ತಾತ್ವಿಕ ಕೃತಿಗಳು
ನಾನಾವಿಧ ನರರಿವರಿಗೆ ಸರಿಯೆ ಪ
ವಿಧಿನಿನ್ನ ಸ್ಮರಣೇವಿನಾನಿಷೇಧ ವಿಸ್ಮøತಿಯೆಂಬ
ವಿಧಿಯನೊಂದನೆಬಲ್ಲರಲ್ಲದೆ ಮತ್ತೊಂದು ಅ.ಪ
ನುಡಿವುದೆಲ್ಲ ಗಾಯಿತ್ರಿಮಂತ್ರಗಳು
ಕೊಂಡುದೆಲ್ಲವು ವಿಷಯೇಂದ್ರಿಯಜ್ಞ ಹೋಮ
ದೃಢ ಪ್ರಾಜ್ಞರೇನ ಮಾಡಿದರದೆ ಮರಿಯಾದೆ 1
ಕಂಡಕಂಡದ್ದೆಲ್ಲ ನಿನ್ನ ಮೂರ್ತಿಗಳು ಭೂ
ಮಂಡಲಶಯನವೇ ನಮಸ್ಕಾರ
ಮಂಡಿಯಾಗಿ ಬಿದ್ದುದೆ ಬಲಯುತರಿಗೆ 2
ಬಂದುದೆ ಪುಣ್ಯಕಾಲ ಸುಜನರು
ಸಂದೇಹವೇಕೆ ಮದ್ದಾನೆ ಹೊದ್ದುದೆ ಬೀದಿ 3