಹರಿಗೆ ಹಾಸಿಗೆಯಾದ ಫಣಿಪತಿಗೆಅಡವಿಯೊಳಗಣ ಹುತ್ತು ಮನೆಯಾಯಿತಯ್ಯ3ಮೂರು ಲೋಕದ ಒಡೆಯ ಮುಕ್ಕಣ್ಣನೆಂಬಾತಸಾರುತಿದೆ ಸಟೆಯಲ್ಲ ವೇದವಾಕ್ಯಪಾರ್ವತೀ ಪತಿಯಾದ ಕೈಲಾಸದೊಡೆಯನಿಗೆಊರ ಹೊರಗಣ ಮಸಣ ಮನೆಯಾಯಿತಯ್ಯ4ಮೀರಲಳವಲ್ಲವೋ ಮುನ್ನ ಮಾಡಿದ್ದುದನುಯಾರು ಪರಿಹರಿಸಿಕೊಂಬವರಿಲ್ಲವೊಮಾರಪಿತ ಕಾಗಿನೆಲೆಯಾದಿಕೇಶವರಾಯಕಾರಣಕೆಕರ್ತನೀ ಕಡೆ ಹಾಯಿಸಯ್ಯ5
--------------
ಕನಕದಾಸ