ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ಗತಿಯು ಎನಗೆ ಎನ್ನಯ್ಯ ಶ್ರೀ ಪನ್ನಂಗಶಯನ ಕಾಯೋ ಪ ಹೀನ ಸಂಸಾರದೊಳು ಇನ್ನೆಲ್ಲಿತನಕ ನಾ ಬನ್ನಬಡಬೇಕಯ್ಯ ಜಾಹ್ನವೀಜನಕ ಅ.ಪ ಸನುಮತಿವಿನಿತಿಲ್ಲದೆ ಮನಸಿನೊಳು ಘನತರ ಭ್ರಮಿಪೆ ಬರಿದೇ ಶುನಕನ ಕನಸಿದು ಅನಿತ್ಯ ಜಗತ್ಸುಖ ಎನಗ್ಯಾಕೆ ಒಣಭ್ರಾಂತಿಯನು ತೋರ್ವೆ ಶ್ರೀಕಾಂತ 1 ಘಳಿಗೆಸಂತಸವಿಲ್ಲದೆ ಬಳಲುವೆ ಬಲು ಇಳೆ ಸುಖದಿ ಮನ ನಿಲ್ಲಿಸಿ ಘಳಿಗೆ ಮೊಕ್ಕಾಮಿಗಾಗಿ ಕಳವಳಸೀಪರಿ ಬಳಲುವೆನ್ಯಾಕೊ ತಿಳಿಯದಿದು ನಳಿನಾಕ್ಷ 2 ಎತ್ತ ನೋಡಲು ನೀನಿರ್ದು ಮಿಥ್ಯಜಗತ್ತಿನೋಳ್ ವ್ಯರ್ಥ ಬಳಲಿಪರೆ ಎನ್ನ ಭಕ್ತವತ್ಸಲನೆಂಬ ಹೊತ್ತಿರುವಿ ಬಿರುದುಗಳ್ ಚಿತ್ತಕ್ಕೆ ಸತ್ಸುಖವಿತ್ತು ಪೊರೆ ಶ್ರೀರಾಮ 3
--------------
ರಾಮದಾಸರು
ಭಕ್ತವತ್ಸಲನೆಂಬ ಬಿರುದು ನಿನಗಿರಲು ಭಕ್ತಜನಾಪತ್ತಿಗ್ಯಾಕೆ ನೀ ಬರದಿರುವಿ ಪ ಮುಕ್ತಿದಾಯಕನೆಂಬ ಯುಕ್ತ ಬಿರದ್ಹೊತ್ತಿರುವಿ ಚಿತ್ತಜಪಿತ ಭಕ್ತರ್ಹೊತ್ತಿಗ್ಯಾಕಿಲ್ಲೋ ನಿತ್ಯ ಬಿಡದ್ಹೊಗಳುವ ಸತ್ಯ ವೇದೋಕ್ತಿಗಳು ವ್ಯರ್ಥವೇನಯ್ಯಾ 1 ದೋಷನಾಶನೆ ನಿನ್ನ ಸಾಸಿರನಾಮಗಳಿಂ ಘೋಷಿಪರು ಮನುಮುನಿ ಬೇಸರಿಲ್ಲದಲೆ ದಾಸಜನರಾಶಕ್ಕೆ ಬೇಸತ್ತ ಬಳಿಕ ನಿನ ಗೀಸು ಬಿರುದುಗಳಿರ್ದು ಲೇಶವೇನಯ್ಯಾ 2 ಪರಮ ಕರುಣಾಕರ ಶರಣಜನಮಂದಾರ ಚರಣಸ್ಮರಿಪರ ಘೋರದುರಿತಪರಿಹಾರ ಖರೆಯಿರ್ದರಿಗೆನ್ನ ದುರಿತಮಂ ಪರಿಹರಿಸಿ ಕರುಣದಿಂ ರಕ್ಷಿಸೈ ಧರೆಗಧಿಕ ಶ್ರೀರಾಮ 3
--------------
ರಾಮದಾಸರು
