ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರಾಧನೆ ಪರಮಾನಂದ ಪ ತಾರಾನಾಥ ಕುಲೋದ್ಭವ ಕೃಷ್ಣನ ಅ.ಪ ಘೋರವು ಈ ಸಂಸಾರವೆನ್ನುವುದು ದೂರಿನ ನುಡಿಯಿದು ಬಾಳುವಗೆ ನೂರು ವರುಷಗಳ ಮೀರಿ ಜೀವಿಸಲು ಕೋರಿಕೆ ಬರುವುದು ಧೀರ ಜನರಿಗೆ 1 ನಿರ್ಮಲ ದೇಹವು ನಿರ್ಮಲ ಹೃದಯವು ನಿರ್ಮಲ ನಡೆನುಡಿ ಕರ್ಮಗಳು ಮರ್ಮಜ್ಞರ ಮಾರ್ಗಗಳಲಿ ಸ್ವೋಚಿತ ಧರ್ಮಗಳಲಿ ವಿಶ್ವಾಸವಿರುವವರಿಗೆ 2 ಅನ್ನವಿರುವವರಿಗೆ ತಿನ್ನಲಾಗದು ತಿನ್ನಬಲ್ಲವರಿಗೆ ಅನ್ನವು ಸಿಗದು ಘನ್ನ ಮಹಿಮನ ಪ್ರಸನ್ನತೆಯಿಂದಲಿ ಅನ್ನ ಪಡೆದು ತಿನ್ನಲು ಬಲ್ಲವರಿಗೆ 3
--------------
ವಿದ್ಯಾಪ್ರಸನ್ನತೀರ್ಥರು
ಉಡುಪಿ ಪರಿಸರದ ದೇವತೆಗಳು ಕಣ್ವ ಋಷಿ ತಪಗೈದ ಅಜ್ಜರ್ಕಾಡೆಂಬಲ್ಲಿ ಅವನಿಗೊಲಿದಿರುವ ದುರ್ಗೆ ವಾಸವಾಗಿಹಳು ಒಳಕಾಡು ಎಂಬ ತಾನವೆ ಚಂದ್ರನ ತಪೋ ಭೂಮಿ ಇಲ್ಲಿಯೇ ಸಕಲ ವಿದ್ಯಾಲಯವಾಯ್ತು 132 ಬೆಳ್ಳಿ ಮಂಚದ ಕಾಲುಗಳು ನಾಲ್ಕು ಎಂಬಂತೆ ಆರ್ಮೊಗನ ರೂಪಗಳು ನಾಲ್ಕು ದೆಸೆಗಳಲಿ ಮಾಂಗೋಡು ತಾಂಗೋಡು ಆರಿತೋಡು ಮುಚ್ಲಿಕೋಡು ನಾಮದಿಂ ಬೆಳಗುವವು ಷಷ್ಠಿದಿನದಂದು 133 ಕಡಿಯಾಳಿ ಎಂಬಲ್ಲಿ ಮಹಿಷಮರ್ದಿನಿಯಾಗಿ ದುರ್ಗಾಲಯವು ಉಡುಪಿ ಪೂರ್ವದ್ವಾರದಲ್ಲಿ ಪುತ್ತೂರು ಬೈಲೂರು ಬಡಗು ತೆಂಕು ದೆಸೆಯಲ್ಲಿ ಕೃಷ್ಣ ಸೇವೆಗೆ ದುರ್ಗೆ ಕಟಿಬದ್ಧಳಿಹಳು 134 ಸತ್ಯ ನುಡಿಯಲ್ಲಿರಲಿ ಧರ್ಮ ನಡೆಯಲ್ಲಿರಲಿ ಸ್ವಾಧ್ಯಾಯದಲಿ ಎನಗೆ ಎಚ್ಚರವದಿರಲಿ ಅಜ್ಞಾನದಂಧಕಾರದ ದಿಕ್ಕಿನಿಂದೆನ್ನ ನಿನ್ನ ಬೆಳಕಿನ ಕಡೆಗೆ ಕರೆದೊಯ್ಯು ದೇವಾ 