ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕನಾದ ಹರಿಗುರುಗಳ ಬಿಟ್ಟು ನರಸ್ತುತಿಗಳನು ಮಾಡಬಾರ್ದು ಪ ಸಿರಿವುರಿಯಲಿ ಸಿಕ್ಕಿ ನರಹರಿ ಚರಣವ ಬಿಡಬಾರ್ದು ಅ.ಪ. ಒಂಟಿಲಿ ಸತಿಯನು ಪತಿವ್ರತೆ ಎನ್ನುತ ಬಿಡಬಾರ್ದು ನೆಂಟೆಗೆ ಮಿತ್ರಗೆ ಸೂಳೆಗೆ ಸಾಲವ ಕೊಡಬಾರ್ದು ತುಂಟರ ಕುಡುಕರ ಜಾರರ ನೆರೆಹೊರೆ ಇರಬಾರ್ದು ಒಂಟಿಯ ಊಟವ ಪಯಣವ ಕಲಹವ ಬೆಳೆಸಬಾರ್ದು 1 ಮಾವನ ಮನೆಯಲಿ ದುಡಿಯದ ಅಳಿಯನು ನಿಲ್ಲಬಾರ್ದು ಕೋವಿದರಡಿಗಳ ಸುಜನರ ಸಂಗವ ಬಿಡಬಾರ್ದು ಜೀವರು ಹರಿ ಸಮ ಮಾಯವೆ ಜಗಸರಿ ಎನಬಾರ್ದು ದೇವನ ದೂಡುತ ವಿಷಯವ ಹರಿಸುತ ಕೆಡಬಾರ್ದು 2 ಮನೆಕದ ಮುಂದಿಲಿ ಪತಿವ್ರತೆ ತಾನು ನಿಲಬಾರ್ದು ತನುವನು ತೋರುತ ಸೆರೆಗನು ಬೀರುತ ನಡಿ ಬಾರ್ದು ವನಿತೆಯ ಸಂಗಡ ಗುಟ್ಟಿನ ವಿಷಯವ ನುಡಿಬಾರ್ದು ಮಣಿಯದೆಲೆಂದಿಗು ಹಿರಿಯರ ಚರಣಕೆ ನಡಿಬಾರ್ದು3 ನುಡಿಯುವ ತೆರೆದಲಿ ನಡೆಯದ ಮನುಜನ ನಂಬಬಾರ್ದು ತಡೆಯದೆ ಕೋಪವ ದುಡುಕುವ ನೆಡೆಯಲಿ ನಿಲ್ಲಬಾರ್ದು ಬೆಡಗನು ತೋರುವ ನಾರಿಯ ಕಡೆಯಲಿ ನೋಡಬಾರ್ದು ದುಡುಕುತ ಲೊಡನೆಯೆ ಯಾವುದು ನಿಶ್ಚಯ ಮಾಡಬಾರ್ದು 4 ಕೆಟ್ಟರೆ ನೆಂಟರನೆಂದಿಗು ಮಾನಿಯು ಸೇರಬಾರ್ದು ಕಷ್ಟವು ಬಂದೆಡೆ ಧೈರ್ಯವನೆಂದಿಗು ಬಿಡಬಾರ್ದು ಗುಟ್ಟಿನ ಮಂತ್ರವು ಘಟ್ಟಿಲಿ ಜಪಿಸುತ ಕೂಗಬಾರ್ದು ಶಿಷ್ಯರಿಗಲ್ಲದೆ ದುಷ್ಟಗೆ ಶಾಸ್ತ್ರವ ನುಡಿಬಾರ್ದು 5 ತಿಂಡಿಯ ಚಪಲವ ನರಹರಿ ತೊಂಡನು ಮಾಡಬಾರ್ದು ಹೆಂಡರ ಭಜಕನ ಜಾರನ ನುಡಿಗಳ ನಂಬಬಾರ್ದು ಸತಿ ಸಹ ಸರಸವ ಮಾಡಬಾರ್ದು ಮಂಡೆಲಿ ಚರಣದಿ ಬರಿತೆರ ವೆಂದಿಗು ಹೋಗಬಾರ್ದು 6 ಹುಡುಗರ ಶಾಲೆಗೆ ಕಲಿಯಲು ಹುಡುಗಿಯ ಕಳಿಸಬಾರ್ದು ಮಡದಿಗೆ ಭಂಟಗೆ ಒಡನೆಯೆ ಸದರವ ನೀಡಬಾರ್ದು ಹುಡುಗಿಯ ಕಾಣದ ಜನರಿಗೆ ದೇಶಕೆ ಕೊಡಬಾರ್ದು ನಡೆನುಡಿ ನೋಟ ವಿಶೇಷದಿ ನೇಮವನಿಡದಲೆ ಇರಬಾರ್ದು 7 ಯಾಚಕ ಸವಿನುಡಿ ವಿನಯ ವಿವೇಕವ ಮರಿಬಾರ್ದು ಯೋಚನೆ ಗೈಯದೆ ನೆರೆಹೊರೆ ಹಗೆತನ ಗಳಿಸಬಾರ್ದು ಒಗೆತನ ಹುಳುಕನು ಹಾಕಬಾರ್ದು ಮೋಚಕ ನಿಜ ಸಖ ಹರಿತಾನೆಂಬುದ ಮರಿಬಾರ್ದು 8 ದೊಡ್ಡವರೆಡೆಯಲಿ ಹುಡುಗರು ಸರಸವ ಮಾಡಬಾರ್ದು ದುಡ್ಡಿನ ಜನಗಳನೆದುರಿಸಿ ಬಡವನು ನಿಲ್ಲಬಾರ್ದು ಸಡ್ಡೆಯ ಮಾಡದೆ ಅಡ್ಡಿಗಳೆಲ್ಲವ ಸರ್ವರಿಂ ದೊಡ್ಡವ ಶ್ರೀ ಕೃಷ್ಣವಿಠಲನ ಭಜನೆಯ ಬಿಡಬಾರ್ದು 9
