ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಿಜಗ ವಂದಿತಗಾರತಿ ಎತ್ತಿರೆ ಪ ಎಳ್ಳುಂಡಲಿಗೆ ಕಬ್ಬು ಮೆಲುವವವಗೆ ಬೆಳ್ಳಿಯ ಹುರಿಗೆಜ್ಜೆಗಳ ಕಟ್ಟಿನಲಿವಗೆ ಡೊಳ್ಳಿನ ಗಣಪಗಾರತಿ ಎತ್ತಿರೆ1 ಭಕ್ತರ ಪೊರೆವವಗೆ ಉರಗ ಕುಂಡಲನ ಕುಮಾರ ಗಜವದನಗೆ ಶರಣ ಜನಕಗಾರತಿ ಎತ್ತಿರೆ 2 ದೇವತೆಗಳ ಕೈಯ ಕಪ್ಪವ ಕೊಂಬುವಗೆ ದಾವಾಗ್ನಿಯಿಂದ ಮೀರಿರುವಗೆ ಗಣೇಶಗಾರತಿ ಎತ್ತಿರೇ 3
--------------
ಕವಿ ಪರಮದೇವದಾಸರು
ಬಯಲ ಜಾತ್ರೆಗೆ ನಡೆಹೋಗುವ ಬಾರದಲೆ ಅಲ್ಲಿರುವ ಪ ಶಾಂತಿ ಎಂದೆಂಬ ಕಂಟಲೆಗಳು ಶಮೆ ಹುರಿಗೆಜ್ಜೆ ಎತ್ತುಗಳುದಾಂತಿ ಎಂದೆಂಬ ಕಾವಡಿಗಳು ದಮೆ ಎಂಬ ಹೂಜೆಗಳು1 ಮಂಗಳವೆಂಬ ಬಾಲಕರು ಮುಕ್ತಿ ಎಂಬ ಮುತ್ತೈದೆಯರುಸಂಗ ಹರರಹ ವಿಟಗಾರರು ಸೈರಣೆ ಎಂಬ ಹಿರಿಯರು 2 ಸಂತೋಷವೆಂಬ ಅಂಗಡಿಗುಂಪು ಸಹಜದ ಹೂಕಂಪುಶಾಂತರೆನಿಪ ದೊರೆಗಳ ಗುಂಪು ಸುಖ ಛತ್ರಿಯ ತಂಪು 3 ಓಂಕಾರನಾದದ ನಗಾರಿ ವೀಣಾನಾದದ ತುತ್ತೂರಿಸಂಕಲ್ಪ ಸುಳ್ಳೆಂಬ ತಂಬೂರಿ ಸಾಮವೆನಿಸುವ ಭೇರಿ 4 ಅಮೃತ ಬಿಂದುವಿನ ಮೊಗೆಯುದಾರಿದಾರಿಗೆ ಸೋಹಂಸ್ಮರಣೆ ದೃಢ ಮನವದು ಚಡಿಯು 5 ಆನಂದ ವನಗಳ ಸಾರುತ ಆಯಾಸ ಕಳೆಯುತ್ತಸ್ವಾನಂದ ಗೋಪುರ ಕಾಣುತ ಸುಮ್ಮಾನವ ಪಡೆಯುತ6 ಮೃಢನಾಳ ದ್ವಾರವ ಪೋಗುತ ಮುಂದೆ ಚಂದ್ರನ ಕಾಣುತಅಡರಿದ್ವಿದಳ ಸದರೇರುತ ಅತ್ತತ್ತ ಸಾರುತ 7 ಕಮಲ ಪೀಠವನೇರುವರ ಮಹೇಶನೆನ್ನು ಅವರ8 ತುರೀಯವೆಂದೆಂಬ ಬಯಲಗೂಡಿ ತಾವು ಹೋಗುವ ನಾಡಿಹರ್ಷದ ಧೂಳ ದರ್ಶನ ಮಾಡಿ ಹಾಯಿಗುಡಾರ ಹೂಡಿ9 ಶಿಂಶುಮಾರವೇ ದೇವರ ಪೀಠ ಸಿದ್ಧವೆಂಬ ಕವಾಟಸಂಶಯವಿಲ್ಲದ ಎಡೆಯಾಟ ತತ್ಪುರುಷರ ಕೂಟ10 ಸೂರ್ಯ ಕೋಟಿಗೆ ಘನವುಒತ್ತೊತ್ತು ಪೂರ್ಣಾಭಿಷೇಕ ಓಂ ಎಂದೆಂಬ ಸ್ವರವು 11 ಸುವಾಸನೆ ಎಂದೆಂಬ ಧೂಪವು ಸುಂದರ ಪುಷ್ಪಗಂಧತಾವು ಮಾಡುವ ಭಾವದಲಿಂದ ತೃಪ್ತಿ ನೈವೇದ್ಯ ಚಂದ12 ಎರಡಿಲ್ಲದೇಕಾರ್ತಿ ಬೆಳಗುತ ಎಲ್ಲೆಡೆ ತಾ ಹೊಳೆಯುತಹೊರ ವೊಳಗೆಂಬುದ ಮರೆಯುತ ಹೇಮದ ತಗಡಾಗಿ ಇರುತ13 ಬೆಳಕ ಕಂಡಾರತಿ ಎತ್ತುತ ಬೆಳಗನು ಬೆಳಗುತ್ತತಿಳಿದು ಪ್ರದಕ್ಷಿಣೆ ಮಾಡುತ ತೋರುವುದು ಬ್ರಹ್ಮವದೆನ್ನುತ 14 ಭಯದ ವಿಸರ್ಜನೆ ಮಾಡುತ ಬಯಲಾಗಿಯೆ ತೋರುತಬಯಲ ಚಿದಾನಂದನಿಗೆರಗುತ್ತ ಬ್ರಹ್ಮನಾಗಿ ತಾನಿರುತ 15
--------------
ಚಿದಾನಂದ ಅವಧೂತರು
ಮಾಧವಮಧುಸೂದನ- ಯಾದವಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ 1ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |ಸೋಲ್ವರೊ ನಿನಗೇಸೋ ಸೋಗೆಯರು ||ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|ಡ್ಡೋಲಗದೊಳು ರಕ್ಕಸರು ಪಂಥವನಾಡೆ ||ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |ಕಾಲಿಗೆ ಎರಗುವೆ ಬಾರೊ-ರಂಗಯ್ಯ 2ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||ಎಮ್ಮ ಮನಕೆ ಅಹಲ್ಲಾದನು ನೀನೆ |ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3
--------------
ಪುರಂದರದಾಸರು