ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತವಗೊಲಿದು ನೆರೆದೆ ಎಲೆ ಬಾಲೆ ನೀ ಬರಿದೆ ಪ ಕಾಂತೆಯುದರದಲಿ ತಾಳ್ದ ಕಮನಿಯೊಳ್ ಬಾಳ್ದಅ.ಪ ಮೈಮೊಗ ಬೇರಾದವಗೆ ಮಾತೃಘಾತಕನಿಗೆ ಬೈಯಲು ಭಾವನಕೊರಳ ಭಾವಿಸದರಿದವಗೆ ಕೈವಿಡಿದ ಕಾಂತೆಯನು ಕಾಡಿಗಟ್ಟಿದವಗೆ ತಮ್ಮಯ್ಯನರ್ಧಾಂಗಿಯನು ಅಣ್ಣನ ನೆರೆಸಿದವಗೆ1 ಹದ್ದನೇರಿದವಗೆ ಹಾವಿನಮೇಲೊರಗಿದವಗೆ ಶುದ್ಧ ಕರಡಿಯಮಗಳ ಸರಿ ಎಂದು ಆಳ್ದವಗೆ ಮುದ್ದಾಡಿ ಮೊಲೆಯೂಡಿದವಳಸುವನೆ ಕಳೆದವಗೆ ಕದ್ದು ಬೆಣ್ಣೆಯ ಮೆದ್ದ ಕರಿಮೈಯವಗೆ2 ಸುರನಿಶಾಚರ ಮಧ್ಯೆ ಅರಿಯೆ ಪೆಣ್ಣಾದವಗೆ ಸುರಪನಂದನ ಶಕಟನ ನೆರೆ ಹೊಡೆದವಗೆ ಸುರಪುರದರಸು ಶ್ರಿ ಲಕ್ಷ್ಮೀರಮಣಗೆ 3
--------------
ಕವಿ ಲಕ್ಷ್ಮೀಶ
ಪರಮಪರುಷನೆ ಕೃಷ್ಣ ಕಣ್ತೆರದು ನೋಡೊ ಪ ಶಿರಿ ಅರಸ ದಯಸಿಂಧು ಶ್ರಾವ್ಯಮಂಗಳ ಕೀರ್ತಿ ಅ.ಪ. ದ್ವಿಜಗಮನ ವೃಜಿನಹರ ಭುಜಗತಲ್ಪನೆ ದೇವ ಅಜತಾತ ಗಜವರದ ಕುಜ ನಿವಾರಣನೆ ಭಜನೆ ಪಾಲಿಸು ಎನ್ನ ವಿಮಲ ಮನದಲಿ ನಿಂತು ಋಜು ಪುಂಗವರ ದೈವ ನಿರ್ಜರರ ಬಾಂಧವನೆ 1 ಒದ್ದವಗೆ ಶಿಕ್ಷಿಸದೆ ಬೈದವಗೆ ಗತಿ ಇತ್ತೆ ನಿರ್ದೋಷ ಗುಣಪೂರ್ಣನೆಂದು ಶ್ರುತಿ ಸಾರುತಿದೆ ನಿದ್ದೆ ಮಾಡುವಗೊಲಿದಿ ಮುಕ್ತಿಯನಿತ್ತೆ ಯುದ್ಧದಲಿ ಶರದಿಂದ ಹೊಡೆದವಗೆ ನೀನೊಲಿದೆ 2 ಶುದ್ಧ ಆನಂದಾಬ್ಧಿ ಜಯೇಶವಿಠಲನೆ ಮಧ್ವ ಮುನಿದೈವ ಸಿದ್ಧರೊಡೆಯ ಉದ್ಧವನ ಗುರು ಸುಧಾಮ ಮಿತ್ರನೆ ಮನ ತಿದ್ದಯ್ಯ ಜ್ಞಾನ ನಿನ್ನಲ್ಲಿ ನಿಲುವಂತೆ 3
--------------
ಜಯೇಶವಿಠಲ