ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚನ್ನಕೇಶವ ಇನ್ನೇನಿನ್ನೇನಿನ್ನು ಯನಗಿನ್ನೇನಿನ್ನೇನಿನ್ನು ಪ. ಚನ್ನಕೇಶವನಿವನನ್ನು ಹೃದಯದೊಳ್ ಚೆನ್ನಾಗಿ ನೆಲಸಿರಲಿನ್ನೇನ ಬೇಡುವೆ 1 ಭುವಿಜಾತೆಯೆನ್ನ ಮಾತೆ - ಭುವಿನಾಥನೆನ್ನ ತಾತ ಇವರೆನ್ನೊಳಿರುತಿರೆ ಭವಕ್ಲೇಶ ಪರಿದಿರೆ 2 ಅಂಡಜವಾಹನಾಖಂಡಲಾರ್ಚಿತನ ಪುಂಡರೀಕಾಕ್ಷನ ಕಂಡು ಕೊಂಡಾಡಿದೆ 3 ಧರೆಯೊಳಧಿಕ ಶೇಷಗಿರಿಯೊಳು ನೆಲಸಿರ್ಪ ವರದ ಶ್ರೀನರಹರಿ ವರದನೆನ್ನೊಳಿರೆ 4
--------------
ನಂಜನಗೂಡು ತಿರುಮಲಾಂಬಾ
ಧೀಮಂತರ ದಯಪಡೆದು ಮಾಧವನ ಪದ ವಿಡಿದು | ಪ್ರೇಮದಿ ಭಜಿಸೆನ್ನ ಮನವೇ | ಪ ಕಾರ್ಮುಗಿಲದುಗ್ಧರಾಶಿಯನು ಶೃತಿಗೆ ಬೀಳಲ್ಪ | ಯೋರ್ಮನದಿ ಸಂತೋಷಿಪಂತೇ ನಿರ್ಮಳಾಂಗಣ ಕಥೆಯ ಘೋಷವೇನು ಕೇಳಿ ಅತಿ | ಪೆರ್ಮೆಯಿಂದಲೆ ನಲಿದು ಬಾಳು 1 ನೋಡಲಾಕ್ಷಣ ತನ್ನ ಮಾತೆಯನು ಮುದದಲಿಂ | ಲೋಡಿ ಬಪ್ಪುವ ಶಿಶುವಂತೆ | ರೂಢಿಯೊಳು ಸಜ್ಜನರ ಕಂಡಾಕ್ಷಣಕ ತನುವ | ನೀಡಿ ಸಾಷ್ಟಾಂಗದಿಂದೆರಗು 2 ಮಿಗಿಲಾಸೆಯನು ತ್ಯಜಿಸಿ ದಾಗಸದ-ಲಿಂಬರ್ವ | ನಿಗಳುಂಬ ಚಾತಕನ ತೆರದಿ | ಮುಗಳೆ ದಯದಿಂದ ಸಜ್ಜನ ಮುಖದಿ ಬಪ್ಪಬೋ | ಧೆಗಳ್ಪೊತನು-ವಾನುಗ್ರಹಿಸು ಧರಿಸು 3 ಮಣಿ ದೀಪವಾದಂತೆ ಸ | ಪಾದ ಕಮಲಗಳಾ | ಅತ್ಯಧಿಕ ಹರುಷದಿಂ ಹೃದಯದೊಳ್ ಧರಿಸಲ್ಕೆ | ಮೊತ್ತದ ಜ್ಞಾನ ತೊಳಗುವದು 4 ಗರ ಹೊಡೆದು | ಧರಿಯೊಳಗ ಗರ್ವಿಸಲಿ ಬ್ಯಾಡಾ | ಸಿರಿಯು ತೊಲಗಲು ಕುನ್ನಿಯಂತನ್ನ ದಾಸಿಂಗೆ | ಪರರು ಮನವಡಿದು ಬಳಲದಿರು 5 ಕಮಲಜನ ಪದಕ ಕತ್ತದೀವರ ಅನುಮತದ | ವಿಮಲಮಾರ್ಗ ಹೊಲಬ ನರಿದು | ಅಮಲೂಧ್ರ್ಪ ಪೌಂಡ್ರ ಹರಿ ಲಾಂಛನವು ತುಳಸಿ ಸರ ಕ್ರಮದಿಂದ ಧರಿಸಿ ಸುಖಿಯಾಗು 6 ಹರಿಪರದೈವವೆಂದು ಅರಿತು ಭಾವದಿ ನಿಂದು | ಹರಿ ಕೋಟಿ ನಿಭಕ ಮಿಗಿಲೆನಿಸಿ | ಮೆರೆವ ಮಹಿಪತಿ ನಂದನೋಡಿಯ ನಾಮಂಗಳನು | ಸ್ಮರಿಸಿ ಇರಳ್ಹಗಳ ಕೊಂಡಾಡು 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮಿಪೆನು ಗುರುರಾಯನೆ | (ನಾ ನಿನ್ನನು)| ನಮಿಪೆನು ಗುರುರಾಯನೆ ಪ ಕುಮತಿಯಾಗಿರ್ದೆನ್ನ ಮಮತೆಯೊಳ್ ಪೊರೆಯೆಂದು ಅ.