ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿರೋ ಕೇಳಿರೋ ಆನಂದ ನುಡಿಗಳ | ಜಾಳಿಲಿ ದೋಷವ ಹರಿನಾಮ ನೆನೆಯುತ | ಕೇಳಿ ಕೇಳಿ ಕೇಳಿ ಕೇಳಿ ಪ ಯುಗದಂತಿಲಿ ಸರ್ವ ಮತವೆಲ್ಲ ಕೆಡಲಾಗಿ | ಜಗದೋದ್ಧಾರ ಜಗದೀಶ ಬರು ತಾನೆ 1 ಸ್ವ ಶಕ್ತಿ ಕುದುರೆಯ ನೇರಿ ರಾವುತನಾಗಿ | ಅಸಮ ಪೊನ್ನೀಟೆಯ ಹಿಡಕೊಂಡು ಬರುತಾನೆ2 ನಾಕು ವೇದಗಳೆಂಬಾ ಕುದುರೆಯ ಕಾಲವು | ಬೇಕಾದ ಅವಯವ ಆರು ಶಾಸ್ತ್ರಗಳಿವೆ3 ಮೂರು ಪೌರಾಣ ಶೃಂಗಾರಾಭರಣವು | ಶರಣವತ್ಸಲನೆಂಬ ಕಡಿವಾಣ ಕುದುರೆಗೆ4 ಬೋಧ ಹಕ್ಕರಿಕೆಯು | ಭಾವಿಸೆ ಭೂ ಭಾಗವೆಂಬುದು ಪಾವುಡವು5 ಈ ಪರಿಯಿಂದಲಿ ಭೋರ್ಗರೆವುತ ಬರೆ | ತಾಪವಡಗಿ ಸುಖ ತಂಗಾಳಿ ಬಂದೀತು 6 ತಾಯಿಯ ಧ್ವನಿ ಕೇಳಿ ಮಕ್ಕಳು ಬಹುಪರಿ | ಬಾಯ ದೆರವುತಲಿ ಜನಜಡಿ ಬಹುದು7 ಅವರಿ-ಗಭಯ ಕೊಟ್ಟು ಅಧರ್ಮವೇ ಕಿತ್ತಿ ಯವನರ ಹಂತಿಯ ಕಟ್ಟಿ ತಾ ತುಳಿಸುವ 8 ಹೊಟ್ಟವ ಹಾರಿಸಿ ಘಟ್ಟಿ ತಾ ಉಳಹುವ | ಸೃಷ್ಟಿಲಿ ಧರ್ಮ ಸಂ-ಸ್ಥಾಪನೆ ಮಾಡುವಾ 9 ಮೊದಲಂತೆ ಜಗವನು ಸುಖದಲಿ ಇಡುವನು | ಮುದದಿಂದ ಸಾರಿದ ಗುರುವರ ಮಹಿಪತಿ 10
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೆಳಿಯೋ ಬೆಳಿ ಮನವೇ ಬೆಳಿಕಂಡ್ಯಾ ಬೆಳಿ ಮನವೇ ಬೆಳಿ ನಿನ್ನ ಹೊಲವನು | ಇಳೆಯೊಳು ಯಣಿಗಾಣದ್ಹಾಂಗೆ 1 ಗುರುವಿನಭಯ ಕೊಂಡು ಸತ್ವದಾ ಹೊಲ ಹಿಡಿದು | ಜರಿದು ಸಂಗಿಗಳನ್ನೆಲ್ಲಾ 2 ವಿವೇಕವೇಯಂಬಾ ನೇಗಿಲ ಎಂಟು | ಭಾವವೆಂಬೆತ್ತುಗಳಿಂದ 3 ದೃಢಪಾಶದಿಂದಲಿ ಕಟ್ಟಿ ಯಚ್ಚರವೆಂಬಾ | ಒಡನೆ ಶಿಕ್ಷದಿ ನಡೆಸುತಾ 4 ಜ್ಞಾನ ಭಕ್ತಿ ವೈರಾಗ್ಯ ತಾಳದ ಬಲದಿ | ಅನನ್ಯ ಭಾವ ಕೂರಿಗೆಯಿಂದಾ 5 ಗುರು ಕರುಣ ಮಳೆ ಗರೆಯೆ ವೇದಾಂತ ಬೀಜ | ಭರದಿ ಬಿತ್ತಿ ನಾದುವಂತೆ 6 ಅನುಮಾನ ಕಸ ತೆಗೆದು ಬೋಧವ ಯಡಿಹಾಯ್ದು| ಧನಗಾಳ ತುಂಬಿಡುವಂತೆ 7 ವರಕ್ಷೋಭ ಯಂಬಾ ನುಡಿ ಹಕ್ಕಿ ಬರಗುಡದೆ | ಪರಮ ಜಾಗೃತಿಯ ಕವಣಿಯಿಂದಾ 8 ಬೇರೆ ಬೇರೆ ದೋರ್ವುದೆಲ್ಲಾ ವಬ್ಬುಳಿ ಮಾಡಿ | ಸಾರಿಹ ಶೃತಿ ವಾಕ್ಯದಿಂದ 9 ದೋರುವಾ ದೃಶ್ಯ ಹೆಕ್ಕಲ ಬಿಟ್ಟು ವಳಗಿರುವ | ತೂರಿ ಅಹಂಭಾವ ಹೊಟ್ಟವನು 10 ದೈನ್ಯವನು ಹಿಂಗಿ ಬಳಕೊಂಡು ಅನ್ಯರಾ ಮರೆ ಹೋಗದಂತೆ 11 ಪರಿಪೂರ್ಣಾದ ಬಳಿಕ ಒಕ್ಕಲು ತನಕ | ಮರುಳೆ ನೀ ಸಿಕ್ಕದಿರು ಕಂಡ್ಯಾ 12 ಸಂಚಿತ ಸರ್ವ ಬಿಡಿಸಿಕೊ ಸುತ ಪ್ರಭು ಗುರು ಮಹಿಪತಿ ವಲುಮೆಯಿಂದಾ 13
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರ್ವ ವಿದ್ಯದಾಗರಾ | ಪಾರ್ವತಿ ಕುಮಾರಾ | ದೋರ್ವ ವಿಘ್ನ ಸಂಹಾರಾ | ಶ್ರೀಗಣ ನಾಯಕನೇ | ಊರ್ವಿಲಿ ನಿನ್ನ ಬಲಗೊಂಬೆ 1 ತರುವಾಣಿ ಕರುಣಾ ಸಾಗರೆ | ಶರಣು ಶರಣು ಕಲ್ಯಾಣಿ 2 ಸಾರಸ ಲೋಚನ | ಕಾರುಣ್ಯ ನಿಧಿಯೇ ಸಲಹಯ್ಯಾ 3 ಮೂರಾವ ತಾರಿ ಸಹಕಾರೋ | ಶ್ರೀ ಹನುಮಂತಾ | ತಾರಿಸೋ ಭವದಿಂದಾ 4 ರಜನೀಶ ಮೌಳಿ | ನಿಜ ದೋರಿ ಎನ್ನ ಸಲಹಯ್ಯಾ 5 ಛಂದಾಗಿ ಸಲಹು ತಂದೆ ಗುರು ಮಹಿಪತಿ ರಾಯಾ 6 ಇಂದು ನಮ್ಮನಿಯಲಿ ಮುಂದಾಗಿ ನೀವು ವದಗೀರೇ 7 ಬನ್ನಿ ಭಾವಕಿಯರು ಮುನ್ನಿನಾಗುಣಬಿಟ್ಟು | ಅನ್ಯ ಕೆಲಸಕೆ ತೊಡಗದೇ | ನೈವೇದ್ಯಕೀಗ | ಸನ್ನೆಲ್ಲಕ್ಕಿ ಮಾಡೀರೇ 8 ಸೇರಲಿ ಅನುಮಾನಾ ತವಕದಿ ನೀವು ಕುಳ್ಳಿರೆ 9 ಉರ್ವಿಲಿ ನೀವು | ಕುಟ್ಟರೆ | ಜ್ಞಾನ ವಿಜ್ಞಾನದಿ | ಮೆರ್ವ ವನರೆಯಾ ಧರಿಸೀಗಾ 10 ಅಮೃತ ನಾಮವಾ ನೀವು ಬೆರೆಯಿರೇ 11 ಸಮಭಾವ ಯಾರಿಯಾ ಕ್ರಮಗೊಂಡು ಹಾಕುತಾ | ದಮಿಸಿ ಕ್ರಮ ಈಡ್ಯಾಡಿ ಕುಟ್ಟಿರೆ 12 ಕೆಟ್ಟ ಹೊಟ್ಟವ ಹಾರಿಸಿ | ಶುದ್ಧ ಅಕ್ಕಿಯ ನೆಟ್ಟನೆ ನೀವು ವಡಗೂಡೀ 13 ಏಕೋ ದೇವಗೆ ಅರ್ಪಿಸ | ದಯದಿಂದ ದೇವ | ಬೇಕಾದ ಸುಖ ಕೊಡುವನು 14 ಸಾರಥಿ ಬಂಧು ಬಳಗವು ಯನಗಾಗಿ | ಸಲಹುವಾ ನಮ್ಮ ಎಂದೆಂದು ಸಿಂಹಾದ್ರೀಶನು 15
--------------
ಕಾಖಂಡಕಿ ಶ್ರೀ ಕೃಷ್ಣದಾಸರು