ಒಟ್ಟು 49 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾದವ ನಿನ್ನೆಲ್ಲ ವರ್ಮಕರ್ಮಂಗಳ ಸಾಧಿಸಿ ಜನರ ಮುಂದ್ಹೇಳಲ್ಯಾ ರಂಗ ಸಾಧಿಸಿ ಜನರ ಮುಂದ್ಹೇಳಲ್ಯಾ ಭೇದವಿಲ್ಲದೆ ಕರುಣವನಿಟ್ಟು ಮರೆ- ಯದೆ ನೀ ದಯ ಸುಮ್ಮನೆ ಮಾಡುವ್ಯಾ ಪ ಮಡುವಿನೊಳಗೆ ಪೊಕ್ಕು ಬಿಡುತ ನೀ ಕಣ್ಣ ದುಡುಕು ಮಾಡಿದ್ದೆಲ್ಲ ಹೇಳಲ್ಯಾ ರಂಗ ದುಡುಕು ಮಾಡಿದ್ದೆಲ್ಲ ಹೇಳಲ್ಯಾ ಮಡುಹಿದ ಸೋಮಕಾಸುರನೆಂಬ ಸುದ್ದಿಯ ಬಿಡದೆ ಜನರ ಮುಂದ್ಹೇಳಲ್ಯಾ 1 ಕಡÀಗೋಲನ್ಹೊತ್ತು ಮಂಡಿಯಂತೆ (?) ಕೈಕಾಲು ಮು- ದುಡಿಕೊಂಡದ್ದೆಲ್ಲ ಹೇಳಲ್ಯಾ ರಂಗ ಮು- ದುಡಿಕೊಂಡದ್ದೆಲ್ಲ ಹೇಳಲ್ಯಾ ಹಿಡಿದು ಸುಧೆಯ ವಂಚನಿಂದ ಸುರರಿಗೆ ನೀ- ಭಂಗ ನಾ ಹೇಳಲ್ಯಾ 2 ಊರುಮನೆಗಳಿಲ್ಲ ನೀ ಗಿರಿಗಂಹ್ವರ ಸೇರಿಕೊಂಡದ್ದೆಲ್ಲ ಹೇಳಲ್ಯಾ ರಂಗ ಸೇರಿಕೊಂಡದ್ದೆಲ್ಲ ಹೇಳಲ್ಯಾ ಕೋರೆ ಹಲ್ಲುಗಳಿಂದ ಬೇರನು ಸವಿದುಂಡ ದಾರಿದ್ರ್ಯವೆಲ್ಲ ನಾ ಹೇಳಲ್ಯಾ3 ಮುಖವ ನೋಡಲು ಮೃಗದಂತೆ ಬಾಯ್‍ತೆರೆದ ನಿನ್ವಿಪರೀತ ಕೋಪಂಗಳ್ಹೇಳಲ್ಯಾ ರಂಗ ನಿನ್ವಿಪರೀತ ಕೋಪಂಗಳ್ಹೇಳಲ್ಯಾ ನಖದಿಂದ ಹಿರಣ್ಯಕನ ಕರುಳ ನೀ ಬಗೆದಂಥ ಸಕಲ ವ್ಯಾಪಾರ ನಾ ಹೇಳಲ್ಯಾ 4 ಪಾದ ಭೂಮಿ ಮುದ್ದು ರೂಪಗಳಿಂದ ಬೇಡಿಕೊಂಡದ್ದೆಲ್ಲ ಹೇಳಲ್ಯಾ ರಂಗ ಬೇಡಿಕೊಂಡದ್ದೆಲ್ಲ ಹೇಳಲ್ಯಾ ಮೂರು ಲೋಕವು ಸಾಲದಂತೆ ನೀ ಬೆಳೆದ ಅನ್ಯಾಯ ಮಾಯಗಳ ನಾ ಹೇಳಲ್ಯಾ 5 ಜಮದಗ್ನಿಯಲ್ಹುಟ್ಟಿ ಜನಭಯಕಂಜದೆ ಜನನಿ ಹತವ ಮಾಡಿದ್ಹೇಳಲ್ಯಾ ರಂಗ ಜನನಿ ಹತವ ಮಾಡಿದ್ಹೇಳಲ್ಯಾ ಅನುಮಾನವಿಲ್ಲದೀತನು ನಿಮ್ಮ ಕುಲಕೆ ಛೇದಕನೆಂದು ಕ್ಷತ್ರೇರಿಗ್ಹೇಳಲ್ಯಾ 6 ದೊರೆತನಾಳುವ ತಂದೆ ಪುರವಬಿಟ್ಹೊರಗ್ಹಾಕೆ ವನವನತಿರುಗಿದ್ದು ಹೇಳಲ್ಯಾ ರಂಗ ವನವನತಿರುಗಿದ್ದು ಹೇಳಲ್ಯಾ ಸಿರಿಯನಗಲಿ ಹತ್ತು ಶಿರ(ನ)ನುಜೆಯ ಮೂಗು ಮುಂದಲೆಯ ಕೊಯ್ದ(ಯ್ಸಿದ?) ನೆಂದ್ಹೇಳಲ್ಯಾ 7 ಎಳೆದು ಗೋಪ್ಯಮ್ಮ ನಿನ್ನೊ ್ವರಳಿಗೆ ಕಟ್ಟಿದ್ದು ಕಳವು ಜನರ ಮುಂದ್ಹೇಳಲ್ಯಾ ರಂಗ ಕಳವು ಜನರ ಮುಂದ್ಹೇಳಲ್ಯಾ ಸೆಳೆದು ಗೋಪ್ಯೇರ ಸೀರೆಕಟ್ಟಿ (ಕಡಹಾ) ಲಕ್ಕೆ ಆ- ಕಳಕಾಯ್ದನೆಂದು ನಾ ಹೇಳಲ್ಯಾ 8 ಬಟ್ಟೆರಹಿತನಾಗಿ ಹೊಕ್ಕು ತ್ರಿಪುರದಲ್ಲಿ ಬತ್ತಲೆ ತಿರುಗಿದ್ದು ಹೇಳಲ್ಯಾ ರಂಗ ಬತ್ತಲೆ ತಿರುಗಿದ್ದು ಹೇಳಲ್ಯಾ ದುಷ್ಟ ಕಲಿಯ ಶಿರಕಡಿದು ಹಾಕುವ ನೀ ದುಷ್ಟ ಗುಣಗಳ ನಾ ಹೇಳಲ್ಯಾ 9 ಭಕ್ತ ಜನರು ಕಂಡು ಕಟ್ಟಿ ಹಾಕುವರೆಂ- ದಿಷ್ಟು ಅಂಜಿಕೆ ನಿನ್ನದ್ಹೇಳಲ್ಯಾ ರಂಗ ಇಷ್ಟು ಅಂಜಿಕೆ ನಿನ್ನದ್ಹೇಳಲ್ಯಾ ನಿತ್ಯ ಈ ಹೃದಯಮಂದಿರದಲ್ಲಿ ಭೀಮೇಶ- ಕೃಷ್ಣ ನೀನಡಗಿದ್ದು ಹೇಳಲ್ಯಾ 10
--------------
ಹರಪನಹಳ್ಳಿಭೀಮವ್ವ
(1) ಸತಿ-ಪತಿ ಭಾವದ ಸ್ತುತಿಗಳು (ಜಾವಡಿಗಳು) ಎಂದಿಗೆ ತೀರಿದೆ ಸುಂದರನಾಯಕಿ ಅಂಗಜ ಬಾಣದ ಅತುರವನ್ನೂ ಪ ಚಂದ್ರಮುಖಿಯೇ ನೀ ನಾದಿನ ಹೇಳಲ್ ಬಂದೆನುನಾನಹುದೇ ಭಾವಕರನ್ನೇ ಕುಂದುಗಳನೀಪರಿ ಉಸುರುವೆ ಉಚಿತವೆ ಸಂದಣಿಯಾಗೆನ್ನೊಳಿಂದಿನ ಕಾಲಯೆಂದಿಗೆ 1 ಬಲ್ಲೆನು ನಿನ್ನಂ ಭಾವದ ಸೊಲ್ಲಂ ಬೆಲ್ಲದ ಮಾತನಾಡಿ ಕಳುಹಿಪೆನೇಂ ಬೊಲ್ಲಿದಿಗೆ ಸಾಕುಬಿಡು ಇಂಪಿನ ಕವಚತೊಡು ಸಲ್ಲಿದೆ ಸುಂಕವ ಸಮ್ಮತಿಯಿಂದಾ 2 ಮಾರನು ಬಂದೂ ಮನದೊಳು ನಿಂದೂ ದಾರಿಯನು ತಪ್ಪಿಸಿ ಧಣಿಸುವ ಕಾಣೆ ಓರದೆ ಕೋರಿದ ಕಾರ್ಯವ ತೀರಿಸೆ ಕಾಂಕಳು ನೀನಾಗಿ ಕಾಮಶಾಸ್ತ್ರವಂ 3 ಈ ಸುಖಸಂಪದ ಈಶ್ವರ ಬಲ್ಲಂ ಆಸೆಯ ತೋರಿ ನೀ ಮೋಸವಗೆಯ್ವೆ ದಾಸನು ವಂದಿಪ ಸುಖತೋರಿದೆ ದೇಶಿಕನಲೆ ತುಲಸಿರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ಏಸುಪರಿ ಈಸಬೇಕೋ ಶ್ರೀಶದಾಸನೇ ಮತ್ತೂರೇಶ ಭವಸಾಗರದಿ ಏಸುಪರಿ ಈಸಬೇಕೋ ಪ ಕೂಸಿನಂಕದಿ ಬಾವು ಘಾಸಿಸುವ ಜ್ವರತಾಪನೋಸರಿಸಲೇಶ ಸಮಯದಿಯೊದಗಲು ಲೇಶವಾದರು ಮಗುವಿನಾಸೆ ಇರದಿರೆ ಪ್ರಾಣೇಶನೇ ಗತಿಯೆನಲು ಲೇಸುಮಾಡಿದೆ ಸ್ವಾಮಿ1 ಎನಿತೆಂದು ಹೇಳಲ್ಯ ನಿನಗೆ ಮನದಳಲು ನೀಗಲಸದಳವಾಗಿ ಬಳಲುವೆನು ತನುವಿನೀ ಸಂಕಟವ ತೊಲಗಿಸೈ ಜವದಿ 2 ದುರಿತ ದೂರಪುದು ಭರದಿ ಎನ್ನೊಡೆಯ ಶ್ರೀರಾಮ ಪೊರೆವಾ ಭವ ಕಿಚ್ಚಿನಿಂದುದ್ಧರಿಸಿ ಎನ್ನನು ನರಸಿಂಹವಿಠ್ಠಲನ ನೆನೆಯೆ ಜಿಹ್ವೆಗನಿಸೊ 3
--------------
ನರಸಿಂಹವಿಠಲರು
ಏಳು ಲೋಕದಲಿ ಹೇಳುವರು ಅವರಕೀರ್ತಿಕೇಳಿ ಕೇಳಿ ಬಲ್ಲೆವಮ್ಮ ದೂತೆ ಬಹಳ ಬಹಳ ಭಾಗ್ಯವೇನೆ ದೂತೆ ಹೇಳಲ್ವಶವಲ್ಲವೇನೆ ದೂತೆ ಪ. ಕೃಷ್ಣನಂಘ್ರಿ ಕಮಲದಲೆ ನಿಷ್ಠನಾಗಿ ಧರ್ಮರಾಯ ಅಷ್ಟು ರಾಜ್ಯನಾಳುವನೇನ ದೂತೆ 1 ದಿಟ್ಟ ಧರ್ಮರಾಯ ದ್ರವ್ಯ ಶ್ರೇಷ್ಟ ದ್ವಿಜರಿಗೆ ಕೋಟಿಕೊಟ್ಟು ಕೊಟ್ಟು ಕಳಿಸೋನೇನೆ ದೂತೆ 2 ಮಾಧವನ ಭಕ್ತರಿಗೆ ಆದರದಿ ದ್ರವ್ಯ ಸಹಿತಗೋದಾನಗಳು ಕೊಡುವೊನೇನೆ ದೂತೆ 3 ನೀಲವರ್ಣನ ಭಕ್ತರಿಗೆ ಸಾಲಿಗ್ರಾಮ ಕೋಟಿ ಲಕ್ಷಮ್ಯಾಲೆ ದ್ರವ್ಯ ಕೊಡುವೋನೇನೆ ದೂತೆ 4 ಶ್ಯಾಮವರ್ಣನ ಭಕ್ತರಿಗೆ ಪ್ರೇಮದಿಂದ ದ್ರವ್ಯ ಸಹಿತ ಭೂಮಿದಾನ ಕೊಡುವೊನೇನೆ ದೂತೆ5 ಪನ್ನಂಗಶಯನನ ಭಕ್ತರ ಮನ್ನಿಸಿ ದ್ರವ್ಯಗಳಿಂದ ಕನ್ಯಾದಾನ ಮಾಡೋನೇನೆ ದೂತೆ 6 ಉತ್ತಮ ದ್ವಿಜರಿಗೆ ರಾಯ ಮುತ್ತು ಮಾಣಿಕರತ್ನ ಸಹಿತಛತ್ರ ಚಾಮರ ಕೊಡುವೋನೇನೆ ದೂತೆ 7 ಆನೆ ಕುದುರೆ ಅಂದಣವು ನಾನಾ ಭೂಷಣಗಳು ವಸ್ತ್ರಜ್ಞಾನಿಗಳಿಗೆ ಕೊಡುವೊನೇನೆ ದೂತೆ 8 ಸಂಪತ್ತು ದ್ವಿಜರಿಗೆ ಕೊಟ್ಟು ದಂಪತ್ತು ಪೂಜೆಗಳ ಮಾಡಿಗುಂಪು ಗುಂಪು ಕಳುಹೋನೇನೆ ದೂತೆ 9 ಮಿತಿ ಇಲ್ಲದೆ ಅನ್ನ ಮಧ್ವಮತದ ಜನಕೆ ಕೊಟ್ಟುಲಕ್ಷ್ಮೀಪತಿಗೆ ಅರ್ಪಿಸುವನೇನೆ ದೂತೆ 10 ಯದುಪತಿಯ ಭಕ್ತರಿಗೆ ಉದಕ ಪಾತ್ರೆ ಕೊಟ್ಟುರಾಯ ಅಧಿಕ ಕೀರ್ತಿ ಪಡೆಯುವನೇನೆ ದೂತೆ11 ತುಷ್ಟರಾಗಿ ಆಶೀರ್ವಾದ ಕೊಟ್ಟುರಾಯಗೆ ದ್ವಿಜರು ಕೃಷ್ಣಗರ್ಪಿಸೆಂಬೋರೇನೆ ದೂತೆ 12 ರತಿ ಇಟ್ಟು ರಾಮೇಶನಲ್ಲೆ ವ್ರತವ ಕೋಟಿ ಮಾಡಿರಾಯಕೃತ ಕೃತ್ಯನಾಗುವನೇನ ದೂತೆ13
--------------
ಗಲಗಲಿಅವ್ವನವರು
ಕರವ ಕರವ ಮುಗಿದು ಹೇಳಿದೆ ಹರಿಯ ಭಕ್ತರ ಸಿರಿಯ ದ್ವಾರಕೆ ದೊರೆಗೆ ಎರಗುವೆನೆಂದಳು ಶ್ರೀ ಹರಿಗೆ ಎರಗುವೆನೆಂದಳು ಪ. ಇಂದು ಸುಕೃತ ಬಹಳ ಬಂದುಒದಗಿತೆಂದನು ರಾಯ ಬಂದು ಒದಗಿತೆಂದನು 1 ಅಂದಮಾತು ಕೇಳಿ ಆನಂದ ಪೂರ್ಣನಾದನು ರಾಯಬಂದ ಜನರು ವೃಂದಾರಕರೆಂದು ಬಂದ ಕೃಷ್ಣ ಎಂದನು ಈಗ ಬಂದ ಸ್ವಾಮಿ ಎಂದನು 2 ಎಷ್ಟು ಯಜ್ಞವು ಎಷ್ಟು ದಾನವು ಎಷ್ಟು ಜಪ ತಪ ಹೋಮವುಮತ್ತೆ ಎಷ್ಟು ತೀರ್ಥಯಾತ್ರೆ ಫಲಿಸಿತು ಕೃಷ್ಣ ಬಂದನೆಂದು ಈಗ ಕೃಷ್ಣ ಮನೆಗೆ ಬಂದನು 3 ಧಿಟ್ಟೆರೈವರು ಕೃಷ್ಣನಂಘ್ರಿಯ ಮುಟ್ಟಿ ಮನದಲ್ಲಿಟ್ಟರುಕೃಷ್ಣ ಮನೆಗೆ ಬಂದನೆಂದುಎಷ್ಟು ಹರುಷ ಬಟ್ಟರು ಅವರು 4 ಏಳು ಜನ್ಮದ ಸುಕೃತದಿಂದ ಈ ವೇಳೆ ಒದಗಿತೆಂದನು ರಾಯ ಕೇಳ ರುಕ್ಮಿಣಿ ಭಾವೆ ಬಂದದ್ದು ಹೇಳಲ್ವಶವೆಎಂದನುರಾಯ ಹೇಳಲ್ವಶವೆ ಎಂದನು 5 ಪಾದ ಕಾಣದೆ ನಿಲ್ಲಲಾರೆವೆಂದರುಕ್ಷಣ ನಿಲ್ಲಲಾರೆವೆಂದರು ಚಲ್ವ ರಂಗನ ಬದಿಲೆ ಬಂದು ನಿಲ್ವೆವೀಗ ಎಂದನು ರಾಯ 6 ಏಸು ಜನ್ಮದ ಸುಕೃತದಿಂದ ರಾಮೇಶಬಂದನೆಂದನು ಸರ್ವೇಶ ಬಂದನೆಂದನು ವಾಸುದೇವರ ಪಾದಕಾಂಬುವೆ ಈ ಸಮಯದೊಳು ಎಂದನುರಾಯ 7
--------------
ಗಲಗಲಿಅವ್ವನವರು
ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ ಸೃಷ್ಟಿಯೊಳಗೆ ನಾ ಬೀರಲ್ಯಾ ಪ ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ. ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ ತನಯನಗಿದ್ದುದ ಹೇಳಲ್ಯಾ ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1 ದನುಜ ಭಂಜನನಾದ ‌ಘನ ಮಹಿಮನೆ ಮಾಗ ಧನಿಗಂಜಿ ಓಡಿದ್ದು ಹೇಳಲ್ಯಾ ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ ಅನುಗನಾಗಿದ್ದದ್ದು ಹೇಳಲ್ಯಾ ನಾನು 2 ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ ಮಿತವಾಗಿ ಕದ್ದದ್ದು ಹೇಳಲ್ಯಾ ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ ಸತಿಯರ ಕೂಡಿದ್ದು ಹೇಳಲ್ಯಾ ನಾನು 3 ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ ಸತಿಗೊಶನಾದದ್ದು ಹೇಳಲ್ಯಾ ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4 ಭೂತಳದೊಳು ದೇವತೆಗಳೊಡÀನೆ ಇಂಥ ರೀತಿಲಿ ಚರಿಸಿದ್ದು ಹೇಳಲ್ಯಾ ಭೀತಿರಹಿತ ಜಗನ್ನಾಥವಿಠ್ಠಲನೆ ಅ ದ್ಭುತ ಮಹಿಮನೆಂದು ಹೇಳಲ್ಯಾ ನಾನು 5
--------------
ಜಗನ್ನಾಥದಾಸರು
ರಾಯ ಕಳುಹಿದ ರಂಗ ರಾಯ ಕಳುಹಿದ ಪ್ರಿಯಭಾವೆ ರುಕ್ಮಿಣಿಯರಪ್ರೇಮಭಾಳೆ ನಿಮ್ಮ ಮ್ಯಾಲೆ ಪ. ಕೇಳೋರಾಯ ನಿಮ್ಮ ಮ್ಯಾಲಿ ಬಹಳ ಪ್ರೇಮಕೃಷ್ಣರಾಯ ಹೇಳಲ್ಪಶವೆಮುಯ್ಯ ತಂದು ಏಳು ದ್ವಾರ ದಾಟಿ ಬಂದು1 ಚಂಚಲಾಕ್ಷಿ ಅರಸಿಯರು ನಿಮಗೆ ಪಂಚಪ್ರಾಣ ಕೃಷ್ಣರಾಯ ಕೆಂಚಿ ರುಕ್ಮಿಣಿಮುಯ್ಯ ತಂದುಮುಂಚಿ ಬಾಗಿಲಮನೆಯೊಳು ಇಳಿದರು 2 ಕುಂತಿದೇವಿಯರ ಅರಮನೆಗೆ ಚಿಂತಾಮಣಿಯ ತಾನೆ ಬಂದ ಎಂಥ ಸುಕೃತರಾಯ ನಿಮ್ಮಇಂಥ ಭಾಗ್ಯ ಎಲ್ಲಿ ಕಾಣೆ 3 ಸುದ್ದಿ ಕೇಳಿ ಧರ್ಮರಾಯ ಗದ್ಗದಿ ನುಡಿಯನೆ ನುಡಿದಾನಮುದ್ದು ಮುಖವ ನೋಡಿಪಾದಕೆ ಬಿದ್ದು ಧನ್ಯರಾದೆವಮ್ಮ 4 ಅಂದ ಮಾತು ಕೇಳಿರಾಯ ನಂದ ಬಟ್ಟು ನಂದ ಭಾಷ್ಪಬಿಂದು ಉದುರಿ ಬಿಗಿದು ಕಂಠಛಂದದಿ ರೋಮಗಳು ಉಬ್ಬಿ 5 ಇಂದು ಭದ್ರೆ ದ್ರೌಪತಿಗೆ ತಂದರಮ್ಮ ರುಕ್ಮಿಣಿ ಮುಯ್ಯಆನಂದದಿಂದ ಭಾವೆ ಕೃಷ್ಣಇಂದು ನಿಮ್ಮ ಅರಮನೆಗೆ 6 ಎಷ್ಟು ಸುಕೃತರಾಯ ನಿಮ್ಮ ಧಿಟ್ಟ ರಾಮೇಶತಾನೆ ಬಂದ ಅಷ್ಟ ಸೌಭಾಗ್ಯದ ಮುಯ್ಯ ಶ್ರೇಷ್ಠ ತೋರೋದಮ್ಮ ಸಭೆಯು 7
--------------
ಗಲಗಲಿಅವ್ವನವರು
ಮಂಡೆಬಾಗಿಕರವಮುಗಿವೆ ಕಾಯೊ ಹರಿಹರಿ |ಪುಂಡರೀಕನಯನ ಮರೆಯಬೇಡವೊ ಹರಿಹರಿ ಪಕರಿವರದನೆ ಸರ್ವಾಂತರ್ಯಾಮಿ ಹರಿಹರಿ |ಕರುಣಾಸಾಂದ್ರ ತರುಣಿ ಮಾನಕಾಯ್ದ ಹರಿಹರಿ ||ಶರಧಿಸುತೆಯ ರಮಣ ದೀನಬಂಧು ಹರಿಹರಿ |ಅರಿಯೆ ನಿನ್ನನುಳಿದು ಕಾಯ್ವರನ್ನು ಹರಿಹರಿ 1ಮೀನನಾಗಿ ವೇದಗಳನು ತಂದೆಹರಿಹರಿ|ಆ ನಗವನು ಪೊತ್ತು ಅಮೃತವೆರೆದೆಹರಿಹರಿ||ನೀನೇ ವರಾಹನಾಗಿಯವನಿಯ ತಂದೆಹರಿಹರಿ|ದಾನವನುದರವ ಬಗೆದು ಅಂದುಹರಿಹರಿ 2ಚಿಕ್ಕ ರೂಪದಿಂದ ಬಲಿಯ ತುಳಿದೆಹರಿಹರಿ|ಸೊಕ್ಕಿದರಸುಗಳನು ಸವರಿಬಿಟ್ಟೆಹರಿಹರಿ||ರಕ್ಕಸರನು ಕೊಂದು ಸತಿಯ ತಂದೆಹರಿಹರಿ|ಅಕ್ಕರದಲಿ ಪಾರಿಜಾತ ತಂದೆಹರಿಹರಿ3ಅಂಬರವನು ತೊರೆದೆ ಬೌದ್ಧನಾಗಿ ಹರಿಹರಿ |ಕುಂಭಿಣಿಯೊಳು ಕುದುರೆಯೇರಿ ಮೆರೆದೆಹರಿಹರಿ||ಶಂಬರಾಂ ಜನಕ ಧರ್ಮತನಯಹರಿಹರಿ|ಅಂಬುಜಾಸನಾದಿ ದಿವಿಜವಂದ್ಯಹರಿಹರಿ4ಶೌರಿರಘುಜ ಮುನಿಜ ಪ್ರಾಣೇಶ ವಿಠಲಹರಿಹರಿ|ಸಾರಿದ ಶರಣರಿಗೆ ಕಲ್ಪತರುವೆಹರಿಹರಿ||ಘೋರದುರಿತವನಕೆ ಧನಂಜಯನೆ ಹರಿಹರಿ |ಭಾರನಿನ್ನದೆವೆ ಹೇಳಲ್ಯಾಕೆಹರಿಹರಿ 5
--------------
ಪ್ರಾಣೇಶದಾಸರು