135 ಪರಶುರಾಮಕ್ಷೇತ್ರ ಹುಟ್ಟುಭೂಮಿಯು ಎನಗೆ ಪರಶುರಾಮನು ನೀನೆ ನಿನ್ನ ಕ್ಷೇತ್ರವಿದು ಪರಮಹಂಸಾಖ್ಯಯತಿಗಳ ಮಾನಸಹಂಸ ಸೋಹಂ ಎನ್ನುವ ಬ್ರಹ್ಮ ಎನ್ನೊಳಗೆ ಇರುವೆ 136 ಕೃಷ್ಣಾರ್ಪಣವದಿಲ್ಲದಾವುದು ಫಲ ಕೊಡದು ಅದರಿಂದ ಕೃಷ್ಣನಿಗೆ ಕೃತಿಯನರ್ಪಿಸುತ ಸಾಲೋಕ್ಯ ಸಾಮೀಪ್ಯವನ್ನು ಬಯಸುವೆ ನಾನು ಯೋಗ್ಯತಾನುಗುಣವಾಗಿ ಫಲವ ಕೊಡು ಹರಿಯೆ137 ಪರಶುರಾಮನು ರಾಮ ಪರಶು ರಾಮನು ಕೃಷ್ಣ ರಾಮದಾಸನು ನಾನು ಕೃಷ್ಣದಾಸನಿಹೆ ಬರೆದ ಕೃತಿಯಿಂದ ನೀನ್ ಸುಪ್ರಸನ್ನತೆ ಪಡೆದು ಭಕ್ತಿ ಮುಕ್ತಿಗಳ ಕೊಟ್ಟು ರಕ್ಷಿಸು ಶ್ರೀಶ 138 ಉಡುಪಾನ್ವಯಜ ನಾನು ಉಡುಪಾನ್ವಯದ ನೀನು ಉಡುಪಿ ಹುಟ್ಟೂರೆನಗೆ ನೀನುಡುಪಿಗತಿಥಿ ಮಧ್ವ ಹೃದಯವು ನಿನಗೆ ವಾಸದ ಸ್ಥಾನವಿರೆ ಮಾಧ್ವಕೋಟಿಗಳಲ್ಲಿ ಕೀಟನಾಗಿಹೆ ನಾನು 139 ವಿಷ್ಣು ಪದದೊಳಗಿರುವ ಜ್ಯೋತಿಲೋಕದ ಒಡೆಯ ಆ ಜ್ಯೋತಿಲೋಕಕ್ಕೆ ಕರೆದೊಯ್ಯುತ ನನ್ನ ಭಕುತರಿಗೆ ಮುಕುತಿ ಕೊಡುವುದೆ ನಿನ್ನ ಸಂಕಲ್ಪ ಅದರಿಂದ ನಿನ್ನನ್ನು ಶರಣು ಶರಣೆಂಬೆ 140 ಚಾಂದ್ರಮಾನದ ಪಿಂಗಳಾಖ್ಯ ಸಂವತ್ಸರದಿ ಚೈತ್ರ ಮಾಸದ ನವಮಿಯ ದಿನದಲ್ಲಿ ಕಾಲ ಇದನರ್ಪಿಸುತ ನಾನು ಕೃತಕೃತ್ಯನಾದೆ ಶ್ರೀಕೃಷ್ಣ ಕಾಪಾಡು 141
--------------
ನಿಡಂಬೂರು ರಾಮದಾಸ
ಕೃಷ್ಣನ್ನ ಶ್ರೀ ಕೃಷ್ಣನ್ನ ಕೊಳಲಿನ ಧ್ವನಿಯ ಕೇಳಿ ನಾ ಸತಿ ಪ. ಮಧುರ ಮಧುರ ಸ್ವರ ಸುದತಿಯೆ ಕೇಳೆ ಚದುರನು ಊದುತÀಲಿಹನೆ ಸದನದಿ ನಿಲ್ಲಲು ಹೃದಯವು ಒಲ್ಲದು ಚದುರೆಯೆ ಕರೆದೊಯ್ ಎನ್ನಾ ಮನಮೋಹನ ಮದಸೂದನ ಕೃಷ್ಣನ್ನೆಡೆಗೆ ಪೋಗದೆ ನಿಲ್ಲಲು