ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದು ಕೊಂಡಾಡಿ ಸುತ್ತಿಸೆಲೊ ನಿನ್ನಾ ಪ ದಾನವಾಂತಕ ಕೃಷ್ಣ ಆನಂದ ಗುಣ ಪೂರ್ಣ ಅ.ಪ. ಮತ್ಸರೂಪಿಯೆ ನಿನ್ನ ಉತ್ಸಹದಿ ಕರೆಯಲಾಕುತ್ಸಿತನ ಸೊಲ್ಲ ನೀನೆತ್ತ ಕೇಳುವಿಯೋ |ಮತ್ಸ್ಯಕೇತನ ಜನಕ | ಮತ್ಸರವ ಕಳೆಯಯ್ಯಸಚ್ಚಿದಾನಂದಾತ್ಮ | ಚಿತ್ಸುಖಪದನೇ 1 ಕೂರ್ಮರೂಪಿಯೆಂದು | ಪೇರ್ಮೆಯಲಿ ಕರೆಯಲಾಭರ್ಮ ಗರ್ಭನ ಪಿತನೆ | ಗಿರಿಯ ಧರಿಸಿರುವೇ |ನಿರ್ಮಲಾತ್ಮಕನೆ ಯೆನಗೆ | ನಿರ್ಮಮತೆ ನೀಡಯ್ಯಾ ಊರ್ಮಿಳಾಪತಿ ಭ್ರಾತೃ | ಪರಮ ಮಂಗಳನೇ 2 ವರಹ ರೂಪಿಯೆ ನಿನ್ನ | ಕರೆಯುವುದು ಹೇಗಯ್ಯಾ ಕೋರೆ ದಾಡಿಯ ಮೇಲೆ | ಧರೆಯೆ ಧರಿಸಿರುವೇ | ವಾರೆ ನೋಟದಿ ಯೆನ್ನ | ಪರಿಕಿಸೀ ಪೊರೆಯಯ್ಯಾಧೀರ ಭೂವರಹ ವರ | ಧರಣಿ ಪರಿಪಾಲಾ 3 ನಾರಸಿಂಹನೆ ನಾನು | ಕರೆಯಲಾಪನೆ ನಿನ್ನಘೋರರೂಪವ ನೋಡಿ | ದೂರ ಸಾರುವರೋವಾರಿಜಾಕ್ಷಿಯು ಬಂದು | ಘೋರ ಪ್ರಹ್ಲಾದನ್ನಚಾರು ತವ ಚರಣದಲಿ | ಇರಿಸಬೇಕಾಯ್ತು 4 ದಧಿ | ವಾಮನನೆ ಬಾರೆಂದುಸಾಮಸನ್ಮುತ ನಿನ್ನ | ನಾಮಗಳ ನೆನೆಯೆಲಾ |ಭೂಮಿ ಬೇಡುವ ನೆವದಿ | ಬಲಿಯ ಭೂಮಿಗೆ ತುಳಿದೆಸೀಮೆ ಮೀರಿದ ಮಹಿಮ | ಮರ್ಮವಿನ್ನೆಷ್ಟೋ | 5 ಪರಶುರಾಮನೆ ನಿನ್ನ | ಕರೆಯಲಾರೆನು ನಾನುದುರುಳ ಕ್ಷತ್ರಿಯರ | ಶಿರಗಳನೆ ತರಿದೂ |ಭಾರಿ ಪರಶುವಿನಿಂದ | ವರಮಾತೆ ಶಿರ ತರಿದಿಸರಿ ಕಾಣೋ ಇದು ನಿನಗೆ | ಪರಮ ಪಾವನ್ನಾ 6 ರಾಮ ರೂಪಿಯೆ ನಿನ್ನ | ಆ ಮಹಾ ಮಹಿಮೆಗಳಸೀಮೆಗಾಣಳು