ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಯೆನ್ನ ಸದ್ಭಾಗ್ಯ ಆನಂದ ನಿಧಿಯೊ ಪ ಮಧುವೈರಿ ತಾಯಿಯಂದದಿ ಕಾಯೊ ಅ.ಪ ಏನಾಗುವ ಪ್ರೀತಿ ನಿನ್ನಿಂದ ಎನಗಯ್ಯ ಜ್ಞಾನಾದಿ ಆನಂದ ಸುಗುಣ ಸಿಂಧು ದೀನ ಬಾಂಧವ ನಿನ್ನಧೀನದವ ನಾನಯ್ಯ ನಿತ್ಯ ಪವಮಾನ ಹೃತ್ಸದನ 1 ವಿದ್ಯ ಬುದ್ಧಿ ಜ್ಞಾನ ಮನಕರಣ ಶಕ್ತಿ ಸದ್ಧೈರ್ಯ ಸುಖನಿಧಿಯು ನಿರ್ಭೀತ ಪದವಿ ಅದ್ವಯನೆ ನೀನೆನಗೆ ಅನಿಮಿತ್ತ ಬಂಧು ಹರಿ ಸಿದ್ಧಿಸೈ ಈ ಜ್ಞಾನ ಸರ್ವಕಾಲದಿ ದೇವ 2 ನಾನು ನನ್ನದು ಎಂಬ ದೋಷದ ಮಕರಿ ಗಾನೆ ಸಿಕ್ಕಿದ ತೆರದಿ ಮೊರೆಯುತಿಹೆನೊ ದಾನವಂತಕನೆ ಶ್ರೀ ಜಯೇಶವಿಠಲ ದೀನ ಕರಿಯನು ಪೊರೆದ ತೆರದಿ ಸಲಹೊ ಎನ್ನ 3
--------------
ಜಯೇಶವಿಠಲ
ಶ್ರೀ ತಾಂದೋಣಿ ವೆಂಕಟರಮಣ ಇಂದು ವೆಂಕಟನ ಕಂಡು ಅನ್ಯರೊಬ್ಬರು ಇವಗೆ ಸರಿಪರರು ಇಲ್ಲ ಪ ಅಮರರಿಗು ಮನುಜರಿಗು ಸರ್ವ ಪ್ರಾಣಿಗಳಿಗು ಸ್ವಾಮಿ ರಕ್ಷಕ ಸರ್ವ ಪ್ರೇರಕನು ದೇವ ಅಮರಾವತಿ ಸರಿತತೀರ ಗಿರಿಯಲಿ ನಿಂತ ಪ್ರೇಮದಿಂದಲಿ ಭಜಿಸೆ ಅಭಯ ವರವೀವ 1 ಎನ್ನ ಕುಲದೇವನು ತಿರುಪತಿ ವೆಂಕಟನು ತಾನೇವೆ ಭಕ್ತರಿಗೆ ಒಲಿಯೆ ಬಂದಿಹನು ಅನಂತ ಗುಣಪರಿಪೂರ್ಣ ತನ್ನ ಸೇವಿಸುವರ ಅನುಗಾಲ ರಕ್ಷಿಸುವ ಅನಿಮಿತ್ತಬಂಧು 2 ಮಧ್ವಮುನಿ ಹೃತ್ಸದನ ದೇವದೇವೋತ್ತಮನು ಮಧ್ವಮುನಿ ಗುರುಸ್ವಾಮಿ ವಿಧಿತಾತ ಶ್ರೀಶ ಶುದ್ಧಕಾರುಣ್ಯನಿಧಿ ಪ್ರಸನ್ನ ಶ್ರೀನಿವಾಸ ಉದ್ಧರಿಪ ಸಂಸ್ಮರಿಸೆ ಇಹಪರದಿ ಎಂದೂ 3
--------------
ಪ್ರಸನ್ನ ಶ್ರೀನಿವಾಸದಾಸರು