ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಆತ್ಮನಿವೇದನೆ ಇಟ್ಟಂತೆ ಇರುವೆನೊ ಹರಿಯೇ ನೀನು ಕೊಟ್ಟದ್ದನ್ನುಣ್ಣುವೆ ಮತ್ತೇನು ಧೊರೆಯೇ ಪ ಪಟ್ಟೆಪೀತಾಂಬರ ಕೊಟ್ಟರೆ ಉಡುವೆನುಬಟ್ಟೆಯಿಲ್ಲದಿರೆ ಚಿಂದಿತೊಟ್ಟು ನಾನಿರುವೆನೊಮೃಷ್ಟಾನ್ನ ಭೋಜನವಿತ್ತರೆ ಉಣ್ಣುವೆ ಉ-ಚ್ಛಿಷ್ಟನ್ನವನಿತ್ತನೆ ತುಷ್ಟಿಲೆ ತಿನ್ನುವೆ 1 ಹಾಸಿಗೆ ಕೊಟ್ಟರೆ ನಾ ಮಲಗುವೆಭೂಶಯನವಿತ್ತರೆ ಅಲ್ಲಿಯೆ ಒರಗುವೆಆ ಶಾಲು ಕೊಟ್ಟರೆ ಹೊದೆಯದೆ ಬಿಡದಾಕಾಶವ ಹೊದಿಯೆಂದರೆ ಹೊದೆಯುವೆ ಬರಿಯೆ 2 ನೀಕೊಟ್ಟರುಂಟು ಕೊಡದಿದ್ದರೇನುಂಟುಬೇಕು ಬೇಡಗಳು ನಿನ್ನಿಚ್ಛೆಯಾಧೀನಲೋಕೇಶ ಗದುಗಿನ ವೀರನಾರಾಯಣಸಾಕು ಬಿಡಿಸಯ್ಯ ನರಜನ್ಮದ ಗಂಟು 3
--------------
ವೀರನಾರಾಯಣ
ಏನು ಕೊಟ್ಟನೆ ಮಗಳಾ ಉದಾ | ಸೀನದಿ ಭಿಕ್ಷುಕ ಶಿವಗೀಂದು ಗಿರಿಜಾ ಪ ಹೆತ್ತವಳಿಲ್ಲಾ ಸೀ ಹುಟ್ಟತ ಪರದೇಶೀ | ನೆತ್ತಿಗೆ ಎಣ್ಣಿಲ್ಲಾ ನೆರೆಬಿಸಿ ನೀರಿಲ್ಲಾ | ದೊತ್ತಿದ ಕೂದಲು ದುರ್ಜಟಿ ಯಾಗಲು | ಹೊತ್ತಿದ ತಲೆಯಿಂದ ಹಣೆ ಉರಿಗಣ್ಣಾದ | ಇತ್ತಿ ಹೊದಿಯಲಿಲ್ಲಾದೀ ಭಸ್ಮ ಲೇಪನಾ | ಮೆತ್ತಿದ ಗುಣದಿಂದ ಮೈ ಯಲ್ಲ ಬೆಳ್ಚಾದಾ | ಎತ್ತ ನೇವುವನು ಭೂತ ಗಣಾ | ಯೋಗಿ - ಕು | ಲೋತ್ತ ಮನೆನಿಸಿದನು ಇಂಥ | ಹತ್ತು ಭುಜವ ತಾಳಿ ದೈದು ಮೊರೆಯುಗವ 1 ಶರಥಿ ಮಥನದಲ್ಲಿ ಸಲೆ ವಿಷ ಹೊರಡಲಿ | ಸುರರ ಮಾತು ಕೇಳಿ ಶೀಘ್ರದಿ ಸುರಿಯಲಿ | ಉರಿಹೆಚ್ಚಿ- ಮೈಯ್ಯಲಿ ಉಬ್ಬಸ ಗೊಳುತಲಿ | ಸುರಗಂಗಿಯ ಹೊತ್ತ ಸೀತಾಂಶು ಕಳೆವತ್ತ | ಮರುಳವೆ ತಿರುಗುವ ಮತ್ತೆ ಭೋಳಾದೇವ | ತ್ವರಿತವ ಕೋಪದಯ ಮನಿಯೊಳು ಹಿಡಿದಿಹ | ಸುರರಿಗೆ ವಲಿದಿಹನು ಬೇಡಿದ | ವರಗಳನ್ನು ಕೊಡತಿಹನು ಬೆನ್ನಟ್ಟಿ | ಬರೆ ದುಷ್ಟ ಓಡಿದನು ಶ್ರೀ ವಿಷ್ಣು | ಕರುಣದಿ ಶರೆಯ ಬಿಡಿಸೆ ಕೊಂಡವನಿಗೆ 2 ಕರಿಚರ್ಮ ತಾಳಿದಾ ಕಾಡೊಳು ಸೇರಿದಾ | ಉರಗ ಭೂಷಣನಿವ ಊಧ್ರ್ವರೇತಾದವ | ಹೊರೆ ಹುಲಿದೊಗಲಾ ಹಾಸಿಗೆ ಮಾಡಿದಾ | ಕೊರಳಳು ರುಂಡಮಾಲಾ ಕರದೊಳು ಕಪಾಲಾ | ಧರಿಸಿದ ನೀತನು ದೊರೆಯಲ್ಲದಾತನು | ನೆರೆದುಣ - ಲುಡಿಲಿಲ್ಲಾ ನರಸುರ ರೊಳಗಲ್ಲಾ | ಪರಕ ಪರೆನಿಸುವರು ಸ್ಮರಿಸಿದಾ ಆ ಗುರುವರ ಮಹಿಪತಿ ಪ್ರಭು ಸಾಂಬನೆಂಬವನಿಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹು ನಲ್ಲೆಯರು ಬಂದು ಮೆಚ್ಚುಮದ್ದು ಮಾಡಿ ಹೋದರಮ್ಮ ಪ. ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮ ಹೆಂಗಳ ನೋಡುತಲೆ ಚಟ್ಟಿಕ್ಕಿದನಮ್ಮ ತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮ ಭಂಗಪಡಿಸುತ ಬಾಯ ತೆರೆದನಮ್ಮ 1 ನೀನು ಮೈಯ ನೋಡಮ್ಮ ತನುವು ಕಿರಿದಾಯಿತಮ್ಮ ಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮ ಅನ್ನವ ಕೊಳಲೊಲ್ಲನಮ್ಮ ಅತಿಭೀತನಾದ ದೈತ್ಯ ಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ 2 ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯ ನಮ್ಮ ಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮ ಬೊಮ್ಮಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲವಾಯಿತಮ್ಮ ನಮ್ಮ ಹಯವದನಗಿನ್ನು ಅಂಜಿಕಿಲ್ಲಮ್ಮ 3
--------------
ವಾದಿರಾಜ
ಮಂದ ಹಾಸನಾ | ತಂದು ತೋರೇ ಮಂದಹಾಸನಾ ನಂದ ಕಂದ ಶ್ರೀ ಮುಕುಂದ | ವಂದಿತಾ ಮುರೆಂದ್ರ ವೃಂದಾನ ಕಾಮಿನಿ ಪ ಹರನ ಹೊದಿಯ ಅರಿಯ ಶಾಪದಿ | ಹರಿಯರಾದ ರೊಡೆಯನಿಂದ ಭರದಿಯಜ್ಞ ಕಾಯ್ಸಿ ಕೊಂಡನಾ ||ಕೋಪಕ || ವರವನಿತ್ತು ಗುರು ಮೊಮ್ಮನು | ದರಲಿ ಬಂದ ಮಾತೆ ಮಗನಿ ಶರದ ಭರಕ ಪಣಿ ಲಿ ತಾಳ್ದನಾ 1 ಸರಳ ಮಂಚದವನ ತಲಿಗೆ | ಸರಳದಿಂಬು ಕೊಟ್ಟನವನ| ಸರಳದಿಂದ ಪ್ರಾಣ ತೊರೆದನಾ || ಪ್ರೀತಿಯಾ || ಸರಳಕಾತು ಆಳಿದ ನೈಯ್ಯನ | ಸರಳಗದೆಯ ಕೈಯ್ಯಲಿಂದ | ಸರಳ ತೃಯನ ಕೊಲಿಸಿ ದಾತನಾ2 ವಾಹನ | ಸಖನ ಉರಬಕಾಗಿ ನಿಲದೇ | ಅಖಿಲ ದೊಳಗನು ಸಳಿತೀಹನಾ ||ರಾಶಿಯಾ || ಸುಖವ ನಲಿದ ನರಿಯ ಸುತರ | ಕ್ಷೇತ್ರ ಮಹಿಪತಿನಂದನ | ಮುಖದಿ ತನ್ನ ಚರಿತ ನುಡಿಪನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು