ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜಿಸೋದ್ಯಾತಕಯ್ಯಾ ಬ್ರಹ್ಮಣ್ಯ ಗುರು ಪ ಅಂಜಿಸೊದ್ಯಾಕ‌ಘ ಭಂಜಕನೆನಿಸಿ ನೀ ಕಂಜನಾಭನ ಭಕ್ತಿ ಪಂಜರದೊಳಿಡದೇ ಅ.ಪ ಹೊಂದÀದೀ ನರಜನ್ಮವ ಇಂದಿರೇಶನು ಎಲ್ಲ ಹೊಂದೀ ಹೊದರಿಯದ ಮಂದಮತಿಯನು 1 ಬಿಂಬ ಮೂಡಲು ಪ್ರತಿಬಿಂಬ ಮಾಡುವುದೆಂದು ಶಂಬರಾರಿಯ ಪಿತನ ನಂಬದ ಢಂಬಿಯೊಳಂ ಜಿಸೋದ್ಯಾತಕಯ್ಯಾ2 ಶ್ರೀ ನರಹರಿಪಾದ ಧ್ಯಾನವ ಮಾಡದೆ ಬುದ್ಧಿ ಹೀನನಾದವಗೆ ಸುಜ್ಞಾನ ಕೊಡದೆ ಸುಮ್ಮನಂ ಜಿಸೋದ್ಯಾತಕಯ್ಯಾ 3
--------------
ಪ್ರದ್ಯುಮ್ನತೀರ್ಥರು
ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಪ ಅಂದು ಭೃಗುಮುನಿಯೆದೆಯಲೊದೆಯಲವನಿಗೆ ಪಾಪ ಬಂದುದೇ ಮೂದಲಿಸಿ ಬೈದವನಿಗಾ ದೋಷವು ನಿಂದುದೇ ಹಣೆಯೊಡೆಯಲೆಸೆದ ಭೀಷ್ಮಂಗಘವು ಹೊಂದೀತೆ ಪಾಂಡವರ್ಗೆ ಕುಂದು ಬಂದೀತೆ ದೇವಾ 1 ವರದನಾಕಾರದೊಳಗುಷ್ಣಜಲ ಮೃತ್ತಿಕೆಯ ತರಲು ಕೈಸುಡಲು ಹಣೆಯನು ಟೊಣದು ಬೈದೇ ಮರಳಿ ನಾಚಿಕೆಯಿಲ್ಲದೆ ಚರಣಕ್ಕೆ ಪಾವುಗೆಯ ನಿರಿಸಿದಪರಾಧ ನಿನ್ನದೋ ಯೆನ್ನದೋ ದೇವಾ 2 ಕುರುಡನಿಗೆ ದಾರಿಯನು ತೋರುವಾಪ್ತನು ಮುಳಿದು ಜರಿದು ನೂಕಿದೊಡಾತನೇನ ಮಾಡುವನೂ ಗುರಿಯನಿಡುವವನು ತಪ್ಪೆಸೆಯೆ ಸರಳಿನದೇನು ಅರಸಾಳಕೊಂದಡವನೇನು ಮಾಡುವನೂ 3 ಕುಣಿಸಿದಂತಾಡುವುದು ಬೊಂಬೆಯು ಸ್ವತಂತ್ರವದ ಕಿನಿತುಂಟೆ ಕಪಟನಾಟಕ ಸೂತ್ರಧಾರೀ ಎನಿತಾಡಿಸಿದೊಡಾಡುವೆನು ಪಾಪಪುಣ್ಯವೆಂ ಬೆಣಿಕೆಗಾನಲ್ಲ ನೀನಲ್ಲದೆಲೆ ದೇವಾ4 ತಂದೆ ತಾಯ್ಗಳು ತಮ್ಮ ಕಂದನನು ಸರ್ಪಮುಖ ದಿಂದ ಕಚ್ಚಿಸಲು ತರಳನಲಿ ತಪ್ಪೇನೂ ಮುಂದರಿಯದಜ್ಞಾನಿಯೆಂದು ನೀಕ್ಷಮಿಸಿಕೋ ತಂದೆ ವೈಕುಂಠ ವೇಲಾಪುರಾಧೀಶಾ 5
--------------
ಬೇಲೂರು ವೈಕುಂಠದಾಸರು
ಭವಸಾಗರ ದಾಟುವ ಬಗೆ ಪೇಳಯ್ಯ ಭವನಂಗಳಿಗೊಡೆಯ ಭವಸಾಗರ ದಾಟುವ ಬಗೆ ಪೇಳಯ್ಯಾ ಪ ಕ್ಷಿತಿಯೊಳು ದಾನವರತಿ ಪೆರ್ಚಿಹರು ಮಿತಿಮೀರಿ ಮೆರೆವೋರು ಕ್ಷಿತಿಪತಿ ನಿನ್ನನೆ ಮರೆತಿಹರು ಶ್ರುತಿಗಳ ಕಾಡ್ವರು ಸತಿ ಮಾತೆಯರಿಯರು ಧರ್ಮವೆನುತಿಹರು1 ಹಿಂದಿನ ಜನ್ಮದಿ ಕಲಿಶೇವಕರು ನಿಂದಕರುನ್ಮತ್ತರು ಹೊಂದೀ ದ್ವಿಜ ಜನ್ಮವ ದ್ವಿಜರಿಗಸುರರು ಕುಂದದೆ ಬೇಡಿಪರು ತಂದೆ ತವದಾಸರ ನೆರೆ ದೂಷಿಪರು ಕುಂದದೆ ಪೋಲಿಪರು ಹೊಂದಿಸದೀರೆನಗೆಂದಿಗೆ ಖಳರನು 2 ನರಜನ್ಮದಿ ಯಾತ್ರೆಯ ಚರಿಸಲಿಲ್ಲಾ ವರವ್ರತಗಳೆ ಇಲ್ಲಾ ಹರಿಪಾದತೀರ್ಥದ ಪಾನಗಳಿಲ್ಲಾ ಹರಿಪೂಜೆ ಮೊದಲಿಲ್ಲಾ ವರತೀರ್ಥದೆಂದಿಗೂ ಮೀಯಲಿಲ್ಲ ಹರಿಕೀರ್ತನವಿಲ್ಲಾ ನರಸಿಂಹವಿಠ್ಠಲ 3
--------------
ನರಸಿಂಹವಿಠಲರು