ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೀನ ಪರಿವಾರ ಪಾಹಿ ದಾತಾರ ಮಾಂ ದೇಹಿಮೇ ಚರಣಸೇವಾಂ ಪ ಬೃಂದಾವನಶೈಲವಾಸ ಪರಮಕೃಪಾಕರ ಪಾಪನಾಶ ಸುಧೀಂದ್ರ ವಿಭೂಷ ಹೃದಯೋಲ್ಲಾಸ ಅ.ಪ ಸರ್ವೇಶ ವೆಂಕಟೇಶ ಗುರುವರ ಸುಖಧಾಮ ಸುರರಂಜನ ಅಖಿಲ ಬೃಂದಾಳಿಭೀಮ ಶ್ರೀರಾಮ ಪರಿಭಾಷಾ ಮನಿವೇಶ ಜಿತಸೋಮ 1 ಪ್ರಾಣೇಶಸುತ ಭಜನ ಸತತ ವಿರಾಜ ಪರಿ ಪೂರ್ಣದರ್ಶನ ನಿರಂತರದಾಯಕ ಮುನಿಪುಂಗವ ಹರಿಣ ಸಾರಾಂಗ 2 ಮಂಗಳ ಚರಣ ತುರಂಗ ಗಂಗಾಮೃತ ಪೂರ್ಣತೀರ್ಥ [ತುಂಗಾತೀರ ನಿವಾಸಿನೀಂ] ಮಾಂಗಿರಿರಂಗ ಸಂಪ್ರೀತ ಮಾಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುಕ್ತನಾವನೋ ಜೀವನ್ಮುಕ್ತನಾವನೋ ಪ ಮುಕ್ತನಾವನಿವರ ಪಾದಾಸಕ್ತನಾಗಿ ಸರ್ವಕರ್ಮ ಭಕ್ತಿಯಿಂದ ನೀಡಿ ವಿಷಯಾಸಕ್ತನಾಗದವನಿಗಿನ್ನ ಅ.ಪ ಉದಯಕಾಲದಲ್ಲಿ ಎದ್ದು ನದಿಯಸ್ನಾನಮಾಡಿ ಇವರ ಪದುಮಸಮಪಾದಯುಗಳ ಹೃದಯದಲ್ಲಿ ಭಜಿಪಗಿನ್ನ 1 ವನಿತೆ ಧಾನ್ಯ ಧನುವು ತನಯ ಪ್ರಾಣ ಇವರ ಪಾದವನಜಕರ್ಪಿಸಿರುವಗಿನ್ನ 2 ಊಟ ಕೂಟ ನೋಟಮಾಟ ಪಾಠ ಆಟ ಕಾಟ ಇವರ ಉದಧಿ ದಾಟುವಾವಗಿನ್ನಮತ್ತೆ 3 ಉಕ್ತ ಕರ್ಮದಲ್ಲಿ ಮನ ಸಕ್ತನಾಗಿ ಹರಿಯ ಪಾದ ಭಕ್ತಿಯಿಂದ ಭಜಿಸಿ ಪಾಪಮುಕ್ತನಾಗುವವಗಿನ್ನ 4 ಶಕ್ತಿ ಇದ್ದರೊಳಗೆ ಹರಿಯ ಭಕ್ತಜನರ ಭಜಿಸಿ ಸರ್ವೋ ವಿಭೂತಿ ಮನದಿ ವ್ಯಕ್ತಮಾಡಿದವಗಿನ್ನ 5 ಮೋದತೀರ್ಥ ಶಾಸ್ತ್ರಸಾರ ಸ್ವಾದ ಮನದಿ ತಿಳಿದು ಅವರ ಹಾದಿಹಿಡಿದು ಬುಧರ ದಿವ್ಯ ಪಾದಯುಗಳ ಭಜಿಪಗಿನ್ನ 6 ಶಿರದಿ ಇದ್ದ ಹರಿಯ ರೂಪ ಅರಿದು ಮನಸಿನಿಂದ ನಿತ್ಯ ಶಿರದಿ ಕಾರ್ಯಮಾಡಿ ತಾನು ಹಿರಿದು ಹಿಗ್ಗುವಗಿನ್ನ 7 ನೇತ್ರಮೊದಲಾದ ಸರ್ವಗಾತ್ರದಲ್ಲಿ ಇರುವ ತೀರ್ಥ ಕ್ಷೇತ್ರಮೂರ್ತಿ ತಿಳಿದು ತನ್ನ ಗಾತ್ರನಿರ್ಮಲ ಮಾಳ್ಪಗಿನ್ನ 8 ಈಶ ಹರಿಯು ಸರ್ವ ಜೀವ ದಾಸರೆಂದು ತನ್ನ ಹೃದಯೋ ಪಾಸನಾವ ಮಾಡಿ ವಿಷಯ ಆಶೆಬಿಟ್ಟು ಇರುವಗಿನ್ನ 