ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ತಿಳಿದು ತಾನಾದಂಥ ಗುರುವಿನ ಪಾದವ ಹೊಂದುತನ್ನನರಿಯದ ಗುರುವ ಹೊಂದಬೇಡೆಂದೆಂದು ಪ ನಿನ್ನನು ದೇವನೆಂದೆನ್ನುವಗೆ ಈಗ ಶರಣು ಮಾಡೋಅನ್ಯ ದೇವರನೆಂದೆನ್ನುವನ ಹಾದಿ ಹೋಗಬೇಡೋ 1 ಕೋಟಿರವಿ ತೇಜವ ಕಣ್ಣಲಿ ನೋಡುಬೂಟಿಕ ಕಾಯಕಗಳ ದೂರಮಾಡು 2 ಸೋಹಂ ಮಂತ್ರವ ಹೇಳದವನ ಸೆರಗ ಬಿಟ್ಟು ನೀನುಊಹಿಸುವ ಬೇರೆ ಗುರುವನು ಉತ್ತಮ ಅವನು3 ವಾಸನೆ ಕಳೆದಾತಂಗೆ ಒಪ್ಪಿಸಯ್ಯ ತನುವಆಸೆ ಹಚ್ಚುವವನತ್ತ ಬಿಡಲಿ ಬೇಡ ಮನವ 4 ಚಿದಾನಂದ ಗುರುವ ಹೊಂದು ಚಿನ್ಮಾತ್ರನಹೆ ಮದಮುಖ ಗುರುವ ಹೊಂದದಿರು ತಿಳಿ ಮುಂದೆ ನೀನು ಕೆಡುವೆ 5
--------------
ಚಿದಾನಂದ ಅವಧೂತರು
ಹೊಂದದಿರುವಿ ಯಾಕೆ ಮನವೆ ಇಂದಿರೇಶನ ಹಿಂದೆ ಮುಂದೆ ಸುಖವನೀವ ಮಂದರಾದ್ರಿಧರನ ಬೇಗ ಪ. ಸುತ್ತಿ ಬರುವಿ ನೀ ಮತ್ತೆ ವಿಷಯದಿ ಎತ್ತಲಾದರೀಶನಂಥ ವೃತ್ತಿ ದೊರೆವುದುಂಟೆ ನಿನಗೆ 1 ತೋಷಗೊಳುವೆನೆಂಬಾಸ್ಥೆ ತಾಳುವಿ ದೋಷಗಳಲಿ ಸಿಲುಕಿ ಬಹಳ ಘಾಸಿಯಾಗಿ ನೊಂದುಕೊಳುವಿ 2 ಅರಿಯದಾದಿ ನೀ ಹರಿಯ ಗುಣಗಳ ಚರಣಪದ್ಮ ಮಧುರ ರಸವ ಸುರಿವ ಸುಖವನೆಂದು ತಿಳಿವಿ 3 ಕೇಳು ನುಡಿಯನು ಕರುಣಾಳು ಒಡೆಯನು ತಾಳ ತನ್ನ ನಂಬಿದವರ ಗೋಳ ಬಿಡಿಸಿ ಸಲಹುತಿಹನು 4 ಭ್ರಾಂತಿಗೊಳದಿರು ಶ್ರೀಕಾಂತನಲ್ಲಿರುಕಂತುಜನಕ ವೆಂಕಟೇಶ ಚಿಂತಿತಾರ್ಥವಿತ್ತು ಕಾವ 5
--------------
ತುಪಾಕಿ ವೆಂಕಟರಮಣಾಚಾರ್ಯ