ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭಾರತೀ ಪ್ರಾರ್ಥನೆ) ಭಕ್ತ ಚಿಂತಾಮಣಿ ಭರತನರಮಣಿ ಮುಕ್ತಿಸಾಧನ ವೀಣಾಪಾಣಿ ಕಲ್ಯಾಣಿ ಪ. ವಿದ್ಯಾಮಾನಿನಿ ವಿಭವನಿದಾನಿ ಸದ್ಯೋಜಾತಸುಪರ್ಣರ ಜನನಿ ಹೃದ್ಯವರುದ್ಧನಾದ್ಯ ವಿದ್ಯಾವಿದಾರಣಿ ನೀ- ನಿದ್ದುಮನದಿ ಶುದ್ಧ ಬುದ್ಧಿಯ ಕರುಣಿಸು 1 ನಾಲಿಗೆಯೊಳು ನಿನ್ನ ಲೀಲೆಯ ತೋರೆ ಪಾಲಕರನು ಕಾಣೆ ಪವನನೊಲಿವ ಜಾಣೆ ನೀಲ ಮೇಘ ನಿಭಾನನೆ ನವ ಪ್ರವೀಣೆ 2 ಅಸು ಗಣವೆಲ್ಲ ನಿನ್ನೊಶದೊಳಗಿಹವು ಅಸಮಸಾಹಸ ವಾಯು ವಶದಿ ನೀನಿರವು ಅಸುರಾರಿ ಶೇಷಾದ್ರಿವಶೀಯ ಮೋಹದ ಚಿಕ್ಕ ಸೊಸೆಯೆ ಸಕಲಜನ ವಶಕರಿ ವರದೆ 3
--------------
ತುಪಾಕಿ ವೆಂಕಟರಮಣಾಚಾರ್ಯ