ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಿಗಿರಿ ದುರ್ಗ ನಿವಾಸಾ | ದಯಾಪರಿಪೂರ್ಣ ಪೊರೆಯನ್ನ ಅನಿಶ ಪ ಶಿರಿ ಅಜಭವ ವಿಪಗೇಶಾ | ಹೃತ್‍ಸರಸಿಜ ವಾಸ ಲಕ್ಷ್ಮೀಶಾ ಅ.ಪ. ಗಜ ಬಿಸಜ ಕಿಂಜಲ್ಕದ ಯಸಳು ರಜವ ಶಿರಸಿಯೊಳಗೆ ನೀನಿರಿಸೋ 1 ಮೇಶ ಬ್ರಹ್ಮೇಶ ನಾಶವ ಗೈವೆ ಸಶೇಷಶೇಷಶಯ್ಯ ಜೀವಾದ್ಯರ ಪೋಷಾಈ ಸಮಸ್ತ ಜಗ ನಿನ್ನುದರದಿ ವಾಸಾಕೇಶಾಸುರಪಾದೀಶ ಪರೇಶನೆ ವ್ಯಾಸಾಈಶಿತವ್ಯ ತವ ದಾಸರಿಗೆಲ್ಲ ಉಪದೇಶಿಸು ಶಾಸ್ತ್ರ ವಿಶೇಷ ರಹಸ್ಯ ಮಹಿದಾಸ ಕುಶೇಶಯ ವಿಷಯ ವಿಲಾಸದಿಪೋಷಿಸು ಮನ ಮಧ್ವೇಶ ಮಹಾಪ್ರಭೋ 2 ಕರಿವರ ವರ ಶರಣಾಗತ ಪಾಲಾತರಳೆಗಿತ್ತೆ ನವ ನವ ಸೀರೆಯ ಜಾಲಾವರಸ್ತಂಭೋದಿತ ಹರಿಭಕ್ತಿ ಸುಪಾಲಾಗುರು ಗೋವಿಂದ ವಿಠ್ಠಲಾ ಕಾಲಾಸುರಪಾದಿಯ ತನು ವರ ರಥ ರೂಢ ಪು-ರಾರಿ ಭಯಹರ ಮುರಾರಿ ಮಹ ಭವತರಿ ಎನಿಸಿಹ ಸುಖ ತೀರಥ ಸನ್ಮತಧರಿಸಿಹೆ ಕಣ್ಣೆದುರಿಲಿ ನೀ ಕುಣಿಯೋ 3
--------------
ಗುರುಗೋವಿಂದವಿಠಲರು
ಕೃಷ್ಣಾ - ಶ್ರೀಕೃಷ್ಣಾ ಪ ಕೃಷ್ಣ ಕೃಷ್ಣ ಹರಿವೃಷ್ಟಿ ಕುಲೋದ್ಭವಸೃಷ್ಟಿ ಕರ್ತ ಹೃತ್ಪುಷ್ಕರ ನಿಲಯ ಅ.ಪ. ವಲಲ ಸಂರಕ್ಷಕ | ಅಲವ ಭೋದನುತಕಲಿಮಲ ಕಲುಷಹ | ನಳಿನೇಕ್ಷಣಪಾಹಿ 1 ನಂದನ ಕಂದ ಮು | ಕುಂದನೆ ಮಾಧವಸಿಂಧು ಶಯನ ಕೃಷ್ಣ | ಮಂದರೋದ್ಧಾರಿ 2 ಕರ | ಪರಿಗ್ರಹಿಸಿದನೇ 3 ಚಿತ್ತಜಾರಿ ಸಖ | ವಿತ್ತವನೊಲ್ಲೆನೊಭೃತ್ಯನ ಗೈ ಸ | ರ್ವೋತ್ತಮ ದೇವ 4 ಪಾಪಿಯು ಎನೆ ನಾ | ಶ್ರೀಪತಿ ನಿನ್ನನುನಾಪೊಂದಲು ಆ | ಪಾಪೆಲ್ಲಿ ಹುದೋ 5 ಕಾಮಪಿತನೆ ಸ | ದ್ಭೂಮ ಗುಣಾರ್ಣವಪಾಮರ ಮನುಜನ | ಪ್ರೇಮದಿ ಸಲಹೋ6 ಶಿರಿ ಸಹ ಗುರು ಗೋ | ವಿಂದ ವಿಠಲ ಹೃತ್‍ಸರಸಿಜ ಪೀಠದಿ | ದರುಶನ ವೀಯೋ7
