ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣಪಾ ನೀ ಪಾಲಿಸೊ ಗಜಮುಖನೆ ವೋ ಪ ತ್ರಿಣಿಯಸತಿ ಗಿರಿಜಾಸುತನೆ ಕೇಳ್ ಮನುಮುನಿ ಸನಕಾದಿ ವಂದಿತ ಅಣಿದು ನೀ ರಕ್ಷಿಸಲು ನಿನಗಿ ನ್ನೆಣೆಯುಗಾಣೆನು ಸರ್ವಸಿದ್ಧಿ ವೋ 1 ವೇದಶಾಸ್ತ್ರ ಪುರಾಣ ವಿದ್ವ ಕ್ಕಾದಿ ರೂಪನೆ ದಿವ್ಯಪ್ರಣನಾ ನಾದರೂಪನೆ ಸರ್ವಮಂಗಳ ಸಾಧು ಶಿಖರನೆ ಸರ್ವಸಿದ್ಧಿ ವೋ 2 ಏಕದಂತನೆ ಷಣ್ಮುಖಾಗ್ರಜ ವಾಕ್ಕು ಶುದ್ಧಿಯೊಳಾಡಿಸೆನ್ನನೂ ಬೇಕು ನಿನ್ನಯ ಕರುಣಯಿತರವು 3 ವಾಸವಾರ್ಚಿತ ಶ್ರೀಗುರು ಹಿರಿ ದಾಸ ತುಲಸೀರಾಮ ನಿನ್ನಯ ದೋಷ ಅಂತಕನಾಮ ಯತಿಗಣ ಪ್ರಾಸು ಹೊಂದಿಸೊ ಯೀಶಪುತ್ರನೇ 4
--------------
ಚನ್ನಪಟ್ಟಣದ ಅಹೋಬಲದಾಸರು
ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ ಮಂಗಳ ಚರಿತ ಕೃಪಾಂಗನೆ ಎನ್ನಂತ ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ ನತಜನ ಸುರಧೇನು ನೀನೆಂದು ನುತಿಸಿ ವಂದಿಸುವೆನೋ ರತಿಪತಿಪಿತ ನುತ ಕಥಾಮೃತ ಗ್ರಂಥದಿ ಸತತ ಎನಗೆ ಮತಿ ಹಿತದಲಿ ಪ್ರೇರಿಸು 1 ಧನ್ಯನ ನೀಮಾಡೋ ಕರುಣದಿ ಮನ್ನಿಸಿ ಕಾಪಾಡೋ ಘನ್ನ ಮಹಿಮಕಿನ್ನು ನಿನ್ನ ಹೊರತು ಇನ್ನಾರು ಕಾವರರಿಯೆ ಕಾಣೆ ಗುರೋ 2 ಮಂದಮತಿ ಬಿಡಿಸೋ ಈ ಭವ ಬಂಧನ ಪರಿಹರಿಸೊ ಪತಿ ಶಾಮಸುಂದರವಿಠಲ ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ 3
--------------
ಶಾಮಸುಂದರ ವಿಠಲ
ವೆಂಕಟರಮಣನೆ ಸಂಕಟಹರಣನೆ ಶಂಖ ಚಕ್ರ ಪೀತಾಂಬರನೆ ಪ ಪಂಕಜನಾಭನೆ ಪರಮಗೋವಿಂದನೆ ಲಂಕೆ ವಿಭೀಷಣ ನಿಗಿತ್ತವನೇ ಅ.ಪ ಹಿಂದನ ಕರ್ಮದಿನೊಂದೆನು ನಿನ್ನಯ ಕಂದನಮೊರೆಯನು ಲಾಲಿಪುದೂ ಬಂದಿಸಿ ಭವಗಳ ಹೊಂದಿಸೊ ನಿಜಪುರ ಚಂದದೆ ಕ್ಷಿತಿಯೊಳ್ ಪಾಲಿಪುದೂ 1 ಘಾಸಿ ಬಿಡಿಸಿ ನಿಜದಾಸನ ಮಾಡೆಲೊ ಈಶನೆ ಕೇಶವ ಮೂರಿತಯೇ ಆಸೆಯ ತೀರಿಸಬೇಕೈಯಾ ಭವ ನಾಶನೆ ಪಾರ್ಥವ ಸಾರಥಿಯೆ 2 ಪರಿಪರಿ ಭವಗಳ ಹರಿಯುವನೆನ್ನುತಾ ಕರದೊಳು ಕಂಕಣ ಕಟ್ಟಿರುವೇ ಮೊರೆ ಬಿದ್ದೆನು ಶ್ರೀ ತುಲಸೀರಾಮನ ಸ್ಮರಣೆಯ ಹೃದಯದೊಳಿಟ್ಟರುವೆ 3
--------------
ಚನ್ನಪಟ್ಟಣದ ಅಹೋಬಲದಾಸರು