--------------
ಕೃಷ್ಣವಿಠಲದಾಸರು
ನಗುವರಲ್ಲವೊ ರಂಗ ನಾಚಿಕೆ ಇಲ್ಲವೊನಿನಗೆ ಹಗೆಯ ಮಾಡಿದವಳ ಬಗೆಯ ಕಾಣೆರಂಗ ಪ. ಅನ್ಯಾಯ ನ್ಯಾಯವೆಂಬುದಿನ್ನು ನೀ ಅರಿಯೆಲೊಮನ್ನೆಯಳ ವೀಳ್ಯ ಹಿಡಿದೆಯಲ್ಲೊನೀ ಹಿಡಿದೆಯಲ್ಲೊ ರಂಗ1 ಭರದಿ ಕೋಪಿಸಿ ಭೀಷ್ಮ್ಮೆ ತಿಳುವಳಿಕೆ ನಿನಗಿಲ್ಲಹರದೆಯರಿಬ್ಬರು ಎನಗೆ ಸರಿಯರಲ್ಲಎನಗೆ ಸರಿಯರಲ್ಲ ಭೀಷ್ಮ್ಮೆ ದೂರುವರೇನೆ2 ಹೀಂಗೆ ಯಾರೂ ನಗರೇನ ಭೀಷ್ಮ್ಮೆಇರುವೆಗಿಂತ ಕಡಿ ಮಾಡಿದೆಲ್ಲಎನ್ನ ಕಡಿಮಾಡಿದೆಲ್ಲ 3 ಅತಿ ಕೋಪದಿಂದ ಭೀಷ್ಮೆ ಸ್ಮøತಿಯಿಲ್ಲ ನಿನಗಿನ್ನುಸತಿಯರಿಬ್ಬರು ಎನಗೆ ಸರಿಯರಲ್ಲಎನಗೆ ಸಮರಲ್ಲ4 ಅಕ್ಕ ತಂಗಿಯರೆಂಬೊ ದಿಕ್ಕಿನ ಮೂಲೆಗೆ ಬೆಕ್ಕಿನಕಿಂತ ಕಡಿ ಮಾಡಿದೆಲ್ಲೊಎನ್ನ ಮಾಡಿದೆಲ್ಲೊ ರಂಗಾ 5 ವಾರಿಜಾಮುಖಿ ಎನಗೆ ಯಾರು ಹಿರಿಯರು ಹೇಳೆನಾರಿಯರಿಬ್ಬರು ಎನಗೆ ಪೊರರಲ್ಲಎನಗೆ ಪೊರರಲ್ಲ್ಲ 6 ಹುಡುಗಿಯರೆಂಬುವನುಡಿಯ ಕೇಳುತ ಭೀಷ್ಮಿಕಡುಹರುಷ ಬಡುತಲೆ ಮನದೊಳಗೆತನ್ನ ಮನದೊಳಗೆ7 ಕೃಷ್ಣನ ಮಡದಿಯರು ಎಷ್ಟು ಗುಣವಂತರೆಂದುಅಷ್ಟ್ಟೂರಕ್ಕಿಂತ ಮೊದಲೆ ಮದಿವ್ಯಾದೆನಿಮ್ಮನ್ನು ಮದುವ್ಯಾದೆ8 ಸಿಟ್ಟು ಬಿಟ್ಟಿಬ್ಬರು ಕೃಷ್ಣ ನಮ್ಮವನೆನ್ನಿಧಿಟ್ಟಿ ರಾಮೇಶ ಸಕಲೇಷ್ಟವೆನ್ನಿಸರ್ವೇಷ್ಟವೆನ್ನಿ9
--------------
ಗಲಗಲಿಅವ್ವನವರು
ಸಾರತರದ ಮುರಳಿದನಿಯ ಕೇಳಿದೆ ಏನೆ ಪ ನಾರಿಮಣಿಯರುಲಿವದನಿಯ ಕೇಳಿದೆ ಏನೆ ಅ.ಪ ನಲಿದು ಕುಣಿವ ಲಲನೆಯರನು ನೋಡಿದೆ ಏನೆ ಝಣ ಝಣ ಝಣ ಕಿಣಿ ಕಿಣಿ [ಭರ್ತಾ] ರವವು ಕೇಳ್ವುದೇನೆ1 ಬಡನಡುವಿನ ಮಡದಿಯವನ ಅಡಿಯ ಪಿಡಿವೆ ಏನೆ ಕಡುಬೆಡಗಿನ ಹುಡುಗಿಯವನ ಅಡಿಯ ಪಿಡಿವೆ ಏನೆ ಸಡಗರದಲಿ ನಡೆದು ಮನವ ರಂಗಗೀವೆ ಏನೆ 2 ಮನದ ಕಲುಷವಳಿದು ಮುದವ ತಳೆದಿಹೆಯೇನೆ ಇನಿದುವಚನ ಕನಸು ನೆನಸ ತಳೆದಿಹೆಯೇನೆ ತನುಮನಧನ ಮಾಂಗಿರೀಶಗೊಪ್ಪಿಪೆಯೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್