ಲಕುಮಿ | ಪಾಮರನಿಗಳವೇ |ಆ ಮರಾ ಈ ಮರಾನೆಂದ ಆ | ಪಾಮರನ ಪೊರೆದುಆ ಮಹಾತ್ಮನ ಗೈದ | ಪರಿಯೆನ್ನ ಮಾಡೋ 7 ಕೃಷ್ಣ ಕೃಷ್ಣಾ ಎಂದು ಕರೆಯುವೆನೆ ನಾ ನಿನ್ನಕಷ್ಟದೊಳು ಸಿಲುಕಿರುವೆ | ಗಿರಿಯನ್ನೆ ಪೊತ್ತು |ವೃಷ್ಟಿಕುಲ ಸಂಪನ್ನ | ಕೃಷ್ಣ ಮೂರುತಿ ನೀನುಇಷ್ಟ ಭಕುತರ ಮನೋ | ಭೀಷ್ಟ ಸಲಿಸುವಿಯಾ 8 ಬುದ್ಧ ದೇವನೆ ಎನಗೆ ಸ | ದ್ಭುದ್ಧಿ ಕೊಡು ಎಂದುಬುದ್ಧಿ ಪೂರ್ವಕವಾಗಿ ನಿನ್ನ ಕರೆಯಲಾ |ಬುದ್ಧಿಯಿಂದಲಿ ನೀ | ಭೋಧಿಸಿದೆ ದುಶ್ಯಾಸ್ತ್ರಬೌದ್ಧ ನಿನ್ನನು ಪೊದ್ದು | ಬುಧರ ಪಾಡೇನೊ 9 ಕಲ್ಕಿ ಕಲ್ಕೀ ಎಂದೇ ಕರೆಯಲಾಪೆನೆ ದೇವಾಶುಲ್ಕ ಮೇಲಾಗಿಹುದು ಕಲಿಯುಗದೊಳು |ಉಲ್ಕ ಮುಖ ಮೊದಲಾದ | ಕಲ್ಕಿರಾಜರು ನಿನ್ನಕಲ್ಕ್ಯಾತ್ಮ ಸತ್ಯ ತವ | ವ್ರತವ ಮಾಳ್ಪರು ಬಿಡದೆ 10 ಸರ್ವರೂಪಾತ್ಮಕನೆ | ಸರ್ವ ವ್ಯಾಪಕ ಸ್ವಾಮಿಸರ್ವಜಿತು ಸರ್ವಾತ್ಮ ಸರ್ವೇಶನೇ |ಶರ್ವಾರಿ ವಂದ್ಯ ಗುರು | ಗೋವಿಂದ ವಿಠಲನೇಗುರು ಹೃದಂಬರದಲ್ಲಿ | ತೋರಿ ಪೊರೆಯನ್ನ 11
--------------
ಗುರುಗೋವಿಂದವಿಠಲರು
ಕೇಳಿರಿ ಕೌತುಕ ಪೇಳುವೆನೀಗ ಶೀಲ ಶ್ರೀ ಗುರುಗಳ ಕರುಣದಲಿ ಪ. ವ್ಯಾಳಶಯನ ರಂಗ ತಾಳಿ ಕರುಣಿಸಿದ ಮೇಲು ಮೇಲು ಭಕ್ತಿಯ ನೀಡುತಲಿ ಅ.ಪ. ಅರಿಯದ ದೇಶದಿ ಅರಿಯದ ಕಾಲದಿ ಅರಿಯದವಸ್ಥೆಯ ಅನುಭವವು ಸಿರಿಯರಸನ ವ್ಯಾಪಾರವಿದಲ್ಲದಡೆ ನರರಿಗೆ ಸಾಧ್ಯವೆ ನಾಡಿನೊಳು 1 ಸಂಭÀ್ರಮದಲಿ ಸಮಾರಂಭವು ಕಲೆತಿರೆ ಬೆಂಬಿಡದಲೆ ರಕ್ಷಿಸುತಿರಲು ಕುಂಭಿಣಿಯೊಳು