ಪ ಪಾದ ಕಂದನ ಸಲಹೆಂದು 1 ಇನ್ನು ನೀ ವೇದಾಂತವನ್ನು ಬೋಧಿಸೆಂದೆನುತ 2 ದೆನ್ನಯ ನಿಜದರಿವ ಚೆನ್ನಾಗಿ (ಪೇಳೆಂದು) 3 ಸಾಗರದೊಳಗೈಕ್ಯವಾಗುವಂತೆಸಗಯ್ಯ 4 ಗುರು ಪಾರ್ವತೀಶ ಸದ್ಗುರುವೆ ತ್ರೈಜಗದೀಶ 5 ಇಂದೆನ್ನ ಹೃದಯದೊಳ್ ನಿಂದು ಮೈದೋರೆಂದು 6 ನಾದ ಸ್ವರೂಪನೆಯಾದ ಸದಾನಂದ 7
--------------
ಸದಾನಂದರು
ನೀಲವರ್ಣ ಗೋಪಾಲನು ಎಲ್ಲೆ ಕಾಣಿರೇನೇ ವ್ರಜದ ಒಳಗೆ ಲೀಲಿ(ಲೆ ಇ?) ದೇನೆ ನಮ್ಮ ಸಂಗಡ ಹೇಳೇ ಗೋಪ್ಯಮ್ಮ 1 ಚಿಣ್ಣಿಕೋಲು ಚೆಂಡು ಬುಗುರಿ ವೇಣುಕೊಳಲಧ್ವನಿಯ ಆಲಿಸಿ ಓಣಿ ಓಣಿ ಹುಡುಕಲು ನಂದ- ಸೂನು ಎಲ್ಲಿಹನೆ 2 ಗೋಪಿ ಗೋಪಾಲ ಕೂಡಿ ಧಾಳಿ ಮಾಡ್ವುದು ದಾರಿಗೆ ತರವೆ ಗೂಳಿಮಾಡಿದಿ ಗೋಕುಲದೊಳು ನಿನ- ಗ್ಹೇಳುವುದಿನ್ನೇನೆ 3 ನವನೀತ ದಧಿ ಘೃತ ಸುರಿದೋಡಲು ನೀ ಸುಮ್ಮನೆ ಬಿಟ್ಟು ಯಾತಕೆ ಹಿಡಿತಾರದೆ ದೂರ್ಹೇಳುವಿ ಈ ಮಾತು ನಿರ್ಧಾರವೇನೆ 4 ಹೆತ್ತತಾಯಿ ನೀ ಬಳಲುವಿ ಎಂದು ಸಿಕ್ಕೊರಳಿಗೆ ಕಟ್ಟಿಸಿ ಕೊಂಡೆಳೆದು ಸಿಕ್ಕುವುದುಂಟೇನೆ 5 ವಜ್ರದ್ಹಾರ ಪದಕ ಹÉೂನ್ನರಳೆಲೆ ಗೆಜ್ಜೆ ಕಾಲಂದಿಗೆ ಝಳಿ ಝಳಿಸುತ ಮೂರ್ಜಗದೊಳು ಮುದ್ದಿರಲೀಕೂಸ್ಹೊರ- ಗ್ಹೆಜ್ಜೆನಿಡುವುದೇನೆ 6 ಶಿಶುವೇನೇ ಅಸುವ್ಹೀರಿ ಪೂತನಿ ಕೇಶಿ ಧೇನು ತೃಣಾವರ್ತ ಶಗಟಾಸುರ ಬಕನ ಕೊಂದವಗೆಂತು ನೀ ಅರ್ಭಕ- ನೆಂತಾಡುವಿಯೆ 7 ಹೆಡೆಯ ತುಳಿದ ಕಾಳಿಂಗನ ಮಡುವ ಕಲಕಿದ ಕಡುವಿಷಕಂಜದೆ ಹುಡುಗರ ಕಾರ್ಯವಿದೇನೆ ಬಿಡು ನಿನ್ನ ಬಡಿವಾರವು ಸಾಕೆ 8 ಕಾಡುಕಿಚ್ಚನು ನುಂಗಿದ ನಿನಸುತ ಬೇಡಿಯಜ್ಞದೊಳುಂಡನ್ನವನು ಸಾಲದೆ ಇಂದ್ರನ ಪುರವುಂಡ್ಹೊಟ್ಟೆ ಗಿ- ನ್ನೀಡೆಲ್ಲಿಹುದ್ಹೇಳೆ 9 ಶಕÀ್ರನ ಬಲಿ ಅನ್ನವ ದಕ್ಕಿಸಲವ ಸಿಟ್ಟಲಿ ಸಪ್ತದಿನ ಮಳೆಕರೆಯೆ ಎತ್ತಿ(ದ) ಗೋವರ್ಧನಗಿರಿ ನಮ್ಮದಾರಿ- ಚ್ಚೆಗೆ(?) ಸಲಹುವನೆ 10 ಕಾತ್ಯಾಯಿನಿ ವ್ರತಮಾಡೋ ಸ್ತ್ರೀಯರ ವಸ್ತ್ರಗಳನೆ ಕದ್ದು ಮರನೇರಿದ ಬತ್ತಲೆ ಚಪ್ಪಾಳಿಕ್ಕುತ ತಿರುಗಲಿನ್ನೆ- ಷ್ಟಂತ್ಹೇಳುವೋಣೆ 11 ಚೋರತನವೊಂದಲ್ಲದೆ ಕಲಿತಿಹ ಜಾರತನ ಕೇಳರಿಯೆ ಯಶೋದ ನೀರುತಿದ್ದುವ ಎಲ್ಲರ ಒಗತನಕಿವ ಪಾರುಗಾಂಬುವುದ್ಹ್ಯಾಗೆ 12 ಗಂಡರುಳ್ಳ ಗರತಿಯೇರೆನ್ನದೆ ಪುಂಡೆಬ್ಬಿಸಿ ಬೃಂದಾವನದೊಳಗೆ ಬಂದಮ್ಮನ ಹಿಂದಡಗಲು ನಿನಗೆ ಮುದ್ದಿನ್ಯಾರಿಗೆ ಹೇಳೆ 13 ಮಾಧವ ತಾ ಕೊಳಲೂದು- ತಿರೆ ನಾವು ಮೋಹಿತರಾಗಿ ಹೋದ ಸುದ್ದಿಗಳೊಂದ್ಹೇಳೆ ಲಜ್ಜೆ ಬಾ- ಹೋದೆ ನಮಗಿನ್ನು 14 ಬಳೆ ಬಾಪುರಿ ಕಂಕಣ ಚೂಡ್ಯ ಗಳನು ತೊಡೆಗÉೀರಿಸಿ ಕಾಲಂದಿಗೆ ಕರದಿ ಕಾಲುಂಗುರ ಕಿವಿಗಿಟ್ಟು ಬಾವುಲಿ ಪಾದದಿ ರಚಿಸಿದೆವೆ 15 ಹೊನ್ವಾಲೆ ಹೊಸಕೊಪ್ಪು ಮೂಗುತಿ ಚಿನ್ನದ ಒಡ್ಯಾಣದ ನಡುವಿಟ್ಟು ಕಣ್ಣಿಗೆ ಕಸ್ತೂರಿಬಟ್ಟು ಕುಂಕುಮ ಕಾಡಿಗೆ ನೊಸಲಿಗೆ ರಚಿಸಿ 16 ಬಿಟ್ಟಮಂದೆ ಕಟ್ಟದೆ ಕರುಗಳ ತೊಟ್ಟಿಲೊಳಗಿಟ್ಟು ಶಿಶುವಿಗೆ ಕಣ್ಣ ್ಹ(ಣ್ಣಿ ಹ?)ಚ್ಚಿ ನಾವೆಚ್ಚರಿಕಿಲ್ಲದೆ ಪೋದೆವೆ ಅಚ್ಚುತನಿದ್ದೆಡೆಗೆ 17 ಬಂದವರನೆ ಮನ್ನಿಸದೆ ನಿನಸುತ ಅ- ಲ್ಲಿಂದೊಬ್ಬಳ ಹೆಗಲೇರಿಸಿ ಪೋಗೆ ಹಿಂದಾಲ್ಪರಿದ್ವನವನಿತೆಯರ್ಕೂಡಿ ಬಂದೆವ್ಯಮುನೆ ದಡಕೆ18 ಇಬ್ಬರಿಬ್ಬರ ನಡುವೆ ನಿನಸುತ ಒಬ್ಬನಾಗಿ ಜಲದ ಒಳಗೆ ಅಬ್ಬರದಿಂದಾಡಲು ಜಲಕ್ರೀಡೆ ಕ- ಣ್ಗ ್ಹಬ್ಬವಾಗಿರೆ ಜನಕÉ 19 ಗೋಪಿ ಗೀತವಿದೆಂದು ನಿನಸುತ ಖ್ಯಾತಿ ಮಾಡಿದ ಜಗದ ಒಳಗೆ ಯಾತಕೆ ಕೂಸೆಂದಾಡುವೆ ತಿಳಿ ನಿನ್ನ ಪ್ರೀತಿ ಮೋಹಗಳೆಂದು 20 ಅಂಕದಲ್ಯಾರೋಪಿತನಾಗೆ ಶÀಂಕಿಲ್ಲದೆ ಹಾರ ಭಾರವನೆ ತಾಳಿದೆ ಬಿಂಕವ ಬಿಡು ಮಗನೆಂದಾಡುವುದು ಈ ಮಂಕು ಬುದ್ಧಿಗಳಿನ್ನು 