ಒಟ್ಟು 6 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳಮ್ಮ ಕೊಲ್ಲಾಪುರಧೀಶೆ | ಇನ್ನೂ ಭಾಳ ಹೊತ್ತಾಯಿತು ವೈಕುಂಠವಾಸೆ ಪ. ಸೃಷ್ಟಿಸೆಂದೆನುತ ಆಂಬ್ರಣಿರೂಪದಿಂದ್ಹರಿ ಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕು ಅಷ್ಟ ಭುಜದ ಲಕುಮಿ ಪ್ರಕೃತಿರೂಪಿಣಿಯಾಗಿ ಸೃಷ್ಟಿಕಾರ್ಯಕೆ ಅನುವಾಗಬೇಕು 1 ಸಕಲ ದೇವತೆಗಳ ಸೃಷ್ಟಿ ಮಾಡಲಿಬೇಕು ಮುಕುತಿಯೋಗ್ಯರ ಸೇವೆ ಕೊಳ್ಳಬೇಕು ಸಕಲರೂಪದಲಿ ಶ್ರೀಹರಿಯ ಸೇವಿಸಬೇಕು ಅಕಳಂಕÉ ಆದಿದೇವತೆ ಎನಿಸಬೇಕು 2 ಶ್ರೀ ಪದ್ಮಭವೆ ವೆಂಕಟೇಶನ ಕೂಡುತ ನೀ ಪರಿಪರಿ ಲೀಲೆಗೈಯ್ಯಬೇಕು ಗೋಪಾಲಕೃಷ್ಣವಿಠ್ಠಲನ ವಕ್ಷಸ್ಥಳ ವ್ಯಾಪಿಸಿ ಭಕ್ತರ ಕಾಪಾಡಬೇಕು 3
--------------
ಅಂಬಾಬಾಯಿ
ಏಳಯ್ಯ ಏಳಯ್ಯ ಬೆಳಗಾಯಿತೂ ಪ ಸುಳಿ | ನಾಭಿ ಸಂಭವ ಸುತನೆ ಅ.ಪ. ಸಾಮಜ ವರದ ಶ್ರೀರಾಮ ಬಂದಿಹನಯ್ಯ | ಭೂಮಿಜೆಯ ಪುಡುಕಲ್ಕೆ |ನೇಮದಿಂದಲಿ ನೀನು | ಶ್ಯಾಮಲಾಂಗನ ಕಂಡುಭೂಮ ಗುಣನಿಧಿ ಸು | ಪ್ರೇಮ ಪಡೆ ಹೊತ್ತಾಯಿತು 1 ತಾಲಸಪ್ತವ ಹಣಿಸು | ವಾಲಿ ಮಥನ ಗೈಸುನೀಲ ಜಾಂಬವ ಸುಷೇ | ಣಾದಿಗಳ ಕರೆ ಕಳಿಸು |ಶ್ರೀಲೋಲನಾಜ್ಞೆಯಲಿ | ಕಾಲಮೀರುವ ಮುನ್ನಲೋಲ ಲೋಚನೆ ವಾರ್ತೆ | ತಿಳುಹ ಬೇಕಯ್ಯಾ 2 ಬಿಂಕ ಮುರಿಯಲಿ ಬೇಕು |ಲಂಕಾಪುರದೊಳು ಮಾತೆ | ಗಂಕವೀಯಲಿ ಬೇಕುಅಂಕಕಾರನು ರಾಮ | ನಂಕೆ ಸಲಿಸಲಿ ಬೇಕು 3 ಶರಧಿ ಬಂಧಿಸಬೇಕು | ಧುರವ ಜೈಸಲು ಬೇಕುವರ ಭೂಮಿ ಜಾಕೃತಿಯ | ತ್ವರ ತರಲಿ ಬೇಕುವರ ವಿಭೀಷಣನಿಗೆ | ಅರಸುತನ ಕೊಡಬೇಕುಮರಳಿ ಅಯೋಧ್ಯಗೆ | ತೆರಳ ಬೇಕಯ್ಯಾ 4 ಉರ ರಕ್ತ ಕುಡಿಬೇಕುಧರಣಿ ಭಾರವ ನಿಳುಹಿ | ತರುಣಿ ಶಿಖೆ ಬಿಗಿಬೇಕು 5 ಅದ್ವೈತ ಗೆಲಬೇಕುಬುದ್ಧಿಪೂರ್ವಕವಾಗಿ | ಸಿದ್ದ ಮುನಿ ಜನರಿಂದಮುದ್ದುಕೃಷ್ಣನ ಪೂಜೆ | ವಿಧಿಸಲೀ ಬೇಕೂ 6 ಸಾರ ಗ್ರಂಥವ ರಚಿಸಿಮೂರ್ಮೂರು ಭಕುತಿಲಿ | ಹರಿಯ ಪೂಜಿಸಬೇಕು |ಮೂರ್ಲೋಕ ದೊರೆ ಗುರು | ಗೋವಿಂದ ವಿಠಲನಸಾರ್ವಕಧಿಪತಿಯೆಂದು | ಸಾರಲೀ ಬೇಕೂ 7
--------------
ಗುರುಗೋವಿಂದವಿಠಲರು
ಏಳು ಗೋಪಾಲ ಬಾಲ ಇನ್ನೂ ಭಾಳ ಹೊತ್ತಾಯಿತು ಭಕ್ತ ಪರಿಪಾಲ ಪ. ಮುನಿಜನರೆದ್ದು ಪೂಜಿಸೆ ನಿನ್ನ ನಿಂತಿರೆ ಮನುಜರೆಲ್ಲರೂ ಕಾದಿಹರು ದರುಶನಕೆ ಸನಕಾದಿ ವಂದಿತ ಸರ್ವೇಶನೆಂತೆಂದು ವಿನಯದಿಂದಲಿ ನುತಿಪರು ಭಾಗವತರು 1 ತಾರೆಗಳಡಗಿತು ಕಮಲಗಳರಳಿತು ಪೂರ್ವ ದಿಕ್ಕಿನಲಿ ತೋರುವ ರವಿ ಉದಯ ಭೇರಿ ತುತ್ತೂರಿ ನಗಾರಿ ಬಾರಿಸುತಿದೆ ಸಾರಿ ಕೂಗುತಲಿದೆ ಕೋಳಿ ವೃಂದಗಳು 2 ಬಾಲಲೀಲೆಗಳಿಂದ ಗೋವಳರೊಡನಾಡಿ ಭಾಳ ಆಯಾಸವಾಗಿಹುದೆ ಕಂದಯ್ಯ ಬಾಲೆ ಗೋಪ್ಯಮ್ಮ ನಿನ್ನ ಲಾಲಿಸಲಿಲ್ಲವೆ ಬಾಲಯತಿಗಳು ಪೂಜಿಸುವರೇಳಯ್ಯ 3 ಬಿಸಿಬಿಸಿ ನೀರು ಪಂಚಾಮೃತವೆರೆಯುತ ಹಸನಾದ ಪಾಲು ಸಕ್ಕರೆ ಉಂಡೆಗಳು ಹಸುಗೂಸು ನಿನಗೆ ಹುಗ್ಗಿಯು ದೋಸೆ ಪೊಂಗಲು ಬಿಸಜಾಕ್ಷ ಯತಿಗಳರ್ಪಿಸುವರೇಳಯ್ಯ 4 ನುತಿ ಕೇಳಲಿಲ್ಲ ಆ ದಣಿದೆಂದು ಮಲಗಿದ್ಯಾ ಶ್ರುತಿ ವೇದತತಿಗಿಂತ ಚತುರ ಮಾತಿನೊಳು ಹಿತದಿ ಯಶೋದೆ ಎಬ್ಬಿಸಲೆಂದು ಮಲಗಿದ್ಯಾ ಚ್ಯುತದೂರ ಗೋಪಾಲಕೃಷ್ಣವಿಠ್ಠಲಯ್ಯ 5
--------------
ಅಂಬಾಬಾಯಿ
ನೋಡಿದ್ಯಾ ಶ್ರೀದೇವಿಯರ ನೋಡಿದ್ಯಾನೋಡಿದ್ಯಾ ರುಕ್ಮಿಣಿ ಮಾಡಿದಾಟ್ಟವಳಿಯಗಾಡಿಗಾರಳೆಂದು ಆಡೋರು ಭಾವೆಯ ಪ. ಇಂತು ರುಕ್ಮಿಣಿ ಮ್ಯಾಲೆ ಪಂಥವೆ ಬಗೆದಿರಲಿನಿಂತು ಸುಭದ್ರಾ ಶಪಥದನಿಂತು ಸುಭದ್ರಾ ಶಪಥದ ವಾಗ್ಬಾಣಕಾಂತೆಯ ಎದೆಗೆ ಒಗೆದಾಳು 1 