ತಾಳಲಾರೆನೆ ಕೇಳ್ ಸಖಿ ಪೋಗುವ ಬಾರೆ ಚಂದ್ರಮುಖಿ 1 ಕಂದ ಕರುಗಳ ಆನಂದದಿ ಕಾಯ್ವ ಆನಂದವ ನೋಡುವ ಬಾರೆ ಸುಂದರ ಕೊಳಲಿಗೆ ಚೆÉಂದದಿ ಸರ್ಪಾ ನಂದದಿ ತÀಲೆತೂಗುವುದೆ ಮೃಗ ಜಡತೆಯಿಂ ನಿಂತು ಕೇಳುವ ಗಾನ ನೋಡುವ ಬಾರೆ ಎನ ಮನಸೆಲ್ಲಿಹುದೆ ಕೇಳ್ ಸಖಿ ಶ್ರೀ ಶ್ರೀನಿವಾಸನೊಳ್ ಚಂದ್ರಮುಖಿ 2
--------------
ಸರಸ್ವತಿ ಬಾಯಿ
ಗುಣವಂತರ ಗುಣವ ಗುಣವಂತನರಿವನುಗುಣಹೀನ ಗುಣವಂತನ ಗುಣವೇನ ಬಲ್ಲನೋ ಪ ಕಮಲಗಳ ಹೃದಯ ಭ್ರಮರಕ್ಕೆ ತಿಳಿಯುವುದುಕಮಲಗಳ ಗುಣ ಕಪ್ಪೆಗೇನು ತಿಳಿವುದೋವಿಮಲರಾ ಹೃದಯ ವ್ಯುತ್ಪನ್ನರಿಗೆ ಹೊಳೆಯುವುದುಕುಮತಿಗಳಿಗೆ ಕೋಮಲರ ಘನತೆಯೆಂತರಿವುದೋ 1 ಕೆಚ್ಚಲೊಳಿರುತಿಹುದು ಕರುವಿಗೆ ದೊರಕುವುದುಕೆಚ್ಚಲ ಕಚ್ಚಿರುವ ಉಣ್ಣೆಗದು ದೊರೆವುದೋಸಚ್ಚರಿತ್ರರ ಬೋಧೆ ಸತ್ಪುರುಷಗಂಟುವುದುಹುಚ್ಚ ತಾ ಬದಿಯಿದ್ದರೆ ಪರಿಣಾಮವೇನಹುದೋ 2 ಸಾಧುಗಳ ಮಹಿಮೆಯ ಸಾಧುಗಳ ಹೃದಯವುಸಾಧುಗಳ ಬೋಧೆಯ ಸಾಧು ಸಹವಾಸಬೋಧ ಚಿದಾನಂದ ಬಗಳೆಯಾದವರಿಗರಿವುವಾದಿಯಾಗಿಹ ಮೂರ್ಖರಿಗೆ ಗುಣವೇನು ತಿಳಿಯುವುದೋ 3
--------------
ಚಿದಾನಂದ ಅವಧೂತರು
ದೇವ ಏನು ಬೇಡುವುದಿಲ್ಲ ನಾನು ನಿನ್ನ ಬೇಡುವೆ ಭವಭವದಿದನೆ ಕೊಡು ನೀನು ಪ ಶಿರ ನಿನ್ನ ಚರಣದಿ ಎರಗಲಿ ಕರ್ಣ ಹರಿಕಥೆಕೀರ್ತನೆ ಶ್ರವಣ ಮಾಡಲಿ ಪರಮಾತ್ಮಮೂರ್ತೆನ್ನ ನೇತ್ರ ನೋಡಲಿ ನಾಸಿಕ ಘ್ರಾಣಿಸಲಿ 1 ವÀದನ ನಿನ್ನನು ಸ್ತುತಿಸಲಿ ನಿನ್ನ ಜಿಹ್ವೆ ಕೊಂಡಾಡಲಿ ಹೃದಯವು ತವನಾಮ ತುಂಬಿಕೊಳ್ಳಲಿ ಮಧುಸೂದನನ ಪ್ರಸನ್ನತೆ ಮನವು ಬಯಸಲಿ 2 ಕರ ನಿನ್ನ ಚರಣಮಂ ನಿರುತ ಪೂಜಿಸಲಿ ದ್ವಯ ಚರಣಗಳುನುದಿನ ಯಾತ್ರೆಗೈಯಲಿ ಪರಿಪರಿ ತವಲೀಲೆಯೊಳು ಬುದ್ಧಿ ನಿಲ್ಲಲಿ ಎನ್ನ ಶರೀರ ಶ್ರೀರಾಮನ ಚರಣಕೊಪ್ಪಲಿ 3
