ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲೋದ್ಭವನ ತಾಯೇ | ನಮಿಸುವೆನ್ನನು ಕಾಯೇ ಕಮಲಾಕ್ಷ ಹರಿ ಪ್ರೀಯೆ | ಚಿತ್ಪ್ರಕೃತೇ ಪ ಓಂಕಾರ ವಾಚ್ಯನ | ಶಂಕೆ ಇಲ್ಲದೆ ಭಜಿಸೇಸಂಖ್ಯೆ ರಹಿತ ರೂಪಳೇ |ಯಂಕಾಮಯೇ ತಂತಮು | ಗ್ರಂ ಕೃಣೋಮೆಂದು ಬಿಂಕದಿ ಶ್ರುತಿ ಪೇಳ್ವುದೇ 1 ಆಪಾಂಗ ವೀಕ್ಷಣ ಸೃಷ್ಠಿ | ವ್ಯಾಪಾರಂಗಳ ಹರಿಕೃಪೆಯಿಂದ - ಗೈಯ್ಯುವಳೇ |ಅಪವಿತ್ರರಿಗೆ ಯೋಗ್ಯ | ವಿಪರೀತ ಮತಿಯಿತ್ತು ಕುಪಥಾಂಧಂತದು ಪ್ರಾಪಕೇ 2 ಕಂಬು ಚಕ್ರಾಂಕಿತನ | ಅಂಬುಜಾಕ್ಷನ ಹೃದಯಾಂಬರದಲಿ - ತೋರಿಸೇ |ಇಂಬಿಟ್ಟು ಮನ ಬಯಕೆ | ತುಂಬಿಸುವುದು ಅನ್ಯಹಂಬಲ ನೀ ಕೊಡದೇ3 ಸನ್ನುತ | ಮೋಕ್ಷದಾಯಕ ಪರಮಾಕ್ಷರ ಶ್ರೀ ಹರಿಯ |ಈಕ್ಷಿಪ ಸುಖ ಕೊಡು | ಪೇಕ್ಷಿಸದಲೆ ತಾಯೆಲಕ್ಷಣವಂತೇ - ಗುಣವಂತೇ 4 ಕರವೀರ ಪುರದರಿಸಿ | ಶರದಿ ಸಂಭವೆ ಎನಿಸಿವರವ ನೀಡುತ ಪೊರೆವೇಗುರು ಗೋವಿಂದ ವಿಠ್ಠಲ | ಚರಣ ನೀರೇರುಹಕರುಣಿಸಿ ಸಲಹೇ - ಮಾತೇ 5
--------------
ಗುರುಗೋವಿಂದವಿಠಲರು
ಕಾಯೆ ಕರುಣಾಂಬುಧಿಯೆ ತೋಯಜನಯನೆ ಪ ಕಾಯೆ ಕರುಣಿ ಗಿರಿರಾಯನ ಪಟ್ಟದ ಜಾಯೆ ಭವದಲಿ ನೋಯಗೊಡದಲೆನ್ನ ಅ.ಪ ಅಂಬುಜಾಂಬಕೆ ಅಂಭ್ರಣಿ ಸುಗುಣ ಸನ್ಮಣಿ ಕಂಬುಚಕ್ರಾಂಕಿತಪಾಣಿ ಅಂಬೆ ನಿನ್ನಯ ಪಾದಾಂಬುಜ ನಂಬಿದೆ ಬಿಂಬನ ಎನ ಹೃದಯಾಂಬರದಲಿ ತೋರೆ 1 ಕಾಮಿತಾರ್ಥ ಪ್ರದಾತೆ ಜಗದೊಳಗೆ ಖ್ಯಾತೆ ಕಾಮಿತ ಸಲಿಸೆನ್ನ ಮಾತೆ ಪ್ರೇಮದಿ ನಿನ್ನನು ನೇಮದಿ ಭಜಿಪೆನ್ನ ಧಾಮದೊಳಗೆ ನೀ ಕ್ಷೇಮದಿ ನಿಲಿಸೀ 2 ದೂತಜನಕತಿ ಪ್ರೀತೆ ಈ ಜಗಕೆ ಮಾತೆ ಸೀತೆ ಪಾಲ್ಗಡಲಾ ಸಂಭೂತೆ ದಾತ ಗುರುಜಗನ್ನಾಥ ವಿಠಲಗೆ ಪ್ರೀತ ಸತಿಯೆ ಸುಖವ್ರಾತವ ಸಲಿಸಿ ನೀ 3
--------------
ಗುರುಜಗನ್ನಾಥದಾಸರು
ಸಾರ್ಥಕವು ವರ ವೈಷ್ಣವ ಜನುಮವು ಸಾರ್ಥಕವು ಪ ಸಾರ್ಥಕವಿದು ಪುರುಷಾರ್ಥಕೆ ಸಾಧನಅ.ಪ ಸ್ವಾಮಿದಾಸ ಭಾವವನು ನಿರಂತರ ನಿಯಮದಿಂದ ಬೋಧಿಸುತಿರುವ ಕಾಮಕ್ರೋಧಗಳ ಜರಿದು ಶ್ರೀ ಹರಿಯಲಿ ಪ್ರೇಮವೇ ಪರಮ ಸಾಧನವೆಂದರಿತರೆ 1 ದಾನ ಸ್ನಾನ ಜಪ ಸಂಧ್ಯಾತ್ರಿಯಗಳು ಜ್ಞಾನಕೆ ಸಾಧನವೆಂಬುದರಿಯುತ ಕಾಣಲು ಹರಿಯನು ಹೃದಯಾಂಬರದಲಿ ಕರ್ಮ ಸವೆಯುತಿರೆ 2 ವಿಶ್ವ ಜನನ ಸ್ಥಿತಿ ಪ್ರಳಯಗಳಿಗೆ ಸದಾ ಈಶ್ವರ ತಾನು ಪ್ರಸನ್ನನಾಗಲು ಶಾಶ್ವತವಾದ ಸ್ವರೂಪಾನಂದವ ಸ್ವಪ್ನಯೋಗ್ಯ ರೀತಿಯಲಿ ಪಡೆಯುವುದೇ 3
--------------
ವಿದ್ಯಾಪ್ರಸನ್ನತೀರ್ಥರು