ತಾಯಿ ಮನೆಗೆ ಬಂದು ಬಹಳ ಹೊತ್ತಾಯಿತುತಾಯಿಯ ಸೊಸೆಯರು ಬರಲಿಲ್ಲತಾಯಿಯ ಸೊಸೆಯರು ಬರಲಿಲ್ಲ ನಮಗಂಜಿಬಾಯಿ ಬಿಡುತಾರೆ ಒಳಗಿನ್ನು2 ಅಣ್ಣನ ಮನೆಗೆ ಬಂದು ಸಣ್ಣ ಹೊತ್ತಾಯಿತುಅಣ್ಣನ ಮಡದಿ ಬರಲಿಲ್ಲ ಅಣ್ಣನ ಮಡದಿ ಬರಲಿಲ್ಲ ರುಕ್ಮಿಣಿಇನ್ನು ಬಾ ಅಭಯ ಕೊಡತೇವ3 ಅತ್ತಿಗೆ ಮನೆಗೆ ಬಂದು ಹತ್ತು ಫಳಿಗ್ಯಾದೀತುಎತ್ತ ಓಡಿದಳೆ ನಮಗಂಜಿಎತ್ತ ಓಡಿದಳೆ ನಮಗಂಜಿ ಸತ್ಯಭಾಮೆಇತ್ತ ಬಾ ಅಭಯ ಕೊಡತೇವ4 ನಳಿನ ಮುಖಿಯರ ವಾರ್ತೆ ತಿಳಿದು ರುಕ್ಮಿಣಿದೇವಿಇಳಿದಾಳು ಬ್ಯಾಗ ಸೇಳೆ ಮಂಚ ಇಳಿದಾಳು ಬ್ಯಾಗ ಸೇಳೆ ಮಂಚ ರಮಿಯರಸುಎಳೆದ ಮುಂಜೆರಗು ವಿನಯದ 5
--------------
ಗಲಗಲಿಅವ್ವನವರು
ಪುರಂದರ ಗುರುವರ ಇನ್ನು ಭಾಳ ಹೊತ್ತಾಯಿತು ಭಕುತ ಜನಪ್ರಿಯ ಪ. ಶ್ರೀಶನಪ್ಪಣೆಯಿಂದ ಭೂಲೋಕದಲಿ ಪುಟ್ಟಿ ಆಶೆಯಿಂದಲಿ ಧನ ಗಳಿಸಿ ಕೋಟಿ ವಾಸುದೇವನು ಎಚ್ಚರಿಸಲು ವೈರಾಗ್ಯ ದಾಸತ್ವದಲಿ ಜಗದಿ ಮೆರೆಯಬೇಕು 1 ವ್ಯಾಸ ಮುನಿಯಿಂದುಪದೇಶಕೊಳ್ಳಲುಬೇಕು ದಾಸತ್ವ ಜಗದಲಿ ಸ್ಥಾಪಿಸಬೇಕು ದೋಷರಹಿತ ಮಧ್ವಶಾಸ್ತ್ರ ತತ್ವಗಳ ಪ್ರ ಕಾಶಗೈಸುತ ಕವನಗೈಯ್ಯಬೇಕು 2 ಸತಿಸುತ ಪರಿವಾರ ಭೂ ಸಂಚರಿಸಬೇಕು ಸ್ತುತಿಸುತ್ತ ಹರಿಯನ್ನು ಕುಣಿಸಬೇಕು ಜತನದಿ ನಿಜತತ್ವಗಳನರಿಯಲಿಬೇಕು ಕ್ಷಿತಿಗೆ ಅಚ್ಚರಿ ಮಹಿಮೆಯ ತೋರಬೇಕು 3 ಪುಷ್ಯದಮಾವಾಸೆ ಹರಿಪುರ ಸೇರಲು ಶಿಷ್ಯಕುಲವು ಜಗದಿ ಬೆಳೆಯಲೆಂದು ಶಿಷ್ಯ ವಿಜಯದಾಸರಿಗೆ ಅಂಕಿತವನಿತ್ತು ಶಿಷ್ಯ ಪ್ರಶಿಷ್ಯ ಸಂತತಿ ಬೆಳಸಬೇಕು 4 ಪಾಪಿ ಜನಗಳ ಪಾವನಗೈಯಲಿಬೇಕು ತಾಪಪಡುವರ ಪೊರೆಯಲೆತ್ನಿಸಬೇಕು ಶ್ರೀಪತಿ ದಾಸತ್ವ ಜಗದಿ ನಿಲ್ಲಿಸಬೇಕು ಗೋಪಾಲಕೃಷ್ಣವಿಠ್ಠಲನ ಸ್ಮರಿಸಬೇಕು 5
--------------
ಅಂಬಾಬಾಯಿ