ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಹೋಳಿ ಪದ) ಧುಮ್ಮಿಶಾಲೆನ್ನಿ ನಮ್ಮ ರಮ್ಮೆಯರಸ ಕೃಷ್ಣನಡಿಯ ಒಮ್ಮನದಿ ನೆನೆದು ಸಕಲ ಕರ್ಮಕಲುಷವ ಕಳಿಯಿಸಿ ಪ. ನಿಗಮ ಸ್ಮøತಿ ಗಣೋಕ್ತ ಕರ್ಮಕರಣ ಭವಿ ಷ್ಯೋತ್ತರ ಪುರಾಣವಚನವೆತ್ತಿ ಜಗಕೆ ತಿಳಿಸಿದಾ ಒತ್ತಿ ಬರುವ ವಿಘ್ನಗಣವ ಕತ್ತರಿಸುವ ಹೋಳಿಯೆಂಬ ಉತ್ತಮದ ವ್ರತವು ಜಗವ ಸುತ್ತಿಕೊಂಡು ಮೆರೆವುದು 1 ವಿಧಿಯ ಸ್ತುತಿಗೆ ಮೆಚ್ಚಿ ಕರುಣಾಸುಧೆಯ ಸುರರ ಮೇಲೆ ಕರದು ಮಧುರೆಯಲ್ಲಿ ಜನಿಸಿ ಬಂದ ಮಧುಮುರಾರಿ ಮರ್ದನ ಯದುಕುಲೇಶ ಕೃಷ್ಣಗೋಪ ಚದುರೆಯರನು ಒಲಿವೆನೆಂದು ಮದನನು ಹುಣ್ಣಿವೆಯ ಹಬ್ಬ ಸದರದಿಂದ ರಚಿಸಿದ 2 ಮೇಲು ಬೆಲೆಗಳುಳ್ಳ ಬಿಳಿಯ ಶಾಲೆಗಳನು ಧರಿಸುತ ಗು ಲಾಲ ಪುಡಿಯ ಸುರಿವ ಗೋಪ ಬಾಲಜನರ ಕೂಡುತ ಗಜ ಮೇಲಾಳುತನವ ನಡೆಸುತಿರಲು ಶ್ರೀ ಲಲಾಮ ವಾರನಾರಿ ಜಾಲವನ್ನು ಕರೆಸಿದ 3 ಸಿರಿಯ ಮುಡಿಯ ಮೇಲೆ ನವಿಲಗರಿಯ ಗೊಂಚಲಿರಿಸಿ ನಾನಾ ಪರಿಯ ಪುಷ್ಪ ಮಾಲೆಗಳನು ಧರಿಸಿ ಕಂಠ ಮಧ್ಯ ಪೋಕ ಥರವ ತೋರ್ಪ ಪದವ ಸಪ್ತ ಸ್ವರದಿ ಕೂಡಿ ವಾಡಿ ಬೀದಿ ತಿರುಗಿ ಬಂದ ಕೃಷ್ಣನು 4 ಶಿಷ್ಟ ಸಂಗ್ರಹೀತ ಕಾರ್ಯ ಶ್ರೇಷ್ಠವಾಗಿ ತಿಳಿಯಿರೆಂದು ದಮನ ನರನೊಳೆಂದ ಸ್ಪಷ್ಟ ಗೀತ ವಚನವ ಶಿಷ್ಟ ಜನರು ಗ್ರಹಿಸಿ ನಡದರಷ್ಟ ಭಾಗ್ಯವಿತ್ತು ಶೇಷ ಬೆಟ್ಟದೊಡೆಯ ಹರಿಯು ಕರುಣಾ ದೃಷ್ಟಿಯಿಂದ ಪೊರೆವನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಕಳವು ಕಲಿಸಿದೆಯಮ್ಮಗೋಪಿಕಮಲನಾಭಗೆ |ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವಹಚ್ಚಿಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |ದೂರುಬಡಕರೆಂದುಗೋಪಿಬಯ್ವೆ ನಮ್ಮನು ||ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |ವಾರಿಜನಾಭನ ಕರೆದು ಬುದ್ಧಿಯ ಹೇಳೆ 4ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |ಇಟ್ಟುಕೊಂಡೀರೇಳುಭುವನಉದರದಲ್ಲಿಯೆ ||ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ 5
--------------
ಪುರಂದರದಾಸರು