9 ಎನು ಮಾಳ್ಪ ಕರ್ಮವೆಲ್ಲ ಶ್ರೀನಿವಾಸ ಮಾಳ್ಪನೆಂದು ಜ್ಞಾನದಿಂದ ಸರ್ವರಲ್ಲಿ ಧ್ಯಾನಮಾಳ್ಪ ಮನುಜಗಿನ್ನ 10 ಶ್ವಾನ ಗೋವು ದ್ವಿಜ ಮತ್ತೆ ಅನಿ ಮೊದಲು ಸರ್ವರಲ್ಲಿ ಜ್ಞಾನಗಮ್ಯ ತಾನು (ತಾನೆ) ಸಮಾನನೆಂದವಗಿನ್ನ 11 ಅಮೃತ ವಿಷವು ಎಲ್ಲ ಸ್ವಾದು ಸಮವೆಂದು ಅಲ್ಲಿ ಇಚ್ಚೇ ಮಾಡದವಗಿನ್ನ 12 ವೃತ್ರಸೂದನನುಜ ಸರ್ವಕರ್ತೃ ಎಂಬವಗಿನ್ನ 13 ಪಾದ ದೂತ ನಾನು ಎಂದು ನಿತ್ಯ ಪಾತಕಾರ್ಯ ಮಾಡಿದಾಗ್ಯು ಪೂತನೆನಿಪನವನಗಿನ್ನ 14 ಸಿಟ್ಟು ಶೋಕ ಹರ್ಷ ಮೋಹ ಸುಟ್ಟು ಗುರುಜಗನ್ನಾಥ ವಿಠಲನ್ನ ಭಜಿಸಿ ಜಗದಿ ಶಿಷ್ಟ ನಾಗಿರುವಗಿನ್ನ 15
--------------
ಗುರುಜಗನ್ನಾಥದಾಸರು
ಸಂತರ ನೋಡಿರೈ ಅನಂತನ ಪಾಡಿರೈ | ತಂತುವಿಡಿದು ನಿಶ್ಚಂತದಿ ಮುಕ್ತಿಯ | ಪಡೆದವರಾ ನಿಂದವರಾ ಪ ದ್ವಿತಿಯೋ ಭಾಗೀರಥಿಯೋ | ಹರಿಪ್ರಸಾದವಕೊಂಬುವ ಸಂತರ | ಉದರೋ ಶ್ರೀ ಕೇದಾರೋ | ಹೃದಯೋ ವೇದದ್ಭುಧವೋ | ಕಂಠೋ ಭೂವೈಕುಂಠೋ ಮ 1 ಕರವೋ ಕಾಶಿಪುರವೋ | ವರವೋ ರಾಮೇಶ್ವರವೋ | ಕಿವಿಯೋ ಶಾಸ್ತ್ರದ ಗವಿಯೋ | ಅಮೃತ ಸದನೋ 2 ಹರಿಪದಧ್ಯಾಯಿಸಿ ನೋಡುವ ಸಂತರ | ನಯನೋ ಸ್ವಸುಖದಯನೋ | ಹರಿನಿರ್ಮಾಲ್ಯವನಾಘ್ರಾಣಿಪನಾ | ಶಿಕವೋ ಆವಂತಿಕವೋ | ಧರೆಯೊಳು ಮತ್ತೊಂದನ್ಯಕ ಯರಗದ | ಹಣಿಯೋ ಮುತ್ತಿನ ಮಣಿಯೋ | ಶಿರವೋ ಕಂಚಿಪುರವೋ 3 ಪರರುಪಕಾರ ಬಾಳುವ ಸಂತರ | ಇರವೋ ಕಲ್ಪತರುವೋ | ಧರೆಯೊಳು ಮಾಡುವ ಸಂತರ ವ್ಯವಹಾ | ರಗಳೋ ಹರಿಶೇವೆಗಳೋ | ನುಡಿಯೋಭವದಿಕ್ಕೆಡಿಯೋ | ಹರಿಪ್ರೇಮದಿ ತುಳಕ್ಯಾಡುವ ಜಲಬಿಂ | ದುಗಳೋ ಭಕ್ತಿಯ ಮುಗಳೋ 4 ನುಡಿಯೋ ಸದ್ಗತಿಯಡಿಯೋ | ಭ್ರಮವಿಷಯಕ ಹಚ್ಚದೆ ಕುಂದದಲಿಹ | ಮನವೋ ನಂದನವನವೋ | ಕಮಲಾಕ್ಷನು ಸಂತರ ಆಜ್ಞಾ | ಧಾರಕನೋ ನೆರೆಪಾಲಕನೋ | ಕ್ರಮವರುಹಿದ ಗುರುಮಹಿಪತಿ ನಂದನ | ಪ್ರಿಯನೋ ಕರುಣಾಲಯನೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು