ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ ಪ ಅಗ್ರ ಬುದ್ಧಿಯ ತಾಳು ನಿನಗೆ ಸಾ ಮಗ್ರಿ ಆಲೋಚನಿ ಯಾತಕೆ ಸ ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ ಉಗ್ರ ಮನುಜರ ಕೂಡಿಸದೆ ಪಾ ಅಂದು ಪೊಗಳಲು ಶೀಘ್ರದಲಿ ನಿಂದಿಹರೊ 1 ಹರಿಗುರುಗಳ ಸಂಕಲ್ಪ ತಪ್ಪದು ಗಿರಿಗಹ್ವರದೊಳಗಿದ್ದರು ಅದು ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ ಪರಿದ ಕಾಲಕೆ ಬಿಡದೆ ಅಹಿಕದ ಚರಿತೆ ಅವರಿಗೆ ಗಣಣೇನೊ2 ತೆತ್ತಗಿನ ಸ್ವಭಾವ ಆವದೊ ಎತ್ತಲಟ್ಟಿದರತ್ತ ತೊಲಗದೆ ಹೊತ್ತುಹೊತ್ತಿಗೆ ಪೋಗಿ ಬಾಗಿ ತೊತ್ತಿನಂದದಿ ಪ್ರಯೋಜನ ಹೊತ್ತು ಮೀರದೆ ಮಾಳ್ಪುದು ಧರ್ಮ ಮೊತ್ತವಲ್ಲದೆ ಇನ್ನೊಂದಿಲ್ಲವೊ ಇತ್ತ ಭಾಗ್ಯವಿತ್ತ ನಿರ್ಮಳ ಚಿತ್ತದಲಿ ಅರ್ಪಿಸುತಿರು3 ನೀನು ಮಾಡಿದ ಪುಣ್ಯಗಳಿಗೆ ತಾ ನಡದು ಬರುವುದೇ ಮರುಳೆ ನಾನಾ ಪರಿಯಲಿ ತಿಳಿದು ನೋಡು ಧ್ಯಾನದಿಂದಲಿ ದಿನಪ್ರತಿ ಜ್ಞಾನನಿಧಿ ನಿಜಗುರು ಶಿರೋಮಣಿ ಅನಂತಾನಂತ ಜನುಮದಲೀಗ ಗಾನಮಾಡಿದ ನಿಷ್ಟ ಪುಣ್ಯವು ತಾನೊಲಿದು ಫಲವಿತ್ತದೋ4 ಕಲ್ಲು ಕರಗಿಸಿ ಬೆಣ್ಣಿ ತೆಗುವಂಥ ಬಲ್ಲಿದರು ನಿನ ಗೊಲಿದಿರಲು ಎಲ ಎಲ್ಲಿ ಇಲ್ಲವೆಂಬೊ ಸೊಲ್ಲುಗಳಲ್ಲದೆ ಇದು ಸಲ್ಲದೊ ಸಕಲ ಮನೋಭೀಷ್ಟಾ ತುಲ್ಯ ವಲ್ಲಭ ಮಲ್ಲದಲ್ಲಣ ನಿಲ್ಲದಲೆ ವೊಲಿದಿಹನೊ 5 ನೂನ್ಯಪೂರ್ಣವು ಅವರನ ಕೂಡಿ ತನ್ನ್ಯೋಪಾಯವು ಯಾಕೆ ನಿನಗೆ ಕಣ್ಣೆವೆ ಇಡುವನಿತರೊಳು ಕಾರುಣ್ಯವರುಷಗರೆದು ಬಿಡುವ ದೈನ್ಯವೃತ್ತಿಯ ಬಿಡಿಸಿ ನಿಷ್ಕಾಮ ಪುಣ್ಯವನಧಿಯೊಳಿಡುವರೊ 6 ಊರ್ವಿಗೀರ್ವಾಣರಿಗೆ ಉಣಿಪುದು ಗರ್ವವನು ತಾಳದಲೆ ಚೆನ್ನಾಗಿ ಸರ್ವಬಗೆಯಲಿ ನಾನು ಎಂಬೊ ದುರ್ವಚನಗಳ ನುಡಿಯದೆ ಪೂರ್ವತನೆ ಬಯಸುತಾರಾಧಿಸು ಶರ್ವಸನ್ನುತ ವಿಜಯವಿಠ್ಠಲ ಪೂರ್ವನೆಂತ ಪ್ರಬಲನೆ7
--------------
ವಿಜಯದಾಸ
ಬೇಡುವುದೂ ಬಲು ಕಷ್ಟ ಪ ನೀಡದಿದ್ದವನೇ ನಷ್ಟ ಅ.ಪ. ನಾಚಿಕೆ ಎಲ್ಲನು ತೊರೆದು ಮಹಾ ನೀಚರಿಗೆ ಬಾಯ್ತೆರದು 1 ಕೊಟ್ಟಾರೆಂಬ ದುರಾಶಾ ಕ್ರಿಯಾ ಭ್ರಷ್ಟರರಿಯರೂ ಕ್ಲೇಶಾ 2 ಚಿತ್ತವೃತ್ತಿಯನು ಕಂಡೂ ಅಧಮರ ಹೊತ್ತುಹೊತ್ತಿಗೆ ಕಾಣಿಸಿಕೊಂಡು 3 ಗುಣಹೀನರ ಕೊಂಡಾಡೀ ಬಂದು ಕ್ಷಣಕ್ಷಣಕವರನು ನೋಡೀ 4 ಶ್ರೀದವಿಠಲನ ಬಿಟ್ಟೂ ಅಧಮಾಧಮರಿಗೆ ದೈನಬಟ್ಟು 5
--------------
ಶ್ರೀದವಿಠಲರು
