ಮೋಕ್ಷವಿಲ್ಲಾ | ಗುರು ಕೃಪೆ ವಿನಾ ಪ
ಮಾನ್ಯ ಸ್ವದೇಶದಿ ಧನ್ಯ ವಿದೇಶದ |
ಉನ್ನತ ಕುಲದುತ್ಪನ್ನ ನೋಡಲು |
ಸನ್ನುತ ಕರ್ಮಗಳನ್ನಸುವ ಸಂ |
ಪನ್ನನು ಗುಣದಲಿ ಮುನ್ನಾಗೇನು 1
ಪುಸ್ತಕ ಹಿಡಿಯಲು ವಸ್ತು ಬೃಹಸ್ಪತಿ |
ವಿಸ್ತರಿಸ್ಹೇಳುವ ಶಾಸ್ತ್ರದರ್ಥವ |
ದುಸ್ತರ ಯೋಗದ ನಿಸ್ತರಿಸುವ ಘನ |
ಪ್ರಸ್ತುತ ತಪಸಭ್ಯಸ್ತ್ರಾಗೇನು 2
ಸುಂದರಿ ಮಾನಿನಿಗೊಂದೇ ಮಂಗಳ |
ಹೊಂದದೇ ಆಭರಣೆಂದೇನು ಫಲ |
ಇಂದಿರೆ ಪತಿ-ವಲುವಂದದಿ ಭಾವದಿ |
ತಂದೆ ಮಹಿಪತಿಗೊಂದಿಸದನಕಾ 3