--------------
ಗುರುಗೋವಿಂದವಿಠಲರು
ಸತ್ಯ ಭಕ್ತೇಶ | ನತೋಸ್ಮ್ಯಹಂ | ಸತತಂ ಪ ಪ್ರತ್ಯುಹರರ್ಥಿತ ಸಜ್ಜನ ನಿವಹಂಸ್ತುತ್ಯ ಸದ್ವೈಷ್ಣವ ಸನ್ಮತ ಪ್ರಚುರಂ |ದೈತ್ಯಹರಂ | ಪೃಥೆ ಕುವರಂ || ಆರ್ತಿದ ಮಾಯ್ಮತ ಧ್ವಂಸಕರಂಪ್ರಾರ್ಥಿತ ಫಲ್ಗುಣ ರಥ ಸ್ಥಿತಂ | ಭೋ ಸುಮತಿ ಜ್ಞಂ ಅ.ಪ. ಭವ ಭಯ ನಿರ್ಗಮೋಪಾಯಂ |ಕರ್ಗಳು ಶೀರ್ಷ ಸಮಗ್ರೋಪಾಂಗ ನಿ |ರರ್ಗಳ ವ್ಯಾಪ್ತ ಶ್ರೀ ಹರಿ ರೂಪಂ ||ವಿತತ ಸಂದರ್ಶನ ಸಚ್ಚಿತ್ಸುಖಮಯ ದೇಹಂ | ನಮಾಮಿ ಧರ್ಮಂ 1 ಹಸ್ತಿ ಭವಾರ್ಣವ ಊರ್ಜಿತ ಸ್ವಜನಗರ್ಜನೆ ಮಿಶ್ರರ ಲಿಂಗಪಸರಣಂ |ಕಲಿವಪು ಹರಣಂ | ಭೋಪ್ರಥಮಾಂಗಂ 2 ರಜತ ಪೀಠ ಪುರವರ ದಾಸಂ |ಹೃತ್ಸರೋಜದೃತ ವೇದವ್ಯಾಸಂ |ತತ್ವ ? ವಿಚಾರೆ ಅಸದೃಶ ಮಹಿಮಂ |ಭಕ್ತಾಭಯ ಪ್ರದ ವಿತತ ತ್ರೈಭುವಂ |ಕರ್ಮೆಂದೀಂದ್ರಂ | ಮುಕ್ತ ಸುಸೇವ್ಯಂ ದೋಷ ರಹಿತ ಹರಿ ತೋಷಿತ ಹೃದಯಂ | ಸದ್ಗುಣಾರ್ಣವಂ |ವಿತತಾತಥ್ಯ ಸಚಾದ್ಧ ಜೈನ | ದುರ್ಮತನಿವಹ ವಿಧ್ವಂಸನ ಶೀಲಂ |ಆಸ್ತಿಕ ಹರಿಮತ ಸುಸ್ಥಿರ ಸ್ಥಾಪಿಸುವ್ಯಕ್ತ ಭಕ್ತ ಹೃತ್ಸರಸಿಜ ಪೀಠ ವಿನ್ಯಸ್ತ | ಸುರೂಪ |ಗುರು ಗೋವಿಂದ ವಿಠಲಜ | ಮಹಿಮಾ ಗಾಧಂ | ಸ್ತೋತ್ರಾ ಸೌಧ್ಯಂ 3
--------------
ಗುರುಗೋವಿಂದವಿಠಲರು
ಬಾರಮ್ಮ ಶೇಷಾದ್ರಿ ಭಾರ್ಗವಿದೇವಿ ಪತೋರಮ್ಮ ಮೃದುಪದ ತೋಯಜಕೇಳೆಜನನಿಅ.ಪದುಷ್ಟನು ನಿನ್ನ ಕ ನಿಷ್ಟ ಕುಮಾರನೂಕಷ್ಟವ ಪರಿಹರಿಸು ಇಷ್ಟು ಸಂಪದ ಕೊಡು 1ಕಾರುಣ್ಯ ರೂಪಿಣಿ | ಕಾಮಿತ ದಾಯಿನೀಸಾರಸದಳನೇತ್ರಿ | ಸೌಂದರ್ಯ ಗಾತ್ರೀ2ವಾಸವದುಃಖ ನಿವಾರಿಣಿ ಶ್ರೀತುಲಸೀದಾಸ ಹೃತ್ಸರಸಿಜ | ವಾಸಿನಿ ರುಕ್ಮಿಣಿ 3
--------------
ತುಳಸೀರಾಮದಾಸರು