--------------
ರಾಮದಾಸರು
ದೇಹವ ದಂಡಿಸಲೇಕೆ ಮನುಜ ಪ ಶ್ರೀ ಹರಿನಾಮವ ಸ್ನೇಹದಿ ಭಜಿಸೆಲೊ ಅ.ಪ ಭಕುತಿಯೆ ಸಾಧನ ಹರಿಯ ಪ್ರಸಾದಕೆ ಮುಕುತಿಗೆ ಹರಿಯ ಪ್ರಸಾದವೆ ಸಾಧನ ರುಕುಮಿಣೀರಮಣನು ಪೂರ್ಣ ಸ್ವರಮಣನು ಭಕುತಿಗೆ ಸಜ್ಜನ ಸಂಘವೆ ಸಾಧನ 1 ವಾದÀ ವಿವಾದವು ಆಗಿ ಮುಗಿಯಿತೊ ಮೋದತೀರ್ಥರ ಮತ ಸಾಧನ ಕೈಪಿಡಿ ಓದಿ ನೀ ಸುಲಭದಿ ತತ್ವಗಳರಿಯುತ ಮಾಧವನಂಫ್ರಿಯ ಹರುಷದಿ ಭಜಿಸೆಲೊ 2 ಹೃದಯವು ನಿರ್ಮಲವಾಗುವ ತನಕ ಮದ ಮತ್ಸರಗಳ ಸದೆ ಬಡಿಯುತಲಿ ಎದೆಯಗೆಡದೆ ಸದಾ ಹರಿಯ ಭಜಿಸೆಲೊ ಸದಮಲಗುಣನು ಪ್ರಸನ್ನನಾಗುವನು 3
--------------
ವಿದ್ಯಾಪ್ರಸನ್ನತೀರ್ಥರು
ಮುರಳಿಯ ಧ್ವನಿಯು ಕರೆಯುತಲಿರುವುದು ಪೋಗುವ ಬಾರೆ ಸಖಿ ಪ ಪೋಗುವ ಬಾರೆ ಸಖಿ ಬೇಸರ ನೀಗುವ ಬಾರೆ ಸಖಿ ವಿಧ ವಿಧ ಭೋಗವ ಪಡುವ ಸಖೀ ಅ.ಪ ವರವಂಶದಿ ಜನಿಸಿದ ಭಾಗ್ಯವ ಈ ಮುರಳಿಯು ತಂದಿತು ಕೇಳೆ ಸಖಿ ಪರಮ ಪ್ರೇಯಸಿ ಇವಳಂತರಂಗವ ಮರೆ ಮಾಚುವ ರಸಿಕಾಗ್ರಣಿ ಕೃಷ್ಣನ 1 ಕ್ಷೀರಶರಧಿತನಯಳ ವೈಭವ ಈ ನೀರಸಳಿಗೆ ಇದು ಅಚ್ಚರಿಯು ಕೋರಿ ಚುಂಬಿಸುವ ಕೃಷ್ಣನಧರ ಸುಧೆ ಧಾರೆಯೊ ಸೂರೆಯೊ ಶೌರಿಯ 2 ಹುಲ್ಲೆ ಹುಲಿಯ ಭಯ ತೊರೆದು ಕೇಳುತಿದೆ ಕಲ್ಲು ಕರಗಿ ಮೃದುವಾಗಿರುವಂತೆ ನಲ್ಲೆ ಎನ್ನ ಹೃದಯವು ಕರಗಿತು ನಾ ನಿಲ್ಲಿ ಎನ್ನ ಮನವಲ್ಲಿ ಪ್ರಸನ್ನನ 3
--------------
ವಿದ್ಯಾಪ್ರಸನ್ನತೀರ್ಥರು