ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ) ಶ್ರೀಕೃಷ್ಣ ಲೀಲೆ 25 ಇಂದಿನಿರುಳಿನ ಕನಸಿನಲ್ಲಿ ಬಂದುಮುಂದೆ ನಿಂದುದ ಕಂಡೆನೆ ಗೋವಳನ ಪ ಅಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆಜಾಣನಂಗಜನ ಪಿತನ ಕೈಯ ವೇಣುಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆವಾಣಿಯ ರಚನೆ ಎಲ್ಲಿಯು ಈ ಗೋವಳನಾ1 ಮೊಲ್ಲೆ ಮಲ್ಲಿಗೆ ಚೊಲ್ಲೆಯದ ಚಲ್ಲಣದ ಶಿರ-ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳಗೋಪಿಯರ ಮೇಲೆ ಕಡೆಗಣ್ಣಚೆಲ್ಲುತೊಯ್ಯನೆ ನಡೆದ ಗೋವಳನ 2 ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿತುತ್ತುರೂ ತೂರು ತೂರೆನುತಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿಮೊತ್ತದ ಗೋಪಿಯರನೆಲ್ಲ ಗೋವಳನ 3 ಎಸಳು ಕಂಗಳ ಢಾಳ ಶಶಿ ನೊಸಲ ತಿಲಕಎಸೆವ ಬಿಂಬಾಧರದಪೊಸ ಮುತ್ತಿನೋಲೆ ಮೂಗುತಿ ಹೊನ್ನುಡಿ ಘಂಟೆಎಸೆವ ನೂಪುರ ಹಾಹೆಯ ಗೋವಳನ 4 ಉಂಗುಟದಲಿ ಗಂಗೆಯಂಗಾಲಲವುಂಕೆತುಂಗವಕ್ಷದ ಲಕ್ಷುಮೀಮಂಗಳ ಮಹಿಮ ಭುಜಂಗಶಯನ ಸಿರಿರಂಗವಿಠ್ಠಲ ನೆರೆದ ಗೋವÀಳನ 5
--------------
ಶ್ರೀಪಾದರಾಜರು
ಇಂದಿರೆ ಇಂದೀವರಾಕ್ಷಿ- ಸುಂದರಿ ಅರ- ವಿಂದ ಮಂದಿರೆ ಪೂರ್ಣೆ | ಪ ಇಂದುವದನೆ ಅಮರೇಂದ್ರ ವಂದಿತೆ | ಸಿಂಧುಸುತೆ ಆನಂದ ಫಲದೆ ಅಪ ರಾರರಮಣನ ಸೋಲಿಪ ನಖದಕಾಂತಿ | ಚಾರು ಚರಣತಳ ವಾರಿಜಾಂಕುಶ ಧ್ವಜ | ವಾರಣ ಕನಕ ಮಂಗಳರೇಖೆವೊಪ್ಪೆ | ನೂ- ಪುರ ಕಡಗ ಪೆಂಡ್ಯೆ ಪರಡೆ ಜಾನು ಜಂಘೆ | ಕಟಿ ನಾಭಿ ಉದರ ತ್ರಿವಳಿ | ಧಾರ ಶೋಭನವಾದ ಹೊನ್ನುಡಿ | ಧಾರ ಕಿಂಕಿಣಿ ತೋರಮುತ್ತಿನ- ಹಾರ ಉರವಿಸ್ತಾರ ಗುಣವಂತೆ 1 ಕಂಬು - ಗ್ರೀವ ಸರಿಗೆ ದಿವ್ಯಚಂದನ ಲೇಪಿಸಿ | ಕಂಚುಕ ಹಸ್ತಕಡಗ ಮುದ್ರೆ ಪ್ರವಳಮಣಿಯು ಕೇಯೂರ ದಂಡೆಯ ಸರ | ಬೇವಿನೆಸಳಂತೆ ಪುಬ್ಬು ಢಾಳಿಪ | ತಾವರೆಯ ಫಣೆಯೂ ಸಂಪಿಗೆ | ನಾಸಿಕ ವೇಣಿ | ಹಾವಿನಂದದಿ ಒಪ್ಪುತಿರೆ ದೇವಿ 2 ವಾಲೆಮೂಗುತಿ ಹೊನ್ನಹೂವು ತೂಗುವ ತುಂಬು | ಕದಪು ಮುಂಗೂದಲು | ಮೇಲೆ ರ್ಯಾಕಟೆ ಚೌರಿ ಮುಡಿದ ಕುಸುಮವು | ಸಾಲು ಮುತ್ತಿನ ಜಾಳಿಗೆ ಗೊಂಡ್ಯ ಶಿರದಲ್ಲಿ | ಪಾಲ ಸಾಗರ ಶಾಯಿ ವಿಜಯವಿ- ಠ್ಠಲರೇಯನ ಉತ್ಸಾಹದಲಿ | ತೋಳಿನಲ್ಲಿ ಬಿಗಿದಪ್ಪಿ ಪವಳಿಪ | ಶ್ರೀ ಲಕುಮಿ ತ್ರೈಲೋಕ್ಯ ಮಾತೆ 3
--------------
ವಿಜಯದಾಸ