ಸ್ಥಿರವಾದ ಪದವಿಗೆ ಅಂಬುಜನಾಭನ ಕರುಣವಿದು 2 ಅಗ್ನಿಗಳೆರಡು ಕಲೆತು ಶಾಂತವಾಗಿ ಭಗ್ನವಿಲ್ಲದ ಆನಂದ ತೋರೆ ವಿಘ್ನವಾಗದ ಕಾಲಗಳೊದಗುತ ಮಗ್ನಗೈಸಿತಾನಂದದಲಿ 3 ಚಲಿಸದ ವಸ್ತುಗಳ್ ಚಲಿಸಿತು ಮತ್ತೆ ಚಲನೆಯಿಲ್ಲದೆ ಸುಸ್ಥಿರವಾಯ್ತು ಬಲು ವಿಚಿತ್ರವು ಭೂತಲದೊಳಗಿದು ನಳಿನನಾಭನ ಸಮ್ಮತವು4 ಬಿಂಬನಾಗಿ ಹೃದಂಬರ ಮಧ್ಯದಿ ಸಂಭ್ರಮಗೊಳಿಸೆಲೊ ಶ್ರೀ ವರನೆ ನಿತ್ಯ ಇಂಬುಗೊಟ್ಟು ಕಾಯೊ ಬಿಂಬ ಶ್ರೀ ಗೋಪಾಲಕೃಷ್ಣವಿಠ್ಠಲ 5
--------------
ಅಂಬಾಬಾಯಿ
ಶಂಭು ಸ್ವಯಂಭುಗಳ ಹೃದಂಬರಕಿಂದು-ಬಿಂಬದಂತಿಹ ಕಂಬುಧರನ ನಂಬು ಮನುಜಡಂಬ ಮತವ ಹಂಬಲಿಸದೆ ಪ. ಕೃದ್ಧ ಖಳರ ಗೆದ್ದು ವೇದವೇದ್ಯವೆನಿಪ ಶುದ್ಧಸುಧೆಯಉದ್ಧರಿಸಿದ ಮಧ್ವಮುನಿ ಪ್ರಸಿದ್ಧವರಗೆ ಊಧ್ರ್ವಹರಿಯಹೊದ್ದಿ ಬದುಕು ಊಧ್ರ್ವಪುಂಡ್ರ ಶ್ರೀಮುದ್ರೆಯನ್ನುಸದ್ವ್ರತಿಯಾಗು ವೃದ್ಧರಂಘ್ರಿಪದ್ಮಕೆರಗು ಕದ್ಯಕರಗದಾದ್ವವ (?) ಬಿಡು 1 ವಿತ್ತ ಪುತ್ರಮಿತ್ರರರ್ಥಿಗೆ ಸುತ್ತ ತಿರುಗುತಿರದೆತೀರ್ಥಕ್ಷೇತ್ರಯಾತ್ರೆಗಳನು ಹೊತ್ತು ಹೊತ್ತಲಿ ವರ್ತಿಸುತಿರುಭಕ್ತರೆ ನಿನ್ನ ಮಿತ್ರರು ಹರಿಭಕ್ತಿಯ ನಿನಗಿತ್ತು ಮತ್ತೆಮುಕ್ತಿಪಥವ ಹತ್ತುವ ಸಂಪತ್ತ ನಿನ್ನತ್ತ ಮಾಡು 2 ಕೋಪವ ಕಳೆ ತಾಪವ ತಾಳು ಪಾಪದ ಬಲು ಲೇಪಕಂಜುಭೂಪರ ಸೇವೆ ಆಪತ್ತಿಹುದು ತಾಪಸರ ಸಮೀಪವ ಸೇರುಶ್ರೀಪತಿ ಹಯವದನನ ಪದದೀಪದ ಬೆಳಕಿನಲಿ ವಿಷಯಕೂಪವ ಕಳೆದಾಪರಮನಲಿ ಪರಸೇವೆಲಾ [ಪೂ]ರನಾಗು 3
--------------
ವಾದಿರಾಜ
