ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಗಿತು ತಾಮ್ರದ ಚೂಡ ಪರ ಇಲ್ಲ್ಲೆಂದು ಪ ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ ಸೂಕ್ಕಿದವರ ಎದೆ ಜರ್ಝರಿಸೆ ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು1 ಒಂದು ಝಾವದಿ ಓಂಕಾರನೆಂದು ಕೂಗೆ ಇಂದಿರಾಪತಿ ವಿಧಿಜನಕನೆಂದೂ ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ ಬಿಂದುಮಾಧವನಲ್ಲದಿಹಪರವಿಲ್ಲವೆಂದು 2 ಎರಡು ಝಾವದಿ ಪುರುಷೋತ್ತಮನೆಂದು ಗರುಡಾಚಲ ನರಸಿಂಹನೆಂದು ಮೂರನೆ ಝಾವಕ್ಕೆ ವೀರನಾರಾಯಣ ಹÀರಿಗಯಾಗದಾಧರನಲ್ಲದಿಲ್ಲವೆಂದು3 ಏಕೋ ನಾರಾಯಣ ದೇವನೆಂದು ಗೋಕುಲಪತಿಯಲ್ಲದಿಹಪರ ಇಲ್ಲವೆಂದು 4 ಯಾಮ ಆರರೊಳು ವ್ಯಾಸಮೂರ್ತಿ ಎಂದು ರೋಮಕೋಟಿ ಬ್ರಹ್ಮರುದ್ರರೆಂದು ಸಾಮಗಾಯನ ಕಾವೇರಿ ರಂಗೇಶ ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು 5 ಏಳು ಝಾವದಿ ವೇಣಿಮಾಧವನೆಂದು ಮೇಲಗೋಟೆ ಚಳ್ಳಾಬಳ್ಳನೆಂದು ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ ಪರ ಇಲ್ಲೆಂದು6 ಶ್ವೇತ ವರಾಹನೆಂದು ಮಾವ ಮರ್ದನ ಜನಾದರ್Àನನೆಂದು ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು 7
--------------
ವಿಜಯದಾಸ
ಯಾರು ಇಕ್ಕುವರೆಂದು ಹಾರೈಸುವೈ ಆತ್ಮ ಸೋರುತಿದೆ ಮನೆಯೆಲ್ಲ ನಾರುತಿದೆ ಸ್ಥಳವು ಪ ಒಲೆಯೊಳಗೆ ಉರಿಯಿಲ್ಲ ಜಲವಿಲ್ಲ ಬಾವಿಯೊಳು ಕಲಹ ಮಾಳ್ಪಳು ತನ್ನ ಕುಲವನಿತೆಯು ಹೊಲುಬುದಪ್ಪಿಯೆ ಇಲ್ಲಿ ಬರಬಹುದೆ ನೀನೀಗ ಫಲವುಳ್ಳ ಮನೆಗಳನು ಸೇರೆಲವೊ ಆತ್ಮ 1 ಬಾಗಿಲಿಲ್ಲದ ಮನೆಯು ಬಹಳ ಕಗ್ಗತ್ತಲೆಯು ಕೂಗುವುದು ಹುಲಿ ಕರಡಿ ಇದಿರಿನೊಳಗೆ ಬೇಗದೊಳು ಇಲ್ಲಿಂದ ಸಾಗುವುದೆ ಸೌಖ್ಯಗಳು ನಾಗಶಯನನ ಗುಡಿಯ ಸೇರೆಲವೊ ಆತ್ಮ 2 ಒಟ್ಟೆಗಡಿಗೆಯ ಒಳಗೆ ಇಟ್ಟಿರ್ದ ಬುತ್ತಿಗಳು ಕೆಟ್ಟ ಕ್ರಿಮಿಗಳು ಬಂದು ಬಹಳ ಹಳಸಿದವು ಬಟ್ಟಲಿಡುವವರಿಲ್ಲ ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬುವುದುಂಟೆ ದುಷ್ಟರೊಳು ಆತ್ಮ 3 ಹಾಳು ಮನೆಯನು ನಿನಗೆ ತೋರಿಕೊಟ್ಟವರಾರು ಬೀಳುವುದು ಮೇಲೆ ಹದಿನಾರು ಭಿತ್ತಿಗಳು ಏಳು ಇಲ್ಲಿರಬೇಡ ಕಾಳಸರ್ಪನು ಬಂದು ಕಾಲ ಕಚ್ಚ್ಚುವನಲ್ಲೊ ಎಲೆ ದುಷ್ಟ ಆತ್ಮ 4 ಮೂರು ಮಾತನು ಮೇಲೆ ಯಾರ ಕೂಡಾಡಿದೆಯೊ ಆರು ಪಥದಲಿ ನೀನು ಮೀರಿ ನಡೆದೆ ಕೇರಿಯಾಗಿರ್ದ ಹದಿನೆಂಟು ಅಂಗಡಿಯೊಳಗೆ ಆರ ವ್ಯಾಪಾರವನು ಕೇಳಿದೈ ಆತ್ಮ 5 ಹತ್ತು ತಾಸಿನ ಮೇಲೆ ತುತ್ತು ಕೊಡುವವರಾರು ಬತ್ತುವುದು ಕೈಕಾಲು ಬಳಲಿಕೆಯೊಳು ಮತ್ತೇಳು ಮಂದಿ ತಾವತ್ತತ್ತ ಸಾರುವರು ಕರ್ತುಗಳ ನಾ ಕಾಣೆ ನೀ ಕೇಳೊ ಆತ್ಮ 6 ಎಂಟು ಮಂದಿಯು ತನಗೆ ನೆಂಟರೆಂಬಾಶೆಯೊಳು ಗಂಟ ಕಟ್ಟಿಯೆ ಮನದಿ ಮರುಗುತಿರಲು ಗಂಟಲೊಣಗಿಯೆ ವಾಯು ಕಂಠದೊಳು ಪೋಪಾಗ ನಂಟರನು ನಾ ಕಾಣೆ ಆಲಿಸೈ ಆತ್ಮ 7 ಆಯವಿಲ್ಲದ ಮನೆಯು ಛಾಯೆ ಇಲ್ಲದ ಮಡದಿ ದಾಯವಿಲ್ಲದ ಊರು ಕರಕಷ್ಟವು ಬಾಯ ಹೊಯ್ಯೆಂಬರೊಳು ನ್ಯಾಯ ಸೇರುವುದೆ ಉ- ಪಾಯದಲಿ ಸಾರೆಲೆವೊ ಸಾರಿದೆನು ಆತ್ಮ 8 ಮೂಡಗಿರಿವಾಸನೊಳು ಬೇಡಿಕೊಂಡರೆ ನಿನಗೆ ನೀಡುವನು ಧರ್ಮವನು ಧೈರ್ಯನಾಗಿ ಬೀಡುಬಿಟ್ಟಲ್ಲಿಂದ ಓಡುವುದು ಸುಖದೊಳಗೆ ಕೂಡುವುದು ವರಾಹತಿಮ್ಮಪ್ಪನೊಳು ಆತ್ಮ 9
--------------
ವರಹತಿಮ್ಮಪ್ಪ
ಲಾಲಿ ಲಯ ಜಲ ಶಯ್ಯ | ಲೋಲ ಕೃಷ್ಣಯ್ಯಲಾಲಿ ವಟದೆಲೆ ಶಾಯಿ | ಹರಿಯೆ ತುರಗಾಯ ಲಾಲೀ ಪ ಕುಂಡಲ ಲೋಲ | ಸಿರಿಕೃಷ್ಣ ಬಾಲ1 ಪುಂಡರೀಕನಿಗೊಲಿದ | ಪಾಂಡವರ ಪ್ರೀಯಪಿಂಡಾಂಡದೊಳಗಿರುವ | ಬ್ರಹ್ಮಾಂಡದೊಡೆಯಉಂಡು ಉಟ್ಟದ್ದೆಲ್ಲ ನಿನಗೆಂಬ ಗೆಳೆಯಾಅಂಡಜಾಧಿಪ ತುರಗ | ಪೊರೆವ ಇದು ಖರೆಯ 2 ಅಮಿತ ಮಾಧವ ಶ್ರೀಶ ಮುಖ್ಯ ಪ್ರಾಣೇಶ 3 ಸೊಲ್ಲು ಬಾಯ್ತುಂಬಸಲ್ಲಿಪಗೆ ದಯ ತುಂಬ | ಉಣಿಪ ಮದ್ಬಿಂಬ 4 ಅಕ್ಷಯ ಹೊಯ್ಯೆ | ಶೀರೆಗಳ ಜಾಲಸುರಿಸಿದನೆ ತಾ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಹೊಯ್ಯಂದ ಡಂಗುರವ ಪರಂಜ್ಯೋತಿ ಪ್ರಭೆಯ ಭಾಸಿಸುವದು ನೋಡಿ ಹೊ ಅರವ್ಹೆ ಅಂಜನವಾಗಿ ದೋರುತಲದಕೊ ಹೊ ಪರಮ ಪ್ರಕಾಶವು ಪರಿಣಾಮಿಸಿ ನೋಡಿ ಹೊ 1 ಅನಿಮಿಷನೇತ್ರವು ಬಾಗಿಸುವದು ನೋಡಿ ಹೊ ಮನವಿಗೆ ಆರುವಾಗಿ ದೋರುತಲದಕೊಹೊ ನೆನವ ಘನವಾಗಿ ಸೂಸೂತಲಿದಕೊ ಹೊ ಕನಸು ಕಥೆ ಅಲ್ಲ ಕಣ್ಣಾರ ಕಾಂಬೋದು ಹೊ 2 ನಿದ್ರಸ್ಯಕರ್ಣದ ಸಾದ್ಯಶ್ಯ ನೋಡೆಂದು ಹೊ ದ್ವಾದಶ ನಾದವು ಸಾಧಿಸಿ ಕೇಳುದು ಹೊ ಗಾದೆಯ ಮಾತಲ್ಲ ಭೇದಿಸಿ ತಿಳಿಯುದು ಹೊ ಓದುವ ಒಂಕಾರ ನಾದವು ತಿಳಿವದು ಹೊ 3 ಪ್ರಣಮ್ಯ ಮಂತ್ರದ ಪ್ರಚೀದಿನೋಡೆಂದು ಹೊ ಹನ್ನೊಂದು ಹತ್ತುಸಾವಿರದ ನೂರೆಂದು ಹೊ ಕಣ್ಣು ಮುಚ್ಚು ಕುಳಿತು ಮಣಿಯೆಣಿಸುವದಲ್ಲ ಹೊ ಪುಣ್ಯಗತಿಗೈದಿಸುವ ಜಪವಿದು ಹೊ 4 ವಿಶ್ವಹೊಳಗಲ್ಲ ಭಾಸ್ಕರ ಗುರುತಾನೆ ಹೊ ಆಶಿಗೈವವಗಿನ್ನು ಭಾಸಿಸಲರಿಯನು ಹೊ ಮೋಸ ಮುಕುರವಲ್ಲ ಭಾಸಿವ ಪಲ್ಲಟವಲ್ಲ ಹೊ ಹೊಯ್ಯೆಂದ ಡಂಗುರವ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು