ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ನೋಡಬಲ್ಲಿರೆ ದಿವ್ಯ ಉಡುಪಿ ಕ್ಷೇತ್ರ ಸತ್ಪಾತ್ರ ಪ. ಶ್ರೇಷ್ಠ ಸದ್ಗುರು ಚರಣ ಕಮಲಗಳಿಗಭಿನಮಿಸಿ ಅಷ್ಟು ದೇವತೆಗಳಿಗೆ ಅಭಿವಂದಿಸಿ ಮುಟ್ಟಿ ಹಿರಿಯರ ಚರಣ ಮಹದಾಜ್ಞೆ ಸ್ವೀಕರಿಸಿ ಪಟ್ಟ ಬ್ರಹ್ಮನ ಪದಕೆ ಸಿರಿಹರಿಗೆ ಎರಗಿ 1 ಎಷ್ಟು ಜನ್ಮದ ಫಲವೊ ಈ ಯಾತ್ರೆ ಕೈಕೊಳಲು ಶ್ರೇಷ್ಠ ಶ್ರೀ ಮಧ್ವಮುನಿ ಮತದಿ ಜನಿಸಿ ದಿಟ್ಟ ವೈಷ್ಣವರಾದ ಭಕ್ತಸಂಗವ ಕೂಡಿ ಬಿಟ್ಟು ಮನ ಕಲ್ಮಷಗಳೆಲ್ಲ ಮುಂದೋಡಿ2 ಭರತಖಂಡದಿ ಪುಟ್ಟಿ ವಾಯುಮತ ಪೊಂದಿದಕೆ ಹರುಷದಲಿ ಈ ಯಾತ್ರೆ ಗೈದಲ್ಲದೆ ಹರಿದು ಪೋಗದು ಜೀವದಜ್ಞಾನದಂಧತೆಯು ಪರಮ ಸುಜ್ಞಾನದಾತನ ನೋಡಬನ್ನಿ 3 ಮಧ್ವರಾಯರ ಕರುಣ ಮುದ್ದು ಕೃಷ್ಣನ ಕತೆಯು ಸದ್ವೈಷ್ಣವರ ಸಂಗ ಸನ್ಮೋದ ಲಾಭ ಹೃದ್ವನಜದಲಿಪ್ಪ ಹರಿಯ ಕಾಣಲು ಮಾರ್ಗ ಗೆದ್ದು ಭವದಬ್ಧಿ ದಾಟುವಿರಿ ನೀವಿನ್ನು 4 ಶ್ರೀ ಪತಿಯು ಬಾಲರೂಪದಿ ಇಲ್ಲಿ ನೆಲಸಿಹನು ಗೋಪಿಕಾಜನಪ್ರಿಯ ಗೋಪಿಬಾಲ ಗೋಪಾಲಕೃಷ್ಣವಿಠ್ಠಲನ ನೋಡುವ ಪುಣ್ಯ ಈ ಪರಮ ಪುರುಷನೇ ತಂದಿತ್ತನೆಂದೂ 5
--------------
ಅಂಬಾಬಾಯಿ
ಇಂದಿರೇಶನ ಪದದ್ವಂದ್ವಕಮಲ ಭಜಿಪ ಶ್ರೀ ಗುರುವರ ಭೂಪ ಪ. ಬಂದೆನು ನಿಮ್ಮ ಪದ ಸಂದರುಶನಕೀಗ ನೀಗಿರಿ ಭವರೋಗ ಅ.ಪ. ಬಂದವರಯೋಗ್ಯತೆ ಅರಿತಂಕಿತವೀವ | ಕರುಣಾಳುವೆ ದೇವ ನೊಂದೆನೀಗ ಈ ಅಜ್ಞಭವದಿ ಬಿದ್ದು | ಎಂದಿಗೆ ನಾ ಗೆದ್ದು ಇಂದಿರೇಶನ ಹೃತ್ಕಮಲದಲಿ ಕಾಂಬೆ | ಗುರುವೆ ತೋರೆಂಬೆ ಬಂದ ಬಂದ ಕಷ್ಟ ಹಿಂದು ಮಾಡಿ ಪೊರೆದು | ಕೃಪೆಗೈಯ್ಯಲಿ ಬೇಕಿಂದು 1 ಮುಖ ಕಮಲದಿ ಹೊರಡುವ ವಾಕ್ಸರಣಿಗಳು | ಗಂಗಾ ಪ್ರವಾಹಂಗಳು