21 ಮಗುವೇನೆ ಹೃದಯದೊಳ್ಹದಿನಾಲ್ಕು ಜಗವ ಕಂಡು ನೀ ತೆಗೆಯದೆ ನೇತ್ರ ಜಗಜಗಿಸುವ ಚಂದ್ರಮನಂಗೈಯಲಿ ಈ ಬಗೆ ನಿನಗರಿಕಿಲ್ಲೆ 22 ಗೋಪಾಂಗನೆಯರಾಡುವ ಮಾತು ಕೋಪದಿ ಕೇಳುತಲೆಶೋದೆ ಗೋಪಾಲಕೃಷ್ಣ ನಿನ್ನೆಲ್ಲಿ ಕಳುಹಲೆಂದಳು 23 ದುಷ್ಟ ಕಾಲನೇಮಿ ಕಂಸನು ನಿನ್ನ ಕರೆಯಕಳುಹಲು ಕರಕರೆಯಾಕೋ ನಾರಾಯಣ ನಿನ್ನಟ್ಟುವೆ(ವು) ಮಧುರೆಗೆ ನಾವೆಲ್ಲರು ಕೂಡಿ 24 ದುಷ್ಟತನವ ಬಿಡೋ ಭೀಮೇಶ- <ಈಔಓಖಿ s
--------------
ಹರಪನಹಳ್ಳಿಭೀಮವ್ವ
ಸಾಧಿಸದೆ ಹೊಳೆಯ ಹೃದಯದೊಳಿಹ್ಯ ಗೆಳಿಯ ಧ್ರುವ ಸಾಧಿಸಬೇಕೊಂದು ಪಾಲ ಭೇದಿಸಿ ನೋಡುವದ್ಹತ್ತುಪಾಲ ಎದುರಿಡುವಂತೆ ಗೋಪಾಲ ಬುಧಜನ ಪ್ರತಿಪಾಲ 1 ಸಾಧನವೆಂಬುದೆ ಸುಪಥ ಬೋಧವೆ ಸದ್ಗುರುಮಾರ್ಗ ಸ್ವಹಿತ ಸದಮಲಾನಂದಭರಿತ ಇದೇ ಶಾಶ್ವತ 2 ಸಾಧಿಸಿ ಸದ್ಗುರು ಕೃಪೆಯಿಂದ ಭೇದಿಸು ಮಹಿಪತಿ ನಿನಗಿಂದು ಚೆಂದ ಹೃದಯದೊಳ್ಹಾನ ಮುಕುಂದಬದಿಯಲಿ ಗೋವಿಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿದಾಸರ ಸಂಗ ದೊರೆಯಿತು ಎನಗೀಗ ಇನ್ನೇನಿನ್ನೇನುವರಗುರು ಉಪದೇಶ ನೆರವಾಯ್ತು ಎನಗೀಗ ಇನ್ನೇನಿನ್ನೇನು ಪಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನುತೋಯಜಾಕ್ಷನ ನಾಮ ಜಿಹ್ವೆಯೊಳ್ನೆಲಸಿತು ಇನ್ನೇನಿನ್ನೇನು 1ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನುಜಲಜನಾಭನ ಧ್ಯಾನ ಹೃದಯದೊಳ್ನೆಲಸಿತು ಇನ್ನೇನಿನ್ನೇನು 2ತಂದೆ ತಾಯೆ ಮುಚುಕುಂದವರದನಾದ ಇನ್ನೇನಿನ್ನೇನುಸಂದೇಹವಿಲ್ಲ ಮುಕುಂದ ದಯಮಾಡಿದ ಇನ್ನೇನಿನ್ನೇನು 3ಏನೆಂದು ಹೇಳಲಿ ಆನಂದಸಂಭ್ರಮಇನ್ನೇನಿನ್ನೇನುಆನಂದಗೋಪನ ಕಂದನ ಮಹಿಮೆಯ ಇನ್ನೇನಿನ್ನೇನು 4ಎನ್ನವಂಶಗಳೆಲ್ಲ ಪಾವನವಾದುವು ಇನ್ನೇನಿನ್ನೇನುಚಿನ್ಮಯ ಪುರಂದರವಿಠಲಯ್ಯ ದೊರಕಿದ ಇನ್ನೇನಿನ್ನೇನು 5
--------------
ಪುರಂದರದಾಸರು