ಲೋಕನೀತಿಯ ಹಾಡುಗಳು ಆರು ಹಿತರಾದಾರು ಈ ವಿಶ್ವದೊಳಗೆ ಕೃತಿ ಹೊರತು ಪ ಪಿತನಲ್ಲ ಸುತನಲ್ಲ ರತಿಯಲ್ಲ ಸುತೆಯಲ್ಲ ಅತಿ ಪ್ರೀತಿಯಿಂ ಪೊರೆದ ನಿಜಮಾತೆಯಲ್ಲಾ ಸುತನಪೇಕ್ಷಿಸಿ ಹೆದರಿ ಅಜಮಿಳನು ಕರೆಯಲ್ಕೆ ಪತಿತ ಪಾವನ ಹರಿಯ ನಾಮ ಹಿತವಾಯ್ತು 1 ಧನವಲ್ಲ ಸಿರಿಯಲ್ಲ ಬಹು ಬೆಳೆದ ಮೈಯಲ್ಲ ಹಣ ರಾಶಿ ಗಳಿಸುವ ದುರ್ಬುದ್ಧಿಯಲ್ಲ ಮನ ಮತ್ಸರಗಳಲ್ಲ ಕಾಮಕ್ರೋಧಗಳಲ್ಲ ತನುವಲ್ಲ ಡಂಬರದ ವೇದಾಂತವಲ್ಲ2 ತರಳನಾಗಿಹ ಧೃವಗೆ ತರುಣ ಪ್ರಲ್ಹಾದನಿಗೆ ಕರಿರಾಜ ಹನುಮಾದಿ ನಿಜ ಭಕ್ತರಿಂಗೇ ವರಧರ್ಮ ಪುತ್ರನಿಗೆ ಮಧ್ಯ ಪಾಂಡವನಿಗೇ ಪರಮ ಪತಿವ್ರತಾ ರಮಣಿ ದ್ರೌಪದಿಗೇ 3 ಧರಣಿಯನು ಹೊತ್ತಿರುವ ಆದಿಶೇಷಗೆ ಮತ್ತೆ ನಿರುತವೂ ಭಜಿಸಿದ ಪರಮ ದಾಸರಿಗೆ ಸಿರಿಯರಸ ಶ್ರೀಹರಿಯ ಭಜನೆಯೊಂದುಳಿದು 4 ಜನ್ಮಬಂಧವ ನೀಗಿ ಪರಮ ಪದವಿಯ ಕೊಡುವ ಸನ್ನುತವು ನಿಜ ಸೌಖ್ಯವನ್ನು ಕರುಣಿಸುವ ಪ್ರಾಣಿಯಲಿ ಆತ್ಮನಲಿ ಶ್ರಧ್ಧೆ ಹುಟ್ಟಿಸುವಂಥ ಚನ್ನಕೇಶವ ಸ್ವಾಮಿ ಭಕ್ತಿಯೊಂದುಳಿದು 5
--------------
ಕರ್ಕಿ ಕೇಶವದಾಸ
ಸರಿಯೇನು ನಿನಗಿದು ಸರಸಿಜನಯನನೆ ಚರಣ ಭಜಿಪರೊಳು ಕರುಣಿಸದಿರುವಿ ಪ ದೀನಜನರ ಬಂಧು ನೀನೆ ನಿರ್ದಯನಾದರಿ ನ್ನೇನು ಗತಿಯು ಎನಗೆ ಪ್ರಾಣಾಂತರ್ಗತನೆ ಹೀನ ನಿನಗಲ್ಲೇನೈ ಗಾನವಿಲೋಲ 1 ಇಂದಿರೇಶಾನಾಥಬಂಧುವೇ ನೀ ದಯಾ ಸಿಂಧು ನೀ ಸಲಹೆಂದು ಬಂದು ಮರೆಯ ಬಿದ್ದೆ ಬಂದ ಸಂಕಟದೊಳಗಿಂದ ಸಲಹದಿರೆ ಕುಂದು ನಿನಗಲ್ಲೇನೈ ಮಂದರನಿಲಯ 2 ನಂಬಿದ ಭಕ್ತರ ಇಂಬುದಾಯಕನು ನೀ ನೆಂಬ ಬಿರುದ್ಹೊತ್ತಿರುವಿ ಅಂಬುಜನಯನ ನಂಬಿದೆನು ನಿನ್ನ ಪಾದಾಂಬುಜ ದೃಢವಾಗಿ ಬೆಂಬಲಿ (ರ್ಪೊ) ರೆಯೆನ್ನ ಸಂಭ್ರಮದಿ ಶ್ರೀರಾಮ 3
--------------
