ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಪದ ಆರುತಿಯ ಮಾಡುವೆನೆ ಮಾರಜನನಿಯೆ ಲಕ್ಷ್ಮೀ ಪ ಭಂಗಾರದ ತಾಟಿನೊಳು ಶೃಂಗಾರದಾರುತಿ ಪಿಡಿದುರಂಗನಂಗನೀಯ ಲಕ್ಷ್ಮೀ ಮಂಗಳ ಪದವಪಾಡಿ 1 ಮುತ್ತಿನಾರತಿ ನಿನಗೆ ಎತ್ತಿನಿಂತೆನೆ ತಾಯಿಭಕ್ತಹೃದಯೆ ಇತ್ತಕಡೆ ನೋಡೆ ದೇವಿ 2 ಇಂದಿರೇಶನ ರಾಣಿ ಸುಂದರ ಸರೋಜವದನೆಇಂದುರಂಗ ರಾಮಕೃಷ್ಣರನ್ನು ತೋರಿಸಮ್ಮಾ ರಾಮೆ 3
--------------
ಇಂದಿರೇಶರು
ತುಳಸೀ ಸ್ತುತಿ ಮಾಧವ ಹೃದಯೆ ಪ ಪೀತಾಂಬರಧರ ಶ್ರೀಹರಿಜಾಯೆ ಅ.ಪ [ಸುಂದರ] ಮಣಿಮಯಸದನೆ ಪರಮಪಾವನೆ ಇಂದೀವರದಳ ಕೋಮಲನಯನೆ 1 ಪ್ರೇಮರಸಾನ್ವಿತೆ ಗುಣಭರಿತೇ ಶ್ರೀಮಾಂಗಿರಿವರ ರಂಗಮಹಿತೇ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಮೇಶ್ವರಿ ಪಾರ್ವತಿಸತಿ ವರದೆ ಶ್ರೀವನದುರ್ಗಾ ಪ. ತರುಣಾರುಣಶತಕೋಟಿ ಕರುಣಾನನೆ ಮಾಂ ಪಾಹಿ ಅ.ಪ. ಜಗದ್ಭರಿತೆ ಜನಾರ್ದನಿ ಜಗದೇಕ ಶರಣ್ಯೆ ನಿಗಮಾಗಮಶಿರೋರತುನೆ ಮಿಗೆ ಕೈಯುಗಮಂ ಮುಗಿವೆಯಗಜೆ ಶ್ರೀಜಗದಂಬಿಕೆ 1 ಸದಾನಂದೆ ಸರೋಜಾಕ್ಷಿ ಸದಾವಳಿಸನ್ನುತೆ ತ್ರಿದಶಾರ್ಚಿತೆ ತ್ರಿಗುಣಾತ್ಮಕಿ ಸದಯೆ ಹೃದಯೆ ಮುದದಿಂ ಪದನಂಬಿದೆ ಪದುಮಾಲಯೆ2 ವಿರಾಜಿಸುವ ವಿಶ್ವೋತ್ತಮ ವರಚಿತ್ರಪುರೇಶ್ವರಿ ಹರಿಲಕ್ಷ್ಮೀನಾರಾಯಣಿ ಕರುಣಾಭರಣೆ ಶರಣೋದ್ಧರಣೆ ಶ್ರೀಚರಣಾಂಬುಜೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಬನ್ನಿ ಮಹಂಕಾಳಿ ಜಯವ ನೀಡಮ್ಮ ಮನ್ನಿಸಿ ಬಾಲಗೆ ಪ ನಿನ್ನ ನಂಬಿಕೊಂಡು ಕೆನ್ನೆಯೋಳ್ಮುಡಿವರ ಬನ್ನ ಕಳೆದು ಜಯವನ್ನು ಕೊಟ್ಟು ನೀ ಭಿನ್ನವಿಲ್ಲದೆ ಮನ್ನಿಸಿ ಸಲಹು ಪನ್ನಂಗವೇಣಿಯೆ ಉನ್ನತ ಕರುಣಿ 1 ಪರಮ ಪವಿತ್ರಳೆಂದು ಪರಮ ಪ್ರೀತಿಯಿಂದ ಹರನು ಬಿಡದೆ ನಿನ್ನ ಶಿರದಿ ಧರಿಸಿಕೊಂಬ ಪರಮಮಹಿಮ ನಿನ್ನನರಿನು ಪೇಳುವೆನಾ ತರಳನ ಮೊರೆ ಕೇಳೆ ಕರುಣಿ ಶುಭಕರಿ2 ನೇಮದಿ ಭಜಿಪೆ ನಿಸ್ಸೀಮೆ ನಿರಾಮಯೆ ಕ್ಷೇಮಶರಧಿ ತ್ರಿಭೂಮಿಜಯಂಕಾರಿ ಈ ಮಹಭವನಿಧಿ ಕ್ಷೇಮದಿ ಗೆಲಿಸು ಶ್ರೀ ರಾಮನಾಮ ಪ್ರಿಯೆ ಕೋಮಲಹೃದಯೆ 3
--------------
ರಾಮದಾಸರು
ರೌದ್ರಿ ಭದ್ರಿ ಮಹಕ್ಷುದ್ರ ಛಿದ್ರಿ ಹಿ ಮಾದ್ರಿಯುದ್ಭವಿಗೆ ನಮೋ ನಮೋ ಪ ರುದ್ರರೂಪೆ ದಾರಿದ್ರ್ಯಮರ್ದನಿ ರುದ್ರನರ್ಧಾಂಗಿಗೆ ನಮೋ ನಮೋ ಅ.ಪ ನಿಗಮಾತೀತೆ ಮಹದಾಗಮನುತೆ ತ್ರೈ ಜಗದ ಮಾತೆಗೆ ನಮೋ ನಮೋ ಸುಗುಣಸಂತಜನರಘನಾಶಿನಿ ಸುಖ ಸ್ವರ್ಗಾಧಿಕಾರಿಗೆ ನಮೋ ನಮೋ 1 ಮೃಡಮೃತ್ಯುಂಜನನೆಡದೊಡೆಯೊಳು ಕಡುಸಡಗರವಾಸಿಗೆ ನಮೋ ನಮೋ ದೃಢತರ ಭಕ್ತರ ದೃಢದ್ವಾಸಿನಿ ಜಗ ದೊಡೆಯ ಮೃಡಾಣಿಗೆ ನಮೋ ನಮೋ 2 ಕಮಲೆ ಕಾತ್ಯಾಯಿನಿ ಉಮೆ ಶಿವೆ ಸಾವಿತ್ರಿ ಕಮಲನೇತ್ರೆಗೆ ನಮೋ ನಮೋ ಸುಮನ ಸೌಭಾಗ್ಯ ಶಮೆ ದಮೆ ದಯಾನ್ವಿತೆ ವಿಮಲ ಚರಿತ್ರೆಗೆ ನಮೋ ನಮೋ 3 ಭಂಡದನುಜಕುಲ ರುಂಡ ಚೆಂಡಾಡಿದ ಪುಂಡ ಉದ್ದಂಡೆಗೆ ನಮೋ ನಮೋ ಖಂಡ ಕಿತ್ತು ಖಳರ್ಹಿಂಡು ಭೂತಕಿತ್ತ ಚಂಡಿ ಚಾಮುಂಡಿಗೆ ನಮೋ ನಮೋ 4 ರಕ್ತಬೀಜರೆಂಬ ದೈತ್ಯರ ಮದ ಮುರಿ ದೊತ್ತಿದ ವೀರೆಗೆ ನಮೋ ನಮೋ ಮತ್ತೆ ಶುಂಭರ ಶಿರ ಮುತ್ತಿ ಕತ್ತಿರಿಸಿದ ಶಕ್ತಿ ಶಾಂಭವಿಗೆ ನಮೋ ನಮೋ 5 ಓಂಕಾರರೂಪಿಣಿ ಹ್ರೀಂಕಾರಿ ಕಲ್ಯಾಣಿ ಶಂಕರಿ ಶರ್ವಾಣಿಗೆ ನಮೋ ನಮೋ ಮ ಹಂಕಾಳಿ ನತಸುಖಂಕರಿ ಪಾರ್ವತಿ ಶಂಕರನರಸಿಗೆ ನಮೋ ನಮೋ 6 ಶೌರಿ ಔದರಿಯ ಶಾರದೆ ಶ್ರೀಕರಿ ಶೂರ ಪರಾಂಬೆಗೆ ನಮೋ ನಮೋ ಪಾರಾವಾರ ದಯೆಕಾರಿ ನಿರಾಮಯೆ ಧೀರ ಚಿದ್ರೂಪೆಗೆ ನಮೋ ನಮೋ 7 ಉಗ್ರರೂಪಿ ಭವನಿಗ್ರಹ ದುಷ್ಟ ಸ ಮಗ್ರ ಹರಿಣಿಗೆ ನಮೋ ನಮೋ ಆಗ್ರಭಕ್ತರಿಷ್ಟ ಶೀಘ್ರ ಕೊಡುವ ಜೈ ದುರ್ಗಾದೇವಿಗೆ ನಮೋ ನಮೋ 8 ಹೈಮಾವತಿಯೆ ನಿರ್ಮಾಯೆ ಮೂರುತಿ ಕೋಮಲ ಹೃದಯೆಗೆ ನಮೋ ನಮೋ ಭೀಮಪರಾಕ್ರಮಿ ರಾಮದಾಸಜನ ಪ್ರೇಮಪೂರ್ಣಿಗೆ ನಮೋ ನಮೋ 9
--------------
ರಾಮದಾಸರು
ಸರಸ್ವತಿಮಾತೆ ಪರತರಚರಿತೆ ವರ ಪುಣ್ಯನಾಮಳೆ ಪ ಕರುಣಿಸಿವರವ ಕರುಣಾಕರಳೆ ಕರುಣದಿ ಕಾಯೆ ಅ.ಪ ಪದುಮಾಸನನ ಸುವದನ ನಿವಾಸೇ ತ್ರಿಭುವನಾರ್ಚಿತೆ ಸತತವಾಗಿ ಸುದಯೆ ಹೃದಯೆ ಸ್ಥಿರ ಸದುಮತಿ ಪಾಲಿಸೆ ಪರಮದಯದಿ ಪದುಳಂಗೆ ದಯದಿ 1 ವೀಣಾಧರಿ ಸುವಾಣಿ ಕಲ್ಯಾಣಿ ಮಾನಿನಿ ಬ್ರಹ್ಮನ ಜನನಿಯೆ ಜಗದಜಾಣೆ ಸುತ್ರಾಣೆ ನಿಜ ಜ್ಞಾನಾಧಿಕಾರಿ ಜ್ಞಾನವ ನೀಡೆ ಮಾಣದೆ ಎನಗೆ 2 ಪಾಮರತನ ನಿವಾರಣೆಗೊಳಿಸೆ ಪ್ರೇಮದೆನಗೆ ಸುಜಾಣೆ ನುಡಿಗಲಿಸಿ ವಿಮಲೆ ಅಮಲಸುಖ ಗಮಕದಿ ನೀಡ್ವೆ ಭುವಿಜಪತಿ ಶ್ರೀರಾಮನ ಸೊಸೆಯೆ 3
--------------
ರಾಮದಾಸರು
ಪರಮೇಶ್ವರಿ ಪಾರ್ವತಿಸತಿವರದೆ ಶ್ರೀವನದುರ್ಗಾ ಪ.ತರುಣಾರುಣಶತಕೋಟಿಕರುಣಾನನೆ ಮಾಂಪಾಹಿಅ.ಪ.ಜಗದ್ಭರಿತೆ ಜನಾರ್ದನಿಜಗದೇಕ ಶರಣ್ಯೆನಿಗಮಾಗಮಶಿರೋರತುನೆಮಿಗೆ ಕೈಯುಗಮಂ ಮುಗಿವೆಯಗಜೆ ಶ್ರೀಜಗದಂಬಿಕೆ 1ಸದಾನಂದೆ ಸರೋಜಾಕ್ಷಿಸದಾವಳಿಸನ್ನುತೆತ್ರಿದಶಾರ್ಚಿತೆ ತ್ರಿಗುಣಾತ್ಮಕಿಸದಯೆ ಹೃದಯೆ ಮುದದಿಂ ಪದನಂಬಿದೆ ಪದುಮಾಲಯೆ 2ವಿರಾಜಿಸುವ ವಿಶ್ವೋತ್ತಮವರಚಿತ್ರಪುರೇಶ್ವರಿಹರಿಲಕ್ಷ್ಮೀನಾರಾಯಣಿಕರುಣಾಭರಣೆ ಶರಣೋದ್ಧರಣೆ ಶ್ರೀಚರಣಾಂಬುಜೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