ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊಡಕ ಹರವ ಮಾಡಿಕೊಳ್ಳಿರೊ ಹುಟ್ಟಿ ಬಾಹ್ವ ಮನುಜರೆಲ್ಲ ಧ್ರುವ ನಾನು ನನ್ನದೆಂದು ಜ್ಞಾನಹೀನನಾಗಿ ಬಾಳುತಿಹ್ಯ ಗಾಣ-ದೆತ್ತಿನಂತೆ ಮುಂದೆಗಾಣದಿಹ್ಯ ಭ್ರಮೆಯದ 1 ಜೀವ ಶಿವ ದಾವದೆಂದು ಠಾವಿಕಿಲ್ಲ ದಿಹ್ಯದಾಗಿ ನಾವು ನೀವು ಎಂದು ಹ್ಯಾವ ಹೊಮ್ಮಿ ಹೊಡೆದಾಡುವ 2 ಸಂಚಿತ ಪ್ರಾರಬ್ಧ ಕ್ರಿಯಮಾಣದೊಳು ಸಿಲ್ಕಿ ಪ್ರ ಪಂಚ ಪರಮಾರ್ಥ ದಾವದೆಂದು ಮುಂಚೆ ತಿಳಿಯದ 3 ತನವು ತಾನೆಂದು ಘನವು ಮರೆದು ದಣಿದು ತಿರುಗುತಿಹ್ಯ ಮನದ ಮಾಯದೊಳು ಸಿಲ್ಕಿ ತನಗೆ ತಾಂ ತಿಳಿಯದೆ 4 ತೊಡಕು ಹರವ ಮಾಡಿಗೊಳ್ಳಿ ಪಡದು ಙÁ್ಞನಭಕ್ತಿಯಿಂದ ಮೂಢ ಮಹಿಪತಿಯನ್ನೊಡೆಯ ಬಿಡದೆ ನೆಲೆಗೊಳ್ಳುವ್ಹಾಂಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾವಿನಕೆರೆ 8 ರಂಗಗಿರಿಯನೇರಿಬರುವಾ ತಂಗಿ ಬರುವೆಯಾ ಪ ಅಂಗನೆಯರು ಕುಣಿದು ಮಣಿವ ಸಂಗದೊಳಿರುವಾ ಅ.ಪ ಅವನ ಪಾದದ ನಡಗೆ ಚಂದ | ಧವಳಹಂಸ ಮನಕಾನಂದಾ ಅವನ ನಲಿವು ನವಿಲಿಗಂದ | ಅವನ ಉಲಿವು ಕೋಗಿಲೆಯಂದಾ 1 ಅವನ ಕರದ ವೇಣುಗಾನ ಭುವನಕೆಲ್ಲ ಅಮೃತಪಾನ ಅವನ ನಗೆಯ ತೋರ್ಪ ಭವವ ಕಳೆವ ಪುಣ್ಯಸದನ 2 ವಾರಿವಾಹ ವರ್ಣದವನು ಹಾರಪದಕ ಧರಿಸಿದವನು ಚಾರುಸುಂದರ ಪೀತಾಂಬರನು 3 ಹಿಂದೆ ನೀನು ನೋಡಲಿಲ್ಲ ಮುಂದೆ ನಾನು ಕರೆವುದಿಲ್ಲ ಇಂದು ಬಂದೆಬರುವನಲ್ಲ ಸಂದೇಹ ಎಳ್ಳಷ್ಟೂ ಇಲ್ಲ 4 ಬೊಮ್ಮನಪ್ಪನವನೆ ನೀರೆ ನಮ್ಮ ಮಾಂಗಿರಿಗೊಪ್ಪುವ ತಾರೆ ಹೊಮ್ಮಿದಾ ಸಂಪ್ರೀತಿಯ ಬೀರೆ ಸುಮ್ಮನೆ ನನ್ನೊಡನೆ ಬಾರೆ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್