ರಾಮದಾಸರು
ದೃಷ್ಟಿ ನಿನ್ನ ಪಾದದಲ್ಲಿ ನೆಡುವ ಹಾಗೆ - ಧರೆಯದುಷ್ಟ ಜನರ ಸಂಗಗಳನು ಬಿಡುವ ಹಾಗೆ ಪ.ಕೆಟ್ಟ ಮಾತ ಕಿವಿಯಿಂದ ಕೇಳದ ಹಾಗೆ ಮನವಕಟ್ಟು ಸದಾ ನಿನ್ನ ಧ್ಯಾನ ಬಿಡದ ಹಾಗೆ ಅಪದೃಷ್ಟನಾಗಿ ಕೈಯನೆತ್ತಿ ಕೊಡುವ ಹಾಗೆ ಶ್ರೀಕೃಷ್ಣ ನಿನ್ನ ಪೂಜೆಯನ್ನು ಮಾಡುವ ಹಾಗೆ ||ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ಬಲುಶಿಷ್ಟ ಜನರ ಸೇವೆಯನು ಮಾಡುವ ಹಾಗೆ 1ಪುಟ್ಟಿಸಿದ ತಾಯಿ - ತಂದೆಯಲ್ಲವೆ ನೀನು - ಒಂದುಹೊಟ್ಟೆಗಾಗಿ ದೈನ್ಯ ಪಡಬೇಕೇ ನಾನು ||ಪಟ್ಟೆ -ಪಟ್ಟಾವಳಿ ಬೇಡಲಿಲ್ಲ ನಾನು ಎನ್ನಗುಟ್ಟು ಅಭಿಮಾನಗಳ ಕಾಯೋ ನೀನು2ನಟ್ಟನಡು ನೀರೊಳೀಸಲಾರೆ ನಾನು ಎತ್ತಿಕಟ್ಟೆಯ ಸೇರಿಸಬೇಕಯ್ಯ ನೀನು ||ಬೆಟ್ಟದಷ್ಟು ಪಾಪ ಹೊತ್ತಿರುವೆ ನಾನು ಅದನುಸುಟ್ಟು ಬಿಡುಪುರಂದರ ವಿಠಲ ನೀನು3
--------------
ಪುರಂದರದಾಸರು
ಪಾಪಿ ಬಲ್ಲನೆ ಪರರ ಸುಖ - ದುಃಖದಿಂಗಿತವಕೋಪಿ ಬಲ್ಲನೆ ದಯಾದಾಕ್ಷಿಣ್ಯವ ಪ.ಹೇನು ಬಲ್ಲುದೆ ಮುಡಿದ ಹೂವಿನಾ ಪರಿಮಳವಶ್ವಾನ ಬಲ್ಲುದೆ ರಾಗಭೇದಂಗಳಮೀನು ಬಲ್ಲುದೇ ನೀರು ಚವುಳು - ಸವಿಯೆಂಬುದನುಹೀನ ಬಲ್ಲನೆ ತನಗೆ ಉಪಕಾರ ಮಾಡಿದುದ? 1ಕತ್ತೆ ಬಲ್ಲುದೆ ತಾನು ಹೊತ್ತಿರುವ ನಿಧಿಯನ್ನುಮೃತ್ಯು ಬಲ್ಲುದೆ ದಯಾ - ದಾಕ್ಷಿಣ್ಯವತೊತ್ತು ಬಲ್ಲಳೆ ಹೀನ - ಮಾನದಭಿಮಾನವನುಮತ್ತೆ ಬಲ್ಲುದೆ ಬೆಕ್ಕು ಮನೆಯ ಮೀಸಲನು? 2ಹೇಡಿ ತಾ ಬಲ್ಲನೇ ರಣರಂಗ ಧೀರವನುಕೋಡಗವು ಬಲ್ಲುದೇ ರತ್ನದಾಭರಣಬೇಡದುದನೀವ ಪುರಂದರವಿಠಲನಲ್ಲದೆನಾಡ ದೈವಗಲೆಲ್ಲ ಕೂಡಬಲ್ಲುದೇ? 3
--------------
ಪುರಂದರದಾಸರು