ಕೆಟ್ಟಿತು ಕೆಲಸವೆಲ್ಲ - ಲೋಕದಿ ಕಾಮನಟ್ಟುಳಿದಶನವಾಯಿತು ಪ.ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿಬಿಟ್ಟು ಮುಂದಣ ಪಥವ - ಹೇ ದೇವಾ ಅಪಸತ್ಯ ಕಾಮ ಕರ್ಮವು ಧರ್ಮದ ಬಲಮತ್ತೆ ಅಡಗಿಹೋಯಿತುಎತ್ತ ನೋಡಲು ನೀಚವೃತ್ತಿಯೆತುಂಬಿಅತ್ಯಂತ ಪ್ರಬಲವಾಯ್ತೋ ಹೇ ದೇವಾ 1ಹೊತ್ತುಹೊತ್ತಿಗೆ ಹಲವು ಲಂಪಟತನದಲಿಚಿತ್ತ ಚಂಚಲವಾಯಿತುಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದುಗೊತ್ತು ಇಲ್ಲದೆ ಹೋಯಿತ್ತೋ ಹೆ ದೇವಾ 2ಪೇಳುವುದೇನಿನ್ನು ದುರ್ಜನರ ಸಂಗದೋಲಾಟ ಸೊಗಸಾಯಿತುಕೀಳು ಮೇಲು ಮೇಲು ಕೀಳಾಗಿ ನಡೆಯುವಕಾಲವೆಗ್ಗಳವಾಯಿತೋ ಹೇ ದೇವಾ3ಆಳುವ ಅರಸರಿಗೆಲ್ಲ ಕಾಂತನದಾಸೆಮೇಲು ಮೇಲಾಯಿತಯ್ಯನೀಲ ಮೇಘಶ್ಯಾಮ ನಿನ್ನಾಳೆಂಬರಿಗೆಕೂಳು ಹುಟ್ಟದೆ ಹೋಯಿತೋ ಹೇ ದೇವಾ 4ಅರಿಷಡ್ವರ್ಗದಲಿ ಸಿಲುಕಿ ಸುಜ್ಞಾನದಅರಿವು ಇಲ್ಲದೆ ಹೋಯಿತುಕರಣಾಳು ಶ್ರೀ ಪುರಂದರವಿಠಲನೆ ನಿನ್ನಸ್ಮರಣೆಯಿಲ್ಲದೆ ಹೋಯಿತೋ ಹೇ ದೇವಾ 5
--------------
ಪುರಂದರದಾಸರು
ಮನವು ನಿನ್ನಲಿ ನಿಲ್ಲಲಿಅನುದಿನನಿನ್ನ ನೆನೆದುಮನವು ನಿನ್ನಲಿ ನಿಲ್ಲಲಿ ಪ.ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ 1ನಿನ್ನಗುಣವರ್ಣಿಸುತ ನಿನ್ನವರ ಮನ್ನಿಸುತನಿನ್ನಪಾವನ್ನಲಾವಣ್ಯ ಧ್ಯಾನಿಸೆ2ಸಂತೋಷ ನಿರಂತರವು ಸಂತ ಜನ ಸಹವಾಸವುಶಾಂತತ್ವವಾಂತು ಮಹಾಂತಧೈರ್ಯದಿ 3ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣಚಿತ್ತದೊಳಿತ್ತೆಲ್ಲ ಹೊತ್ತುಹೊತ್ತಿಗೆ4ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನಧೈರ್ಯದಂತರ್ಯ ಗಾಂಭೀರ್ಯ ಭಾವದಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮುಪ್ಪಿನ ಗಂಡನ ಒಲ್ಲೆನೆ |ತಪ್ಪದೆ ಪಡಿಪಾಟ ಪಡಲಾರೆನವ್ವ............ ಪ.ಉದಯದಲೇಳಬೇಕುಉದಕ ಕಾಸಲು ಬೇಕು |ಹದನಾಗಿ ಬಜೆಯನು ಅರೆದಿಡಬೇಕು ||ಬದಿಯಲಿ ಎಲೆ ಅಡಿಕೆ ಕುಟ್ಟಿಡಬೇಕು |ಬಿದಿರಕೋಲು ತಂದು ಮುಂದಿಡಬೇಕು 1ಪಿತ್ತವೋಕರಿಕೆ ಮುದುಕರಿಗೆ ವಿಶೇಷವು |ಹೊತ್ತುಹೊತ್ತಿಗೆ ಜೊಲ್ಲ ಚೆಲ್ಲಬೇಕು ||ಮೆತ್ತನವೆರಡು ಮುದ್ದಿಯ ಮಾಡಲುಬೇಕು |ಒತ್ತೊತ್ತಿ ಕೂಗಿ ಕರೆಯಲುಬೇಕು ....... 2ಜಾಡಿ ಹಾಸಬೇಕು ನೋಡಿ ಬಾಡಬೇಕು |ಅಡಗಡಿಗೆ ಕಣ್ಣೀರ ಸುರಿಸಬೇಕು ||ಒಡೆಯ ಶ್ರೀ ಪುರಂದರವಿಠಲನ ನೆನೆಯುತ |ಮಿಡಿಗೊಂಡು ಮೂಲೆಗೆ ಒರಗಬೇಕು 3
--------------
ಪುರಂದರದಾಸರು