ಶ್ರೀ ರಮಾದೇವಿ ಅಂಬೋನಿಧಿ ಹೃದಂಬರ ವಾಸಿನಿ ಅಂಬಾ ಬಾ ಬಾ ಅಂಬುಧಿಜಾ ನಮೋ ಪ ಅಂಬುಜನಾಭನ ನಿಜಸತಿ ಶ್ರೀ ಭೂ ರಥಾಂಗ ಪೂ ಕಂಬು ಮಾಲಾದಿ ಸುರೂಪದಿ ಹರಿಗೆ ನೀ ಸಮ್ಮುದದಿಂದೆ ಸುಸೇವೆಯ ಮಾಳ್ಪಳೆ ಅ ಪ ಮಂದರಗಿರಿಯಿಂದ ಸಿಂಧುವ ಮಥಿಸಲು ನಿಂದು ಪ್ರಕಟವಾದೆ ಇಂದಿರಾದೇವಿಯೆ ಕುಂದೇನಿಲ್ಲದ ಸುಂದರಗುಣನಿಧಿ ಬಂಧಮೋಚಕ ಆನಂದಸುಪೂರ್ಣ ಗೋ ವಿಂದ ಶ್ರೀ ಅಜಿತಭೂಮನನ್ನೆ ವರಿಸಿದೆ ಮಂದಜಭವ ಶಿವ ವೃಂದಾರಕನುತ 1 ಹರನ ಚಾಪವ ಶ್ರೀರಾಮನು ಮುರಿಯಲು ವರ ವನಮಾಲೆಯ ಅರ್ಪಿಸಿ ನಿಂದೆ ಸುರಮುನಿರಾಜರು ಪುರಜನರೆಲ್ಲರು ಸುರಿಯಲು ಪೂಮಳೆ ಸಂಭ್ರಮದಿಂದಲಿ ಸರಿಪರರಿಲ್ಲದ ಶ್ರೀ ರಘುರಾಮನು ಸಿರಿಜನಕಜೆ ನಿನ್ನ ಕರವನು ಗ್ರಹಿಸಿದ 2 ಭೈಷ್ಮಿ ರುಕ್ಮಿಣಿ ಸತ್ಯಭಾಮಾ ಶ್ರೀ ಭೂದೇವಿ ವಾಮಚಿನ್ಮಯೆ ಶ್ರೀ ಸ್ವಾಮಿ ಕೃಷ್ಣನ ರಾಣಿ ಹೇಮಗರ್ಭಾದಿ ಸಮಸ್ತ ಸುಜನರಿಗೆ ರಮೆ ನಿನ್ನಯ ಸುಮಂದ ಕಟಾಕ್ಷವು ಕಾಮಿತ ಫಲದವು ಮೋಕ್ಷಹೇತುವೆ ದೇವಿ ಸತಿ 3
--------------
ಪ್ರಸನ್ನ ಶ್ರೀನಿವಾಸದಾಸರು
ಸರಸ್ವತಿದೇವಿ ಗಾಯಿತ್ರಿ - ಶುಭಗಾತ್ರಿ ಪ ಪತಿ | ವೀರ್ಯಜಾತ ಶುಭಕಾಯ ಪುಮಾಭಿಧ | ಆರ್ಯನ ಪ್ರಿಯಸತಿಅ.ಪ. ವೀಣೆ ಧರಳೆ ಹರಿ | ಗಾನ ಗುಣಂಗಳಜಾಣೆಯೆ ಈ ತನು | ವೀಣೆಯಂತೆಸಗು 1 ನೀರಜಾಕ್ಷಿ ನಿನ | ಗಾರಿಲ್ಲವು ಸಮಮೂರು ಲೋಕದಲಿ | ಮುರಾರಿಯನುತೆ 2 ಕಾವ ಕೊಲ್ವ ಗುರು | ಗೋವಿಂದ ವಿಠಲನಓವಿ ಹೃದಂಬರ | ಠಾವಿಲಿ ತೋರಿಸು 3
--------------
ಗುರುಗೋವಿಂದವಿಠಲರು