ಅಕಳಂಕದ ತತ್ವಾರ್ಥದಿ ನಾ ಮುಳುಗಿ | ದುರಿತದ ಭವನೀಗಿ ಸುಖ ಸಾರೂಪ್ಯದ ಮುಕುತಿ ಮಾರ್ಗ ಕಂಡೆ | ಭವ ತುಂಡೆ ಭಕುತಿ ಭಾಗ್ಯವ ನಿತ್ಯದಿ ಕರುಣಿಪುದು | ಸುಜ್ಞಾನವ ನೀಡುವುದು 2 ಇಳೆಯೊಳಿಲ್ಲ ಈ ಚರ್ಯೆ ತೋರುವವರು | ಉದ್ಧರಿಪರಿನ್ಯಾರು ಪರಿ ಕರುಣಿಪುದು | ನ್ಯಾಯವೆ ನೂಕುವುದು ಪೊಳಲೊಡೆಯನ ಪರಿಪರಿ ಮಹಿಮಾದಿಗಳ | ರೂಪ ಜಾಲಗಳ ತಿಳಿದಾನಂದಪಡುವ ಗುರುವರೇಣ್ಯ | ಪೊರೆಯ ಬೇಕೀಗೆನ್ನ 3 ಕರಿಗಿರಿ ನರಹರಿ ಪದಕಮಲಗಳನ್ನು | ಹೃದ್ವನಜದೊಳಿನ್ನು ಪರಿಪರಿ ಪೂಜಿಸಿ ಪರಮಾದರದಲ್ಲಿ | ಸಂಕರ್ಷಣನಲ್ಲಿ ಇರಿಸಿಹ ಮನವನು ನರರಿಗೆ ತೋರದಲೆ | ಚರಿಸುವ ಈ ಲೀಲೆ ಅರಿತು ಪೇಳೆ ಈ ಪಾಮರಳಿಗೆ ಅಳವೇ | ಆನಂದದಲಿರುವೆ 4 ತಂದೆ ಮುದ್ದು ಮೋಹನವಿಠಲ ದೇವ | ಹೃದ್ವನಜದಲಿ ಕಾವ ಸುಂದರ ಗೋಪಾಲಕೃಷ್ಣವಿಠ್ಠಲ ನಿಮ್ಮೊಳು | ರಮಿಸುವ ನಿತ್ಯದೊಳು ಮಂದಬುದ್ಧಿಗೆ ಇಂತು ಮತಿಯನಿತ್ತು | ಸಲಹಲಿ ಬೇಕಿಂತು ತಂದೆ ಧರೆಯೊಳು ಮತ್ತೊಬ್ಬರ ಕಾಣೆ | ಕಾಪಾಡಬೇಕೆನ್ನಾಣೆ 5
--------------
ಅಂಬಾಬಾಯಿ
ಉದ್ಧಾರ ಮಾಡಯ್ಯ ಉಡುಪಿ ನಿಲಯ ಹೃದ್ವನಜದಲಿ ನೆಲಸಿ ಅನುಗಾಲ ನಿನ ತೋರಿ ಪ. ಬಂದೆ ಬಹುದೂರದಲಿ ನಿಂದೆ ತವಚರಣದಡಿ ತಂದೆ ಮುದ್ದುಮೋಹನ ಗುರುಕರುಣದಿಂದ ಕುಂದುಗಳನೆಣಿಸದೆಲೆ ಸಿಂಧುಶಯನನೆ ಹೃದಯ ಮಂದಿರದಿ ಮನೆ ಮಾಡು ಸುಂದರಾತ್ಮನೇ 1 ಜನ್ಮಜನ್ಮಾಂತರದ ಅಜ್ಞಾನಗಳ ಕಳೆದು ಕರ್ಮಸಾಸಿರ ಕಡಿದು ಕರುಣದಿಂದ ರಮೆಯರಸನೆ ನಿನ್ನ ಅನುಗಾಲ ಸ್ಮರಿಪಂಥ ಸನ್ಮಾರ್ಗವನೆ ತೋರೊ ಸರ್ವಲೋಕೇಶ 2 ಜಪತಪಗಳೊಂದರಿಯೆ ವ್ರತ ನೇಮಗಳ ಕಾಣೆ ಉಪವಾಸದುಪಟಳವು ಗತಿ ತೋರದೆನಗೆ ಗುಪಿತಮಾರ್ಗದಿ ನಿನ್ನ ನಾಮಾಮೃತವನುಣಿಸಿ ಅಪಹಾಸಗೊಳಿಸದಲೆ ಆದರಿಸೊ ಜೀಯ 3 ಬೇಡಲೇನನು ನಿನ್ನ ಕಾಡಲೇತಕೆ ನಾನು ದಾತ ನೀ ಸರ್ವಜ್ಞನಿರಲು ಮಾಡುವೆನು ಸಾಷ್ಟಾಂಗ ಬೇಡುವೆನು ಪದದಾಸ್ಯ ನೋಡು ಕರುಣಾದೃಷ್ಟಿಯಿಂದೆನ್ನ ಕಡೆಗೆ 4 ಅಂತರಂಗದಲಿಪ್ಪ ಸರ್ವಾಂತರಾತ್ಮಕನೆ ಚಿಂತನೆಗೆ ನೆಲೆತೋರು ಚಿನ್ಮಯಾತ್ಮಕನೆ ಕಂತುಪಿತ ಗೋಪಾಲಕೃಷ್ಣವಿಠ್ಠಲನೆ ಸಿರಿ ಕಾಂತ ಕಾಪಾಡು ಕಡು ಕರುಣಿ ಮಧ್ವೇಶ 5
--------------
ಅಂಬಾಬಾಯಿ
ನೆನಿ ಮನ ಅನುದಿನದಿ ಅನಮಾನಿಸದೆ ನೀ ಪ ನೆನಿಮನ ಶ್ರೀ ಸತ್ಯಜ್ಞಾನರ ಅನಘಹೃದ್ವನಜದಲಿ ಘನ ದಿನ ಮಣಿಯವೊಲ್ ಮಿನುಗುವನ ಗುಣ ಗಣ ತನು ಮರೆದು ಕುಣಿಕುಣಿದು ಹರುಷದಿ ಅ.ಪ ಊನರು ಹರಿಗೆಂದು ಚೇತÀನರ ಅವನಾಧೀನರು ಅಹುದೆಂದು ವಿಸ್ತರಿಸಿ ಪೇಳಿದ ದಿನಪಾಲಕದೇವ ಶ್ರೀ ಪವಮಾನ ಮತ ಅಂಬುಧಿಯೊಳನುದಿನ ತೀರ್ಥರ ಮಾನದಂಘ್ರೀಯ 1 ಕಮಲಾಪ್ತಗಧೀಕವಾದ ತೇಜದಲಿ ಪೊಳೆಯುವ ಕಮಲಾಪತಿಯ ಸುಪಾದಾ ಅತಿ ವಿಮಲತನ ಹೃತ್ಕಮಲದೊಳಿಟ್ಟು ಸದಾ ಭಯಹಾರಿ ಕರದ್ವಯ ಕಮಲದಿಂ ಸೇವಿಸುತ ಮೈಮುಖ ಕಮಲ ಸಂಭವ ಪಿತನ ಪೂತನ 2 ಕೇಂದ್ರನೊಳು ಭುವಿಗಿಳಿದು ಸಜ್ಜನರ ಪೊರೆವದ ಕಿಂದ್ರಿಯಂಗಳ ಗೆಲಿದು ಸನ್ಯಾಸ ಕೊಂಡು ಇಂದ್ರ ಹರಿಹರ ಶೀತ ರಘುಕುಲ ಇಂದ್ರನಾವ ಉ ಪೇಂದ್ರ ಶಿರಿಗೋವಿಂದ ವಿಠಲನ ಭಜಿಸಿ ರಾಜ ಮ ಹೇಂದ್ರಿಯ ತನುವಿಟ್ಟ ಗುರುಪದ 3
--------------
ಅಸ್ಕಿಹಾಳ ಗೋವಿಂದ
ಮಧ್ವಾಂತರ್ಯಾಮಿ ಶ್ರೀ ಗುರು ಬಿಂಬ ಕಾಯೊ ಪ. ಹೃದ್ವನಜದಲಿ ನೆಲಸಿ ಆಜ್ಞಾನ ಹರಿಸಿ ಅ. ಸಾಟಿ ರಹಿತನೆ ನಿನ್ನ ಮುಖ ದರ್ಶನಾ ಹಾಟಕೋದರ ಮುಖರು ಅರಿಯದಂತವನನ್ನು ಕೋಟಲೆಯಭವ ಜನರು ಅರಿವದೆಂತಯ್ಯಾ 1 ತ್ರಿವಿಧ ಜೀವರ ತೆಗೆದು ಜನ್ಮದಲಿ ತೊಡಕಿಸೀ ಕರ್ಮ ಬಲೆ ಬೀಸಿ ಪವನನೈಯ್ಯನೆ ನಿನ್ನ ಮಾಯ ಮೋಡವ ಕವಿಸಿ ಭವಣಪಡಿಸಲು ಇನ್ನು ಬಿಡುಗಡೆಯದೆಂತೋ 2 ನೀನಾಗೆ ವಲಿದು ನಿನ್ನ ಭಕ್ತರನು ಕಾಯುತಿಯೊ ಮಾನಾಭಿಮಾನದೊಡೆಯನೆ ಆರ್ತಪಾಲ ಗಾನಲೋಲನೆ ನಿನ್ನ ಧ್ಯಾನ ಮೌನವನಿತ್ತು ಮಾನಸದಿ ನಿನ್ನ ತೋರೊ ದೀನ ರಕ್ಷಕನೇ3 ಅಂಗುಟದಿ ಗಂಗೆಯನು ಪೆತ್ತ ಪಾವನಪಾದ ಶೃಂಗಾರ ವಸನ ವಡ್ಯಾಣ್ಯನಡುವೂ ಅಂಗನೆಯು ವಕ್ಷದಲಿ ಹಾರಪದಕಗಳುಲಿಯೆ ಉಂಗುರದ ಬೆರಳು ಕಂಕಣ ಕಡಗ ಪಾಣೀ 4 ಕರ್ಣಕುಂಡಲ ಕಾಂತಿ ಮುಗುಳುನಗೆ ಕುಡಿನೋಟ ರನ್ನ ತಿಲಕದ ಫಣಿಯ ಮುಂಗುರುಳ ಸೊಬಗೊ ಸ್ವರ್ಣಕಾಂತಿಯ ತೇಜ ಕಡಗೋಲ ಕೈ ಸೊಬಗು ಚನ್ನಗೊಪಾಲಕೃಷ್ಣವಿಠಲ ಉಡುಪೀಶಾ 5
--------------
ಅಂಬಾಬಾಯಿ
ಮುದ್ದು ಸುರಿಯುತಾನೆ ನೋಡಿ ಕೃಷ್ಣ ಪ ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯ ಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ ಅ.ಪ ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾ ಸಾವೇರಿ ಮೊದಲಾದ ರಾಗವ ಪಾಡುತ1 ಬಲದ ಪಾದದಿ ಚೆಲುವ ಎಡದ ಪಾದವನಿಟ್ಟು ನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ 2 ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜ ಮುಕುಟ ಶಿರಶ್ಚಕ್ರ ಶೋಭಿತಮುಖ 3 ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿ ಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ 4 ಶ್ರೀ ನರಹರಿಯು ತಾ ನೆನೆಯುವರಿಗೆ ಭವ ಕಾನನದ ಭಯದ ಮನ ಶಂಕಿಸದಿರೆಂದು5
--------------
ಪ್ರದ್ಯುಮ್ನತೀರ್ಥರು